Numbers · chapter 3 · verse 25
Numbers 3:25 in Kannada
ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ
Sabheya gudaaradalli gershonana kumaararu kaapaadikollabekaadavugalu gudaa ravoo adara hodikeyoo sabheya gudaarada baagalina tereyoo
Numbers 3:25 in English
- King James Version (KJV)
- And the charge of the sons of Gershon in the tabernacle of the congregation [shall be] the tabernacle, and the tent, the covering thereof, and the hanging for the door of the tabernacle of the congregation,
- World English Bible (WEB)
- The duty of the sons of Gershon in the Tent of Meeting shall be the tabernacle, the tent, its covering, the screen for the door of the Tent of Meeting,
- American Standard Version (ASV)
- And the charge of the sons of Gershon in the tent of meeting shall be the tabernacle, and the Tent, the covering thereof, and the screen for the door of the tent of meeting,
- Bible in Basic English (BBE)
- In the Tent of meeting, the Gershonites are to have the care of the House, and the Tent with its cover, and the veil for the door of the Tent of meeting,
- Darby Translation (DBY)
- And the charge of the sons of Gershon in the tent of meeting was: the tabernacle and the tent, its covering, and the curtain of the entrance to the tent of meeting.
- Webster's Bible (WBS)
- And the charge of the sons of Gershon in the tabernacle of the congregation [shall be] the tabernacle, and the tent, its covering, and the hanging for the door of the tabernacle of the congregation,
- Young's Literal Translation (YLT)
- And the charge of the sons of Gershon in the tent of meeting [is] the tabernacle, and the tent, its covering, and the vail at the opening of the tent of meeting,
Read in context
- 23ಗೇರ್ಷೋನ್ಯರ ಕುಟುಂಬಗಳು ಗುಡಾರದ ಹಿಂದುಗಡೆ ಪಶ್ಚಿಮದ ಕಡೆಗೆ ಇಳುಕೊಳ್ಳಬೇಕು.
- 24ಲಾಯೇಲನ ಮಗನಾದ ಎಲ್ಯಾಸಾಫನು ಗೇರ್ಷೋನ್ಯರ ತಂದೆ ಮನೆಗೆ ಮುಖ್ಯಸ್ಥನು.
- 25ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ
- 26ಅಂಗಳದ ತೆರೆಗಳೂ ಗುಡಾರಕ್ಕೂ ಬಲಿಪೀಠಕ್ಕೂ ಸುತ್ತಲಿರುವ ಅಂಗಳದ ಪರದೆಯೂ ಅಂಗಳದ ಬಾಗಲಿನ ತೆರೆಯೂ ಅದರ ಸಮಸ್ತ ಸೇವೆಗೆ ಬೇಕಾದ ಹಗ್ಗಗಳೂ ಇವೆ.
- 27ಅಮ್ರಾಮಿಯರ ಕುಟುಂಬವೂ ಇಚ್ಹಾರರ ಕುಟುಂಬವೂ ಹೆಬ್ರೋನಿಯರ ಕುಟುಂಬವೂ ಉಜ್ಜೀ ಯೇಲರ ಕುಟುಂಬವೂ ಇವು ಕೆಹಾತರ ಕುಟುಂಬ ಗಳು.
Cross references
- Exodus 25:9 ವಿಮೋಚನಕಾಂಡ 25:9ಗುಡಾರದ ಮಾದರಿಯನ್ನೂ ಅದರ ಎಲ್ಲಾ ಸಾಮಾನುಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.
- Romans 12:6–8 ರೋಮಾಪುರದವರಿಗೆ 12:6–8ಹೀಗೆ ಕೃಪೆಗನುಸಾರವಾಗಿ ನಮಗೆ ವಿಧವಿಧವಾದ ವರಗಳು ಕೊಡಲ್ಪಟ್ಟಿರಲು ಅವುಗಳಲ್ಲಿ ಅದು ಪ್ರವಾದನೆ ಯಾಗಿದ್ದರೆ ನಂಬಿಕೆಯ ಪ್ರಮಾಣಕ್ಕೆ ತಕ್ಕಂತೆ ಪ್ರವಾದಿಸೋಣ. ಇಲ್ಲವೆ ಸೇವೆಯಾಗಿದ್ದರೆ ನಮ್ಮ ಸೇವೆಯಲ್ಲಿ ನಿರತರಾಗಿರೋಣ. ಬೋಧಿಸುವವನು ಬೋಧಿಸುವದರಲ್ಲಿ ನಿರತನಾಗಿರಲಿ. ಇಲ್ಲವೆ ಎಚ್ಚರಿಸುವವನು ಎಚ್ಚರಿಸುವದರಲ್ಲಿ ನಿರತನಾಗಿರಲಿ ಮತ್ತು ಕೊಡುವವನು ಯಥಾರ್ಥವಾಗಿ ಕೊಡಲಿ. ಆಳುವವನು ಶ್ರದ್ಧೆಯಿಂದ ಆಳಲಿ, ಕರುಣೆಯನ್ನು ತೋರಿಸುವವನು ಸಂತೋಷಪೂರ್ವಕವಾಗಿ ತೋರಿಸಲಿ.
- Exodus 40:28 ವಿಮೋಚನಕಾಂಡ 40:28ಗುಡಾರದ ಬಾಗಿಲಿನ ತೆರೆಯನ್ನು ತೂಗುಹಾಕಿ ದನು. ಸಭೆ ಡೇರೆಯ ಗುಡಾರದ ಬಳಿಯಲ್ಲಿ ದಹನ ಬಲಿಪೀಠವನ್ನು ಇಟ್ಟನು.
- Numbers 4:24–28 ಅರಣ್ಯಕಾಂಡ 4:24–28ಗೇರ್ಷೋನಿಯರ ಕುಟುಂಬಗಳ ಸೇವೆಯೂ ಹೊರೆಯೂ ಯಾವದಂದರೆ-- ಅವರು ಗುಡಾರದ ತೆರೆಗಳನ್ನೂ ಸಭೆಯ ಗುಡಾರವನ್ನೂ ಅದರ ಹೊದಿಕೆ ಯನ್ನೂ ಅದರ ಮೇಲಿರುವ ಕಡಲು ಹಂದಿಯ ಚರ್ಮದ ಹೊದಿಕೆಯನ್ನೂ ಸಭೆಯ ಗುಡಾರದ ಬಾಗಲಿನ ತೆರೆಯನ್ನೂ ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಲಿನ ತೆರೆಯನ್ನೂ ಅವುಗಳ ಹಗ್ಗಗ ಳನ್ನೂ ಅವುಗಳ ಸೇವೆಯ ಎಲ್ಲಾ ವಸ್ತುಗಳನ್ನೂ ಹೊತ್ತು ಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು. ಆರೋನನೂ ಅವನ ಕುಮಾರರೂ ನೇಮಿಸುವ ಹಾಗೆಯೇ ಗೇರ್ಷೋನನ ಕುಮಾರರ ಸೇವೆಯೆಲ್ಲಾ ಅವರು ಹೊರತಕ್ಕದ್ದೆಲ್ಲವೂ ಮಾಡತಕ್ಕದ್ದೆಲ್ಲವೂ ಆಗಬೇಕು. ನೀವು ಅವರ ಸಮಸ್ತ ಹೊರೆಯನ್ನೂ ಅಪ್ಪಣೆಯ ಪ್ರಕಾರ ಅವರಿಗೆ ನೇಮಿಸ ಬೇಕು. ಗೇರ್ಷೋನನ ಕುಮಾರರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯು ಇದೇ: ಯಾಜಕ ನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವದು ಅವರಿಗೆ ಕೊಡಲ್ಪಟ್ಟ ಅಪ್ಪಣೆಯಾಗಿದೆ.
- Exodus 36:37–38 ವಿಮೋಚನಕಾಂಡ 36:37–38ಬಾಗಲಿಗೆ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನಾರುಗಳಿಂದ ಕಸೂತಿ ಹಾಕಿ ತೆರೆಯನ್ನು ಮಾಡಿದನು;ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು. ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು.
- 1 Chronicles 26:21–22 1 ಪೂರ್ವಕಾಲವೃತ್ತಾಂತ 26:21–22ಲದ್ದಾನನ ಕುಮಾರರು; ಗೇರ್ಷೋನ್ಯ ನಾದ ಲದ್ದಾನನ ಕುಮಾರರು ಮುಖ್ಯಸ್ಥರಾದ ಪಿತೃ ಗಳಾಗಿದ್ದರು. ಈ ಗೇರ್ಷೋನ್ಯನಾದ ಲದ್ದಾನನ ಮಗನು ಯೆಹೀಯೇಲನು. ಯೆಹೀಯೇಲನ ಕುಮಾರರು--ಜೇತಾಮನು, ಅವನ ಸಹೋದರನಾದ ಯೋವೇಲನು; ಇವರು ಕರ್ತನ ಮನೆಯ ಬೊಕ್ಕಸಗಳ ಮೇಲೆ ಇದ್ದರು.
- 1 Chronicles 9:14–33 1 ಪೂರ್ವಕಾಲವೃತ್ತಾಂತ 9:14–33ಲೇವಿಯರಲ್ಲಿ ಯಾರಂದರೆ, ಮೆರಾರೀಯ ಕುಮಾ ರರಲ್ಲಿ ಒಬ್ಬನಾದ ಹಷ್ಷೂಬನ ಮಗನಾದ ಅಜ್ರೀ ಕಾಮನ ಮಗನಾದ ಹಷಬ್ಯನ ಮಗನಾದ ಶೆಮಾ ಯನೂ; ಬಕ್ಬಕ್ಕರನೂ ಹೆರೆಷನೂ ಗಲಾಲನೂ ಅಸಾಫನ ಮಗನಾದ ಜಿಕ್ರಿಯ ಮಗನಾದ ವಿಾಕನ ಮಗನಾದ ಮತ್ತನ್ಯನೂ; ಯೆದೂತೂನನ ಮಗ ನಾದ ಗಾಲಾಲನ ಮಗನಾದ ಶೆಮಾಯನ ಮಗನಾದ ಓಬದ್ಯನೂ; ಎಲ್ಕಾನನ ಮಗನಾದ ಆಸನ ಮಗನಾದ ಬೆರೆಕ್ಯನೂ ಇವರು ನೆಟೋಫಾತದವರ ಊರುಗಳಲ್ಲಿ ವಾಸವಾಗಿದ್ದರು. ದ್ವಾರಪಾಲಕರು ಯಾರಂದರೆ -- ಶಲ್ಲೂಮನೂ ಅಕ್ಕೂಬನೂ ಟಲ್ಮೋನನೂ ಅಹೀಮಾನನೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಮುಖ್ಯಸ್ಥ ನಾಗಿದ್ದನು. ಇವರು ಈ ವರೆಗೂ ಮೂಡಣ ಕಡೆ ಯಾದ ಅರಸನ ಬಾಗಲಲ್ಲಿ ಕಾದುಕೊಂಡಿದ್ದರು; ಇವರು ಲೇವಿಯ ಮಕ್ಕಳ ದಂಡುಗಳಲ್ಲಿ ದ್ವಾರಪಾಲಕರಾಗಿದ್ದರು. ಇದಲ್ಲದೆ ಕೋರಹನ ಮಗನಾದ ಎಬ್ಯಾಸಾಫನ ಮಗನಾದ ಕೋರೇಯ ಮಗನಾದ ಶಲ್ಲೂಮನೂ ಅವನ ತಂದೆಯ ಮನೆಯವರಾಗಿರುವ ತನ್ನ ಸಹೋ ದರರಾದ ಕೋರಹಿಯರೂ ಸೇವೆಯ ಕೆಲಸದ ಮೇಲೆ ಇದ್ದು ಗುಡಾರದ ಬಾಗಲಿನ ಕಾವಲುಗಾರರಾಗಿದ್ದರು. ಅವರ ಪಿತೃಗಳು ಕರ್ತನ ಸೈನ್ಯದ ಮೇಲೆ ಇದ್ದು ಪ್ರವೇಶ ಸ್ಥಳದ ಕಾವಲಿನವರಾಗಿದ್ದರು. ಎಲ್ಲಾಜಾ ರನ ಮಗನಾದ ಫೀನೆಹಾಸನು ಪೂರ್ವದಲ್ಲಿ ಅವರ ಮೇಲೆ ಅಧಿಕಾರಿಯಾಗಿದ್ದನು; ಕರ್ತನು ಅವರ ಸಂಗಡ ಇದ್ದನು. ಮೆಷೆಲೆಮ್ಯನ ಮಗನಾದ ಜೆಕರ್ಯನು ಸಭೆಯ ಗುಡಾರದ ದ್ವಾರಪಾಲಕನಾಗಿದ್ದನು. ಬಾಗ ಲುಗಳಲ್ಲಿ ದ್ವಾರಪಾಲಕರಾಗಿರಲು ಆಯಲ್ಪಟ್ಟ ಇವ ರೆಲ್ಲರೂ ಇನ್ನೂರ ಹನ್ನೆರಡು ಮಂದಿಯಾಗಿದ್ದರು. ಇವರು ತಮ್ಮ ಗ್ರಾಮಗಳಲ್ಲಿ ತಮ್ಮ ವಂಶಾವಳಿಯ ಪ್ರಕಾರವಾಗಿ ಲೆಕ್ಕಿಸಲ್ಪಟ್ಟಿದ್ದರು. ದಾವೀದನೂ ದರ್ಶಿ ಯಾದ ಸಮುವೇಲನೂ ಇವರನ್ನು ನೇಮಕವಾದ ಸೇವೆಗೆ ನೇಮಿಸಿದರು. ಹೀಗೆಯೇ ಇವರಿಗೂ ಇವರ ಮಕ್ಕಳಿಗೂ ಕರ್ತನ ಮನೆಯ ಬಾಗಲ ಕಾವಲಿತ್ತು ಅದು ಗುಡಾರವೆಂಬ ಮನೆಯ ಪ್ರಕಾರ ಕಾವಲುಗಾರ ರಿಂದ ಕಾವಲಿತ್ತು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರಿದ್ದರು. ಗ್ರಾಮಗಳಲ್ಲಿ ಇದ್ದ ಅವರ ಸಹೋದರರು ತಮ್ಮ ಕ್ರಮದ ಪ್ರಕಾರವಾಗಿ ಏಳೇಳು ದಿವಸಗಳಲ್ಲಿ ಬರುವ ನೇಮಕವಿತ್ತು ದ್ವಾರಪಾಲಕರಲ್ಲಿರುವ ನಾಲ್ಕುಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯ ಉಗ್ರಾಣ ಗಳ ಮೇಲೆಯೂ ಬೊಕ್ಕಸಗಳ ಮೇಲೆಯೂ ಇದ್ದರು. ಈ ಅಪ್ಪಣೆಯು ಅವರದಾಗಿದದ್ದರಿಂದಲೂ ಪ್ರತಿ ಉದಯದಲ್ಲಿ ತೆರೆಯುವದು ಅವರದಾಗಿದದ್ದ ರಿಂದಲೂ ಅವರು ದೇವರ ಮನೆಯ ಸುತ್ತಲೂ ವಾಸ ವಾಗಿದ್ದರು. ಸೇವೆಯ ಪಾತ್ರೆಗಳನ್ನು ಒಳಕ್ಕೆ ಲೆಕ್ಕದ ಪ್ರಕಾರ ತರುವದಕ್ಕೂ ಅವರಲ್ಲಿ ಕೆಲವರು ಅವುಗಳ ಮೇಲೆ ನೇಮಕವಾಗಿದ್ದರು. ಅವರಲ್ಲಿ ಕೆಲವರು ಸಾಮಾನುಗಳನ್ನೂ ಪರಿಶುದ್ಧಸ್ಥಾನದಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಯವಾದ ಹಿಟ್ಟನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಸಾಂಬ್ರಾಣಿಯನ್ನೂ ಸುಗಂಧದ್ರವ್ಯಗಳನ್ನೂ ಕಾಯಲು ನೇಮಿಸಲ್ಪಟ್ಟಿದ್ದರು. ಯಾಜಕರ ಕುಮಾರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು. ಕೋರಹಿಯನಾದ ಶಲ್ಲೂಮನ ಚೊಚ್ಚಲ ಮಗನಾದ ಮತ್ತಿತ್ಯನು ಲೇವಿ ಯರಲ್ಲಿ ಒಬ್ಬನಾಗಿದ್ದು ತಟ್ಟೆಗಳ ಮೇಲೆ ಮಾಡಲ್ಪಟ್ಟ ಭಕ್ಷ್ಯಗಳ ಕೆಲಸಕ್ಕೆ ನೇಮಿಸಲ್ಪಟ್ಟಿದ್ದನು. ಸಮ್ಮುಖದ ರೊಟ್ಟಿಯನ್ನು ಪ್ರತಿಸಬ್ಬತ್ ದಿವಸದಲ್ಲಿ ಸಿದ್ಧಮಾಡು ವದಕ್ಕೆ ಕೆಹಾತ್ಯರ ಕುಮಾರರಾದ ಅವರ ಸಹೋದರ ರಲ್ಲಿ ಕೆಲವರು ನೇಮಿಸಲ್ಪಟ್ಟಿದ್ದರು. ಇದಲ್ಲದೆ ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು ಸ್ವತಂತ್ರವಾಗಿ ಕೊಠಡಿ ಗಳಲ್ಲಿ ವಾಸವಾಗಿದ್ದರು; ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.
- 2 Chronicles 31:2 2 ಪೂರ್ವಕಾಲವೃತ್ತಾಂತ 31:2ಹಿಜ್ಕೀಯನು ಅವನವನ ಸೇವೆಯ ಪ್ರಕಾರ ಯಾಜ ಕರ ಲೇವಿಯರ ಸರತಿಗಳನ್ನು ನೇಮಿಸಿದನು. ದಹನ ಬಲಿಗಳನ್ನು ಮತ್ತು ಸಮಾಧಾನದ ಬಲಿಗಳನ್ನು ಅರ್ಪಿ ಸುವದಕ್ಕೂ ಸೇವಿಸುವದಕ್ಕೂ ಕರ್ತನ ಗುಡಾರಗಳ ಬಾಗಲುಗಳಲ್ಲಿ ಸ್ತೋತ್ರ ಮಾಡುವದಕ್ಕೂ ಕೊಂಡಾ ಡುವದಕ್ಕೂ ಯಾಜಕರನ್ನೂ ಲೇವಿಯರನ್ನೂ ನೇಮಿಸಿ ದನು.
- Exodus 40:19 ವಿಮೋಚನಕಾಂಡ 40:19ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು.
- 1 Chronicles 23:32 1 ಪೂರ್ವಕಾಲವೃತ್ತಾಂತ 23:32ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.
- Ezra 8:28–30 ಎಜ್ರನು 8:28–30ನಾನು ಅವರಿಗೆ--ನೀವು ಕರ್ತನಿಗೆ ಪರಿಶುದ್ಧರಾಗಿದ್ದೀರಿ. ಈ ಸಾಮಾನುಗಳು ಹಾಗೆಯೇ ಪರಿಶುದ್ಧವು. ಈ ಬೆಳ್ಳಿ ಬಂಗಾರವು ನಿಮ್ಮ ತಂದೆಗಳ ದೇವರಾಗಿರುವ ಕರ್ತನಿಗೆ ಉಚಿತಾರ್ಥ ವಾದ ಅರ್ಪಣೆಯಾಗಿದೆ. ನೀವು ಯೆರೂಸಲೇಮಿ ನಲ್ಲಿ ಕರ್ತನ ಆಲಯದ ಕೊಠಡಿಗಳೊಳಗೆ ಯಾಜಕರ ಲೇವಿಯರ ಪ್ರಧಾನರ ಮುಂದೆಯೂ ಇಸ್ರಾಯೇಲ್ ಪಿತೃಗಳ ಪ್ರಧಾನರ ಮುಂದೆಯೂ ತೂಗುವ ವರೆಗೆ ಜಾಗ್ರತೆಯಾಗಿ ಕಾಪಾಡಿರಿ ಅಂದನು. ಹಾಗೆಯೇ ಯಾಜಕರೂ ಲೇವಿಯರೂ ತೂಕದ ಹಾಗೆ ಬೆಳ್ಳಿಯನ್ನೂ ಬಂಗಾರವನ್ನೂ ಪಾತ್ರೆಗಳನ್ನೂ ಯೆರೂಸಲೇಮಿನಲ್ಲಿರುವ ನಮ್ಮ ದೇವರ ಆಲಯಕ್ಕೆ ತೆಗೆದುಕೊಂಡು ಬಂದರು.
- Mark 13:34 ಮಾರ್ಕನು 13:34ಮನುಷ್ಯಕುಮಾರನು ದೂರದ ಪ್ರಯಾಣವನ್ನು ಕೈಕೊಂಡು ತನ್ನ ಮನೆಯನ್ನು ಬಿಟ್ಟು ತನ್ನ ಸೇವಕರಿಗೆ ಅಧಿಕಾರವನ್ನು ಮತ್ತು ಪ್ರತಿಯೊ ಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಲು ಕಾಯು ವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇದ್ದಾನೆ.
Original words (Hebrew)
- charge · H4931מִשְׁמֶרֶת mishmereth
- sons · H1121בֵּן bên
- Gershon · H1648גֵּרְשׁוֹן Gêrᵉshôwn
- tabernacle · H168אֹהֶל ʼôhel
- congregation · H4150מוֹעֵד môwʻêd
- tabernacle · H4908מִשְׁכָּן mishkân
- tent · H168אֹהֶל ʼôhel
- covering · H4372מִכְסֶה mikçeh
- hanging · H4539מָסָךְ mâçâk
- door · H6607פֶּתַח pethach
- tabernacle · H168אֹהֶל ʼôhel
- congregation · H4150מוֹעֵד môwʻêd