Numbers · chapter 4 · verse 5
Numbers 4:5 in Kannada
ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ
Paaleyavu horadu vaaga aaronanoo avana makkaloo olage hogi tereyannu ilisi adarinda saakshiya manjooshavannu muchchi
Numbers 4:5 in English
- King James Version (KJV)
- And when the camp setteth forward, Aaron shall come, and his sons, and they shall take down the covering vail, and cover the ark of testimony with it:
- World English Bible (WEB)
- When the camp moves forward, Aaron shall go in with his sons; and they shall take down the veil of the screen, cover the ark of the Testimony with it,
- American Standard Version (ASV)
- when the camp setteth forward, Aaron shall go in, and his sons, and they shall take down the veil of the screen, and cover the ark of the testimony with it,
- Bible in Basic English (BBE)
- When all the people go forward, Aaron is to go in with his sons, and take down the veil of the curtain, covering the ark of witness with it;
- Darby Translation (DBY)
- And when the camp setteth forward, Aaron and his sons shall go in, and they shall take down the veil of separation and cover the ark of testimony with it;
- Webster's Bible (WBS)
- And when the camp moveth forward, Aaron shall come, and his sons, and they shall take down the covering vail, and cover the ark of testimony with it:
- Young's Literal Translation (YLT)
- that Aaron and his sons have come in, in the journeying of the camp, and have taken down the vail of the hanging, and have covered with it the ark of the testimony;
Read in context
- 3ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ.
- 4ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ.
- 5ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ
- 6ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. 7
- 7ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು.
Cross references
- Hebrews 9:3 ಇಬ್ರಿಯರಿಗೆ 9:3ಎರಡನೆಯ ತೆರೆಯ ಆಚೆಯಲ್ಲಿ ಅತಿಪವಿತ್ರ ಸ್ಥಳವೆನಿಸಿಕೊಳ್ಳುವ ಇನ್ನೊಂದು ಗುಡಾರವಿತ್ತು;
- Matthew 27:51 ಮತ್ತಾಯನು 27:51ಆಗ ಇಗೋ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು; ಭೂಮಿಯು ಕಂಪಿಸಿತು; ಮತ್ತು ಬಂಡೆ ಗಳು ಸೀಳಿದವು;
- Hebrews 10:20 ಇಬ್ರಿಯರಿಗೆ 10:20ಹೇಗೆಂದರೆ, ಆತನು ನಮಗೋಸ್ಕರ ಪ್ರತಿಷ್ಠಿಸಿದ ಮತ್ತು ಹೊಸ ಜೀವವುಳ್ಳ ದಾರಿಯಲ್ಲಿ ಆತನ ಶರೀರವೆಂಬ ತೆರೆಯ ಮುಖಾಂತರವೇ ಇದಾಯಿತು.
- Numbers 4:15 ಅರಣ್ಯಕಾಂಡ 4:15ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ.
- Exodus 26:31–33 ವಿಮೋಚನಕಾಂಡ 26:31–33ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು. ಅದನ್ನು ಬಂಗಾರದಿಂದ ಹೊದಿಸಿದ ಬಂಗಾರದ ಕೊಂಡಿಗಳಿದ್ದ ಬೆಳ್ಳಿಯ ನಾಲ್ಕು ಕುಳಿಗಳಲ್ಲಿ ಊರಿಕೊಂಡಿರುವ ನಾಲ್ಕು ಜಾಲೀ ಮರದ ಸ್ತಂಭಗಳಲ್ಲಿ ಅದನ್ನು ತೂಗುಹಾಕಬೇಕು. ಆ ತೆರೆಯನ್ನು ಕೊಂಡಿಗಳ ಕೆಳಗೆ ತೂಗುಹಾಕಿ ತೆರೆಯೊಳಗೆ ಸಾಕ್ಷಿ ಹಲಗೆಗಳ ಮಂಜೂಷವನ್ನು ತರ ಬೇಕು. ಪರಿಶುದ್ಧ ಸ್ಥಳವನ್ನೂ ಅತಿಪರಿಶುದ್ಧ ಸ್ಥಳವನ್ನೂ ಆ ತೆರೆಯು ವಿಂಗಡಿಸುವದು.
- Numbers 2:16–17 ಅರಣ್ಯಕಾಂಡ 2:16–17ರೂಬೇನನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರವರ ಸೈನ್ಯಗಳ ಪ್ರಕಾರ ಲಕ್ಷದ ಐವತ್ತೊಂದು ಸಾವಿರದ ನಾನೂರಐವತ್ತು; ಅವರು ಎರಡನೆಯದಾಗಿ ಹೊರಡತಕ್ಕದ್ದು. ತರುವಾಯ ಸಭೆಯ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಕಡೆ ಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.
- Exodus 37:1–9 ವಿಮೋಚನಕಾಂಡ 37:1–9ಬೆಚಲೇಲನು ಜಾಲೀ ಮರದಿಂದಎರಡುವರೆ ಮೊಳ ಉದ್ದ, ಒಂದುವರೆ ಮೊಳ ಅಗಲ, ಒಂದುವರೆ ಮೊಳ ಎತ್ತರವಾಗಿರುವ ಮಂಜೂಷವನ್ನು ಮಾಡಿದನು. ಅದನ್ನು ಚೊಕ್ಕ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ ಅದರ ಸುತ್ತಲೂ ಚಿನ್ನದ ಕಿರೀಟವನ್ನು ಮಾಡಿದನು. ಅವನು ಅದರ ನಾಲ್ಕು ಮೂಲೆಗಳಿಗೆ ನಾಲ್ಕು ಉಂಗುರಗಳನ್ನು ಎರಕ ಹೊಯ್ದನು; ಇದಲ್ಲದೆ ಅದರ ಒಂದು ಮಗ್ಗಲಿಗೆ ಎರಡು ಇನ್ನೊಂದು ಮಗ್ಗಲಿಗೆ ಎರಡು ಉಂಗುರಗಳನ್ನು ಎರಕ ಹೊಯ್ದನು. ಅವನು ಜಾಲೀ ಮರದಿಂದ ಕೋಲುಗಳನ್ನು ಮಾಡಿ ಚಿನ್ನದಿಂದ ಅವುಗಳನ್ನು ಹೊದಿ ಸಿದನು. ಮಂಜೂಷವನ್ನು ಹೊರುವದಕ್ಕಾಗಿ ಕೋಲು ಗಳನ್ನು ಮಂಜೂಷದ ಭಾಗಗಳಲ್ಲಿರುವ ಉಂಗುರ ಗಳಲ್ಲಿ ಸೇರಿಸಿದನು. ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಇರುವ ಕರುಣಾಸನವನ್ನು ಚೊಕ್ಕ ಬಂಗಾರ ದಿಂದ ಮಾಡಿದನು. ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಚಿನ್ನದ ಕೆರೂಬಿಗಳನ್ನು ಮಾಡಿದನು. ಅವು ಒಂದೇ ತುಂಡಿನಲ್ಲಿ ಹೊಡೆದು ಮಾಡಿದ್ದಾಗಿದ್ದವು. ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನು ಇನ್ನೊಂದು ಬದಿಯ ಕೊನೆಯಲ್ಲಿ ಇನ್ನೊಂದು ಕೆರೂಬಿ ಯನ್ನು ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯರನ್ನು ಮಾಡಿದನು. ಆ ಕೆರೂಬಿ ಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಹರಡಿಕೊಂಡು ಕರುಣಾಸನವನ್ನು ಮುಚ್ಚಿದಂತಿದ್ದವು, ಆ ಕೆರೂಬಿಯರ ಮುಖಗಳು ಒಂದನ್ನೊಂದು ನೋಡುತ್ತಿರುವಂತೆಯೂ ಕರುಣಾಸನವನ್ನು ನೋಡುತ್ತಿರುವಂತೆಯೂ ಇದ್ದವು.
- Exodus 25:10–22 ವಿಮೋಚನಕಾಂಡ 25:10–22ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಇರುವ ಮಂಜೂಷವನ್ನು ಜಾಲೀ ಮರದಿಂದ ಮಾಡಬೇಕು. ಅದನ್ನು ಶುದ್ಧ ಬಂಗಾರದಿಂದ ಹೊರಗೂ ಒಳಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ಗೋಟು ಮಾಡಬೇಕು. ಅದಕ್ಕೆ ಬಂಗಾರದ ನಾಲ್ಕು ಬಳೆಗಳನ್ನು ಎರಕಹೊಯ್ದು ಅದರ ನಾಲ್ಕು ಮೂಲೆಗಳಲ್ಲಿ ಅಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು. ಜಾಲೀ ಮರದ ಕೋಲುಗಳನ್ನು ಬಂಗಾರದಿಂದ ಹೊದಿಸ ಬೇಕು, ಮಂಜೂಷವನ್ನು ಹೊತ್ತುಕೊಂಡು ಹೋಗು ವದಕ್ಕಾಗಿ ಕೋಲುಗಳನ್ನು ಮಂಜೂಷದ ಉಭಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು. ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡ ಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯ ಬಾರದು. ನಾನು ನಿನಗೆ ಕೊಡುವ ಸಾಕ್ಷಿಯ ಹಲಗೆ ಗಳನ್ನು ಮಂಜೂಷದಲ್ಲಿ ಇಡಬೇಕು. ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು. ಬಂಗಾರದಿಂದ ಎರಡು ಕೆರೂಬಿಗಳನ್ನು ನಕ್ಷೆಯ ಕೆಲಸದಿಂದ ಕರುಣಾ ಸನದ ಎರಡು ಬದಿಗಳಲ್ಲಿ ಮಾಡಿಸಬೇಕು. ಈ ಬದಿಯಲ್ಲಿ ಒಂದು ಕೆರೂಬಿಯನ್ನೂ ಆ ಬದಿಯಲ್ಲಿ ಮತ್ತೊಂದು ಕೆರೂಬಿಯನ್ನೂ ಹೀಗೆ ಕರುಣಾಸನದ ಮೇಲೆಯೇ ಎರಡೂ ಬದಿಗಳಲ್ಲಿ ಮಾಡಬೇಕು. ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿದವುಗ ಳಾಗಿಯೂ ರೆಕ್ಕೆಗಳಿಂದ ಕರುಣಾಸನವನ್ನು ಮುಚ್ಚುವವು ಗಳಾಗಿಯೂ ಒಂದರ ಮುಖವನ್ನು ಒಂದು ನೋಡು ವವುಗಳಾಗಿಯೂ ಇರಬೇಕು. ಕೆರೂಬಿಗಳ ಮುಖಗಳು ಕರುಣಾಸನದ ಕಡೆಗೆ ತಿರುಗಿರಬೇಕು. ಕರುಣಾಸನ ವನ್ನು ಮಂಜೂಷದ ಮೇಲೆ ಇಡಬೇಕು ಮತ್ತು ನೀನು ಮಂಜೂಷದಲ್ಲಿ ನಾನು ನಿನಗೆ ಕೊಡುವ ಸಾಕ್ಷಿ ಹಲಗೆಗಳನ್ನು ಇಡಬೇಕು. ನಾನು ಅಲ್ಲಿ ನಿನ್ನನ್ನು ಸಂಧಿಸಿ ಕರುಣಾಸನದ ಮೇಲಿನಿಂದ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲ್ ಮಕ್ಕಳ ವಿಷಯದಲ್ಲಿ ಆಜ್ಞಾಪಿಸುವವು ಗಳನ್ನೆಲ್ಲಾ ನಿನಗೆ ತಿಳಿಸುವೆನು.
- 2 Samuel 6:2–9 2 ಸಮುವೇಲನು 6:2–9ಕೆರೂಬಿಗಳ ಮಧ್ಯದಲ್ಲಿ ವಾಸವಾಗಿ ರುವ ಸೈನ್ಯಗಳ ಕರ್ತನೆಂಬ ಹೆಸರುಳ್ಳ ದೇವರ ಮಂಜೂ ಷವನ್ನು ಯೆಹೂದದ ಬಾಳಾದಿಂದ ತರುವದಕ್ಕೆ ಹೊರಟನು. ಆಗ ಅವರು ಗಿಬ್ಯದಲ್ಲಿರುವ ಅಬೀನಾ ದಾಬನ ಮನೆಯೊಳಗಿಂದ ದೇವರ ಮಂಜೂಷವನ್ನು ತೆಗೆದುಕೊಂಡು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಆ ಹೊಸ ಬಂಡಿಯನ್ನು ನಡಿಸಿದರು. ಗಿಬ್ಯ ದಲ್ಲಿದ್ದ ಅಬೀನಾದಾಬನ ಮನೆಯೊಳಗಿಂದ ಅದನ್ನು ಹೊರಗೆ ತಂದು ಅವರು ಅದರ ಸಂಗಡ ಹೋಗು ತ್ತಿರುವಾಗ ಅಹಿಯೋವನು ಮಂಜೂಷದ ಮುಂದೆ ನಡೆದನು. ದಾವೀದನೂ ಇಸ್ರಾಯೇಲ್ ಮನೆ ಯವರೆಲ್ಲರೂ ತುರಾಯಿ ಮರದಿಂದ ಮಾಡಲ್ಪಟ್ಟ ಸಕಲ ವಾದ್ಯಗಳಾದ ಕಿನ್ನರಿಗಳನ್ನೂ ವೀಣೆಗಳನ್ನೂ ದಮ್ಮಡಿಗಳನ್ನೂ ಸ್ವರಮಂಡಲಗಳನ್ನೂ ತಾಳಗಳನ್ನೂ ಕರ್ತನ ಮುಂದೆ ಬಾರಿಸಿಕೊಂಡು ಹೋದರು. ಅವರು ನಾಕೋನನ ಕಣದ ಬಳಿಗೆ ಬಂದಾಗ ಉಜ್ಜನು ದೇವರ ಮಂಜೂಷವನ್ನು ಹಿಡಿಯುವದಕ್ಕೆ ತನ್ನ ಕೈಚಾಚಿ ಅದನ್ನು ಹಿಡಿದನು. ಯಾಕಂದರೆ ಎತ್ತುಗಳು ಎಡವಿದವು. ಆಗ ಕರ್ತನ ಕೋಪವು ಉಜ್ಜನ ಮೇಲೆ ಉರಿಯಿತು; ದೇವರು ಅವನ ಅಪ ರಾಧಕ್ಕೋಸ್ಕರ ಅವನನ್ನು ಹೊಡೆದನು; ಅಲ್ಲಿ ಅವನು ದೇವರ ಮಂಜೂಷದ ಬಳಿಯಲ್ಲಿ ಸತ್ತನು. ಕರ್ತನು ಉಜ್ಜನನ್ನು ಹರಿದುಬಿಟ್ಟಿದ್ದರಿಂದ ದಾವೀದನು ವ್ಯಥೆ ಗೊಂಡು ಆ ಸ್ಥಳಕ್ಕೆ ಇಂದಿನ ವರೆಗೂ ಪೆರೆಚುಜ್ಜಾ ಎಂದು ಹೆಸರಿಟ್ಟನು. ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು.
- Exodus 36:35 ವಿಮೋಚನಕಾಂಡ 36:35ನೀಲಿ, ಧೂಮ್ರ, ರಕ್ತವರ್ಣ, ನಯವಾಗಿ ಹೊಸೆದ ನಾರುಗಳಿಂದ ತೆರೆಯನ್ನು ಮಾಡಿದನು. ಅದರ ಮೇಲೆ ಕುಶಲ ಕೆಲಸದಿಂದ ಕೆರೂಬಿಗಳನ್ನು ಮಾಡಿದನು.
- Isaiah 25:7 ಯೆಶಾಯ 25:7ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ ಸಕಲ ದೇಶಿಯರ ಮೇಲೆ ಹರಡಿರುವ ತೆರೆಯನ್ನೂ ಇದೇ ಪರ್ವತದಲ್ಲಿ (ನಾಶ) ತೆಗೆದುಹಾಕುವನು.
- Numbers 3:27–32 ಅರಣ್ಯಕಾಂಡ 3:27–32ಅಮ್ರಾಮಿಯರ ಕುಟುಂಬವೂ ಇಚ್ಹಾರರ ಕುಟುಂಬವೂ ಹೆಬ್ರೋನಿಯರ ಕುಟುಂಬವೂ ಉಜ್ಜೀ ಯೇಲರ ಕುಟುಂಬವೂ ಇವು ಕೆಹಾತರ ಕುಟುಂಬ ಗಳು. ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕಾಪಾಡು ವವರ ಲೆಕ್ಕ ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರೂ ಎಂಟು ಸಾವಿರದ ಆರು ನೂರು. ಕೆಹಾತನ ಕುಮಾರರ ಕುಟುಂಬಗಳು ಗುಡಾರದ ಬಳಿಯಲ್ಲಿ ದಕ್ಷಿಣದ ಕಡೆಗೆ ಇಳುಕೊಳ್ಳಬೇಕು. ಉಜ್ಜೀಯೇಲನ ಕುಮಾರನಾದ ಎಲೀಚಾಫಾನು ಕೆಹಾತರ ಕುಟುಂಬಗಳ ತಂದೆಯ ಮನೆಗೆ ಮುಖ್ಯಸ್ಥನು. ಅವರ ಅಪ್ಪಣೆಯೇನಂದರೆ: ಮಂಜೂಷವೂ ಮೇಜೂ ದೀಪಸ್ತಂಭವೂ ಬಲಿಪೀಠ ಗಳೂ ಅವರು ಸೇವೆಮಾಡುವ ಪರಿಶುದ್ಧ ಸ್ಥಳದ ವಸ್ತುಗಳೂ ತೆರೆಯೂ ಅವುಗಳ ಎಲ್ಲಾ ಸೇವೆಯೂ ಆಗಿದೆ. ಇದಲ್ಲದೆ ಯಾಜಕನಾಗಿರುವ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಮುಖ್ಯಸ್ಥರ ಮೇಲೆ ಮುಖ್ಯಸ್ಥನು, ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕೈಕೊಳ್ಳುವವರ ಮೇಲೆ ವಿಚಾರಕನು ಅವನೇ.