Numbers · chapter 16 · verse 48
Numbers 16:48 in Kannada
ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡ ದ್ದರಿಂದ ವ್ಯಾಧಿಯು ಶಮನವಾಯಿತು.
Avanu sattavarigoo jeevavullavarigoo madhya nintukonda ddarinda vyaadhiyu shamanavaayitu.
Numbers 16:48 in English
- King James Version (KJV)
- And he stood between the dead and the living; and the plague was stayed.
- World English Bible (WEB)
- He stood between the dead and the living; and the plague was stayed.
- American Standard Version (ASV)
- And he stood between the dead and the living; and the plague was stayed.
- Bible in Basic English (BBE)
- And he took his place between the dead and the living: and the disease was stopped.
- Darby Translation (DBY)
- And he stood between the dead and the living; and the plague was stayed.
- Webster's Bible (WBS)
- And he stood between the dead and the living; and the plague was stayed.
- Young's Literal Translation (YLT)
- and standeth between the dead and the living, and the plague is restrained;
Read in context
- 46ಮೋಶೆಯು ಆರೋನನಿಗೆ--ನೀನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಬಲಿಪೀಠದ ಬೆಂಕಿಯನ್ನು ಇಟ್ಟು ಧೂಪ ಹಾಕಿ ಶೀಘ್ರವಾಗಿ ಸಭೆಯೊಳಗೆ ಹೋಗಿ ಅವರಿ ಗೋಸ್ಕರ ಪ್ರಾಯಶ್ಚಿತ್ತಮಾಡು. ಯಾಕಂದರೆ ಕರ್ತನ ಸಮ್ಮುಖದಿಂದ ಕೋಪವು ಹೊರಟು ಅವರೊಳಗೆ ವ್ಯಾಧಿಯು ಪ್ರಾರಂಭವಾಯಿತು ಎಂದು ಹೇಳಿದನು.
- 47ಮೋಶೆಯು ಹೇಳಿದ ಹಾಗೆ ಆರೋನನು ಅದನ್ನು ತೆಗೆದುಕೊಂಡು ಸಭೆಯ ಮಧ್ಯಕ್ಕೆ ಓಡಿಬಂದನು. ಆಗ ಇಗೋ, ವ್ಯಾಧಿಯು ಜನರೊಳಗೆ ಪ್ರಾರಂಭ ವಾಗಿತ್ತು. ಆಗ ಅವನು ಧೂಪವನ್ನಿಟ್ಟು ಜನರಿಗೋ ಸ್ಕರ ಪ್ರಾಯಶ್ಚಿತ್ತಮಾಡಿದನು.
- 48ಅವನು ಸತ್ತವರಿಗೂ ಜೀವವುಳ್ಳವರಿಗೂ ಮಧ್ಯ ನಿಂತುಕೊಂಡ ದ್ದರಿಂದ ವ್ಯಾಧಿಯು ಶಮನವಾಯಿತು.
- 49ಆದರೆ ಕೋರಹನ ನಿಮಿತ್ತ ಸತ್ತುಹೋದವರ ಹೊರತಾಗಿ ವ್ಯಾಧಿಯಲ್ಲಿ ಸತ್ತವರು ಹದಿನಾಲ್ಕುಸಾವಿರದ ಏಳು ನೂರು ಮಂದಿಯಾಗಿದ್ದರು.ಆರೋನನು ಮೋಶೆಯ ಬಳಿಗೂ ಸಭೆಯ ಗುಡಾರದ ಬಾಗಲಿನ ಬಳಿಗೂ ಹಿಂತಿರುಗಿ ಬಂದನು, ವ್ಯಾಧಿಯು ನಿಂತು ಹೋಗಿತ್ತು.
- 50ಆರೋನನು ಮೋಶೆಯ ಬಳಿಗೂ ಸಭೆಯ ಗುಡಾರದ ಬಾಗಲಿನ ಬಳಿಗೂ ಹಿಂತಿರುಗಿ ಬಂದನು, ವ್ಯಾಧಿಯು ನಿಂತು ಹೋಗಿತ್ತು.
Cross references
- Numbers 25:8–11 ಅರಣ್ಯಕಾಂಡ 25:8–11ಇಸ್ರಾಯೇಲಿನವನಾದ ಆ ಮನುಷ್ಯನ ಹಿಂದೆ ಡೇರೆಯೊಳಗೆ ಪ್ರವೇಶಿಸಿ ಇಸ್ರಾಯೇಲಿನವನನ್ನೂ ಆ ಸ್ತ್ರೀಯನ್ನೂ ಇಬ್ಬರ ಹೊಟ್ಟೆಯನ್ನು ತಿವಿದನು; ಹೀಗೆ ಇಸ್ರಾಯೇಲ್ ಮಕ್ಕಳಿಗೆ ಉಂಟಾಗಿದ್ದ ವ್ಯಾಧಿಯು ನಿಂತುಹೋಯಿತು. ಆದರೆ ವ್ಯಾಧಿ ಯಿಂದ ಸತ್ತವರು ಇಪ್ಪತ್ತುನಾಲ್ಕು ಸಾವಿರ ಮಂದಿಯಾಗಿದ್ದರು. ಆಗ ಕರ್ತನು ಮೋಶೆಗೆ-- ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನಾದ ಯಾಜಕ ನಾಗಿರುವ ಫೀನೆಹಾಸನು ಇಸ್ರಾಯೇಲಿನ ಮಕ್ಕಳಲ್ಲಿ ನನಗೋಸ್ಕರ ಆಸಕ್ತನಾಗಿದ್ದು ನಾನು ನನ್ನ ರೋಷದಿಂದ ಅವರನ್ನು ನಾಶಮಾಡದ ಹಾಗೆ ನನ್ನ ಕೋಪವನ್ನು ಅವರ ಮೇಲಿನಿಂದ ತಿರುಗಿಸಿ ಬಿಟ್ಟಿದ್ದಾನೆ.
- Psalm 106:30 ಕೀರ್ತನೆಗಳು 106:30ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.
- 2 Samuel 24:25 2 ಸಮುವೇಲನು 24:25ಆಗ ದಾವೀದನು ಕರ್ತನಿಗೆ ಅಲ್ಲಿ ಬಲಿಪೀಠವನ್ನು ಕಟ್ಟಿಸಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು. ಹೀಗೆ ಕರ್ತನು ದೇಶಕ್ಕೋಸ್ಕರ ಬಿನ್ನಹವನ್ನು ಕೇಳಿದ್ದರಿಂದ ಇಸ್ರಾ ಯೇಲಿನ ಕಡೆಯಿಂದ ಆ ಬಾಧೆಯು ನಿಂತಿತು.
- James 5:16 ಯಾಕೋಬನು 5:16ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ.
- Hebrews 7:24–25 ಇಬ್ರಿಯರಿಗೆ 7:24–25ಈತನಾ ದರೋ ಸದಾಕಾಲವಿರುವದರಿಂದ ಬದಲಾವಣೆಯಾ ಗದ ಯಾಜಕತ್ವವನ್ನು ಹೊಂದಿದ್ದಾನೆ. ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿ ಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕವವನಾಗಿದ್ದಾನೆ.
- Numbers 16:35 ಅರಣ್ಯಕಾಂಡ 16:35ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
- 2 Samuel 24:16–17 2 ಸಮುವೇಲನು 24:16–17ಆದರೆ ದೂತನು ಯೆರೂಸಲೇಮನ್ನು ಹಾಳುಮಾಡಲು ಅದರ ಮೇಲೆ ತನ್ನ ಕೈಚಾಚಿದಾಗ ಕರ್ತನು ಆ ಕೇಡಿಗೆ ಪಶ್ಚಾತ್ತಾಪಪಟ್ಟು ಜನರನ್ನು ನಾಶಮಾಡುವ ದೂತನಿಗೆಸಾಕು; ಈಗ ನಿನ್ನ ಕೈಯನ್ನು ಹಿಂದೆ ತಕ್ಕೋ ಅಂದನು. ಆಗ ಕರ್ತನ ದೂತನು ಯೆಬೂಸಿ ಯನಾದ ಅರೌನನು ತುಳಿಸುವ ಕಣದ ಬಳಿಯಲ್ಲಿ ಇದ್ದನು. ದಾವೀದನು ಜನಸಂಹಾರ ದೂತನನ್ನು ನೋಡಿದಾಗ ಅವನು ಕರ್ತನಿಗೆ--ಇಗೋ, ನಾನೇ ಪಾಪಮಾಡಿದೆನು; ದುಷ್ಟತ್ವದಿಂದ ಮಾಡಿದವನು ನಾನೇ; ಆದರೆ ಈ ಕುರಿಗಳಂತಿರುವ ಜನರು ಮಾಡಿ ದ್ದೇನು? ನಿನ್ನ ಕೈ ನನಗೆ ವಿರೋಧವಾಗಿಯೂ ನನ್ನ ತಂದೆಯ ಮನೆಗೆ ವಿರೋಧವಾಗಿಯೂ ಇರಲಿ ಎಂದು ನಾನು ಬೇಡುತ್ತೇನೆ ಅಂದನು.
- 1 Timothy 2:5–6 1 ತಿಮೊಥೆಯನಿಗೆ 2:5–6ಯಾಕಂದರೆ ದೇವರು ಒಬ್ಬನೇ;ದೇವರಿಗೂ ಮನಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ; ಆತನು ಎಲ್ಲರಿಗೋಸ್ಕರ ವಿಮೋಚನೆಯ ಕ್ರಯವಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು; ಇದೇ ತಕ್ಕಕಾಲದಲ್ಲಿ ಹೇಳ ಬೇಕಾದ ಸಾಕ್ಷಿಯಾಗಿದೆ.
- Numbers 16:18 ಅರಣ್ಯಕಾಂಡ 16:18ಆಗ ಅವರು ತಮ್ಮ ತಮ್ಮ ಧೂಪದ ಪಾತ್ರೆಗಳನ್ನು ತಕ್ಕೊಂಡು ಅವುಗಳ ಮೇಲೆ ಬೆಂಕಿಯನ್ನು ಹಾಕಿ ಅದರ ಮೇಲೆ ಧೂಪವನ್ನು ಹಾಕಿ ಸಭೆಯ ಗುಡಾರದ ಬಾಗಲಿನ ಮುಂದೆ ಮೋಶೆ ಆರೋನರ ಸಂಗಡ ನಿಂತರು.
- 1 Thessalonians 1:10 1 ಥೆಸಲೊನೀಕದವರಿಗೆ 1:10ಇದಲ್ಲದೆ ಆತನು ಸತ್ತವರೊಳ ಗಿಂದ ಎಬ್ಬಿಸಿದಂಥ ಮತ್ತು ಪರಲೋಕದಿಂದ ಬರುವಂಥ ಆತನ ಕುಮಾರನನ್ನು ಎದುರು ನೋಡುವವರಾದಿರೆಂಬ ದನ್ನೂ ತಿಳಿಸುತ್ತಾರೆ. ಈ ಯೇಸುವು ಮುಂದೆ ಬರುವ ಕೋಪದಿಂದ ನಮ್ಮನ್ನು ತಪ್ಪಿಸಿದನು.
- John 5:14 ಯೋಹಾನನು 5:14ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು ಅವ ನಿಗೆ--ಇಗೋ, ನಿನಗೆ ಸ್ವಸ್ಥವಾಯಿತಲ್ಲಾ; ನಿನ್ನ ಮೇಲೆ ಹೆಚ್ಚಿನ ಕೇಡು ಬಾರದಂತೆ ಇನ್ನು ಪಾಪಮಾಡಬೇಡ ಅಂದನು.
- 1 Chronicles 21:26–27 1 ಪೂರ್ವಕಾಲವೃತ್ತಾಂತ 21:26–27ದಾವೀದನು ಅಲ್ಲಿ ಕರ್ತನಿಗೆ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ದಹನ ಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ಕರ್ತನನ್ನು ಬೇಡಿಕೊಂಡನು. ಆಗ ಆತನು ಆಕಾಶದಿಂದ ದಹನ ಬಲಿಪೀಠದ ಮೇಲೆ ಅಗ್ನಿಯಿಂದ ಅವ ನಿಗೆ ಪ್ರತ್ಯುತ್ತರಕೊಟ್ಟನು. ಆಗ ಕರ್ತನು ದೂತನಿಗೆ ಹೇಳಿದ್ದರಿಂದ ಅವನು ತನ್ನ ಕತ್ತಿಯನ್ನು ಅದರ ಒರೆಯಲ್ಲಿ ತಿರುಗಿ ಹಾಕಿದನು.