Numbers · chapter 16 · verse 41
Numbers 16:41 in Kannada
ಆದರೆ ಮರುದಿನದಲ್ಲಿ ಇಸ್ರಾಯೇಲ್ ಮಕ್ಕಳ ಸಭೆಯಲ್ಲಾ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಕರ್ತನ ಜನರನ್ನು ಕೊಂದು ಹಾಕಿದ್ದೀರಿ ಅಂದರು.
Aadare marudinadalli israayel makkala sabheyallaa moshe aaronarige virodhavaagi gunuguttuttaa--neevu kartana janarannu kondu haakiddeeri andaru.
Numbers 16:41 in English
- King James Version (KJV)
- But on the morrow all the congregation of the children of Israel murmured against Moses and against Aaron, saying, Ye have killed the people of the LORD.
- World English Bible (WEB)
- But on the next day all the congregation of the children of Israel complained against Moses and against Aaron, saying, “You have killed the LORD’s people!”
- American Standard Version (ASV)
- But on the morrow all the congregation of the children of Israel murmured against Moses and against Aaron, saying, Ye have killed the people of Jehovah.
- Bible in Basic English (BBE)
- But on the day after, all the children of Israel made an outcry against Moses and against Aaron, saying, You have put to death the Lord's people.
- Darby Translation (DBY)
- And the whole assembly of the children of Israel murmured on the morrow against Moses and against Aaron, saying, Ye have killed the people of Jehovah.
- Webster's Bible (WBS)
- But on the morrow all the congregation of the children of Israel murmured against Moses and against Aaron, saying, Ye have killed the people of the LORD.
- Young's Literal Translation (YLT)
- And all the company of the sons of Israel murmur, on the morrow, against Moses and against Aaron, saying, 'Ye — ye have put to death the people of Jehovah.'
Read in context
- 39ಆಗ ಸುಟ್ಟು ಹೋದವರು ಅರ್ಪಿಸಿದ ಹಿತ್ತಾಳೆಯ ಧೂಪದಪಾತ್ರೆಗಳನ್ನು ಯಾಜಕನಾದ ಎಲಿಯಾಜರನು ತಕ್ಕೊಂಡು ಬಲಿಪೀಠವನ್ನು ಮುಚ್ಚುವದಕ್ಕಾಗಿ ಅಗಲ ವಾದ ತಗಡುಗಳನ್ನಾಗಿ ಮಾಡಿದನು.
- 40ಆರೋನನ ಸಂತಾನವಲ್ಲದ ಪರಕೀಯನು ಕರ್ತನ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸುವದಕ್ಕೆ ಸವಿಾಪಿಸದ ಹಾಗೆಯೂ ಕೋರಹನೂ ಅವನ ಸಮೂಹವೂ ಇದ್ದ ಪ್ರಕಾರ ಇರದ ಹಾಗೆಯೂ ಕರ್ತನು ಮೋಶೆಯಿಂದ ಹೇಳಿಸಿದ ಪ್ರಕಾರ ಇಸ್ರಾಯೇಲ್ ಮಕ್ಕಳಿಗೆ ಇದು ಜ್ಞಾಪಕ ವಾಗಿರುವದು ಅಂದನು.
- 41ಆದರೆ ಮರುದಿನದಲ್ಲಿ ಇಸ್ರಾಯೇಲ್ ಮಕ್ಕಳ ಸಭೆಯಲ್ಲಾ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಕರ್ತನ ಜನರನ್ನು ಕೊಂದು ಹಾಕಿದ್ದೀರಿ ಅಂದರು.
- 42ಸಭೆಯು ಮೋಶೆಗೂ ಆರೋನನಿಗೂ ವಿರೋಧವಾಗಿ ಕೂಡಿಕೊಂಡಾಗ ಆದದ್ದೇನಂದರೆ, ಅವರು ಸಭೆಯ ಗುಡಾರದ ಕಡೆಗೆ ನೋಡಲಾಗಿ ಇಗೋ, ಮೇಘವು ಅದನ್ನು ಮುಚ್ಚಿ ಕೊಂಡು ಕರ್ತನ ಮಹಿಮೆಯು ಕಾಣಬಂತು.
- 43ಮೋಶೆ ಆರೋನರೂ ಸಭೆಯ ಗುಡಾರದ ಮುಂದೆ ಬಂದರು.
Cross references
- Numbers 16:1–7 ಅರಣ್ಯಕಾಂಡ 16:1–7ಆಗ ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಹಾರನ ಮಗನಾದ ಕೋರಹನೂ ರೂಬೇನ್ ಗೋತ್ರದವರಾದ ಎಲೀ ಯಾಬನ ಮಕ್ಕಳಾದ ದಾತಾನನೂ ಅಬೀರಾಮನೂ ಪೆಲೆತನ ಮಗನಾದ ಓನನೂ ಇವರು ಜನರನ್ನು ತಕ್ಕೊಂಡು ಇಸ್ರಾಯೇಲ್ ಮಕ್ಕಳೊಳಗಿಂದ ಸಭೆಯ ಪ್ರಧಾನರಾಗಿಯೂ ಸಭೆಯಲ್ಲಿ ಪ್ರಸಿದ್ಧ ರಾಗಿಯೂ ಹೆಸರು ಹೊಂದಿದವರಾಗಿಯೂ ಇರುವ ಇನ್ನೂರ ಐವತ್ತು ಮಂದಿಯೊಂದಿಗೆ ಮೋಶೆಯ ಮುಂದೆ ಎದ್ದರು. ಅವರು ಮೋಶೆಗೂ ಆರೋನ ನಿಗೂ ವಿರೋಧವಾಗಿ ಕೂಡಿಕೊಂಡು--ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ; ಸಭೆಯೂ ಸಭೆ ಯಲ್ಲಿರುವ ಎಲ್ಲರೂ ಪರಿಶುದ್ಧರೇ, ಕರ್ತನು ಅವರ ಮಧ್ಯದಲ್ಲಿ ಇದ್ದಾನೆ. ಹೀಗಿರಲಾಗಿ ನೀವು ನಿಮ್ಮನ್ನು ಸಭೆಗಿಂತ ಹೆಚ್ಚಾಗಿ ನೀವೇ ಹೆಚ್ಚಿಸಿಕೊಳ್ಳು ವದು ಯಾಕೆ ಎಂದು ಅವರಿಗೆ ಹೇಳಿದರು. ಮೋಶೆಯು ಇದನ್ನು ಕೇಳಿ ಬೋರಲು ಬಿದ್ದು ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ: ಕೋರಹನೂ ಅವನ ಸಮೂಹವೆಲ್ಲವೂ ಧೂಪ ಸುಡುವ ಪಾತ್ರೆಗಳನ್ನು ತೆಗೆದುಕೊಂಡು ನಾಳೆ ಅವುಗಳಲ್ಲಿ ಬೆಂಕಿಯನ್ನು ಹಾಕಿ ಅವುಗಳ ಮೇಲೆ ಧೂಪವನ್ನು ಕರ್ತನ ಮುಂದೆ ಹಾಕಿರಿ; ಆಗ ಕರ್ತನು ಯಾವನನ್ನು ಆದುಕೊಳ್ಳುವನೋ ಅವನೇ ಪರಿ ಶುದ್ಧನಾಗಿರುವನು; ಲೇವಿಯ ಮಕ್ಕಳೇ, ನೀವು ಹೆಚ್ಚು ಅಧಿಕಾರ ತಕ್ಕೊಳ್ಳುತ್ತೀರಿ ಎಂದು ಹೇಳಿದನು.
- Psalm 106:25–48 ಕೀರ್ತನೆಗಳು 106:25–48ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು. ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು. ಬಾಳ್ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು. ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು. ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು. ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು. ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು. ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು. ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು. ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು. ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು. ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು. ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು. ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು. ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು. ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು. ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು. ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು. ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ. ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.
- Numbers 14:2 ಅರಣ್ಯಕಾಂಡ 14:2ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು.
- Psalm 106:23 ಕೀರ್ತನೆಗಳು 106:23ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
- Acts 5:28 ಅಪೊಸ್ತಲರ ಕೃತ್ಯಗಳು 5:28ಈ ಹೆಸರಿ ನಲ್ಲಿ ಬೋಧಿಸ ಕೂಡದೆಂದು ನಾವು ನಿಮಗೆ ಖಂಡಿತವಾಗಿ ಅಪ್ಪಣೆ ಕೊಡಲಿಲ್ಲವೇ? ಆದರೂ ಇಗೋ, ನೀವು ಯೆರೂಸಲೇಮನ್ನು ನಿಮ್ಮ ಬೋಧನೆ ಯಿಂದ ತುಂಬಿಸಿ ಈ ಮನುಷ್ಯನ ರಕ್ತವನ್ನು ನಮ್ಮ ಮೇಲೆ ತರುವದಕ್ಕೆ ಉದ್ದೇಶವುಳ್ಳವರಾಗಿದ್ದೀರಲ್ಲಾ ಎಂದು ಅವರನ್ನು ಕೇಳಿದನು.
- Jeremiah 37:13–14 ಯೆರೆಮೀಯ 37:13–14ಆಗ ಅವನು ಬೆನ್ಯಾವಿಾನನ ಬಾಗಲಲ್ಲಿ ಇರುವಾಗ ಅಲ್ಲಿ ಹೆನನ್ಯನ ಮಗನಾದ ಶೆಲೆಮ್ಯನ ಮಗನಾದ ಇರೀಯ ನೆಂಬ ಪಹರೆಯ ನಾಯಕನು ಇದ್ದನು; ಇವನು ಪ್ರವಾದಿಯಾದ ಯೆರೆವಿಾಯನನ್ನು--ನೀನು ಕಸ್ದೀ ಯರ ಕಡೆಗೆ ಬೀಳುತ್ತಿ ಎಂದು ಹೇಳಿ ಹಿಡಿದನು. ಆದರೆ ಯೆರೆವಿಾಯನು ಹೇಳಿದ್ದೇನಂದರೆ--ಸುಳ್ಳು; ನಾನು ಕಸ್ದೀಯರ ಕಡೆಗೆ ಬೀಳುವವನಲ್ಲ ಅಂದನು. ಆದರೆ ಇರೀಯನು ಅವನಿಗೆ ಕಿವಿಗೊಡದೆ ಯೆರೆವಿಾ ಯನನ್ನು ಹಿಡಿದು ಪ್ರಧಾನರ ಬಳಿಗೆ ತಂದನು.
- Psalm 106:13 ಕೀರ್ತನೆಗಳು 106:13ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.
- 1 Kings 18:17 1 ಅರಸುಗಳು 18:17ಅಹಾಬನು ಎಲೀಯನನ್ನು ನೋಡಿದಾಗ ಅವನಿಗೆ--ಇಸ್ರಾಯೇಲ್ಯರನ್ನು ಕಳವಳ ಗೊಳಿಸುವವನು ನೀನಲ್ಲವೋ ಅಂದನು.
- Isaiah 26:11 ಯೆಶಾಯ 26:11ಕರ್ತನೇ, ನಿನ್ನ ಕೈ ಎತ್ತಿರಲು ಅವರು ನೋಡುವದಿಲ್ಲ, ಆದರೆ ಅವರು ನೋಡಿ ನಿನ್ನ ಜನರಿಗೋಸ್ಕರ ಹೊಟ್ಟೆಕಿಚ್ಚು ಪಟ್ಟದ್ದಕ್ಕೆ ನಾಚಿಕೆ ಪಡುವರು. ಹೌದು, ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.
- Acts 21:28 ಅಪೊಸ್ತಲರ ಕೃತ್ಯಗಳು 21:28ಇಸ್ರಾಯೇಲ್ ಜನರೇ, ಸಹಾಯ ಮಾಡಿರಿ; ಎಲ್ಲಾ ಕಡೆಯಲ್ಲಿ ಜನರಿಗೂ ಈ ನ್ಯಾಯ ಪ್ರಮಾಣಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲರಿಗೂ ಬೋಧಿಸುತ್ತಿದ್ದವನು ಈ ಮನುಷ್ಯನೇ; ಇದಲ್ಲದೆ ಗ್ರೀಕರನ್ನು ಸಹ ಈ ದೇವಾಲಯದೊಳಗೆ ಕರೆದು ಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆ ಮಾಡಿದ್ದಾನೆ ಎಂದು ಕೂಗಿ
- 2 Samuel 16:7–8 2 ಸಮುವೇಲನು 16:7–8ಶಿಮ್ಮಿ ಅವನನ್ನು ದೂಷಿಸುತ್ತಾ--ರಕ್ತದ ಮನುಷ್ಯನೇ, ಬೆಲಿಯಾಳನ ಮನುಷ್ಯನೇ, ಹೊರಟು ಬಾ, ಹೊರಟು ಬಾ. ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು.
- Amos 7:10 ಆಮೋಸ 7:10ಆಗ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ-- ಆಮೋಸನು ಇಸ್ರಾಯೇಲಿನ ಮನೆತನದವರ ಮಧ್ಯ ದಲ್ಲಿ ನಿನಗೆ ವಿರೋಧವಾಗಿ ಒಳಸಂಚು ಮಾಡಿದ್ದಾನೆ. ದೇಶವು ಅವನ ಎಲ್ಲಾ ಮಾತುಗಳನ್ನು ತಾಳಲಾರದು.