Numbers · chapter 34 · verse 3
Numbers 34:3 in Kannada
ಹೇಗೆ ಅಂದರೆ ನಿಮ್ಮ ದಕ್ಷಿಣ ಕಡೆಯು ಜಿನ್ ಅರಣ್ಯದಿಂದ ಎದೋಮಿಗೆ ಅನುಸಾರವಾಗಿರಬೇಕು; ನಿಮ್ಮ ದಕ್ಷಿಣ ಮೇರೆಯು ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.
Hege andare nimma dakshina kadeyu jin aranyadinda edomige anusaaravaagirabeku; nimma dakshina mereyu uppina samudrada poorvada kadeyinda aarambhisabeku.
Numbers 34:3 in English
- King James Version (KJV)
- Then your south quarter shall be from the wilderness of Zin along by the coast of Edom, and your south border shall be the outmost coast of the salt sea eastward:
- World English Bible (WEB)
- then your south quarter shall be from the wilderness of Zin along by the side of Edom, and your south border shall be from the end of the Salt Sea eastward.
- American Standard Version (ASV)
- then your south quarter shall be from the wilderness of Zin along by the side of Edom, and your south border shall be from the end of the Salt Sea eastward;
- Bible in Basic English (BBE)
- Then your south quarter will be from the waste land of Zin by the side of Edom, and your limit on the south will be from the east end of the Salt Sea,
- Darby Translation (DBY)
- Then your south side shall be from the wilderness of Zin alongside of Edom, and your southern border shall be from the end of the salt sea eastward;
- Webster's Bible (WBS)
- Then your south quarter shall be from the wilderness of Zin along by the border of Edom, and your south border shall be the outmost coast of the salt sea eastward:
- Young's Literal Translation (YLT)
- then hath the south quarter been to you from the wilderness of Zin, by the sides of Edom, yea, the south border hath been to you from the extremity of the Salt Sea, eastward;
Read in context
- 1ಕರ್ತನು ಮೋಶೆಯ ಸಂಗಡ ಮಾತನಾಡಿ--
- 2ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಕಾನಾನ್ ದೇಶದೊಳಗೆ ಬರುವಾಗ ನಿಮಗೆ ಸ್ವಾಸ್ತ್ಯಕ್ಕಾಗಿ ಬರುವ ಕಾನಾನ್ ದೇಶವು ಅದರ ಮೇರೆಗಳ ಪ್ರಕಾರ ಹೀಗಿರಬೇಕು.
- 3ಹೇಗೆ ಅಂದರೆ ನಿಮ್ಮ ದಕ್ಷಿಣ ಕಡೆಯು ಜಿನ್ ಅರಣ್ಯದಿಂದ ಎದೋಮಿಗೆ ಅನುಸಾರವಾಗಿರಬೇಕು; ನಿಮ್ಮ ದಕ್ಷಿಣ ಮೇರೆಯು ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು.
- 4ನಿಮ್ಮ ಮೇರೆಯು ದಕ್ಷಿಣದಿಂದ ಅಕ್ರಬ್ಬೀಮ್ ದಿನ್ನೆಗೆ ತಿರುಗಿ ಜಿನ್ಗೆ ಹಾದು ಕಾದೇಶ್ಬರ್ನೇಯಕ್ಕೆ ದಕ್ಷಿಣದಲ್ಲಿ ಮುಗಿದು ಅಲ್ಲಿಂದ ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು.
- 5ಮೇರೆ ಅಚ್ಮೋನಿನಿಂದ ಐಗುಪ್ತದ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು.
Cross references
- Genesis 14:3 ಆದಿಕಾಂಡ 14:3ಇವರೆಲ್ಲರು ಉಪ್ಪಿನ ಸಮುದ್ರ ವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿ ಬಂದರು.
- Ezekiel 47:13 ಯೆಹೆಜ್ಕೇಲನು 47:13ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶ ವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾ ಗಿದೆ; ಯೋಸೇಫನಿಗೆ ಎರಡು ಪಾಲುಗಳು ಕೊಡಲ್ಪ ಟ್ಟಿದೆ.
- Joshua 15:1–12 ಯೆಹೋಶುವ 15:1–12ಇದಲ್ಲದೆ ಯೂದನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವದಂದರೆ, ಕಟ್ಟ ಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಜಿನ್ ಅರಣ್ಯದ ದಕ್ಷಿಣ ಭಾಗವಾಗಿದೆ. ಉಪ್ಪು ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ ದಕ್ಷಿಣ ಪಾರ್ಶ್ವದ ಲ್ಲಿರುವ ಮಾಲೆಅಕ್ರಬ್ಬೀಮೆಂಬ ಕೊಲ್ಲಿಗಳಿಗೂ ಅಲ್ಲಿಂದ ಜೀನಿಗೂ ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಬ್ರೋನ್ ಮಾರ್ಗವಾಗಿ ಕರ್ಕವನ್ನು ಸುತ್ತಿ ಅಚ್ಮೊನಿಗೂ ಅಲ್ಲಿಂದ ಐಗುಪ್ತದ ನದಿ ಹಿಡಿದು ಸಮುದ್ರದ ಪರಿಯಂತರ ಹೋಗಿ ಸೇರುವದು; ಇದೇ ನಿಮ್ಮ ದಕ್ಷಿಣ ಮೇರೆ. ಅದರ ಮೂಡಣ ಮೇರೆ ಯಾವದಂದರೆ: ಯೊರ್ದನಿನ ಕೊನೇಗಿರುವ ಉಪ್ಪು ಸಮುದ್ರವು. ಉತ್ತರ ಕಡೆಗೆ ಯೊರ್ದನಿನ ಹತ್ತಿರದಲ್ಲಿದ್ದ ಸಮುದ್ರದ ಕೊನೆಯ ವರೆಗೆ ಇತ್ತು; ಅಲ್ಲಿಂದ ಬೇತ್ಹೊಗ್ಲಾಕ್ಕೂ ಅಲ್ಲಿಂದ ಉತ್ತರಕ್ಕಿರುವ ಬೇತ್ಅರಾಬನ್ನು ದಾಟಿರೂಬೇನನ ಮಗನಾದ ಬೋಹನನ ಕಲ್ಲಿಗೂ ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಯ ದಕ್ಷಿಣ ಪಾರ್ಶ್ವವಾದ ಅದುವಿಾಮಿನ ಹೊಳೆಗೆ ಎದುರಾಗಿರುವ ಗಿಲ್ಗಾಲಿಗೂ ಅಲ್ಲಿಂದ ಏನ್ಷೆಮೆಷಿನ ನೀರಿಗೂ ಅಲ್ಲಿಂದ ಏನ್ರೋಗೆಲಿಗೂ ಅಲ್ಲಿಂದ ಯೆಬೂಸಿ ಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣ ಪಾರ್ಶ್ವವಾಗಿ ಹಿನ್ನೋಮನ ತಗ್ಗನ್ನು ದಾಟಿ ಉತ್ತರಕ್ಕಿರುವ ಯೆಬೂಸಿಯರ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕಾಗಿ ಹಿನ್ನೋಮ್ ತಗ್ಗಿನ ಮುಂದಿರುವ ಬೆಟ್ಟದ ತುದಿ ವರೆಗೂ ಆ ಬೆಟ್ಟದ ತುದಿಯಿಂದ ನೆಪ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣ ಗಳಿಗೂ ಅಲ್ಲಿಂದ ಕಿರ್ಯತ್ಯಾರೀಮ್ ಆದ ಬಾಲಾಕ್ಕೂ ಬಾಲಾದಿಂದ ಪಶ್ಚಿಮಕ್ಕಿರುವ ಸೇಯಾರ್ ಬೆಟ್ಟ ವನ್ನು ಸುತ್ತಿ ಅಲ್ಲಿಂದ ಉತ್ತರಕ್ಕಿರುವ ಕೆಸಾಲೋನಿನ ಯಾರೀಮ್ ಬೆಟ್ಟದ ಪಾರ್ಶ್ವಕ್ಕೂ ಅಲ್ಲಿಂದ ಬೇತ್ಷೆ ಮೆಷಿಗೆ ಇಳಿದು ತಿಮ್ನಾಗೆ ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಪಾರ್ಶ್ವವನ್ನು ಹಿಡಿದು ಶಿಕ್ಕೆರೋನಿಗೂ ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯೆಬ್ನೇಲಿಗೆ ಹೊರಟು ಸಮುದ್ರಕ್ಕೆ ಕಡೆಯಾಗುವದು. ಅದು ಪಶ್ಚಿಮದ ಮೇರೆಯ ದೊಡ್ಡ ಸಮುದ್ರವಾಗಿದೆ. ಇದೇ ಯೂದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.
- Joshua 3:16 ಯೆಹೋಶುವ 3:16ಮೇಲಿನಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಹೊಂದಿದ ಆದಾಮ್ ಪಟ್ಟಣದ ಹತ್ತಿರ ಬಂದು ರಾಶಿಯಾಗಿ ನಿಂತಿತು. ಕೆಳಗಣ ನೀರು ಉಪ್ಪು ಸಮುದ್ರವೆಂಬ ಸಮುದ್ರಕ್ಕೆ ಹರಿದು ಹೋಯಿತು.ಆಗ ಜನರೆಲ್ಲರು ಯೊರ್ದನನ್ನು ದಾಟುವ ವರೆಗೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ಒಣಗಿದ ಭೂಮಿಯ ಮಧ್ಯದಲ್ಲಿ ಧೃಡವಾಗಿ ನಿಂತಿದ್ದರು.
- Exodus 23:31 ವಿಮೋಚನಕಾಂಡ 23:31ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ.
- Ezekiel 47:8 ಯೆಹೆಜ್ಕೇಲನು 47:8ಆಗ ಅವನು ಹೇಳಿದ್ದೇನಂದರೆ, ಈ ನೀರು ಪೂರ್ವ ಸೀಮೆಗೆ ಹೋಗಿ ಒಣಭೂಮಿಗೆ ಇಳಿದು ಸಮುದ್ರ ಸೇರುವವು; ಸಮುದ್ರ ಸೇರಿದ ಮೇಲೆ ಆ ನೀರು ಸಿಹಿಯಾಗುವದು.
- Ezekiel 47:18–23 ಯೆಹೆಜ್ಕೇಲನು 47:18–23ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವು ಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಮೂಡಣ ಸಮುದ್ರದಿಂದ ನೀವು ಅಳೆಯಬೇಕು; ಇದೇ ಮೂಡಣ ಮೇರೆಯಾ ಗಿದೆ. ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರಿನ ವರೆಗೂ ನದಿ ಮೊದಲುಗೊಂಡು ಮಹಾಸಮು ದ್ರದ ವರೆಗೂ ಇರುವದು. ಇದೇ ದಕ್ಷಿಣ ಭಾಗದ ದಕ್ಷಿಣದ ಮೇರೆ. ಪಶ್ಚಿಮದ ಕಡೆಗೂ ಸಹ ಮೇರೆ ಯಿಂದ ಮೊದಲುಗೊಂಡು ಹಮಾತಿನ ಪ್ರದೇಶದ ವರೆಗೂ ಇರುವ ಮಹಾಸಮುದ್ರವು ಪಶ್ಚಿಮದ ಕಡೆ ಗಿದೆ, ಇದೇ ಪಶ್ಚಿಮದ ಮೇರೆ. ಹೀಗೆ ನೀವು ಈ ದೇಶವನ್ನು ಇಸ್ರಾಯೇಲ್ಯರ ಕುಲಗಳ ಪ್ರಕಾರ ಪಾಲುಮಾಡಿ ಕೊಳ್ಳಬೇಕು. ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂತವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ಅನ್ಯಜನರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು; ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದ ವರಾಗಿರಬೇಕು; ಅವರಿಗೆ ಇಸ್ರಾಯೇಲಿನ ಗೋತ್ರಗ ಳೊಳಗೆ ಬಾಧ್ಯತೆಯಾಗಬೇಕು.ಅನ್ಯರು ಯಾವಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಬಾಧ್ಯತೆ ಕೊಡಬೇಕೆಂದು ದೇವರಾದ ಕರ್ತನು ಹೇಳುತ್ತಾನೆ. ಅನ್ಯರು ಯಾವಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಬಾಧ್ಯತೆ ಕೊಡಬೇಕೆಂದು ದೇವರಾದ ಕರ್ತನು ಹೇಳುತ್ತಾನೆ.