Numbers · chapter 29 · verse 7
Numbers 29:7 in Kannada
ಈ ಏಳನೇ ತಿಂಗಳಿನ ಹತ್ತನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಅದರಲ್ಲಿ ನಿಮ್ಮ ಪ್ರಾಣಗಳನ್ನು ವ್ಯಥೆಪಡಿಸಿ ಯಾವ ಕೆಲಸವನ್ನಾದರೂ ಮಾಡಬಾರದು.
Ee elane tingalina hattane divasadalli neevu parishuddha sabheyaagi koodabeku; adaralli nimma praanagalannu vyathepadisi yaava kelasavannaadaroo maadabaaradu.
Numbers 29:7 in English
- King James Version (KJV)
- And ye shall have on the tenth [day] of this seventh month an holy convocation; and ye shall afflict your souls: ye shall not do any work [therein:]
- World English Bible (WEB)
- “‘On the tenth day of this seventh month you shall have a holy convocation. You shall afflict your souls. You shall do no kind of work;
- American Standard Version (ASV)
- And on the tenth day of this seventh month ye shall have a holy convocation; and ye shall afflict your souls: ye shall do no manner of work;
- Bible in Basic English (BBE)
- And on the tenth day of this seventh month there will be a holy meeting; keep yourselves from pleasure, and do no sort of work;
- Darby Translation (DBY)
- And on the tenth of this seventh month ye shall have a holy convocation; and ye shall afflict your souls; no manner of work shall ye do.
- Webster's Bible (WBS)
- And ye shall have on the tenth [day] of this seventh month a holy convocation; and ye shall afflict your souls: [in it] ye shall not do any work.
- Young's Literal Translation (YLT)
- 'And on the tenth of this seventh month a holy convocation ye have, and ye have humbled your souls; ye do no work;
Read in context
- 5ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕೆ ಪಾಪಬಲಿಗಾಗಿ ಒಂದು ಮೇಕೆಮರಿ.
- 6ಇದಲ್ಲದೆ ತಿಂಗಳಿನ ದಹನಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ನಿತ್ಯವಾದ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ಬೆಂಕಿಯಿಂದ ಮಾಡ ಲ್ಪಟ್ಟು ಕರ್ತನಿಗೆ ಸುವಾಸನೆಗಾಗಿ ಅವುಗಳಿಗೆ ತಕ್ಕಂತೆ ಅರ್ಪಿಸಬೇಕು.
- 7ಈ ಏಳನೇ ತಿಂಗಳಿನ ಹತ್ತನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಅದರಲ್ಲಿ ನಿಮ್ಮ ಪ್ರಾಣಗಳನ್ನು ವ್ಯಥೆಪಡಿಸಿ ಯಾವ ಕೆಲಸವನ್ನಾದರೂ ಮಾಡಬಾರದು.
- 8ಆದರೆ ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ದೋಷವಿಲ್ಲದ ಒಂದು ಎಳೇ ಹೋರಿ ಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿ ಗಳನ್ನೂ
- 9ಅವುಗಳ ಆಹಾರ ಸಮರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶಗಳನ್ನೂ
Cross references
- Matthew 5:4 ಮತ್ತಾಯನು 5:4ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು.
- Leviticus 16:29–31 ಯಾಜಕಕಾಂಡ 16:29–31ನೀವು ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮಲ್ಲಿ ಒಬ್ಬ ಸ್ವದೇಶದವನಾಗಲಿ ಪ್ರವಾಸಿಯಾಗಿರುವ ಪರಕೀಯನಾಗಲಿ ನಿಮ್ಮ ಆತ್ಮಗಳನ್ನು ಕುಂದಿಸಿ ಯಾವ ಕೆಲಸವನ್ನೂ ಮಾಡದಂತೆ ಇದು ನಿಮಗೆ ಶಾಶ್ವತವಾದ ಒಂದು ನಿಯಮವಾಗಿರುವದು. ಯಾಕಂದರೆ ನೀವು ಕರ್ತನ ಸನ್ನಿಧಿಯಲ್ಲಿ ನಿಮ್ಮ ಎಲ್ಲಾ ಪಾಪಗಳಿಂದ ಶುದ್ಧರಾಗಿರುವಂತೆ ನಿಮ್ಮನ್ನು ಶುದ್ಧೀಕರಿಸುವ ಹಾಗೆ ಆ ದಿನದಲ್ಲಿ ಯಾಜಕನು ನಿಮಗೋಸ್ಕರ ಪ್ರಾಯಶ್ಚಿತ್ತ ವನ್ನು ಮಾಡುವನು. ಇದೇ ನಿಮಗೆ ವಿಶ್ರಾಂತಿಯ ಸಬ್ಬತ್ತಾಗಿರುವದು. ನಿಮಗೆ ನಿತ್ಯವಾದ ನಿಯಮ ವಿರುವಂತೆ ನಿಮ್ಮ ಪ್ರಾಣಗಳನ್ನು ಕುಂದಿಸಬೇಕು.
- Romans 6:6 ರೋಮಾಪುರದವರಿಗೆ 6:6ಪಾಪದ ಶರೀರವು ನಾಶ ವಾಗಿ ನಾವು ಇನ್ನೂ ಪಾಪಕ್ಕೆ ದಾಸರಾಗಿರದಂತೆ ನಮ್ಮ ಹಳೇ ಮನುಷ್ಯನು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟ ನೆಂದು ತಿಳಿದಿದ್ದೇವೆ.
- Zechariah 12:10 ಜೆಕರ್ಯ 12:10ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.
- James 4:8–10 ಯಾಕೋಬನು 4:8–10ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ. ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ. ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿ ಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆತ್ತುವನು.
- Leviticus 23:26–32 ಯಾಜಕಕಾಂಡ 23:26–32ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- ಇದಲ್ಲದೆ ಈ ಏಳನೆಯ ತಿಂಗಳಿನ ಹತ್ತನೆಯ ದಿವಸವು ಪ್ರಾಯಶ್ಚಿತ್ತದ ದಿವಸವಾಗಿ ರುವದು; ಅದು ನಿಮಗೆ ಒಂದು ಪರಿಶುದ್ಧ ಸಭೆಯ ಕೂಟವಾಗಿರುವದು; ನೀವು ನಿಮ್ಮ ಪ್ರಾಣಗಳನ್ನು ಕುಂದಿಸಿ ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು. ಆ ದಿವಸದಲ್ಲಿ ನೀವು ಕೆಲಸವನ್ನು ಮಾಡಬಾರದು. ಅದು ನಿಮಗೋಸ್ಕರ ನಿಮ್ಮ ದೇವರಾಗಿರುವ ಕರ್ತನ ಸನ್ನಿಧಿಯಲ್ಲಿ ಪ್ರಾಯ ಶ್ಚಿತ್ತಮಾಡುವದಕ್ಕಾಗಿ ಪ್ರಾಯಶ್ಚಿತ್ತದ ದಿವಸವಾಗಿ ರುವದು. ಆ ದಿವಸದಲ್ಲಿ ಯಾವನಾದರೂ ಕುಂದಿಸಿಕೊಳ್ಳದಿದ್ದರೆ ಅವನು ತನ್ನ ಜನರ ಮಧ್ಯ ದೊಳಗಿನಿಂದ ತೆಗೆದುಹಾಕಲ್ಪಡಬೇಕು. ಆ ದಿವಸ ದಲ್ಲಿ ಯಾವನಾದರೂ ಯಾವದೇ ಕೆಲಸವನ್ನು ಮಾಡಿ ದರೆ ಅವನನ್ನು ನಾನು ಅವನ ಜನರ ಮಧ್ಯದಿಂದ ನಾಶಮಾಡುವೆನು. ನೀವು ಯಾವ ತರದ ಕೆಲಸ ವನ್ನು ಮಾಡಬಾರದು; ಇದು ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರ ಬೇಕು. ಇದು ನಿಮಗೆ ವಿಶ್ರಾಂತಿಯ ಸಬ್ಬತ್ತಾಗಿ ರುವದು; ನೀವು ನಿಮ್ಮ ಪ್ರಾಣಗಳನ್ನು ಕುಂದಿಸಬೇಕು; ಆ ತಿಂಗಳಿನ ಒಂಭತ್ತನೆಯ ದಿವಸದ ಸಾಯಂಕಾಲ ದಿಂದ ಮರುದಿನದ ಸಾಯಂಕಾಲದ ವರೆಗೆ ನಿಮ್ಮ ಸಬ್ಬತ್ತನ್ನು ನೀವು ಆಚರಿಸಬೇಕು ಎಂಬದೇ.
- Ezra 8:21 ಎಜ್ರನು 8:21ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸುಕೊಳ್ಳುವದಕ್ಕೂ ನಮಗೂ ನಮ್ಮ ಮಕ್ಕಳಿಗೂ ನಮ್ಮ ಎಲ್ಲಾ ಸ್ಥಿತಿಗೂ ಆತನಿಂದ ಸರಿಯಾದ ಮಾರ್ಗ ವನ್ನು ಹುಡುಕುವದಕ್ಕೂ ನಾನು ಅಲ್ಲಿ ಅಹವಾ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಸಾರಿದೆನು.
- Isaiah 22:12 ಯೆಶಾಯ 22:12ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.
- Isaiah 58:3–5 ಯೆಶಾಯ 58:3–5ನಾವು ಉಪವಾಸ ಮಾಡಿದ್ದೇವೆ, ನೀನು ಯಾಕೆ ನೋಡುವದಿಲ್ಲ? ನಮ್ಮ ಪ್ರಾಣವನ್ನು ಕುಂದಿಸಲು ನೀನು ಗಮನಿಸದಿರುವದೇಕೆ ಎಂದು ಅವರು ಅಂದು ಕೊಳ್ಳುತ್ತಾರೆ; ಇಗೋ, ನಿಮ್ಮ ಉಪವಾಸದ ದಿನದಲ್ಲಿ ನಿಮ್ಮ ಇಷ್ಟವನ್ನು ತೀರಿಸುತ್ತೀರಿ ಮತ್ತು ನಿಮ್ಮ ಎಲ್ಲಾ ದುಡಿತವನ್ನು ನಿರ್ಬಂಧಿಸುತ್ತೀರಿ. ಇಗೋ, ವ್ಯಾಜ್ಯ ಕ್ಕೂ ಹೋರಾಟಕ್ಕೂ ದುಷ್ಟತ್ವದ ಮುಷ್ಟಿಯಿಂದ ಹೊಡೆಯುವದಕ್ಕೂ ನೀವು ಉಪವಾಸಮಾಡುತ್ತೀರಿ. ನಿಮ್ಮ ಸ್ವರವು ಮೇಲಕ್ಕೆ ಕೇಳಿಸುವಂತೆ ಈ ದಿವಸ ಉಪವಾಸ ಮಾಡಿದ ಹಾಗೆ ನೀವು ಮಾಡಬೇಡಿರಿ. ನಾನು ಆರಿಸಿಕೊಂಡದ್ದು ಇಂಥಾ ಉಪವಾಸವೋ? ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀ ತಟ್ಟನ್ನೂ ಬೂದಿಯನ್ನೂ ಆಸನ ಮಾಡಿಕೊಂಡು ಕೂತುಕೊಳ್ಳುವದೋ? ಇದನ್ನು ಉಪವಾಸವೆಂದು ನೀವು ಕರೆದು ಆ ದಿನದಲ್ಲಿ ಮನುಷ್ಯನು ತನ್ನ ಆತ್ಮವನ್ನು ಕುಂದಿಸುವದು ಕರ್ತನು ಮೆಚ್ಚುವ ದಿನವೆಂದು ಅನ್ನು ತ್ತೀರೋ?
- Psalm 126:5–6 ಕೀರ್ತನೆಗಳು 126:5–6ಕಣ್ಣೀರಿ ನಿಂದ ಬಿತ್ತುವವರು ಉತ್ಸಾಹದಲ್ಲಿ ಕೊಯ್ಯುವರು. ಅಮೂಲ್ಯವಾದ ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವನುತನ್ನ ಸಿವುಡುಗಳನ್ನು ತರುವವನಾಗಿ, ನಿಸ್ಸಂದೇಹವಾಗಿ ಉತ್ಸಾಹ ಧ್ವನಿಯಿಂದ ತಿರುಗಿ ಬರುವನು. ತನ್ನ ಸಿವುಡುಗಳನ್ನು ತರುವವನಾಗಿ, ನಿಸ್ಸಂದೇಹವಾಗಿ ಉತ್ಸಾಹ ಧ್ವನಿಯಿಂದ ತಿರುಗಿ ಬರುವನು.
- 2 Corinthians 7:9–11 2 ಕೊರಿಂಥದವರಿಗೆ 7:9–11ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ. ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ. ಯಾಕಂದರೆ ದೇವರ ಚಿತ್ತಾನುಸಾರವಾದ ಈ ದುಃಖವು ನಿಮ್ಮಲ್ಲಿ ಎಂಥ ಎಚ್ಚರಿಕೆಯನ್ನೂ ಎಂಥ ನಿರ್ದೋಷತ್ವವನ್ನೂ ಎಂಥ ರೋಷವನ್ನೂ ಎಂಥ ಭಯವನ್ನೂ ಎಂಥ ಅಧಿಕವಾದ ಹಂಬಲವನ್ನೂ ಎಂಥ ಆಸಕ್ತಿಯನ್ನೂ ಎಂಥ ಪ್ರತಿಕಾರವನ್ನೂ ಹುಟ್ಟಿಸಿತೆಂದು ನೋಡಿರಿ. ಇದರಲ್ಲಿ ನೀವೆಲ್ಲಾ ನಿರ್ದೋಷಿಗಳೆಂದು ತೋರಿಸಿಕೊಂ
- 1 Corinthians 9:27 1 ಕೊರಿಂಥದವರಿಗೆ 9:27ಆದರೆ ನಾನು ಬೇರೆಯವರಿಗೆ ಸಾರಿದ ಮೇಲೆ ಯಾವ ವಿಧದಲ್ಲಿಯೂ ನಾನು ಭ್ರಷ್ಠನಾಗದಂತೆ ನನ್ನ ದೇಹವನ್ನು ಅಧೀನತೆಯಲ್ಲಿಟ್ಟು ಅದನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ.