Numbers · chapter 3 · verse 31
Numbers 3:31 in Kannada
ಅವರ ಅಪ್ಪಣೆಯೇನಂದರೆ: ಮಂಜೂಷವೂ ಮೇಜೂ ದೀಪಸ್ತಂಭವೂ ಬಲಿಪೀಠ ಗಳೂ ಅವರು ಸೇವೆಮಾಡುವ ಪರಿಶುದ್ಧ ಸ್ಥಳದ ವಸ್ತುಗಳೂ ತೆರೆಯೂ ಅವುಗಳ ಎಲ್ಲಾ ಸೇವೆಯೂ ಆಗಿದೆ.
Avara appaneyenandare: manjooshavoo mejoo deepastambhavoo balipeetha galoo avaru sevemaaduva parishuddha sthalada vastugaloo tereyoo avugala ellaa seveyoo aagide.
Numbers 3:31 in English
- King James Version (KJV)
- And their charge [shall be] the ark, and the table, and the candlestick, and the altars, and the vessels of the sanctuary wherewith they minister, and the hanging, and all the service thereof.
- World English Bible (WEB)
- Their duty shall be the ark, the table, the lamp stand, the altars, the vessels of the sanctuary with which they minister, the screen, and all its service.
- American Standard Version (ASV)
- And their charge shall be the ark, and the table, and the candlestick, and the altars, and the vessels of the sanctuary wherewith they minister, and the screen, and all the service thereof.
- Bible in Basic English (BBE)
- In their care are the ark, and the table, and the lights, and the altars, and all the vessels used in the holy place, and the veil, and all they are used for.
- Darby Translation (DBY)
- And their charge was the ark, and the table, and the candlestick, and the altars, and the utensils of the sanctuary with which they ministered, and the curtain, and all that belongs to its service.
- Webster's Bible (WBS)
- And their charge [shall be] the ark, and the table, and the candlestick, and the altars, and the vessels of the sanctuary with which they minister, and the hanging, and all the service of it.
- Young's Literal Translation (YLT)
- And their charge [is] the ark, and the table, and the candlestick, and the altars, and the vessels of the sanctuary with which they serve, and the vail, and all its service.
Read in context
- 29ಕೆಹಾತನ ಕುಮಾರರ ಕುಟುಂಬಗಳು ಗುಡಾರದ ಬಳಿಯಲ್ಲಿ ದಕ್ಷಿಣದ ಕಡೆಗೆ ಇಳುಕೊಳ್ಳಬೇಕು.
- 30ಉಜ್ಜೀಯೇಲನ ಕುಮಾರನಾದ ಎಲೀಚಾಫಾನು ಕೆಹಾತರ ಕುಟುಂಬಗಳ ತಂದೆಯ ಮನೆಗೆ ಮುಖ್ಯಸ್ಥನು.
- 31ಅವರ ಅಪ್ಪಣೆಯೇನಂದರೆ: ಮಂಜೂಷವೂ ಮೇಜೂ ದೀಪಸ್ತಂಭವೂ ಬಲಿಪೀಠ ಗಳೂ ಅವರು ಸೇವೆಮಾಡುವ ಪರಿಶುದ್ಧ ಸ್ಥಳದ ವಸ್ತುಗಳೂ ತೆರೆಯೂ ಅವುಗಳ ಎಲ್ಲಾ ಸೇವೆಯೂ ಆಗಿದೆ.
- 32ಇದಲ್ಲದೆ ಯಾಜಕನಾಗಿರುವ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಮುಖ್ಯಸ್ಥರ ಮೇಲೆ ಮುಖ್ಯಸ್ಥನು, ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕೈಕೊಳ್ಳುವವರ ಮೇಲೆ ವಿಚಾರಕನು ಅವನೇ.
- 33ಮಹ್ಲೀಯರ ಕುಟುಂಬವೂ ಮೂಷೀಯರ ಕುಟುಂಬವೂ ಇವು ಮೆರಾರೀಯರ ಕುಟುಂಬಗಳು.
Cross references
- Exodus 37:1–7 ವಿಮೋಚನಕಾಂಡ 37:1–7ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು. ಅದನ್ನು ಚೊಕ್ಕ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ ಅದರ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು. ಅವನು ಅದರ ನಾಲ್ಕು ಮೂಲೆಗಳಿಗೆ ನಾಲ್ಕು ಉಂಗುರಗಳನ್ನು ಎರಕ ಹೊಯ್ದನು; ಇದಲ್ಲದೆ ಅದರ ಒಂದು ಮಗ್ಗಲಿಗೆ ಎರಡು ಇನ್ನೊಂದು ಮಗ್ಗಲಿಗೆ ಎರಡು ಉಂಗುರಗಳನ್ನು ಎರಕ ಹೊಯ್ದನು. ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿ ಸಿದನು. ಮಂಜೂಷವನ್ನು ಹೊರುವದಕ್ಕಾಗಿ ಕೋಲು ಗಳನ್ನು ಮಂಜೂಷದ ಭಾಗಗಳಲ್ಲಿರುವ ಉಂಗುರ ಗಳಲ್ಲಿ ಸೇರಿಸಿದನು. ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು. ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಚಿನ್ನದ ಕೆರೂಬಿಗಳನ್ನು ಮಾಡಿದನು. ಅವು ಒಂದೇ ತುಂಡಿನಲ್ಲಿ ಹೊಡೆದು ಮಾಡಿದ್ದಾಗಿದ್ದವು.
- Exodus 26:31–33 ವಿಮೋಚನಕಾಂಡ 26:31–33ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು. ಅದನ್ನು ಬಂಗಾರದಿಂದ ಹೊದಿಸಿದ ಬಂಗಾರದ ಕೊಂಡಿಗಳಿದ್ದ ಬೆಳ್ಳಿಯ ನಾಲ್ಕು ಕುಳಿಗಳಲ್ಲಿ ಊರಿಕೊಂಡಿರುವ ನಾಲ್ಕು ಜಾಲೀ ಮರದ ಸ್ತಂಭಗಳಲ್ಲಿ ಅದನ್ನು ತೂಗುಹಾಕಬೇಕು. ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು.
- Exodus 31:1–18 ವಿಮೋಚನಕಾಂಡ 31:1–18ಕರ್ತನು ಮೋಶೆಯ ಸಂಗಡ ಮಾತನಾಡಿಅವನಿಗೆ-- ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ ಊರಿಯನ ಮಗನೂ ಆಗಿರುವ ಬೆಚಲೇಲನನ್ನು ಹೆಸರು ಹೇಳಿ ಕರೆದಿದ್ದೇನೆ. ನಾನು ಅವನನ್ನು ದೇವರ ಆತ್ಮನಿಂದಲೂ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ವಿವೇಕ ದಿಂದಲೂ ಎಲ್ಲಾ ತರವಾದ ಕೆಲಸದ ಕಲೆಯಿಂದಲೂ ತುಂಬಿಸಿದ್ದೇನೆ. ಅವನು ಚಿನ್ನ ಬೆಳ್ಳಿ ಹಿತ್ತಾಳೆಯ ಕೌಶಲ್ಯದ ಕೆಲಸವನ್ನು ಕಲ್ಪಿಸುವದಕ್ಕೂ ಶಿಲ್ಪಿಯ ಕೆಲಸವನ್ನೂ ಮರ ಕೆತ್ತನೆಯನ್ನೂ ಸಕಲ ವಿಧವಾದ ಕೆಲಸಗಳನ್ನೂ ಬಲ್ಲವನಾಗಿರುವನು. ನಾನು ಇಗೋ, ನಾನೇ ಅವನೊಂದಿಗೆ ದಾನ್ ಕುಲದವನೂ ಅಹೀಸಾ ಮಾಕನ ಮಗನೂ ಆದ ಒಹೊಲೀಯಾಬನನ್ನು ಕೊಟ್ಟಿ ದ್ದೇನೆ. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನು ಮಾಡುವ ದಕ್ಕೆ ಜಾಣನಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನು ಇಟ್ಟಿದ್ದೇನೆ. ಸಭೆಯ ಗುಡಾರವನ್ನೂ ಸಾಕ್ಷಿಯ ಹಲಗೆ ಗಳ ಮಂಜೂಷವನ್ನೂ ಅದರ ಮೇಲಿರುವ ಕರುಣಾಸ ನವನ್ನೂ ಗುಡಾರದ ಎಲ್ಲಾ ಉಪಕರಣಗಳನ್ನೂ ಮೇಜನ್ನೂ ಅದರ ಉಪಕರಣಗಳನ್ನೂ ಶುದ್ಧವಾದ ದೀಪಸ್ತಂಭವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಧೂಪವೇದಿಯನ್ನೂ ದಹನಬಲಿಯ ವೇದಿಯನ್ನೂ ಅದರ ಎಲ್ಲಾ ಉಪಕರಣಗಳನ್ನೂ ಗಂಗಾಳವನ್ನೂ ಅದರ ಪೀಠವನ್ನೂ ಯಾಜಕನಾದ ಆರೋನನ ಸೇವಾ ವಸ್ತ್ರಗಳನ್ನೂ ಪರಿಶುದ್ಧ ವಸ್ತ್ರ ಗಳನ್ನೂ ಯಾಜಕನ ಕೆಲಸಮಾಡುವದಕ್ಕೆ ಅವನ ಮಕ್ಕಳ ವಸ್ತ್ರಗಳನ್ನೂ ಅಭಿಷೇಕಿಸುವ ತೈಲವನ್ನೂ ಪರಿಶುದ್ಧ ಸ್ಥಳಕ್ಕೋಸ್ಕರ ವಿರುವ ಪರಿಮಳ ಧೂಪವನ್ನೂ ನಾನು ನಿನಗೆ ಆಜ್ಞಾಪಿಸಿ ದವುಗಳೆಲ್ಲವನ್ನೂ ಅವರು ಮಾಡುವರು ಅಂದನು. ಕರ್ತನು ಮೋಶೆಯೊಂದಿಗೆ ಮಾತನಾಡಿ-- ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಸಹ ಮಾತ ನಾಡಿ--ನಿಶ್ಚಯವಾಗಿ ನೀವು ನನ್ನ ಸಬ್ಬತ್ತುಗಳನ್ನು ಕೈಕೊಳ್ಳಬೇಕು. ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ನೀವು ತಿಳಿಯುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರಿಗೂ ಗುರುತಾಗಿದೆ. ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು. ಆರು ದಿವಸ ಕೆಲಸಮಾಡಬೇಕು; ಆದರೆ ಏಳನೆಯ ದಿನವು ಕರ್ತನಿಗೆ ಪರಿಶುದ್ಧವಾದ ವಿಶ್ರಾಂತಿಯ ಸಬ್ಬತ್ತು. ಸಬ್ಬತ್ ದಿನದಲ್ಲಿ ಕೆಲಸ ಮಾಡು ವವರೆಲ್ಲಾ ಖಂಡಿತವಾಗಿ ಸಾಯಬೇಕು. ಹೀಗಿರ ಲಾಗಿ ಇಸ್ರಾಯೇಲ್ ಮಕ್ಕಳು ತಮ್ಮ ತಲತಲಾಂತರ ಗಳಲ್ಲಿ ನಿತ್ಯ ಒಡಂಬಡಿಕೆಯಾಗಿ ಆಚರಿಸುವಂತೆ ಸಬ್ಬತ್ತ ನ್ನು ಕೈಕೊಳ್ಳಬೇಕು. ನನಗೂ ಇಸ್ರಾಯೇಲ್ ಮಕ್ಕ ಳಿಗೂ ಇದೇ ಶಾಶ್ವತವಾದ ಗುರುತು. ಯಾಕಂದರೆ ಆರು ದಿವಸಗಳಲ್ಲಿ ಕರ್ತನು ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿ ಕೊಂಡು ಉಲ್ಲಾಸಗೊಂಡನು ಎಂದು ಹೇಳು ಅಂದನು.ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು. ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.
- Exodus 25:10–40 ವಿಮೋಚನಕಾಂಡ 25:10–40ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು. ಅದನ್ನು ಶುದ್ಧ ಬಂಗಾರದಿಂದ ಹೊರಗೂ ಒಳಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ಗೋಟು ಮಾಡಬೇಕು. ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು. ಜಾಲೀ ಮರದ ಕೋಲುಗಳನ್ನು ಬಂಗಾರದಿಂದ ಹೊದಿಸ ಬೇಕು, ಮಂಜೂಷವನ್ನು ಹೊತ್ತುಕೊಂಡು ಹೋಗು ವದಕ್ಕಾಗಿ ಕೋಲುಗಳನ್ನು ಮಂಜೂಷದ ಉಭಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು. ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡ ಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯ ಬಾರದು. ನಾನು ನಿನಗೆ ಕೊಡುವ ಸಾಕ್ಷಿಯ ಹಲಗೆ ಗಳನ್ನು ಮಂಜೂಷದಲ್ಲಿ ಇಡಬೇಕು. ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು. ಬಂಗಾರದಿಂದ ಎರಡು ಕೆರೂಬಿಗಳನ್ನು ನಕ್ಷೆಯ ಕೆಲಸದಿಂದ ಕರುಣಾ ಸನದ ಎರಡು ಬದಿಗಳಲ್ಲಿ ಮಾಡಿಸಬೇಕು. ಈ ಬದಿಯಲ್ಲಿ ಒಂದು ಕೆರೂಬಿಯನ್ನೂ ಆ ಬದಿಯಲ್ಲಿ ಮತ್ತೊಂದು ಕೆರೂಬಿಯನ್ನೂ ಹೀಗೆ ಕರುಣಾಸನದ ಮೇಲೆಯೇ ಎರಡೂ ಬದಿಗಳಲ್ಲಿ ಮಾಡಬೇಕು. ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿದವುಗ ಳಾಗಿಯೂ ರೆಕ್ಕೆಗಳಿಂದ ಕರುಣಾಸನವನ್ನು ಮುಚ್ಚುವವು ಗಳಾಗಿಯೂ ಒಂದರ ಮುಖವನ್ನು ಒಂದು ನೋಡು ವವುಗಳಾಗಿಯೂ ಇರಬೇಕು. ಕೆರೂಬಿಗಳ ಮುಖಗಳು ಕರುಣಾಸನದ ಕಡೆಗೆ ತಿರುಗಿರಬೇಕು. ಕರುಣಾಸನ ವನ್ನು ಮಂಜೂಷದ ಮೇಲೆ ಇಡಬೇಕು ಮತ್ತು ನೀನು ಮಂಜೂಷದಲ್ಲಿ ನಾನು ನಿನಗೆ ಕೊಡುವ ಸಾಕ್ಷಿ ಹಲಗೆಗಳನ್ನು ಇಡಬೇಕು. ನಾನು ಅಲ್ಲಿ ನಿನ್ನನ್ನು ಸಂಧಿಸಿ ಕರುಣಾಸನದ ಮೇಲಿನಿಂದ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲ್ ಮಕ್ಕಳ ವಿಷಯದಲ್ಲಿ ಆಜ್ಞಾಪಿಸುವವು ಗಳನ್ನೆಲ್ಲಾ ನಿನಗೆ ತಿಳಿಸುವೆನು. ಇದಲ್ಲದೆ ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮೇಜನ್ನು ಜಾಲೀ ಮರದಿಂದ ಮಾಡಬೇಕು. ಶುದ್ಧ ಬಂಗಾರದಿಂದ ಅದನ್ನು ಹೊದಿಸಿ ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು. ಅದರ ಸುತ್ತಲೂ ಗೇಣುದ್ದ ಅಂಚನ್ನು ಮಾಡಿ ಅಂಚಿನ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು. ಇದಲ್ಲದೆ ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಬಳೆಗಳನ್ನು ಅದರ ನಾಲ್ಕು ಕಾಲು ಗಳಲ್ಲಿರುವ ನಾಲ್ಕು ಮೂಲೆಗಳಲ್ಲಿಡಬೇಕು. ಅಂಚಿಗೆ ಸವಿಾಪವಾಗಿ ಮೇಜನ್ನು ಹೊರುವದಕ್ಕೋಸ್ಕರ ಇರುವ ಕೋಲುಗಳಿಗೆ ಬಳೆಗಳು ಇರಬೇಕು. ಮೇಜನ್ನು ಹೊರುವದಕ್ಕಾಗಿ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು. ಇದಲ್ಲದೆ ನೀನು ಪಾತ್ರೆಗಳನ್ನೂ ಸೌಟುಗಳನ್ನೂ ಮುಚ್ಚಳಗಳನ್ನೂ ಬಟ್ಟಲುಗಳನ್ನೂ ಒಯ್ಯುವದಕ್ಕೋಸ್ಕರ ಶುದ್ಧ ಬಂಗಾರ ದಿಂದ ಮಾಡಬೇಕು. ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು. ಇದಲ್ಲದೆ ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಆ ದೀಪಸ್ತಂಭವನ್ನು ನಕ್ಷೆಯ ಕೆಲಸದಿಂದ ಮಾಡಬೇಕು. ಅದರ ಕಂಬವೂ ಕೊಂಬೆಗಳೂ ಹಣತೆ ಗಳೂ ಗುಂಡುಗಳೂ ಪುಷ್ಪಗಳೂ ಅದರಂತೆಯೇ ಇರ ಬೇಕು. ದೀಪಸ್ತಂಭದ ಉಭಯ ಪಾರ್ಶ್ವಗಳಿಂದ ಆರು ಕೊಂಬೆಗಳು, ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು. ಒಂದು ಕೊಂಬೆ ಯಲ್ಲಿ ಬಾದಾಮಿಯ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಬಾದಾಮಿ ಪುಷ್ಪವಿದ್ದ ಮೂರು ಹಣತೆಗಳೂ ಗುಂಡು ಪುಷ್ಪವೂ ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇರಬೇಕು. ದೀಪಸ್ತಂಭದಲ್ಲಿಯೇ ಗುಂಡುಗಳೂ ಪುಷ್ಪಗಳೂ ಸೇರಿದಂತೆ ಬಾದಾಮಿ ಪುಷ್ಪವಿರುವ ನಾಲ್ಕು ಹಣತೆಗಳು ಇರಬೇಕು. ಇದಲ್ಲದೆ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳ ಪ್ರಕಾರ ಅದರಿಂದ ಬರುವ ಎರಡೆರಡು ಕೊಂಬೆಗಳ ಕೆಳಗೆ ಒಂದೊಂದು ಗುಂಡು ಇರಬೇಕು. ಅದರ ಗುಂಡುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ಅದೆಲ್ಲಾ ಶುದ್ಧ ಬಂಗಾ ರದ ಒಂದೇ ನಕ್ಷೆಯ ಕೆಲಸವಾಗಿರಬೇಕು. ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶ ಕೊಡುವಂತೆ ಅವುಗಳನ್ನು ಹೊತ್ತಿಸಬೇಕು. ಇದಲ್ಲದೆ ಅದರ ಚಿಮಟಿಗೆಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು. ಒಂದು ತಲಾಂತು ಶುದ್ಧ ಬಂಗಾರದಿಂದ ದೀಪ ಸ್ತಂಭವನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಮಾಡ ಬೇಕು.ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ. ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.
- Exodus 27:1–8 ವಿಮೋಚನಕಾಂಡ 27:1–8ಇದಲ್ಲದೆ ಜಾಲೀ ಮರದಿಂದ ಯಜ್ಞವೇದಿಯನ್ನು ಐದು ಮೊಳ ಉದ್ದವಾಗಿಯೂ ಐದು ಮೊಳ ಅಗಲವಾಗಿಯೂ ಮಾಡಬೇಕು. ಆ ಯಜ್ಞವೇದಿಯು ಚಚ್ಚೌಕವಾಗಿರಬೇಕು. ಅದರ ಎತ್ತ ರವು ಮೂರು ಮೊಳ ಇರಬೇಕು. ಅದರ ನಾಲ್ಕು ಮೂಲೆಗಳಲ್ಲಿ ಕೊಂಬುಗಳನ್ನು ಮಾಡಬೇಕು. ಆ ಕೊಂಬುಗಳು ಯಜ್ಞವೇದಿಗೆ ಎತ್ತರವಾಗಿರಬೇಕು; ನೀನು ಅದನ್ನು ಹಿತ್ತಾಳೆಯಿಂದ ಹೊದಿಸಬೇಕು. ಅದರ ಬೂದಿಗಾಗಿ ತಟ್ಟೆಗಳನ್ನು ಸಲಿಕೆಗಳನ್ನು ಬೋಗುಣಿಗಳನ್ನು ಮುಳ್ಳುಗಳನ್ನು ಅಗ್ನಿಪಾತ್ರೆಗಳನ್ನು ಎಲ್ಲಾ ಉಪಕರಣಗಳನ್ನು ಹಿತ್ತಾಳೆಯಿಂದ ಮಾಡಬೇಕು. ಅದಕ್ಕೆ ಹಿತ್ತಾಳೆಯ ಜಾಳಿಗೆಯನ್ನು ಮಾಡಿ ಆ ಜಾಳಿಗೆಯ ಮೇಲೆ ನಾಲ್ಕು ಮೂಲೆಗಳಿಗೆ ಹಿತ್ತಾಳೆಯ ನಾಲ್ಕು ಬಳೆಗಳನ್ನು ಮಾಡಬೇಕು. ಆ ಜಾಳಿಗೆಯು ಯಜ್ಞವೇದಿಯ ಸುತ್ತಲಿರುವ ಕಟ್ಟೆಯ ಕೆಳಗೆ ಇದ್ದು, ಯಜ್ಞವೇದಿಯ ಬುಡದಿಂದ ನಡುವಿನ ತನಕ ಇರು ವಂತೆ ಹಾಕಿಸಬೇಕು. ಯಜ್ಞವೇದಿಗೆ ಜಾಲೀ ಮರ ದಿಂದ ಕೋಲುಗಳನ್ನು ಮಾಡಿ ಅವುಗಳನ್ನು ಹಿತ್ತಾಳೆ ಯಿಂದ ಹೊದಿಸಬೇಕು. ಆ ಕೋಲುಗಳನ್ನು ಬಳೆ ಗಳಲ್ಲಿ ಸೇರಿಸಬೇಕು. ಅವುಗಳು ಯಜ್ಞವೇದಿಯನ್ನು ಹೊರುವದಕ್ಕೆ ಅದರ ಎರಡೂ ಪಾರ್ಶ್ವಗಳಲ್ಲಿ ಇರ ಬೇಕು. ಹಲಗೆಗಳಿಂದ ಅದನ್ನು ಪೊಳ್ಳಾಗಿರುವಂತೆ ಮಾಡಬೇಕು. ಬೆಟ್ಟದಲ್ಲಿ ನಿನಗೆ ತೋರಿಸಿದಂತೆಯೇ ಅದನ್ನು ಮಾಡಬೇಕು.
- Numbers 4:4–16 ಅರಣ್ಯಕಾಂಡ 4:4–16ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ. ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. 7 ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು. ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಇದ ಲ್ಲದೆ ಅವರು ನೀಲಿ ವಸ್ತ್ರವನ್ನು ತಕ್ಕೊಂಡು ಅದರಿಂದ ದೀಪಸ್ತಂಭವನ್ನೂ ಅದರ ದೀಪಗಳನ್ನೂ ಚಮಟಿಕೆಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು. ಅವರು ಅದನ್ನೂ ಅದರ ಎಲ್ಲಾ ವಸ್ತುಗಳನ್ನೂ ಕಡಲು ಹಂದಿಯ ಚರ್ಮಗಳ ಮುಚ್ಚಳ ದೊಳಗೆ ಇಟ್ಟು ಅಡ್ಡದಂಡೆಯ ಮೇಲೆ ಹಾಕಬೇಕು. ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮವನ್ನು ಮುಚ್ಚಳ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವ ಸೇವೆಯ ಎಲ್ಲಾ ವಸ್ತುಗಳನ್ನು ಅವರು ತಕ್ಕೊಂಡು ನೀಲಿ ವಸ್ತ್ರದಿಂದ ಕಟ್ಟಿ ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ ಅಡ್ಡದಂಡೆಯ ಮೇಲೆ ಹಾಕಬೇಕು. ಬಲಿಪೀಠದ ಬೂದಿಯನ್ನು ತೆಗೆದು ಅದರ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು. ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ. ಯಾಜಕನಾದ ಆರೋನನ ಮಗನಾದ ಎಲ್ಲಾಜಾ ರನ ಕೆಲಸ ಯಾವದಂದರೆ: ದೀಪದ ಎಣ್ಣೆಯೂ ಸುಗಂಧ ಧೂಪವೂ ನಿತ್ಯದ ಆಹಾರ ಸಮರ್ಪಣೆಯೂ ಅಭಿಷೇಕದ ತೈಲವೂ ಸಮಸ್ತಗುಡಾರವೂ ಅದರ ಲ್ಲಿರುವ ಸಕಲವೂ ಪರಿಶುದ್ಧ ಸ್ಥಳದಲ್ಲಿಯೂ ಅದರ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು.
- Exodus 40:2–16 ವಿಮೋಚನಕಾಂಡ 40:2–16ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು. ಮಂಜೂಷದ ಸಾಕ್ಷಿಯ ಪೆಟ್ಟಿಗೆಯನ್ನು ಒಳಗಿಟ್ಟು ಅದನ್ನು ನೀನು ತೆರೆಯಿಂದ ಮುಚ್ಚಬೇಕು. ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪ ಸ್ತಂಭವನ್ನು ಒಳಗೆ ತಂದು ನೀನು ಅದರ ದೀಪಗಳನ್ನು ಅಂಟಿಸಬೇಕು. ನೀನು ಧೂಪಕ್ಕೋಸ್ಕರ ಮಾಡಿದ ಚಿನ್ನದ ಬಲಿಪೀಠವನ್ನು ಮಂಜೂಷದ ಸಾಕ್ಷಿಯ ಪೆಟ್ಟಿಗೆಗೆ ಎದುರಾಗಿ ಇಟ್ಟು, ಗುಡಾರದ ಬಾಗಿಲಿಗೆ ತೆರೆಯನ್ನು ಹಾಕಬೇಕು. ನೀನು ದಹನಬಲಿಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡ ಬೇಕು. ನೀನು ಸಭೆಯ ಡೇರೆಗೂ ಯಜ್ಞವೇದಿಗೂ ಮಧ್ಯದಲ್ಲಿ ಗಂಗಾಳವನ್ನಿಟ್ಟು ಅದರಲ್ಲಿ ನೀರನ್ನು ಹೊಯ್ಯ ಬೇಕು. ಅದರ ಸುತ್ತಲೂ ಆವರಣವನ್ನು ನಿಲ್ಲಿಸಿ, ಆ ಆವರಣದ ಬಾಗಿಲಿನ ಬಳಿಯಲ್ಲಿ ನೀನು ತೆರೆಯನ್ನು ತೂಗುಹಾಕಬೇಕು. ನೀನು ಅಭಿಷೇಕ ತೈಲವನ್ನು ತಕ್ಕೊಂಡು ಗುಡಾರ ವನ್ನೂ ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ ಅದನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ಪರಿಶುದ್ಧ ಮಾಡು; ಆಗ ಅದು ಪರಿಶುದ್ಧವಾಗುವದು. ದಹನಬಲಿಪೀಠವನ್ನೂ ಅದರ ಎಲ್ಲಾ ಸಾಮಾನು ಗಳನ್ನೂ ನೀನು ಅಭಿಷೇಕಿಸಿ ಬಲಿಪೀಠವನ್ನು ಪವಿತ್ರ ಮಾಡು; ಆಗ ಅದು ಅತೀ ಪರಿಶುದ್ಧವಾದ ಬಲಿಪೀಠ ವಾಗುವದು. ಗಂಗಾಳವನ್ನೂ ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ ಅದನ್ನು ಪರಿಶುದ್ಧ ಮಾಡಬೇಕು. ಆರೋನನನ್ನೂ ಅವನ ಮಕ್ಕಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ ಅವರನ್ನು ನೀರಿನಿಂದ ತೊಳೆಯಬೇಕು. ಆರೋನನು ನನಗೆ ಯಾಜಕ ಸೇವೆಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ ಶುದ್ಧ ಮಾಡಬೇಕು. ಅವನ ಕುಮಾರರನ್ನು ನೀನು ಬರ ಮಾಡಿಕೊಂಡು ಅವರಿಗೆ ಅಂಗಿಗಳನ್ನು ತೊಡಿಸಿ ಅವರ ತಂದೆಯನ್ನು ಅಭಿಷೇಕಿಸಿದ ಪ್ರಕಾರ ಅವರು ನನಗೆ ಯಾಜಕ ಸೇವೆಯನ್ನು ಮಾಡುವ ಹಾಗೆ ಅವ ರನ್ನೂ ನೀನು ಅಭಿಷೇಕಿಸು. ಅವರ ಅಭಿಷೇಕವು ನಿಶ್ಚಯವಾಗಿದ್ದು ಅವರ ಸಂತತಿಗಳಲ್ಲಿ ನಿತ್ಯವಾದ ಯಾಜಕತ್ವವಾಗಿರುವದು ಎಂದು ಹೇಳಿದನು. ಮೋಶೆಯು ಹಾಗೆಯೇ ಮಾಡಿದನು. ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.
- Exodus 40:30 ವಿಮೋಚನಕಾಂಡ 40:30ಸಭೆ ಡೇರೆಗೂ ಯಜ್ಞವೇದಿಗೂ ಮಧ್ಯ ಗಂಗಾಳ ವನ್ನು ಇಟ್ಟು ಅದರಲ್ಲಿ ತೊಳೆಯುವದಕ್ಕೆ ನೀರನ್ನು ಹೊಯ್ದನು.
- Exodus 30:1–10 ವಿಮೋಚನಕಾಂಡ 30:1–10ನೀನು ಧೂಪ ಸುಡುವ ವೇದಿಯನ್ನು ಮಾಡಬೇಕು; ಜಾಲೀ ಮರದಿಂದ ಅದನ್ನು ಮಾಡಬೇಕು. ಅದರ ಉದ್ದ ಒಂದು ಮೊಳ, ಅಗಲ ಒಂದು ಮೊಳ, ಎತ್ತರ ಎರಡು ಮೊಳ ಇದ್ದು ಅದು ಚಚ್ಚೌಕವಾಗಿರಬೇಕು. ಅದಕ್ಕೆ ಕೊಂಬುಗಳನ್ನು ಅದ ರಿಂದಲೇ ಮಾಡಬೇಕು. ಮೇಲ್ಭಾಗವನ್ನೂ ಸುತ್ತಲಿನ ಭಾಗಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿ ಸುತ್ತಲೂ ಬಂಗಾರದ ಗೋಟನ್ನು ಮಾಡ ಬೇಕು. ಗೋಟಿನ ಕೆಳಗೆ ಎರಡೂ ಪಕ್ಕಗಳ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡ ಬೇಕು. ಇವುಗಳನ್ನು ಹೊರುವದಕ್ಕಾಗಿ ಅವುಗಳಲ್ಲಿ ಸಿಕ್ಕಿಸಬೇಕು. ಆ ಕೋಲುಗಳನ್ನು ಜಾಲೀ ಮರದಿಂದ ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅದನ್ನು ಸಾಕ್ಷಿ ಹಲಗೆಗಳಿದ್ದ ಮಂಜೂಷದ ಮುಂದೆ ಇರುವ ತೆರೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾ ಸನದ ಮುಂದೆಯೂ ಇಡಬೇಕು. ಪ್ರತಿದಿನ ಬೆಳಿಗ್ಗೆ ಆರೋನನು ಪರಿಮಳ ಧೂಪ ವನ್ನು ಅದರ ಮೇಲೆ ಸುಡಬೇಕು. ಅವನು ದೀಪಗಳನ್ನು ಸಿದ್ಧಮಾಡುವಾಗ ಪರಿಮಳ ಧೂಪವನ್ನು ಅದರ ಮೇಲೆ ಸುಡಬೇಕು. ಆರೋನನು ಸಾಯಂಕಾಲ ದೀಪಗಳನ್ನು ಅಂಟಿಸುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಕರ್ತನ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪ ವು. ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ ದಹನಬಲಿಗಳನ್ನಾಗಲಿ ಆಹಾರಾರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು. ಆರೋನನು ಅದರ ಕೊಂಬುಗಳಿಗೆ ವರುಷಕ್ಕೆ ಒಂದು ಸಾರಿ ಪ್ರಾಯಶ್ಚಿತ್ತದ ಬಲಿಯ ರಕ್ತದಿಂದ ಪ್ರಾಯಶ್ಚಿತ್ತ ಮಾಡಬೇಕು. ವರುಷಕ್ಕೊಂದು ಸಾರಿ ನಿಮ್ಮ ಸಂತತಿಗಳಲ್ಲೆಲ್ಲಾ ಅದನ್ನು ಮಾಡಬೇಕು. ಅದು ಕರ್ತನಿಗೆ ಅತಿಪರಿಶುದ್ಧವಾದದ್ದು.
- Exodus 39:33–42 ವಿಮೋಚನಕಾಂಡ 39:33–42ಆಗ ಅವರು ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಎಲ್ಲಾ ಸಾಮಾನುಗಳನ್ನು ಹಲಗೆಗಳನ್ನು ಅಗುಳಿಗಳನ್ನು ಸ್ತಂಭಗಳನ್ನು ಕುಣಿಕೆಗಳನ್ನು; ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಹೊದಿಕೆಯನ್ನು, ಕಡಲು ಹಂದಿಗಳ ಚರ್ಮಗಳ ಹೊದಿಕೆಗಳನ್ನು ಮರೆಯ ತೆರೆಯನ್ನು; ಮಂಜೂಷದ ಸಾಕ್ಷಿಯ ಪೆಟ್ಟಿಗೆ ಯನ್ನು, ಅದರ ಕೋಲುಗಳನ್ನು, ಕರುಣಾಸನವನ್ನು; ಮೇಜನ್ನು ಅದರ ಎಲ್ಲಾ ಸಾಮಾನುಗಳನ್ನು, ಸಮ್ಮು ಖದ ರೊಟ್ಟಿಯನ್ನು; ಶುದ್ಧವಾದ ದೀಪ ಸ್ತಂಭವನ್ನು, ಅದರ ದೀಪಗಳನ್ನು ಕ್ರಮವಾಗಿಡುವ ದೀಪಗಳನ್ನು ಅದರ ಎಲ್ಲಾ ಸಾಮಾನುಗಳನ್ನು, ದೀಪಸ್ತಂಭಕ್ಕಾಗಿ ಎಣ್ಣೆಯನ್ನು; ಚಿನ್ನದ ಬಲಿಪೀಠವನ್ನು, ಅಭಿಷೇಕಿಸುವ ತೈಲವನ್ನು, ಪರಿಮಳ ಧೂಪವನ್ನು, ಗುಡಾರದ ಬಾಗಿಲಿನ ತೆರೆಯನ್ನು; ಹಿತ್ತಾಳೆಯ ಬಲಿಪೀಠವನ್ನು, ಅದಕ್ಕಿರುವ ಹಿತ್ತಾಳೆಯ ಜಲ್ಲಡಿಯನ್ನು, ಕೋಲುಗಳನ್ನು, ಎಲ್ಲಾ ಸಾಮಾನುಗಳನ್ನು, ಕುಣಿಕೆಗಳನ್ನು, ಅಂಗಳದ ತೆರೆಗಳನ್ನು, ಸ್ತಂಭಗಳನ್ನು, ಕುಣಿಕೆಗಳನ್ನು, ಅಂಗಳದ ಬಾಗಿಲಿನ ತೆರೆಯನ್ನು, ಹಗ್ಗಗಳನ್ನು, ಗೂಟಗಳನ್ನು, ಸಭೆಯ ಗುಡಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು; ಪರಿಶುದ್ಧ ಸ್ಥಳದ ಸೇವೆಗೋಸ್ಕರ ಸೇವಾ ವಸ್ತ್ರಗಳನ್ನು, ಯಾಜಕನಾದ ಆರೋನನ ಪರಿಶುದ್ಧ ವಸ್ತ್ರಗಳನ್ನು, ಅವನ ಕುಮಾರರಿಗೆ ಯಾಜಕ ಸೇವೆಗೋಸ್ಕರ ಬೇಕಾದ ವಸ್ತ್ರಗಳನ್ನು ತಂದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್ ಮಕ್ಕಳು ಈ ಕೆಲಸಗಳನ್ನೆಲ್ಲಾ ಮಾಡಿ ದರು.ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.
- Exodus 36:35–36 ವಿಮೋಚನಕಾಂಡ 36:35–36ನೀಲಿ, ಧೂಮ್ರ, ರಕ್ತವರ್ಣ, ನಯವಾಗಿ ಹೊಸೆದ ನಾರುಗಳಿಂದ ತೆರೆಯನ್ನು ಮಾಡಿದನು. ಅದರ ಮೇಲೆ ಕುಶಲ ಕೆಲಸದಿಂದ ಕೆರೂಬಿಗಳನ್ನು ಮಾಡಿದನು. ಇದಲ್ಲದೆ ಜಾಲೀ ಮರದ ನಾಲ್ಕು ಸ್ತಂಭಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿಸಿ ದನು. ಅವುಗಳ ಮೊಳೆಗಳು ಚಿನ್ನದವುಗಳಾಗಿದ್ದವು; ಅವನು ಅವುಗಳಿಗೆ ಬೆಳ್ಳಿಯ ನಾಲ್ಕು ಕಾಲುಗಳನ್ನು ಎರಕಹೊಯ್ದನು.
Original words (Hebrew)
- charge · H4931מִשְׁמֶרֶת mishmereth
- ark · H727אָרוֹן ʼârôwn
- table · H7979שֻׁלְחָן shulchân
- candlestick · H4501מְנוֹרָה mᵉnôwrâh
- altars · H4196מִזְבֵּחַ mizbêach
- vessels · H3627כְּלִי kᵉlîy
- sanctuary · H6944קֹדֶשׁ qôdesh
- minister · H8334שָׁרַת shârath
- hanging · H4539מָסָךְ mâçâk
- service · H5656עֲבֹדָה ʻăbôdâh