Numbers · chapter 32 · verse 27
Numbers 32:27 in Kannada
ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರು ನಮ್ಮ ಒಡೆಯನು ಹೇಳಿದ ಪ್ರಕಾರ ಕರ್ತನ ಮುಂದೆ ಯುದ್ಧಕ್ಕೆ ದಾಟಿ ಹೋಗುವರು ಅಂದರು.
Aadare ninna sevakaru yuddhakke siddhavaadavarellaru namma odeyanu helida prakaara kartana munde yuddhakke daati hoguvaru andaru.
Numbers 32:27 in English
- King James Version (KJV)
- But thy servants will pass over, every man armed for war, before the LORD to battle, as my lord saith.
- World English Bible (WEB)
- but your servants will pass over, every man who is armed for war, before the LORD to battle, as my lord says.”
- American Standard Version (ASV)
- but thy servants will pass over, every man that is armed for war, before Jehovah to battle, as my lord saith.
- Bible in Basic English (BBE)
- But your servants will go over, every man armed for war, before the Lord to the fight, as my lord says.
- Darby Translation (DBY)
- but thy servants will pass over, every one armed for war, before Jehovah to battle, as my lord says.
- Webster's Bible (WBS)
- But thy servants will pass over, every man armed for war, before the LORD to battle, as my lord saith.
- Young's Literal Translation (YLT)
- and thy servants pass over, every armed one of the host, before Jehovah, to battle, as my lord is saying.'
Read in context
- 25ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು.
- 26ನಮ್ಮ ಮಕ್ಕಳೂ ಹೆಂಡತಿಯರೂ ಸಂಪತ್ತೂ ಪಶು ಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ.
- 27ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರು ನಮ್ಮ ಒಡೆಯನು ಹೇಳಿದ ಪ್ರಕಾರ ಕರ್ತನ ಮುಂದೆ ಯುದ್ಧಕ್ಕೆ ದಾಟಿ ಹೋಗುವರು ಅಂದರು.
- 28ಆಗ ಮೋಶೆಯು ಅವರ ವಿಷಯವಾಗಿ ಯಾಜಕ ನಾದ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋ ಶುವನಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದನು.
- 29ಮೋಶೆಯು ಅವರಿಗೆ--ಗಾದನ ಮಕ್ಕಳೂ ರೂಬೇನನ ಮಕ್ಕಳೂ ಎಲ್ಲರು ಯುದ್ಧಕ್ಕೆ ಸಿದ್ಧವಾಗಿದ್ದು ನಿಮ್ಮ ಸಂಗಡ ಯೊರ್ದನ್ ನದಿಯನ್ನು ಕರ್ತನ ಮುಂದೆ ದಾಟಿದರೆ ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.
Cross references
- Joshua 4:12 ಯೆಹೋಶುವ 4:12ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರವೂ ಮೋಶೆಯು ತಮಗೆ ಹೇಳಿದ ಹಾಗೆಯೇ ಯುದ್ಧಸನ್ನದ್ಧರಾಗಿ ಇಸ್ರಾಯೇಲ್ ಮಕ್ಕಳ ಮುಂದೆ ಹಾದುಹೋದರು.
- Numbers 32:17 ಅರಣ್ಯಕಾಂಡ 32:17ಆದರೆ ನಾವು ಇಸ್ರಾಯೇಲ್ ಮಕ್ಕಳ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವ ವರೆಗೆ ಯುದ್ಧಕ್ಕೆ ಸಿದ್ಧ ವಾಗಿ ಓಡುವೆವು; ನಮ್ಮ ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು.
- Numbers 36:2 ಅರಣ್ಯಕಾಂಡ 36:2ಇಸ್ರಾಯೇಲ್ ಮಕ್ಕಳ ಮುಖ್ಯ ಯಜಮಾನರಾಗಿರುವ ಪ್ರಧಾನರ ಮುಂದೆ ಯೂ ಮಾತನಾಡಿ--ಇಸ್ರಾಯೇಲ್ ಮಕ್ಕಳಿಗೆ ಚೀಟಿ ನಿಂದ ಸ್ವಾಸ್ತ್ಯಕ್ಕಾಗಿ ದೇಶವನ್ನು ಕೊಡುವದಕ್ಕೆ ಕರ್ತನು ನಮ್ಮ ಒಡೆಯನಿಗೆ ಆಜ್ಞಾಪಿಸಿದನು; ನಮ್ಮ ಸಹೋದರ ನಾದ ಚಲ್ಪಹಾದನ ಸ್ವಾಸ್ತ್ಯವನ್ನು ಅವನ ಕುಮಾರ್ತೆ ಯರಿಗೆ ಕೊಡುವದಕ್ಕೆ ನಮ್ಮ ಒಡೆಯನು ಕರ್ತನಿಂದ ಆಜ್ಞೆ ಹೊಂದಿದನು.
- Ephesians 6:10–18 ಎಫೆಸದವರಿಗೆ 6:10–18ಕಡೇದಾಗಿ ನನ್ನ ಸಹೋದರರೇ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. ನೀವು ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧ ಗಳನ್ನು ಧರಿಸಿಕೊಳ್ಳಿರಿ. ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ದುಷ್ಟತನದ ಮೇಲೆಯೂ ಹೋರಾಡುವವರಾಗಿದ್ದೇವೆ. ಆದದ ರಿಂದ ಕೆಟ್ಟ ದಿನದಲ್ಲಿ ನೀವು ಅವುಗಳನ್ನು ಎದುರಿಸಿ ಮಾಡಬೇಕಾದದ್ದೆಲ್ಲವನ್ನು ಮಾಡಿ ನಿಲ್ಲಲು ಶಕ್ತರಾಗು ವಂತೆ ದೇವರ ಸರ್ವಾಯುಧವನ್ನು ನಿಮಗಾಗಿ ತೆಗೆದು ಕೊಳ್ಳಿರಿ. ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ಎದೆಕವಚವನ್ನು ಧರಿಸಿಕೊಳ್ಳಿರಿ.ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆ ಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ. ಆದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ. ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣ ವನ್ನು ಇಟ್ಟುಕೊಂಡು ಆತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ. ನೀವು ಆತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧ ವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಪರಿಶುದ್ಧರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.
- 2 Corinthians 10:4–5 2 ಕೊರಿಂಥದವರಿಗೆ 10:4–5(ನಾವು ಉಪಯೋಗಿಸುವ ಯುದ್ಧಾಯುಧಗಳು ಶರೀರ ಸಂಬಂಧವಾದ ಆಯುಧ ಗಳಲ್ಲ; ಅವು ದೇವರ ಮೂಲಕ ಬಲವಾಗಿದ್ದು ಬಲ ವಾದ ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ). ನಾವು ಊಹೆಗಳನ್ನು ದೇವಜ್ಞಾನವನ್ನೂ ವಿರೋಧಿ ಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದವುಗಳೆಲ್ಲವನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು
- 2 Timothy 4:7–8 2 ತಿಮೊಥೆಯನಿಗೆ 4:7–8ನಾನು ಒಳ್ಳೇ ಹೋರಾಟವನ್ನು ಹೋರಾಡಿದ್ದೇನೆ, ನಾನು ನನ್ನ ಓಟ ವನ್ನು ಮುಗಿಸಿದ್ದೇನೆ, ನಾನು ನಂಬಿಕೆಯನ್ನು ಕಾಪಾಡಿ ದ್ದೇನೆ. ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು.
- Numbers 12:11 ಅರಣ್ಯಕಾಂಡ 12:11ಆರೋನನು ಮೋಶೆಗೆ--ಅಯ್ಯೋ, ನನ್ನ ಒಡೆಯನೇ, ನಾವು ಪಾಪಮಾಡಿದೆವು, ಬುದ್ಧಿಯಿಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ.
- Numbers 11:28 ಅರಣ್ಯಕಾಂಡ 11:28ಅದಕ್ಕೆ ತನ್ನ ಯೌವನಸ್ಥರಲ್ಲಿ ಒಬ್ಬನೂ ಮೋಶೆಯ ಸೇವಕನೂ ಆಗಿದ್ದ ನೂನನ ಮಗನಾದ ಯೆಹೋಶುವನು ಹೇಳಿದ್ದೇನಂದರೆ--ನನ್ನ ಒಡೆಯನಾದ ಮೋಶೆಯೇ, ಅವರನ್ನು ತಡೆ ಅಂದನು.