Numbers · chapter 30 · verse 13
Numbers 30:13 in Kannada
ಎಲ್ಲಾ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಕಟ್ಟಳೆಯ ಎಲ್ಲಾ ಆಣೆಗಳನ್ನೂ ಅವಳ ಗಂಡನು ಸಾರ್ಥಕಮಾಡಬಹುದು, ಇಲ್ಲವೆ ನಿರರ್ಥಕ ಮಾಡಬಹುದು.
Ellaa pramaanavannoo praanavannu kundisuva kattaleya ellaa aanegalannoo avala gandanu saarthakamaadabahudu, illave nirarthaka maadabahudu.
Numbers 30:13 in English
- King James Version (KJV)
- Every vow, and every binding oath to afflict the soul, her husband may establish it, or her husband may make it void.
- World English Bible (WEB)
- Every vow, and every binding oath to afflict the soul, her husband may establish it, or her husband may make it void.
- American Standard Version (ASV)
- Every vow, and every binding oath to afflict the soul, her husband may establish it, or her husband may make it void.
- Bible in Basic English (BBE)
- Every oath, and every undertaking which she gives, to keep herself from pleasure, may be supported or broken by her husband.
- Darby Translation (DBY)
- Every vow, and every binding oath to afflict the soul, her husband can establish it, or her husband can annul it.
- Webster's Bible (WBS)
- Every vow, and every binding oath to afflict the soul, her husband may establish it, or her husband may make it void.
- Young's Literal Translation (YLT)
- 'Every vow and every oath — a bond to humble a soul — her husband doth establish it, or her husband doth break it;
Read in context
- 11ಅವಳ ಗಂಡನು ಅದನ್ನು ಕೇಳಿ ಅದಕ್ಕೆ ಮೌನವಾಗಿದ್ದು ಅವಳನ್ನು ತಡೆಯದ ಪಕ್ಷದಲ್ಲಿ ಅವಳ ಸಮಸ್ತ ಪ್ರಮಾಣಗಳೂ ಅವಳು ತನ್ನ ಪ್ರಾಣವನ್ನು ಬಂಧಿಸಿದ ಸಮಸ್ತ ಬಂಧನಗಳೂ ನಿಲ್ಲುವವು.
- 12ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕಮಾಡಿದ ಪಕ್ಷ ದಲ್ಲಿ ಅವಳ ಪ್ರಮಾಣಗಳಿಗೋಸ್ಕರವೂ ಅವಳ ಪ್ರಾಣದ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವದಾಗಲಿ ನಿಲ್ಲದು, ಅವಳ ಗಂಡನು ಅವುಗಳನ್ನು ನಿರರ್ಥಕಮಾಡಿದ್ದಾನೆ; ಕರ್ತನು ಅವಳನ್ನು ಕ್ಷಮಿಸುವನು.
- 13ಎಲ್ಲಾ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಕಟ್ಟಳೆಯ ಎಲ್ಲಾ ಆಣೆಗಳನ್ನೂ ಅವಳ ಗಂಡನು ಸಾರ್ಥಕಮಾಡಬಹುದು, ಇಲ್ಲವೆ ನಿರರ್ಥಕ ಮಾಡಬಹುದು.
- 14ಆದರೆ ಅವಳ ಗಂಡನು ಅದಕ್ಕೆ ದಿನದಿನಕ್ಕೆ ಪೂರ್ಣವಾಗಿ ಸುಮ್ಮನಿದ್ದರೆ ಅವನು ಅವಳ ಸಮಸ್ತ ಪ್ರಮಾಣಗಳನ್ನೂ ಅವಳ ಮೇಲಿರುವ ಸಮಸ್ತ ಕಟ್ಟಳೆಗಳನ್ನೂ ಸ್ಥಾಪಿಸುತ್ತಾನೆ; ಅವನು ಕೇಳಿದ ದಿವಸ ದಲ್ಲಿ ಅವಳಿಗೆ ಸುಮ್ಮನಿರುವದರಿಂದ ಅವುಗಳನ್ನು ಸ್ಥಾಪಿಸಿದ್ದಾನೆ.
- 15ಆದರೆ ಅವನು ಕೇಳಿದ ತರುವಾಯ ಅವುಗಳನ್ನು ಹೇಗಾದರೂ ನಿರರ್ಥಕ ಮಾಡಿದರೆ ಅವಳ ಅಕ್ರಮವನ್ನು ಹೊರಬೇಕು.ಪತಿಪತ್ನಿಯರ ವಿಷಯದಲ್ಲಿಯೂ ತಂದೆಯೂ ತಂದೆ ಮನೆಯಲ್ಲಿ ಕನ್ಯಾವಸ್ತೆಯಾಗಿರುವ ಮಗಳೂ ಇವರ ವಿಷಯದಲ್ಲಿಯೂ ಕರ್ತನು ಮೋಶೆಗೆ ಆಜ್ಞಾಪಿಸಿದ ಕಟ್ಟಳೆಗಳು ಇವೇ.
Cross references
- 1 Corinthians 11:3 1 ಕೊರಿಂಥದವರಿಗೆ 11:3ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
- 1 Corinthians 11:9 1 ಕೊರಿಂಥದವರಿಗೆ 11:9ಇದಲ್ಲದೆ ಪುರುಷನು ಸ್ತ್ರೀಯ ನಿಮಿತ್ತವಾಗಿ ನಿರ್ಮಾಣವಾಗಲಿಲ್ಲ; ಆದರೆ ಸ್ತ್ರೀಯು ಪುರುಷನ ನಿಮಿತ್ತವಾಗಿ ನಿರ್ಮಾಣವಾದಳು.
- Numbers 29:7 ಅರಣ್ಯಕಾಂಡ 29:7ಈ ಏಳನೇ ತಿಂಗಳಿನ ಹತ್ತನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಅದರಲ್ಲಿ ನಿಮ್ಮ ಪ್ರಾಣಗಳನ್ನು ವ್ಯಥೆಪಡಿಸಿ ಯಾವ ಕೆಲಸವನ್ನಾದರೂ ಮಾಡಬಾರದು.
- Leviticus 23:32 ಯಾಜಕಕಾಂಡ 23:32ಇದು ನಿಮಗೆ ವಿಶ್ರಾಂತಿಯ ಸಬ್ಬತ್ತಾಗಿ ರುವದು; ನೀವು ನಿಮ್ಮ ಪ್ರಾಣಗಳನ್ನು ಕುಂದಿಸಬೇಕು; ಆ ತಿಂಗಳಿನ ಒಂಭತ್ತನೆಯ ದಿವಸದ ಸಾಯಂಕಾಲ ದಿಂದ ಮರುದಿನದ ಸಾಯಂಕಾಲದ ವರೆಗೆ ನಿಮ್ಮ ಸಬ್ಬತ್ತನ್ನು ನೀವು ಆಚರಿಸಬೇಕು ಎಂಬದೇ.
- Leviticus 16:29 ಯಾಜಕಕಾಂಡ 16:29ನೀವು ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮಲ್ಲಿ ಒಬ್ಬ ಸ್ವದೇಶದವನಾಗಲಿ ಪ್ರವಾಸಿಯಾಗಿರುವ ಪರಕೀಯನಾಗಲಿ ನಿಮ್ಮ ಆತ್ಮಗಳನ್ನು ಕುಂದಿಸಿ ಯಾವ ಕೆಲಸವನ್ನೂ ಮಾಡದಂತೆ ಇದು ನಿಮಗೆ ಶಾಶ್ವತವಾದ ಒಂದು ನಿಯಮವಾಗಿರುವದು.
- Leviticus 23:27 ಯಾಜಕಕಾಂಡ 23:27ಇದಲ್ಲದೆ ಈ ಏಳನೆಯ ತಿಂಗಳಿನ ಹತ್ತನೆಯ ದಿವಸವು ಪ್ರಾಯಶ್ಚಿತ್ತದ ದಿವಸವಾಗಿ ರುವದು; ಅದು ನಿಮಗೆ ಒಂದು ಪರಿಶುದ್ಧ ಸಭೆಯ ಕೂಟವಾಗಿರುವದು; ನೀವು ನಿಮ್ಮ ಪ್ರಾಣಗಳನ್ನು ಕುಂದಿಸಿ ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು.
- Psalm 35:13 ಕೀರ್ತನೆಗಳು 35:13ನಾನಾ ದರೋ ಅವರು ಅಸ್ವಸ್ಥವಾದಾಗ, ಗೋಣೀ ತಟ್ಟು ಹೊದ್ದುಕೊಂಡು ನನ್ನ ಪ್ರಾಣವನ್ನು ಉಪವಾಸದಿಂದ ಕುಂದಿಸಿದೆನು; ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು.
- Ezra 8:21 ಎಜ್ರನು 8:21ಆಗ ನಾವು ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸುಕೊಳ್ಳುವದಕ್ಕೂ ನಮಗೂ ನಮ್ಮ ಮಕ್ಕಳಿಗೂ ನಮ್ಮ ಎಲ್ಲಾ ಸ್ಥಿತಿಗೂ ಆತನಿಂದ ಸರಿಯಾದ ಮಾರ್ಗ ವನ್ನು ಹುಡುಕುವದಕ್ಕೂ ನಾನು ಅಲ್ಲಿ ಅಹವಾ ನದಿಯ ಬಳಿಯಲ್ಲಿ ಉಪವಾಸವನ್ನು ಮಾಡಲು ಸಾರಿದೆನು.
- 1 Peter 3:1–6 1 ಪೇತ್ರನು 3:1–6ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಯಾರಾದರೂ ವಾಕ್ಯಕ್ಕೆ ಅವಿಧೇಯರಾಗಿದ್ದರೂ ಹೆಂಡತಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ ನಿಮ್ಮ ನಿರ್ಮಲವಾದ ಮತ್ತು ಭಯಭರಿತವಾದ ನಡತೆಯನ್ನು ಅವರು ನೋಡಲಿ. ಜಡೆ ಹೆಣೆದುಕೊ ಳ್ಳುವದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದೂ ಇಲ್ಲವೆ ಉಡಿಗೆಗಳನ್ನು ಧರಿಸಿಕೊಳ್ಳುವದೂ ಈ ಹೊರ ಗಣ ಅಲಂಕಾರವು ಬೇಡ. ಆದರೆ ಸಾತ್ವಿಕವಾದ ಶಾಂತ ಮನಸ್ಸು ಎಂಬ ಹೃದಯದ ಮರೆಯಾದ ಮನುಷ್ಯನ ಅಲಂಕಾರವೇ ನಿಮಗಿರಲಿ. ಇದು ಅಕ್ಷಯ ವಾಗಿದ್ದು ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದಾಗಿದೆ. ಪೂರ್ವಕಾಲದಲ್ಲಿ ದೇವರ ಮೇಲೆ ನಂಬಿಕೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಆಲಂಕರಿಸಿಕೊಂಡರು; ಅವರು ತಮ್ಮ ತಮ್ಮ ಗಂಡಂ ದಿರಿಗೆ ಅಧೀನರಾಗಿದ್ದರು. ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ; ನೀವು ಒಳ್ಳೇದನ್ನು ಮಾಡುವದಾದರೆ ಯಾವ ಭೀತಿಗೂ ಗಾಬರಿ ಪಡುವದಿಲ್ಲ.
- Isaiah 58:5 ಯೆಶಾಯ 58:5ನಾನು ಆರಿಸಿಕೊಂಡದ್ದು ಇಂಥಾ ಉಪವಾಸವೋ? ಜೊಂಡಿನಂತೆ ತಲೆಯನ್ನು ಬೊಗ್ಗಿಸಿಕೊಂಡು ಗೋಣೀ ತಟ್ಟನ್ನೂ ಬೂದಿಯನ್ನೂ ಆಸನ ಮಾಡಿಕೊಂಡು ಕೂತುಕೊಳ್ಳುವದೋ? ಇದನ್ನು ಉಪವಾಸವೆಂದು ನೀವು ಕರೆದು ಆ ದಿನದಲ್ಲಿ ಮನುಷ್ಯನು ತನ್ನ ಆತ್ಮವನ್ನು ಕುಂದಿಸುವದು ಕರ್ತನು ಮೆಚ್ಚುವ ದಿನವೆಂದು ಅನ್ನು ತ್ತೀರೋ?
- 1 Corinthians 7:5 1 ಕೊರಿಂಥದವರಿಗೆ 7:5ಉಪವಾಸ ಮತ್ತು ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿ ಯಿಂದ ಸ್ವಲ್ಪಕಾಲ ಆಗಲಿರಬಹುದೇ ಹೊರತು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ಸೈತಾನನು ನಿಮ್ಮನು ಶೋಧಿಸದಂತೆ ತಿರಿಗಿ ಕೂಡಿಕೊಳ್ಳಿರಿ.