Matthew · chapter 5 · verse 4
Matthew 5:4 in Kannada
ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು.
Duhkhapaduvavaru dhanyaru; yaakandare avaru aadarane honduvaru.
Matthew 5:4 in English
- King James Version (KJV)
- Blessed [are] they that mourn: for they shall be comforted.
- World English Bible (WEB)
- Blessed are those who mourn, for they shall be comforted.
- American Standard Version (ASV)
- Blessed are they that mourn: for they shall be comforted.
- Bible in Basic English (BBE)
- Happy are those who are sad: for they will be comforted.
- Darby Translation (DBY)
- Blessed they that mourn, for they shall be comforted.
- Webster's Bible (WBS)
- Blessed [are] they that mourn: for they shall be comforted.
- Young's Literal Translation (YLT)
- 'Happy the mourning — because they shall be comforted.
Read in context
- 2ಆತನು ಬಾಯಿ ತೆರೆದು ಅವರಿಗೆ ಬೋಧಿಸಿ ಹೇಳಿದ್ದೇನಂದರೆ --
- 3ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು.
- 4ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು.
- 5ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು.
- 6ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು.
Cross references
- Revelation 21:4 ಪ್ರಕಟನೆ 21:4ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣ ವಿರುವದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವದೇ ಇಲ್ಲ. ಮೊದಲಿದ್ದವುಗಳೆಲ್ಲಾ ಇಲ್ಲದೆ ಹೋದವು ಎಂದು ಹೇಳಿತು.
- 2 Corinthians 7:9–10 2 ಕೊರಿಂಥದವರಿಗೆ 7:9–10ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ. ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.
- John 16:20–22 ಯೋಹಾನನು 16:20–22ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ಅಳುತ್ತಾ ಗೋಳಾಡುವಿರಿ, ಆದರೆ ಲೋಕವು ಸಂತೋಷಿಸುವದು; ನೀವು ದುಃಖಿಸುವಿರಿ, ಆದರೆ ನಿಮ್ಮ ದುಃಖವು ಹೋಗಿ ಆನಂದವು ಬರುವದು. ಒಬ್ಬ ಸ್ತ್ರೀಗೆ ತನ್ನ ಪ್ರಸವವೇದನೆಯ ಗಳಿಗೆ ಬಂದಾಗ ದುಃಖವಿರುವದು; ಆಕೆಯು ಮಗುವನ್ನು ಹೆತ್ತಕೂಡಲೆ ಈ ಲೋಕದೊಳಗೆ ಒಬ್ಬ ಮನುಷ್ಯನು ಹುಟ್ಟಿದನೆಂದು ಸಂತೋಷದಿಂದ ಆ ನೋವನ್ನು ಆಕೆಯು ನೆನಪಿಗೆ ತರುವದೇ ಇಲ್ಲ. ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ.
- Isaiah 61:2–3 ಯೆಶಾಯ 61:2–3ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Psalm 126:5–6 ಕೀರ್ತನೆಗಳು 126:5–6ಕಣ್ಣೀರಿ ನಿಂದ ಬಿತ್ತುವವರು ಉತ್ಸಾಹದಲ್ಲಿ ಕೊಯ್ಯುವರು. ಅಮೂಲ್ಯವಾದ ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವನುತನ್ನ ಸಿವುಡುಗಳನ್ನು ತರುವವನಾಗಿ, ನಿಸ್ಸಂದೇಹವಾಗಿ ಉತ್ಸಾಹ ಧ್ವನಿಯಿಂದ ತಿರುಗಿ ಬರುವನು. ತನ್ನ ಸಿವುಡುಗಳನ್ನು ತರುವವನಾಗಿ, ನಿಸ್ಸಂದೇಹವಾಗಿ ಉತ್ಸಾಹ ಧ್ವನಿಯಿಂದ ತಿರುಗಿ ಬರುವನು.
- Isaiah 57:18 ಯೆಶಾಯ 57:18ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ ಅವನನ್ನು ನಡಿಸುತ್ತೇನೆ ಮತ್ತು ಅವನಿಗೂ ಅವನ ದುಃಖಿತರಿಗೂ ಆದರಣೆಗಳನ್ನು ಪುನಃ ಸ್ಥಾಪಿಸುವೆನು.
- Revelation 7:14–17 ಪ್ರಕಟನೆ 7:14–17ಅದಕ್ಕೆ ನಾನು ಅಯ್ಯಾ, ನೀನೇ ಬಲ್ಲೆ ಅಂದೆನು. ಅವನು ನನಗೆ--ಇವರು ಮಹಾಸಂಕಟದೊಳಗಿಂದ ಬಂದವರು; ಕುರಿಮರಿಯಾ ದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಬೆಳ್ಳಗೆ ಮಾಡಿದ್ದಾರೆ. ಈ ಕಾರಣದಿಂದ ಇವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನ ಸೇವೆ ಮಾಡುವವರಾ ಗಿದ್ದಾರೆ; ಸಿಂಹಾಸನದ ಮೇಲೆ ಕೂತಿರುವಾತನು ಅವರ ಮಧ್ಯದಲ್ಲಿ ವಾಸಿಸುವನು. ಇನ್ನು ಮೇಲೆ ಅವರಿಗೆ ಹಸಿವೆಯಾಗಲಿ ಬಾಯಾರಿಕೆಯಾಗಲಿ ಆಗುವದೇ ಇಲ್ಲ; ಇದಲ್ಲದೆ ಅವರಿಗೆ ಬಿಸಿಲಾದರೂ ಯಾವ ಝಳವಾದರೂ ಬಡಿಯುವದಿಲ್ಲ.ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು. ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
- Luke 6:21 ಲೂಕನು 6:21ಈಗ ಹಸಿದವರಾದ ನೀವು ಧನ್ಯರು; ಯಾಕಂದರೆ ನೀವು ತೃಪ್ತಿ ಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು; ಯಾಕಂದರೆ ನೀವು ನಗುವಿರಿ.
- James 1:12 ಯಾಕೋಬನು 1:12ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ ಕಿರೀಟ ವನ್ನು ಹೊಂದುವನು;
- Isaiah 51:11–12 ಯೆಶಾಯ 51:11–12ಆದಕಾರಣ ಕರ್ತನಿಂದ ವಿಮೋಚಿ ಸಲ್ಪಟ್ಟವರು ತಿರುಗಿಕೊಂಡು ಹಾಡುತ್ತಾ ಚೀಯೋನಿಗೆ ಬರುವರು; ಶಾಶ್ವತವಾದ ಆನಂದವು ಅವರ ತಲೆಯ ಮೇಲಿರುವದು, ಅವರು ಹರ್ಷಾನಂದಗಳನ್ನು ಹೊಂದಿಕೊಳ್ಳುವರು; ದುಃಖವು, ವ್ಯಥೆಯು ಓಡಿ ಹೋಗುವವು. ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು?
- Isaiah 25:8 ಯೆಶಾಯ 25:8ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
- 2 Corinthians 1:4–7 2 ಕೊರಿಂಥದವರಿಗೆ 1:4–7ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿ ಆತನು ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಇರುವವರನ್ನು ಸಂತೈಸು ವದಕ್ಕೆ ಶಕ್ತರಾಗುತ್ತೇವೆ. ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಆದರಣೆಯೂ ಕೂಡ ಕ್ರಿಸ್ತನ ಮೂಲಕ ಹೇರಳವಾಗಿ ಉಂಟಾಗುತ್ತದೆ. ನಾವು ಸಂಕಟ ಪಟ್ಟರೆ ಅದು ನಿಮ್ಮ ಆದರಣೆಗಾಗಿಯೂ ರಕ್ಷಣೆಗಾಗಿಯೂ ಆಗಿದ್ದು ನಾವು ಅನುಭವಿಸುವ ಶ್ರಮೆಗಳಲ್ಲಿ ತಾಳ್ಮೆಯುಳ್ಳವರಾಗುವಂತೆ ಅವು ಪರಿಣಮಿಸುತ್ತವೆ; ಇಲ್ಲವೆ ನಾವು ಆದರಿಸಲ್ಪಟ್ಟರೆ ಅದು ನಿಮ್ಮ ಆದರಣೆಗಾಗಿ ಮತ್ತು ರಕ್ಷಣೆಗಾಗಿ ಇರುತ್ತದೆ. ನೀವು ಬಾಧೆಗಳಲ್ಲಿ ಪಾಲುಗಾರರಾಗಿರುವ ಪ್ರಕಾರ ಆದರಣೆ ಯಲ್ಲಿಯೂ ಪಾಲುಗಾರರಾಗಿದ್ದೀರೆಂದು ನಮಗೆ ತಿಳಿದಿರುವದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.