Numbers · chapter 18 · verse 31
Numbers 18:31 in Kannada
ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಇದು ಸಭೆಯ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ನಿಮಗೆ ಪ್ರತಿಫಲ ವಾಗಿದೆ.ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
Neevoo nimma maneyavaroo adannu sakala sthalagalalli tinnabahudu. Idu sabheya gudaaradalli neevu maaduva sevegoskara nimage pratiphala vaagide.aadakaarana neevu adarallinda adara uttamavaadaddannu etti arpisidaaga neevu adara deseyinda paapavannu hottukolluvadilla; israayel makkala parishuddhavaadavugalannu apavitra maadadiddare saayuvadilla andanu.
Numbers 18:31 in English
- King James Version (KJV)
- And ye shall eat it in every place, ye and your households: for it [is] your reward for your service in the tabernacle of the congregation.
- World English Bible (WEB)
- You may eat it anywhere, you and your households, for it is your reward in return for your service in the Tent of Meeting.
- American Standard Version (ASV)
- And ye shall eat it in every place, ye and your households: for it is your reward in return for your service in the tent of meeting.
- Bible in Basic English (BBE)
- It is to be your food, for you and your families in every place: it is your reward for your work in the Tent of meeting.
- Darby Translation (DBY)
- And ye shall eat it in every place, ye and your households; for it is your reward for your service in the tent of meeting.
- Webster's Bible (WBS)
- And ye shall eat it in every place, ye and your households: for it [is] your reward for your service in the tabernacle of the congregation.
- Young's Literal Translation (YLT)
- and ye have eaten it in every place, ye and your households, for it [is] your hire in exchange for your service in the tent of meeting;
Read in context
- 29ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
- 30ನೀನು ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಅದರಲ್ಲಿ ಉತ್ತಮವಾದದ್ದನ್ನು ಎತ್ತಿದಾಗ ಅದು ಲೇವಿಯರಿಗೆ ಕಣದ ಆದಾಯದ ಹಾಗೆಯೂ ದ್ರಾಕ್ಷೇ ತೊಟ್ಟಿಯ ಆದಾಯದ ಹಾಗೆಯೂ ಎಣಿಸಲ್ಪಡುವದು.
- 31ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಇದು ಸಭೆಯ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ನಿಮಗೆ ಪ್ರತಿಫಲ ವಾಗಿದೆ.ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
- 32ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
Cross references
- 1 Corinthians 9:10–14 1 ಕೊರಿಂಥದವರಿಗೆ 9:10–14ಇಲ್ಲವೆ ನಮಗೋಸ್ಕರ ವಾಗಿಯೇ ಆತನು ಹೇಳುತ್ತಾನೋ? ಉಳುವವನು ನಿರೀಕ್ಷೆಯಿಂದ ಉಳಬೇಕು, ನಿರೀಕ್ಷೆಯಲ್ಲಿ ಕಣತುಳಿಸು ವವನು ತನ್ನ ನಿರೀಕ್ಷೆಯಲ್ಲಿ ಪಾಲುಗಾರನಾಗಿರಬೇಕು ಎಂದು ನಮಗೋಸ್ಕರ ನಿಸ್ಸಂದೇಹವಾಗಿ ಇದು ಬರೆಯಲ್ಪಟ್ಟಿತು. ನಾವು ನಿಮಗೋಸ್ಕರ ಆತ್ಮಸಂಬಂಧ ವಾದವುಗಳನ್ನು ಬಿತ್ತಿದ ಮೇಲೆ ನಿಮ್ಮಿಂದ ಶಾರೀರಿಕ ವಾದವುಗಳನ್ನು ಕೊಯ್ಯುವದು ದೊಡ್ಡದೋ? ನಿಮ್ಮ ಮೇಲಿರುವ ಅಧಿಕಾರದಲ್ಲಿ ಇತರರಿಗೆ ಪಾಲು ಇದ್ದರೆ ಅವರಿಗಿಂತ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಅಧಿಕಾರವನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿ ಕೊಂಡಿರುತ್ತೇವೆ. ಪವಿತ್ರವಾದವುಗಳ ಸೇವೆ ಮಾಡುವವರು ಆಲಯದವುಗಳಿಂದ ಜೀವಿಸುವರೆಂದೂ ಯಜ್ಞವೇದಿಯ ಬಳಿಯಲ್ಲಿ ಸೇವೆ ಮಾಡುವವರು ಯಜ್ಞವೇದಿಯೊಂದಿಗೆ ಪಾಲುಗಾರರೆಂದೂ ನಿಮಗೆ ಗೊತ್ತಿಲ್ಲವೋ? ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ಜೀವನ ಮಾಡ ಬೇಕೆಂದು ಕರ್ತನು ನೇಮಿಸಿದನು.
- Luke 10:7 ಲೂಕನು 10:7ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ;
- 1 Timothy 5:17–18 1 ತಿಮೊಥೆಯನಿಗೆ 5:17–18ಚೆನ್ನಾಗಿ ಅಧಿಕಾರ ನಡಿಸುವ ಹಿರಿಯರನ್ನು, ಅವ ರೊಳಗೆ ವಿಶೇಷವಾಗಿ ವಾಕ್ಯದಲ್ಲಿಯೂ ಬೋಧನೆ ಯಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು. ಕಣತುಳಿ ಯುವ ಎತ್ತಿನ ಬಾಯಿ ಕಟ್ಟಬಾರದೆಂತಲೂ--ಕೆಲಸ ದವನು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆಂತಲೂ ಬರಹದಲ್ಲಿ ಹೇಳಿದೆಯಲ್ಲಾ.
- Matthew 10:10 ಮತ್ತಾಯನು 10:10ಪ್ರಯಾಣಕ್ಕೆ ಹಸಿಬೆಯನ್ನಾಗಲೀ ಎರಡು ಮೇಲಂಗಿಗಳ ನ್ನಾಗಲೀ ಕೆರಗಳನ್ನಾಗಲೀ ಕೋಲುಗಳನ್ನಾಗಲೀ ತಕ್ಕೊ ಳ್ಳಬೇಡಿರಿ; ಯಾಕಂದರೆ ಕೆಲಸ ಮಾಡುವವನು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.
- Deuteronomy 14:22–23 ಧರ್ಮೋಪದೇಶಕಾಂಡ 14:22–23ನೀನು ಬಿತ್ತುವದರಿಂದ ಹೊಲದಲ್ಲಿ ವರುಷ ವರುಷಕ್ಕೆ ಬರುವ ಹುಟ್ಟುವಳಿಯಿಂದ ದಶಮಾಂಶವನ್ನು ತಪ್ಪದೆ ಕೊಡಬೇಕು. ನೀನು ನಿನ್ನ ದೇವರಾದ ಕರ್ತ ನಿಗೆ ಎಂದೆಂದಿಗೂ ಭಯಪಡುವದನ್ನು ಕಲಿಯುವ ಹಾಗೆ ನಿನ್ನ ಧಾನ್ಯ ದ್ರಾಕ್ಷರಸ ಎಣ್ಣೆಗಳ ದಶಮಾಂಶ ವನ್ನೂ ನಿನ್ನ ಪಶು ಕುರಿಗಳಲ್ಲಿ ಚೊಚ್ಚಲುಗಳನ್ನೂ ನಿನ್ನ ದೇವರಾದ ಕರ್ತನ ಮುಂದೆ ಆತನು ತನ್ನ ಹೆಸರನ್ನು ಇರಿಸುವದಕ್ಕೆ ಆದುಕೊಂಡ ಸ್ಥಳದಲ್ಲಿ ತಿನ್ನಬೇಕು.
- 2 Corinthians 12:13 2 ಕೊರಿಂಥದವರಿಗೆ 12:13ಭಾರವನ್ನು ನಾನು ನಿಮ್ಮ ಮೇಲೆ ಹಾಕಲಿಲ್ಲವೆಂಬ ಒಂದೇ ವಿಷಯದಲ್ಲಿ ಹೊರತು ಇನ್ನಾವ ವಿಷಯ ದಲ್ಲಿಯೂ ನಿಮ್ಮನ್ನು ಮಿಕ್ಕಾದ ಸಭೆಗಳವರಿಗಿಂತ ಕಡಿಮೆ ಮಾಡಲಿಲ್ಲವಲ್ಲಾ; ನಾನು ಮಾಡಿದ ಈ ಅನ್ಯಾಯವನ್ನು ಕ್ಷಮಿಸಿರಿ.
- Galatians 6:6 ಗಲಾತ್ಯದವರಿಗೆ 6:6ವಾಕ್ಯದಲ್ಲಿ ಉಪದೇಶಹೊಂದುವವನು ಉಪದೇಶ ಮಾಡುವವನಿಗೆ ತನಿಗರುವ ಎಲ್ಲಾ ಒಳ್ಳೆಯವುಗಳಲ್ಲಿ ಪಾಲುಕೊಡಲಿ.