Numbers · chapter 4 · verse 3
Numbers 4:3 in Kannada
ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ.
Moovattu varushavaadavarannoo adakke melpatta praayavulla varannoo andare aivattu varushada varege sabheya gudaaradalli kelasa maaduvadakke sainyadalli seruvava rannellaa enisi kehaatana makkala lekkavannu takkolliri.
Numbers 4:3 in English
- King James Version (KJV)
- From thirty years old and upward even until fifty years old, all that enter into the host, to do the work in the tabernacle of the congregation.
- World English Bible (WEB)
- from thirty years old and upward even until fifty years old, all who enter into the service to do the work in the Tent of Meeting.
- American Standard Version (ASV)
- from thirty years old and upward even until fifty years old, all that enter upon the service, to do the work in the tent of meeting.
- Bible in Basic English (BBE)
- All those from thirty to fifty years old who are able to do the work of the Tent of meeting.
- Darby Translation (DBY)
- from thirty years old and upward even unto fifty years old, all that enter into the service, to do the work in the tent of meeting.
- Webster's Bible (WBS)
- From thirty years old and upward, even until fifty years old, all that enter into the host, to do the work in the tabernacle of the congregation.
- Young's Literal Translation (YLT)
- from a son of thirty years and upward, even till a son of fifty years, every one going in to the host, to do work in the tent of meeting.
Read in context
- 1ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ --
- 2ಲೇವಿಯ ಮಕ್ಕಳೊಳಗಿಂದ ಅವರ ತಂದೆಗಳ ಮನೆ ತನದ ಕುಟುಂಬಗಳ ಪ್ರಕಾರವಾಗಿ
- 3ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ.
- 4ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ.
- 5ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ
Cross references
- Numbers 4:23 ಅರಣ್ಯಕಾಂಡ 4:23ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳವರನ್ನು ಸಭೆಯ ಗುಡಾರದಲ್ಲಿ ಸೇವೆಮಾಡುವದಕ್ಕೂ ಅದನ್ನು ಪೂರೈಸು ವದಕ್ಕೂ ಸೇರುವವರೆಲ್ಲರನ್ನೂ ಎಣಿಸು.
- Ephesians 6:10–18 ಎಫೆಸದವರಿಗೆ 6:10–18ಕಡೇದಾಗಿ ನನ್ನ ಸಹೋದರರೇ, ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ. ನೀವು ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧ ಗಳನ್ನು ಧರಿಸಿಕೊಳ್ಳಿರಿ. ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ದುಷ್ಟತನದ ಮೇಲೆಯೂ ಹೋರಾಡುವವರಾಗಿದ್ದೇವೆ. ಆದದ ರಿಂದ ಕೆಟ್ಟ ದಿನದಲ್ಲಿ ನೀವು ಅವುಗಳನ್ನು ಎದುರಿಸಿ ಮಾಡಬೇಕಾದದ್ದೆಲ್ಲವನ್ನು ಮಾಡಿ ನಿಲ್ಲಲು ಶಕ್ತರಾಗು ವಂತೆ ದೇವರ ಸರ್ವಾಯುಧವನ್ನು ನಿಮಗಾಗಿ ತೆಗೆದು ಕೊಳ್ಳಿರಿ. ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ಎದೆಕವಚವನ್ನು ಧರಿಸಿಕೊಳ್ಳಿರಿ.ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ. ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆ ಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ. ಆದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ. ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣ ವನ್ನು ಇಟ್ಟುಕೊಂಡು ಆತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ. ನೀವು ಆತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧ ವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಪರಿಶುದ್ಧರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.
- 2 Kings 11:4–12 2 ಅರಸುಗಳು 11:4–12ಆದರೆ ಏಳನೇ ವರುಷದಲ್ಲಿ ಯೆಹೋಯಾದಾ ವನು ನೂರಕ್ಕೆ ಅಧಿಪತಿಯಾದವರನ್ನೂ ರಾಣುವೆಯ ಅಧಿಪತಿಗಳನ್ನೂ ಕಾವಲುಗಾರರ ಸಹಿತವಾಗಿ ಕರೆಯ ಕಳುಹಿಸಿ ತನ್ನ ಬಳಿಗೆ ಕರ್ತನ ಮನೆಗೆ ಕರಕೊಂಡು ಅವರ ಸಂಗಡ ಒಡಂಬಡಿಕೆಯನ್ನು ಮಾಡಿ ಕರ್ತನ ಮನೆಯಲ್ಲಿ ಅವರಿಂದ ಪ್ರಮಾಣ ತೆಗೆದುಕೊಂಡು ಅವರಿಗೆ ಅರಸನ ಮಗನನ್ನು ತೋರಿಸಿ ಅವರಿಗೆ ಆಜ್ಞಾಪಿಸಿ--ನೀವು ಮಾಡಬೇಕಾದದ್ದೇನಂದರೆ ಸಬ್ಬತ್ ದಿವಸದಲ್ಲಿ ಪ್ರವೇಶಿಸುವವರಾದ ನಿಮ್ಮೊಳಗಿನ ಮೂರನೇ ಭಾಗವು ಅರಸನ ಮನೆಯ ಕಾವಲಿನ ಮೇಲೆ ಕಾವಲುಗಾರರಾಗಿ ಇರ್ರಿ. ಮೂರನೇ ಭಾಗವು ಸೂರ್ ಎಂಬ ಬಾಗಲ ಬಳಿಯಲ್ಲಿಯೂ ಮತ್ತೊಂದು ಮೂರನೇ ಭಾಗವು ಕಾವಲಿನ ಹಿಂದೆ ಇರುವ ಬಾಗಲ ಬಳಿಯಲ್ಲಿಯೂ ಇರ್ರಿ. ಹೀಗೆಯೇ ಮನೆಯ ಕಾವಲು ಮುರಿಯಲ್ಪಡದ ಹಾಗೆ ಅದನ್ನು ಕಾಯಿರಿ. ಇದಲ್ಲದೆ ಸಬ್ಬತ್ ದಿವಸದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಅರಸನ ಬಳಿಯಲ್ಲಿ ಕರ್ತನ ಮನೆಯ ಕಾವಲು ಕಾಯುವವರಾಗಿರ್ರಿ. ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡುಕೊಂಡು ಅರಸ ನನ್ನು ಸುತ್ತಿಕೊಂಡಿರ್ರಿ; ಯಾವನಾದರೂ ಸಾಲುಗಳಲ್ಲಿ ಬಂದರೆ ಅವನು ಕೊಲೆಯಾಗಲಿ. ಆದರೆ ಅರಸನು ಹೊರಗೆ ಹೋಗುವಾಗಲೂ ಒಳಗೆ ಬರುವಾಗಲೂ ನೀವು ಅವನ ಸಂಗಡ ಇರ್ರಿ. ಹಾಗೆಯೇ ನೂರಕ್ಕೆ ಅಧಿಪತಿಯಾದವರು ಯಾಜಕನಾದ ಯೆಹೋಯಾದಾ ವನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್ ದಿವಸದಲ್ಲಿ ಪ್ರವೇಶಿಸಬೇಕಾದ ತನ್ನ ಜನರನ್ನೂ ಸಬ್ಬತ್ ದಿವಸದಲ್ಲಿ ಹೊರಗೆ ಹೋಗಲು ಬೇಕಾದವರನ್ನೂ ಯಾಜಕನಾದ ಯೆಹೋ ಯಾದಾವನ ಬಳಿಗೆ ಕರಕೊಂಡು ಬಂದರು. ಆಗ ಯಾಜಕನು ಕರ್ತನ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ನೂರಕ್ಕೆ ಅಧಿಪತಿಯಾದವರಿಗೆ ಕೊಟ್ಟನು. ಕಾವಲುಗಾರರಲ್ಲಿ ಪ್ರತಿ ಮನುಷ್ಯನು ತನ್ನ ಆಯುಧಗಳನ್ನು ಕೈಯಲ್ಲಿ ಹಿಡುಕೊಂಡು ಬಲಿಪೀಠದ ಬಳಿಯಲ್ಲಿಯೂ ಆಲಯದ ಬಳಿಯಲ್ಲಿಯೂ ಆಲಯದ ಬಲಪಾರ್ಶ್ವ ಮೊದಲು ಗೊಂಡು ಎಡಪಾರ್ಶ್ವದ ವರೆಗೂ ಅರಸನ ಸುತ್ತಲೂ ನಿಂತುಕೊಂಡರು. ಆಗ ಅವನು ಅರಸನ ಮಗನನ್ನು ಹೊರಗೆ ಕರತಂದು ಕಿರೀಟವನ್ನು ಅವನ ತಲೆಯ ಮೇಲೆ ಇರಿಸಿ ಸಾಕ್ಷಿಯನ್ನು ಕೊಟ್ಟನು. ಅವರು ಅವನನ್ನು ಅರಸನಾಗ ಮಾಡಿ ಅಭಿಷೇಕಿಸಿ ಚಪ್ಪಾಳೆ ಹೊಡೆದುಅರಸನು ಬಾಳಲಿ ಅಂದರು.
- 1 Chronicles 23:3–5 1 ಪೂರ್ವಕಾಲವೃತ್ತಾಂತ 23:3–5ಲೇವಿಯರು ಮೂವತ್ತು ವರುಷ ಪ್ರಾಯದವರು ಮೊದಲುಗೊಂಡು ಲೆಕ್ಕಿಸಲ್ಪಟ್ಟಿದ್ದರು. ಅವರ ಪುರುಷರ ಲೆಕ್ಕವು ತಲೆ ತಲೆಯ ಪ್ರಕಾರ ಮೂವತ್ತೆಂಟು ಸಾವಿರ ವಾಗಿತ್ತು. ಇವರಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಕರ್ತನ ಮನೆಯ ಕೆಲಸವನ್ನು ನಡಿಸುವವರಾಗಿದ್ದರು; ಆರು ಸಾವಿರ ಮಂದಿ ಪಾರುಪತ್ಯಗಾರರೂ ನ್ಯಾಯಾಧಿ ಪತಿಗಳೂ ಆಗಿದ್ದರು. ಇದಲ್ಲದೆ ನಾಲ್ಕು ಸಾವಿರ ಮಂದಿ ದ್ವಾರಪಾಲಕರಾಗಿದ್ದರು; ನಾಲ್ಕು ಸಾವಿರ ಮಂದಿ ಸ್ತುತಿಸುವದಕ್ಕೆ ದಾವೀದನು ಸಿದ್ಧಮಾಡಿದ ವಾದ್ಯಗಳಿಂದ ಕರ್ತನನ್ನು ಸ್ತುತಿಸಿದರು.
- Luke 3:23 ಲೂಕನು 3:23ಯೇಸು ಹೆಚ್ಚು ಕಡಿಮೆ ಮೂವತ್ತು ವರುಷದ ವನಾದನು; ಆತನು ಯೋಸೇಫನ ಮಗನೆಂದು (ಎಣಿಸಲ್ಪಟ್ಟನು); ಯೋಸೇಫನು ಹೇಲೀಯ ಮಗನು;
- 1 Chronicles 23:24–32 1 ಪೂರ್ವಕಾಲವೃತ್ತಾಂತ 23:24–32ಇವರು ತಮ್ಮ ಪಿತೃಗಳ ವಂಶದ ಪ್ರಕಾರವಾಗಿ ಲೇವಿಯ ಕುಮಾರರಾಗಿದ್ದರು; ಇವರು ತಮ್ಮ ಹೆಸರು ಗಳಿಂದಲೂ ತಮ್ಮ ತಲೆಗಳಿಂದಲೂ ಎಣಿಸಲ್ಪಟ್ಟಿದ್ದ ತಮ್ಮ ಪಿತೃಗಳಲ್ಲಿ ಮುಖ್ಯಸ್ಥರಾಗಿದ್ದರು; ಇಪ್ಪತ್ತು ವರುಷ ಪ್ರಾಯದವರು ಮೊದಲುಗೊಂಡು ಕರ್ತನ ಮನೆಯ ಸೇವೆಗೋಸ್ಕರ ಕೆಲಸ ಮಾಡಿದರು. ಅವರು ಯುಗ ಯುಗಾಂತರಕ್ಕೂ ಇಸ್ರಾಯೇಲಿನಲ್ಲಿ ವಾಸಿಸುವ ಹಾಗೆ ಇಸ್ರಾಯೇಲಿನ ದೇವರಾದ ಕರ್ತನು ತನ್ನ ಜನರಿಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಎಂದು ದಾವೀದನು ಹೇಳಿ ಲೇವಿಯರನ್ನು ಕುರಿತು ಅವರು ಗುಡಾರವನ್ನೂ ಅದರ ಸೇವೆಗೋಸ್ಕರ ಅದರ ಪಾತ್ರೆಗಳನ್ನೂ ಇನ್ನು ಮೇಲೆ ಹೊರುವ ಕೆಲಸವಿಲ್ಲವೆಂದು ಹೇಳಿದ್ದನು. ದಾವೀದನ ಕಡೇಮಾತುಗಳ ಪ್ರಕಾರ ಲೇವಿಯರು ಇಪ್ಪತ್ತುವರುಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟ ಪ್ರಾಯದವರು ಲೆಕ್ಕಿಸಲ್ಪಟ್ಟಿದ್ದರು. ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ ಕರ್ತನ ಮಂದಿರದ ಸೇವೆಯ ಕಾರ್ಯದಲ್ಲಿ ಸಮ್ಮುಖದ ರೊಟ್ಟಿ ಅರ್ಪಣೆ ಬಲಿಯ ನಯವಾದ ಹಿಟ್ಟು ಹುಳಿ ಇಲ್ಲದ ರೊಟ್ಟಿ ಬಾಂಡ್ಲಿಯಲ್ಲಿ ಮಾಡಿದ್ದ ಎಣ್ಣೆಯಲ್ಲಿ ಕರಿದಿದ್ದಕ್ಕೋಸ್ಕರವೂ ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳಿಗೆ ನೇಮಕವಾಗಿತ್ತು. ಇದಲ್ಲದೆ ಉದಯಕಾಲದ ಲ್ಲಿಯೂ ಸಾಯಂಕಾಲದಲ್ಲಿಯೂ ನಿಂತು ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಕರ್ತನ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿವಸಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವದಕ್ಕೂಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು. ಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.
- Numbers 8:24–26 ಅರಣ್ಯಕಾಂಡ 8:24–26ಲೇವಿಯರಿಗೆ ಸಂಬಂಧ ಪಟ್ಟದ್ದು ಇದಾಗಿದೆ; ಇಪ್ಪತ್ತೈದು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸಭೆಯ ಗುಡಾರದ ಸೇವೆಗಾಗಿ ಒಳಗೆ ಹೋಗುವರು. ಆದರೆ ಐವತ್ತು ವರುಷದವ ರಾಗಿ ಸೇವೆಯನ್ನು ಬಿಟ್ಟುಬಿಟ್ಟವರು ಇನ್ನು ಮೇಲೆ ಸೇವೆಮಾಡಬಾರದು.ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು. ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.
- Numbers 16:9 ಅರಣ್ಯಕಾಂಡ 16:9ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ?
- 2 Chronicles 23:1–11 2 ಪೂರ್ವಕಾಲವೃತ್ತಾಂತ 23:1–11ಏಳನೇ ವರುಷದಲ್ಲಿ ಯೆಹೋಯಾದನು ತನ್ನನ್ನು ಬಲಪಡಿಸಿಕೊಂಡು ಶತಾಧಿಪತಿ ಗಳಾಗಿರುವ ಯೆರೋಹಾಮನ ಮಗನಾದ ಅಜರ್ಯ ನನ್ನೂ ಯೆಹೋಹಾನಾನನ ಮಗನಾದ ಇಷ್ಮಾಯೇಲ ನನ್ನೂ ಓಬೇದನ ಮಗನಾದ ಅಜರ್ಯನನ್ನೂ ಅದಾ ಯನ ಮಗನಾದ ಮಾಸೆಯನನ್ನೂ ಜಿಕ್ರಿಯ ಮಗನಾದ ಎಲೀಷಾಫಾಟನನ್ನೂ ಕರಕೊಂಡು ಅವರ ಸಂಗಡ ಒಡಂಬಡಿಕೆ ಮಾಡಿದನು. ಇವರು ಯೆಹೂದವನ್ನು ಸಂಚರಿಸಿ ಯೆಹೂದದ ಸಮಸ್ತ ಪಟ್ಟಣಗಳಿಂದ ಲೇವಿ ಯರನ್ನೂ ಇಸ್ರಾಯೇಲಿನ ಮುಖ್ಯಸ್ಥರಾದ ಪಿತೃಗಳನ್ನೂ ಕೂಡಿಸಿಕೊಂಡು ಯೆರೂಸಲೇಮಿಗೆ ಬಂದರು. ಆಗ ಸಭೆಯವರೆಲ್ಲರು ದೇವರ ಆಲಯದಲ್ಲಿ ಅರ ಸನ ಸಂಗಡ ಒಡಂಬಡಿಕೆ ಮಾಡಿದರು. ಅವರಿಗೆಇಗೋ, ದಾವೀದನ ಕುಮಾರರನ್ನು ಕುರಿತು ಕರ್ತನು ಹೇಳಿದ ಹಾಗೆ ಅರಸನ ಕುಮಾರನು ಆಳುವನು. ನೀವು ಮಾಡಬೇಕಾದ ಕಾರ್ಯವೇನಂದರೆ, ಸಬ್ಬತ್ತಿ ನಲ್ಲಿ ಪ್ರವೇಶಿಸುವ ಯಾಜಕರೂ ಲೇವಿಯರೂ ಆದ ನಿಮ್ಮಲ್ಲಿರುವ ಮೂರನೇ ಪಾಲು ದ್ವಾರಪಾಲಕರಾಗಿರ ಬೇಕು. ಮೂರನೇ ಪಾಲು ಅರಸನ ಬಳಿಯಲ್ಲಿಯೂ ಇನ್ನೊಂದು ಮೂರನೇ ಪಾಲು ಅಸ್ತಿವಾರದ ಬಾಗಲ ಬಳಿಯಲ್ಲಿಯೂ ಸಮಸ್ತ ಜನರು ಕರ್ತನ ಆಲಯದ ಅಂಗಳಗಳಲ್ಲಿಯೂ ಇರಬೇಕು. ಆದರೆ ಯಾಜಕರೂ ಲೇವಿಯರಲ್ಲಿ ಸೇವೆ ಮಾಡುವವರೂ ಅಲ್ಲದೆ ಮತ್ತ್ಯಾರೂ ಕರ್ತನ ಆಲಯದಲ್ಲಿ ಪ್ರವೇಶಿಸಕೂಡದು. ಅವರು ಪರಿಶುದ್ಧರಾದದರಿಂದ ಒಳಗೆ ಪ್ರವೇಶಿಸಲಿ. ಆದರೆ ಸಮಸ್ತ ಜನರು ಕರ್ತನ ಕಾವಲನ್ನು ಕಾಯಲಿ. ಇದಲ್ಲದೆ ಲೇವಿಯರಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡುಕೊಂಡು ಅರಸನ ಸುತ್ತಲೂ ಇರಬೇಕು. ಇವರ ಹೊರತು ಯಾವನಾ ದರೂ ಆಲಯದಲ್ಲಿ ಬಂದರೆ ಅವನು ಕೊಲ್ಲಲ್ಪಡಲಿ. ಅರಸನು ಒಳಗೆ ಬರುವಾಗಲೂ ಹೊರಗೆ ಹೋಗು ವಾಗಲೂ ನೀವು ಅವನ ಸಂಗಡ ಇರ್ರಿ ಅಂದನು. ಹೀಗೆಯೇ ಲೇವಿಯರೂ ಸಮಸ್ತ ಯೆಹೂದದವರೂ ಯಾಜಕನಾದ ಯೆಹೋಯಾದನು ಆಜ್ಞಾಪಿಸಿದ ಎಲ್ಲಾ ದರ ಪ್ರಕಾರ ಮಾಡಿ ಪ್ರತಿ ಮನುಷ್ಯನು ಸಬ್ಬತ್ತಿನಲ್ಲಿ ಒಳಗೆ ಬರಬೇಕಾದ ತನ್ನ ಮನುಷ್ಯರನ್ನೂ ಸಬ್ಬತ್ತಿ ನಲ್ಲಿ ಹೊರಟು ಹೋಗಬೇಕಾದವರನ್ನೂ ತೆಗೆದು ಕೊಂಡನು. ಯಾಜಕನಾದ ಯೆಹೋಯಾದನು ಅವ ರನ್ನು ಕಳುಹಿಸಿ ಬಿಡಲಿಲ್ಲ. ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸ ನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ಡಾಲುಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು ಅರಸನ ಸುತ್ತಲೂ ಇರುವದಕ್ಕೆ ಬಲಿಪೀಠಕ್ಕೂ ಆಲಯಕ್ಕೂ ಎದುರಾಗಿ ಆಲಯದ ಬಲಪಾರ್ಶ್ವ ಮೊದಲುಗೊಂಡು ಆಲಯದ ಎಡಪಾರ್ಶ್ವದ ವರೆಗೂ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ತನ್ನ ಆಯುಧ ಹಿಡಿದವರಾಗಿ ಸಮಸ್ತ ಜನರನ್ನೂ ಇರಿಸಿದನು. ಆಗ ಅವರು ಅರಸನ ಮಗನನ್ನು ಹೊರಕ್ಕೆ ಕರತಂದು ಅವನ ತಲೆಯ ಮೇಲೆ ಕಿರೀಟ ವನ್ನಿಟ್ಟು ಸಾಕ್ಷಿಯನ್ನು ಕೊಟ್ಟು ಅವನನ್ನು ಅರಸನನ್ನಾಗಿ ಮಾಡಿದರು. ಯೆಹೋಯಾದನೂ ಅವನ ಮಕ್ಕಳೂ ಅವನನ್ನು ಅಭಿಷೇಕಿಸಿ--ದೇವರು ಅರಸನನ್ನು ರಕ್ಷಿಸಲಿ ಅಂದರು.
- Genesis 41:46 ಆದಿಕಾಂಡ 41:46ಯೋಸೇಫನು ಐಗುಪ್ತದ ಅರಸನಾದ ಫರೋ ಹನ ಮುಂದೆ ನಿಂತಾಗ ಮೂವತ್ತು ವರುಷದ ವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶವನ್ನೆಲ್ಲಾ ಸಂಚರಿಸಿದನು.
- 2 Corinthians 10:3–4 2 ಕೊರಿಂಥದವರಿಗೆ 10:3–4ನಾವು ಶರೀರದಲ್ಲಿ ನಡ ಕೊಳ್ಳುವವರಾದರೂ ಶರೀರ ಪ್ರಕಾರವಾಗಿ ಯುದ್ಧ ಮಾಡುವವರಲ್ಲ. (ನಾವು ಉಪಯೋಗಿಸುವ ಯುದ್ಧಾಯುಧಗಳು ಶರೀರ ಸಂಬಂಧವಾದ ಆಯುಧ ಗಳಲ್ಲ; ಅವು ದೇವರ ಮೂಲಕ ಬಲವಾಗಿದ್ದು ಬಲ ವಾದ ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ).
- Ezra 3:8 ಎಜ್ರನು 3:8ಅವರು ಯೆರೂಸಲೇಮಿನಲ್ಲಿದ್ದ ದೇವರ ಆಲಯಕ್ಕೆ ಬಂದ ಎರಡನೇ ವರುಷದ ಎರ ಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾ ಬೆಲನೂ ಯೋಚಾದಾಕನ ಮಗನಾದ ಯೇಷೂ ವನೂ ಉಳಿದ ಅವರ ಸಹೋದರರಾದ ಯಾಜಕರೂ ಲೇವಿಯರೂ ಸೆರೆಯಿಂದ ಯೆರೂಸಲೇಮಿಗೆ ಬಂದ ಎಲ್ಲರೂ ಪ್ರಾರಂಭಿಸಿ ಇಪ್ಪತ್ತು ವರುಷ ಪ್ರಾಯಕ್ಕೆ ಹೆಚ್ಚಿದ ಲೇವಿಯರನ್ನು ಕರ್ತನ ಆಲಯದ ಕೆಲಸ ನಡಿಸುವದಕ್ಕೆ ಇಟ್ಟರು.
Original words (Hebrew)
- thirty · H7970שְׁלוֹשִׁים shᵉlôwshîym
- years · H8141שָׁנֶה shâneh
- old · H1121בֵּן bên
- upward · H4605מַעַל maʻal
- fifty · H2572חֲמִשִּׁים chămishshîym
- years · H8141שָׁנֶה shâneh
- old · H1121בֵּן bên
- enter · H935בּוֹא bôwʼ
- host · H6635צָבָא tsâbâʼ
- do · H6213עָשָׂה ʻâsâh
- work · H4399מְלָאכָה mᵉlâʼkâh
- tabernacle · H168אֹהֶל ʼôhel
- congregation · H4150מוֹעֵד môwʻêd