Psalms · chapter 106 · verse 25
Psalm 106:25 in Kannada
ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು.
Tamma gudaaragalalli gunugutti kartana svaravannu kelade hodaru.
Psalm 106:25 in English
- King James Version (KJV)
- But murmured in their tents, [and] hearkened not unto the voice of the LORD.
- World English Bible (WEB)
- but murmured in their tents, and didn’t listen to the LORD’s voice.
- American Standard Version (ASV)
- But murmured in their tents, And hearkened not unto the voice of Jehovah.
- Bible in Basic English (BBE)
- Talking against him secretly in their tents, they did not give ear to the voice of the Lord.
- Darby Translation (DBY)
- But murmured in their tents: they hearkened not unto the voice of Jehovah.
- Webster's Bible (WBS)
- But murmured in their tents, [and] hearkened not to the voice of the LORD.
- Young's Literal Translation (YLT)
- And they murmur in their tents, They have not hearkened to the voice of Jehovah.
Read in context
- 23ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
- 24ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು.
- 25ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು.
- 26ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ
- 27ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು.
Cross references
- Deuteronomy 1:26–27 ಧರ್ಮೋಪದೇಶಕಾಂಡ 1:26–27ಆದರೆ ನೀವು ಮೇಲೆ ಹೋಗುವದಕ್ಕೆ ಮನಸ್ಸಿಲ್ಲದೆ ನಿಮ್ಮ ದೇವರಾದ ಕರ್ತನ ಅಪ್ಪಣೆಗೆ ತಿರುಗಿಬಿದ್ದು ನಿಮ್ಮ ಗುಡಾರಗಳಲ್ಲಿ ಗುಣುಗುಟ್ಟಿ--ಕರ್ತನು ನಮ್ಮನ್ನು ಹಗೆಮಾಡಿದ್ದರಿಂದ ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ ನಾಶಮಾಡುವದಕ್ಕೆ ಐಗುಪ್ತದೇಶದೊಳ ಗಿಂದ ಹೊರಗೆ ಬರಮಾಡಿದ್ದಾನೆ.
- Numbers 14:22 ಅರಣ್ಯಕಾಂಡ 14:22ಐಗುಪ್ತ ದೇಶದಲ್ಲಿಯೂ ಅರಣ್ಯದಲ್ಲಿಯೂ ನಾನು ನಡಿಸಿದ ಸೂಚಕಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಸಕಲ ಮನುಷ್ಯರು ನನ್ನನ್ನು ಈಗ ಹತ್ತು ಸಾರಿ ಶೊಧಿಸಿ ಕೇಳದೆ ಹೋದದ್ದರಿಂದ
- Hebrews 3:7–8 ಇಬ್ರಿಯರಿಗೆ 3:7–8ಆದದರಿಂದ(ಪವಿತ್ರಾತ್ಮನು ಹೇಳುವ ಪ್ರಕಾರ--ನೀವು ಈ ದಿನ ದೇವರ ಶಬ್ದಕ್ಕೆ ಕಿವಿಗೊಟ್ಟರೆ ಅರಣ್ಯ ದಲ್ಲಿದ್ದಾಗ ಶೋಧನೆಯ ದಿನದಲ್ಲಿ ದೇವರಿಗೆ ಕೋಪ ವನ್ನೆಬ್ಬಿಸಿದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿ ಕೊಳ್ಳಬೇಡಿರಿ.
- Psalm 95:7–9 ಕೀರ್ತನೆಗಳು 95:7–9ಆತನು ನಮ್ಮ ದೇವರು; ನಾವು ಆತನು ಮೇಯಿಸುವ ಜನರೂ ಆತನ ಕೈ ಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಸ್ವರವನ್ನು ಕೇಳಿದರೆ ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ. ಅಲ್ಲಿ ನಿಮ್ಮ ತಂದೆಗಳು ನನ್ನನ್ನು ಶೋಧಿಸಿ, ಪರೀಕ್ಷಿಸಿದರು; ನನ್ನ ಕೆಲಸವನ್ನು ನೋಡಿದರು.
- Hebrews 3:15 ಇಬ್ರಿಯರಿಗೆ 3:15ಈ ಹೊತ್ತು ನೀವು ಆತನ ಧ್ವನಿಯನ್ನು ಕೇಳಿದರೆ ಎಂದು ಹೇಳುವಾಗ (ನಿಮ್ಮ ಹಿರಿಯರು) ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದಯ ಗಳನ್ನು ಕಠಿಣಮಾಡಿಕೊಳ್ಳಬೇಡಿರಿ.
- Numbers 14:1–4 ಅರಣ್ಯಕಾಂಡ 14:1–4ಆಗ ಸಭೆಯವರೆಲ್ಲಾ ತಮ್ಮ ಸ್ವರವೆತ್ತಿ ಕೂಗುವವರಾಗಿ ಆ ರಾತ್ರಿಯೆಲ್ಲಾ ಅತ್ತರು. ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು. ನಾವು ಕತ್ತಿಯಿಂದ ಕೊಲೆಯಾಗುವಂತೆ ನಮ್ಮ ಹೆಂಡತಿ ಮಕ್ಕಳೂ ಸುಲಿಗೆಯಾಗುವ ಹಾಗೆಯೂ ಕರ್ತನು ನಮ್ಮನ್ನು ಈ ದೇಶಕ್ಕೆ ಯಾಕೆ ಬರಮಾಡಿದ್ದಾನೆ? ಐಗುಪ್ತದೇಶಕ್ಕೆ ನಾವು ತಿರಿಗಿ ಹೋಗುವದು ನಮಗೆ ಒಳ್ಳೇದಲ್ಲವೋ? ನಾವು ನಾಯಕನೊಬ್ಬನನ್ನು ಮಾಡಿ ಕೊಂಡು ಐಗುಪ್ತದೇಶಕ್ಕೆ ಹಿಂತಿರುಗೋಣ ಬನ್ನಿರಿ ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು.
- Numbers 14:27–29 ಅರಣ್ಯಕಾಂಡ 14:27–29ಈ ಕೆಟ್ಟ ಸಭೆಯು ನನಗೆ ವಿರೋಧವಾಗಿ ಗುಣುಗುಟ್ಟುವದನ್ನು ನಾನು ಎಷ್ಟುಕಾಲ ಸಹಿಸಲಿ? ಇಸ್ರಾಯೇಲ್ ಮಕ್ಕಳು ನನಗೆ ವಿರೋಧವಾಗಿ ಗುಣುಗುಟ್ಟಿದ್ದನ್ನು ನಾನು ಕೇಳಿದ್ದೇನೆ. ಆದದರಿಂದ ನೀನು ಅವರಿಗೆ--ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು ಎಂದು ಕರ್ತನು ಹೇಳುತ್ತಾನೆ. ಈ ಅರಣ್ಯದಲ್ಲಿ ನಿಮ್ಮ ಹೆಣಗಳು ಬೀಳುವವು. ನನಗೆ ವಿರೋಧವಾಗಿ ಗುಣುಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಆದ ನೀವೇ.