Exodus · chapter 26 · verse 31
Exodus 26:31 in Kannada
ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.
Neeli dhoomra raktavarnagaliruva nayavaada naarugalinda hoseda tereyannu maadabeku. Kaushalyadinda maadida keroobigalulladdannaagi adannu maadabeku.
Exodus 26:31 in English
- King James Version (KJV)
- And thou shalt make a vail [of] blue, and purple, and scarlet, and fine twined linen of cunning work: with cherubims shall it be made:
- World English Bible (WEB)
- “You shall make a veil of blue, and purple, and scarlet, and fine twined linen, with cherubim. It shall be the work of a skillful workman.
- American Standard Version (ASV)
- And thou shalt make a veil of blue, and purple, and scarlet, and fine twined linen: with cherubim the work of the skilful workman shall it be made:
- Bible in Basic English (BBE)
- And you are to make a veil of the best linen, blue and purple and red, worked with designs of winged ones by a good workman:
- Darby Translation (DBY)
- And thou shalt make a veil of blue, and purple, and scarlet, and twined byssus; of artistic work shall it be made, with cherubim.
- Webster's Bible (WBS)
- And thou shalt make a vail [of] blue, and purple, and scarlet, and fine twined linen of curious work: with cherubim shall it be made.
- Young's Literal Translation (YLT)
- 'And thou hast made a vail of blue, and purple, and scarlet, and twined linen, work of a designer; he maketh it [with] cherubs;
Read in context
- 29ಆ ಹಲಗೆಗಳನ್ನು ಬಂಗಾರ ದಿಂದ ಹೊದಿಸಬೇಕು. ಅವುಗಳಿಗೆ ಬಂಗಾರದಿಂದ ಬಳೆಗಳನ್ನು ಮಾಡಬೇಕು, ಅಗುಳಿಗಳನ್ನೂ ಬಂಗಾರ ದಿಂದ ಹೊದಿಸಬೇಕು.
- 30ಹೀಗೆ ಬೆಟ್ಟದ ಮೇಲೆ ನಾನು ನಿನಗೆ ತೋರಿಸಿದ ಕ್ರಮದ ಪ್ರಕಾರ ಗುಡಾರ ವನ್ನು ನಿಲ್ಲಿಸಬೇಕು.
- 31ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.
- 32ಅದನ್ನು ಬಂಗಾರದಿಂದ ಹೊದಿಸಿದ ಬಂಗಾರದ ಕೊಂಡಿಗಳಿದ್ದ ಬೆಳ್ಳಿಯ ನಾಲ್ಕು ಕುಳಿಗಳಲ್ಲಿ ಊರಿಕೊಂಡಿರುವ ನಾಲ್ಕು ಜಾಲೀ ಮರದ ಸ್ತಂಭಗಳಲ್ಲಿ ಅದನ್ನು ತೂಗುಹಾಕಬೇಕು.
- 33ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು.
Cross references
- Matthew 27:51 ಮತ್ತಾಯನು 27:51ಆಗ ಇಗೋ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು; ಭೂಮಿಯು ಕಂಪಿಸಿತು; ಮತ್ತು ಬಂಡೆ ಗಳು ಸೀಳಿದವು;
- 2 Chronicles 3:14 2 ಪೂರ್ವಕಾಲವೃತ್ತಾಂತ 3:14ತೆರೆಯನ್ನು ನೀಲ ಧೂಮ್ರ ರಕ್ತವರ್ಣಗಳಿಂದಲೂ ನಯವಾದ ನಾರಿನ ವಸ್ತ್ರದಿಂದಲೂ ಮಾಡಿಸಿ ಅದರಲ್ಲಿ ಕೆರೂಬಿಗಳನ್ನು ಮಾಡಿಸಿದನು.
- Exodus 36:35 ವಿಮೋಚನಕಾಂಡ 36:35ನೀಲಿ, ಧೂಮ್ರ, ರಕ್ತವರ್ಣ, ನಯವಾಗಿ ಹೊಸೆದ ನಾರುಗಳಿಂದ ತೆರೆಯನ್ನು ಮಾಡಿದನು. ಅದರ ಮೇಲೆ ಕುಶಲ ಕೆಲಸದಿಂದ ಕೆರೂಬಿಗಳನ್ನು ಮಾಡಿದನು.
- Exodus 26:1 ವಿಮೋಚನಕಾಂಡ 26:1ಗುಡಾರವನ್ನು ಹತ್ತು ತೆರೆಗಳಿಂದ ಮಾಡ ಬೇಕು. ಅವು ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣಗ ಳಿಂದಲೂ ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳವು ಗಳಾಗಿಯೂ ಇರಬೇಕು.
- Leviticus 16:2 ಯಾಜಕಕಾಂಡ 16:2ಆಗ ಕರ್ತನು ಮೋಶೆಗೆ--ಅವನು ಸಾಯದಂತೆ ಮಂಜೂಷದ ಮೇಲಿರುವ ಕರುಣಾಸನದ ಮುಂದಿ ರುವ ಪರದೆಯ ಒಳಗೆ ಪರಿಶುದ್ಧವಾದ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ; ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.
- Exodus 36:8 ವಿಮೋಚನಕಾಂಡ 36:8ಹೀಗಿರಲಾಗಿ ಕೆಲಸದವರಲ್ಲಿ ಜ್ಞಾನ ಹೃದಯವುಳ್ಳ ಪ್ರತಿಯೊಬ್ಬನೂ ಗುಡಾರವನ್ನು ಹತ್ತು ತೆರೆಗಳಿಂದ ಮಾಡಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನೂಲಿನಿಂದಲೂ ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿ ದನು.
- Exodus 35:35 ವಿಮೋಚನಕಾಂಡ 35:35ಅವರು ಕೆತ್ತನೆಯ ಕೆಲಸಗಳನ್ನು ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಮಾಡುವದಕ್ಕೂ ನೀಲಿ, ಧೂಮ್ರ, ರಕ್ತವರ್ಣ ನಯವಾದ ನಾರುಮಡಿ ಇವು ಗಳಲ್ಲಿ ಕಸೂತಿ ಕೆಲಸ ಮಾಡುವದಕ್ಕೂ ನೇಯ್ಗೆಯ ಕೆಲಸ ಮಾಡುವದಕ್ಕೂ ಅಂದರೆ ಅವುಗಳಲ್ಲಿ ಯಾವ ಕೆಲಸವನ್ನಾದರೂ ಮಾಡುವದಕ್ಕೂ ಚಮತ್ಕಾರದ ಕೆಲಸವನ್ನು ಕಲ್ಪಿಸಿ ಮಾಡುವವರಂತೆಯೂ ಹೀಗೆ ಎಲ್ಲಾ ತರವಾದ ಕೆಲಸಮಾಡುವದಕ್ಕೆ ಜ್ಞಾನದ ಹೃದಯವನ್ನು ದೇವರು ಅವರಲ್ಲಿ ತುಂಬಿಸಿದ್ದಾನೆ.
- Exodus 40:21 ವಿಮೋಚನಕಾಂಡ 40:21ಅವನು ಮಂಜೂಷವನ್ನು ಗುಡಾರಕ್ಕೆ ತಂದು ಮರೆಮಾಡುವ ತೆರೆಯನ್ನಿರಿಸಿದನು. ಕರ್ತನು ಹೇಳಿದ ಹಾಗೆಯೇ ಮೋಶೆಯು ಮಾಡಿದನು.
- Exodus 35:25 ವಿಮೋಚನಕಾಂಡ 35:25ಜ್ಞಾನ ಹೃದಯವುಳ್ಳ ಸ್ತ್ರೀಯರೆಲ್ಲರೂ ತಮ್ಮ ಕೈಗಳಿಂದ ನೇಯ್ದ ನೀಲಿ, ಧೂಮ್ರ, ರಕ್ತವರ್ಣ ಮತ್ತು ನಯವಾದ ನಾರುಮಡಿ ಇವುಗಳನ್ನು ತಂದರು.
- Exodus 25:4 ವಿಮೋಚನಕಾಂಡ 25:4ನೀಲಿ ರಕ್ತವರ್ಣ ಲಾಕಿಬಣ್ಣ ನಾರು ಮೇಕೆಯ ಕೂದಲು
- Exodus 38:23 ವಿಮೋಚನಕಾಂಡ 38:23ಅವನ ಜೊತೆಯಲ್ಲಿ ದಾನ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲಿಯಾಬನೂ ಇದ್ದನು. ಇವನು ಕೆತ್ತನೆ ಕೆಲಸ ಮಾಡುವವನೂ ಕುಶಲ ಕೆಲಸಗಾರನೂ ನೀಲಿ ಧೂಮ್ರ ರಕ್ತವರ್ಣ ನಯವಾದ ನೂಲು ಇವುಗಳಿಂದ ಕಸೂತಿ ಕೆಲಸ ಮಾಡುವವನೂ ಆಗಿದ್ದನು.
- Hebrews 9:3–8 ಇಬ್ರಿಯರಿಗೆ 9:3–8ಎರಡನೆಯ ತೆರೆಯ ಆಚೆಯಲ್ಲಿ ಅತಿಪವಿತ್ರ ಸ್ಥಳವೆನಿಸಿಕೊಳ್ಳುವ ಇನ್ನೊಂದು ಗುಡಾರವಿತ್ತು; ಅದರಲ್ಲಿ ಚಿನ್ನದ ಧೂಪಾರತಿ, ಒಳಗೂ ಹೊರಗೂ ಚಿನ್ನದಿಂದ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇವುಗಳಿದ್ದವು; ಆ ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆಯ ಕಲ್ಲಿನ ಹಲಿಗೆ ಗಳೂ ಇದ್ದವು; ಅದರ ಮೇಲೆ ಪ್ರಭಾವದ ಕೆರೂಬಿ ಯರು ಕೃಪಾಸನವನ್ನು ಮುಚ್ಚಿಕೊಂಡಿದ್ದರು. ಸದ್ಯಕ್ಕೆ ಈ ವಿಷಯಗಳನ್ನು ಪ್ರತ್ಯೇಕವಾಗಿ ನಾವು ವಿವರಿಸು ವದಕ್ಕೆ ಆಗುವದಿಲ್ಲ. ಇವುಗಳು ಹೀಗೆ ನೇಮಕ ಮಾಡಲ್ಪಟ್ಟಾಗ ಯಾಜಕರು ಯಾವಾಗಲೂ ದೇವರ ಸೇವೆಯನ್ನು ಪೂರೈಸುವವರಾಗಿ ಗುಡಾರದ ಮೊದಲನೆಯ ಭಾಗದೊಳಗೆ ಪ್ರವೇಶಿಸುವರು. ಆದರೆ ಎರಡನೆಯ ಭಾಗದೊಳಗೆ ಮಹಾಯಾಜಕನೊಬ್ಬನೇ ವರುಷಕ್ಕೆ ಒಂದೇ ಸಾರಿ ಹೋಗುತ್ತಾನೆ. ಅವನು ರಕ್ತವನ್ನು ತಕ್ಕೊಳ್ಳದೆ ಹೋಗುವದಿಲ್ಲ; ಆ ರಕ್ತವನ್ನು ತನ ಗೋಸ್ಕರವೂ ಜನರ ತಪ್ಪುಗಳಿಗೋಸ್ಕರವೂ ಸಮರ್ಪಿಸುತ್ತಾನೆ. ಮೊದಲನೆಯ ಗುಡಾರವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಿಲ್ಲಿವೆಂಬದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.
Original words (Hebrew)
- make · H6213עָשָׂה ʻâsâh
- vail · H6532פֹּרֶכֶת pôreketh
- blue · H8504תְּכֵלֶת tᵉkêleth
- purple · H713אַרְגָּמָן ʼargâmân
- scarlet · H8144שָׁנִי shânîy
- twined · H7806שָׁזַר shâzar
- linen · H8336שֵׁשׁ shêsh
- cunning · H2803חָשַׁב châshab
- work · H4639מַעֲשֶׂה maʻăseh
- cherubims · H3742כְּרוּב kᵉrûwb
- made · H6213עָשָׂה ʻâsâh