Numbers · chapter 3 · verse 26
Numbers 3:26 in Kannada
ಅಂಗಳದ ತೆರೆಗಳೂ ಗುಡಾರಕ್ಕೂ ಬಲಿಪೀಠಕ್ಕೂ ಸುತ್ತಲಿರುವ ಅಂಗಳದ ಪರದೆಯೂ ಅಂಗಳದ ಬಾಗಲಿನ ತೆರೆಯೂ ಅದರ ಸಮಸ್ತ ಸೇವೆಗೆ ಬೇಕಾದ ಹಗ್ಗಗಳೂ ಇವೆ.
Angalada teregaloo gudaarakkoo balipeethakkoo suttaliruva angalada paradeyoo angalada baagalina tereyoo adara samasta sevege bekaada haggagaloo ive.
Numbers 3:26 in English
- King James Version (KJV)
- And the hangings of the court, and the curtain for the door of the court, which [is] by the tabernacle, and by the altar round about, and the cords of it for all the service thereof.
- World English Bible (WEB)
- the hangings of the court, the screen for the door of the court which is by the tabernacle and around the altar, and its cords for all of its service.
- American Standard Version (ASV)
- and the hangings of the court, and the screen for the door of the court, which is by the tabernacle, and by the altar round about, and the cords of it for all the service thereof.
- Bible in Basic English (BBE)
- And the hangings for the open space round the House and the altar, and the curtain for its doorway, and all the cords needed for its use.
- Darby Translation (DBY)
- And the hangings of the court, and the curtain of the entrance to the court, which surrounds the tabernacle and the altar, and the cords thereof for all its service.
- Webster's Bible (WBS)
- And the hangings of the court, and the curtain for the door of the court, which [is] by the tabernacle, and by the altar round about, and the cords of it, for all the service of it.
- Young's Literal Translation (YLT)
- and the hangings of the court, and the vail at the opening of the court, which [is] by the tabernacle and by the altar round about, and its cords, to all its service.
Read in context
- 24ಲಾಯೇಲನ ಮಗನಾದ ಎಲ್ಯಾಸಾಫನು ಗೇರ್ಷೋನ್ಯರ ತಂದೆ ಮನೆಗೆ ಮುಖ್ಯಸ್ಥನು.
- 25ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ
- 26ಅಂಗಳದ ತೆರೆಗಳೂ ಗುಡಾರಕ್ಕೂ ಬಲಿಪೀಠಕ್ಕೂ ಸುತ್ತಲಿರುವ ಅಂಗಳದ ಪರದೆಯೂ ಅಂಗಳದ ಬಾಗಲಿನ ತೆರೆಯೂ ಅದರ ಸಮಸ್ತ ಸೇವೆಗೆ ಬೇಕಾದ ಹಗ್ಗಗಳೂ ಇವೆ.
- 27ಅಮ್ರಾಮಿಯರ ಕುಟುಂಬವೂ ಇಚ್ಹಾರರ ಕುಟುಂಬವೂ ಹೆಬ್ರೋನಿಯರ ಕುಟುಂಬವೂ ಉಜ್ಜೀ ಯೇಲರ ಕುಟುಂಬವೂ ಇವು ಕೆಹಾತರ ಕುಟುಂಬ ಗಳು.
- 28ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕಾಪಾಡು ವವರ ಲೆಕ್ಕ ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರೂ ಎಂಟು ಸಾವಿರದ ಆರು ನೂರು.
Cross references
- Exodus 35:18 ವಿಮೋಚನಕಾಂಡ 35:18ಗುಡಾರದ ಗೂಟಗಳನ್ನೂ ಅಂಗಳದ ಗೂಟಗಳನ್ನೂ ಅವುಗಳ ಹಗ್ಗಗಳನ್ನೂ
- Exodus 38:9–16 ವಿಮೋಚನಕಾಂಡ 38:9–16ಅವನು ಅಂಗಳವನ್ನು ಮಾಡಿದನು: ಅಂಗಳದ ದಕ್ಷಿಣ ದಿಕ್ಕಿನ ಭಾಗದಲ್ಲಿದ್ದ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು. ಅವು ನೂರು ಮೊಳ ಉದ್ದವಾಗಿದ್ದವು. ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದವು, ಅವುಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು; ಆ ಸ್ತಂಭಗಳಿಗೆ ಇದ್ದ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯಿಂದ ಮಾಡಲ್ಪ ಟ್ಟಿದ್ದವು. ಉತ್ತರ ದಿಕ್ಕಿನ ತೆರೆಗಳು ನೂರು ಮೊಳ ಉದ್ದವಾಗಿದ್ದವು; ಅವುಗಳಿಗೆ ಇಪ್ಪತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಇಪ್ಪತ್ತು ಹಿತ್ತಾಳೆಯ ಕಾಲು ಕುಣಿಕೆ ಗಳಿದ್ದವು. ಆ ಸ್ತಂಭಗಳ ಕೊಂಡಿ ಮತ್ತು ಅಲಂಕಾರದ ಪಟ್ಟಿಗಳು ಬೆಳ್ಳಿಯದಾಗಿದ್ದವು. ಪಶ್ಚಿಮ ದಿಕ್ಕಿನ ತೆರೆಗಳು ಐವತ್ತು ಮೊಳ ಉದ್ದವಾಗಿದ್ದವು; ಅವುಗಳಿಗೆ ಹತ್ತು ಸ್ತಂಭಗಳಿದ್ದು ಆ ಸ್ತಂಭಗಳಿಗೆ ಹತ್ತು ಹಿತ್ತಾಳೆಯ ಕಾಲು ಕುಣಿಕೆಗಳಿದ್ದವು. ಆ ಸ್ತಂಭಗಳ ಕೊಂಡಿಗಳೂ ಮತ್ತು ಅಲಂಕಾರದ ಪಟ್ಟಿಗಳೂ ಬೆಳ್ಳಿಯದಾಗಿದ್ದವು. ಪೂರ್ವ ದಿಕ್ಕಿನ ಬದಿಗೆ ಐವತ್ತು ಮೊಳ. ದ್ವಾರದ ಒಂದು ಬದಿಯ ತೆರೆಗಳು ಹದಿನೈದು ಮೊಳ ಉದ್ದ ವಾಗಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು. ಅಂಗಳದ ಇನ್ನೊಂದು ಬದಿಯ ದ್ವಾರದ ಎರಡು ಕಡೆಗಳಲ್ಲಿ ಹದಿನೈದು ಮೊಳ ಉದ್ದವಾದ ತೆರೆಗಳಿದ್ದವು; ಅವುಗಳಿಗೆ ಮೂರು ಸ್ತಂಭಗಳೂ ಆ ಸ್ತಂಭಗಳಿಗೆ ಮೂರು ಕಾಲುಕುಣಿಕೆಗಳೂ ಇದ್ದವು. ಅಂಗಳದ ಸುತ್ತಲಿದ್ದ ಎಲ್ಲ ತೆರೆಗಳು ನಯವಾಗಿ ಹೊಸೆದ ನೂಲಿನ ಬಟ್ಟೆಯಿಂದ ಮಾಡಲ್ಪಟ್ಟಿದ್ದವು.
- Exodus 27:9–16 ವಿಮೋಚನಕಾಂಡ 27:9–16ಗುಡಾರದ ಅಂಗಳವನ್ನು ಮಾಡಬೇಕು. ದಕ್ಷಿಣ ದಿಕ್ಕಿನಲ್ಲಿರುವ ದಕ್ಷಿಣ ಭಾಗದಲ್ಲಿ ಅಂಗಳಕ್ಕೋಸ್ಕರ ನಯವಾದ ಹೊಸೆದ ನಾರಿನ ಪರದೆಗಳನ್ನು ಮಾಡ ಬೇಕು. ಒಂದು ಕಡೆಯಲ್ಲಿ ಅದರ ಉದ್ದವು ನೂರು ಮೊಳವಿರಬೇಕು. ಅದರ ಸ್ತಂಭಗಳು ಇಪ್ಪತ್ತು, ಅವುಗಳಿಗೆ ಹಿತ್ತಾಳೆಯ ಕುಳಿಗಳು ಇರಬೇಕು; ಸ್ತಂಭಗಳ ಕೊಂಡಿಗಳನ್ನೂ ಅವುಗಳ ಪಟ್ಟಿಗಳನ್ನೂ ಬೆಳ್ಳಿಯಿಂದ ಮಾಡಬೇಕು. ಹಾಗೆಯೇ ಉತ್ತರ ಪಾರ್ಶ್ವದಲ್ಲಿ ನೂರು ಮೊಳ ಉದ್ದವಾದ ಪರದೆಗಳೂ ಇಪ್ಪತ್ತು ಸ್ತಂಭಗಳೂ ಇಪ್ಪತ್ತು ಹಿತ್ತಾಳೆಯ ಕುಳಿಗಳೂ ಇರಬೇಕು. ಸ್ತಂಭಗಳ ಕೊಂಡಿಗಳನ್ನೂ ಕಟ್ಟುಗಳನ್ನೂ ಬೆಳ್ಳಿಯಿಂದ ಮಾಡಬೇಕು. ಅಂಗಳದ ಪಶ್ಚಿಮ ಪಾರ್ಶ್ವದಲ್ಲಿ ಐವತ್ತು ಮೊಳ ಅಗಲವಾದ ಪರದೆಗಳೂ ಹತ್ತು ಸ್ತಂಭಗಳೂ ಹತ್ತು ಕುಳಿಗಳೂ ಇರಬೇಕು. ಪೂರ್ವದ ಕಡೆಯಲ್ಲಿ ಅಂಗಳದ ಅಗಲವು ಮೂಡಣದಲ್ಲಿ ಐವತ್ತು ಮೊಳ ಇರಬೇಕು. ಒಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳಿದ್ದು ಮೂರು ಸ್ತಂಭಗಳೂ ಮೂರು ಕುಳಿಗಳೂ ಇರಬೇಕು. ಮತ್ತೊಂದು ಕಡೆಯಲ್ಲಿ ಹದಿನೈದು ಮೊಳದ ಪರದೆಗಳೂ ಮೂರು ಸ್ತಂಭ ಗಳೂ ಮೂರು ಕುಳಿಗಳೂ ಇರಬೇಕು. ಅಂಗಳದ ಬಾಗಲಿಗಾಗಿ ನೀಲಿ ಧೂಮ್ರ ರಕ್ತ ವರ್ಣದ ಹೊಸೆದ ನಯವಾದ ನಾರಿನಿಂದ ಕಸೂತಿಯ ಕೆಲಸ ಮಾಡಿದ ಇಪ್ಪತ್ತು ಮೊಳದ ತೆರೆಯೂ ಅದಕ್ಕೆ ನಾಲ್ಕು ಸ್ತಂಭಗಳೂ ನಾಲ್ಕು ಕುಳಿಗಳೂ ಇರಬೇಕು.