Numbers · chapter 6 · verse 23
Numbers 6:23 in Kannada
ನೀನು ಆರೋನನ ಸಂಗ ಡಲೂ ಅವನ ಕುಮಾರರ ಸಂಗಡಲೂ ಮಾತನಾಡಿ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು.
Neenu aaronana sanga daloo avana kumaarara sangadaloo maatanaadi helabekaadaddenandare--neevu israayel makkalannu aasheervadisuvaaga ee prakaara avarige helabeku.
Numbers 6:23 in English
- King James Version (KJV)
- Speak unto Aaron and unto his sons, saying, On this wise ye shall bless the children of Israel, saying unto them,
- World English Bible (WEB)
- “Speak to Aaron and to his sons, saying, ‘This is how you shall bless the children of Israel.’ You shall tell them,
- American Standard Version (ASV)
- Speak unto Aaron and unto his sons, saying, On this wise ye shall bless the children of Israel: ye shall say unto them,
- Bible in Basic English (BBE)
- Say to Aaron and his sons, These are the words of blessing which are to be used by you in blessing the children of Israel; say to them,
- Darby Translation (DBY)
- Speak unto Aaron and unto his sons, saying, On this wise ye shall bless the children of Israel: saying unto them,
- Webster's Bible (WBS)
- Speak to Aaron and to his sons, saying, On this wise ye shall bless the children of Israel, saying to them,
- Young's Literal Translation (YLT)
- 'Speak unto Aaron, and unto his sons, saying, Thus ye do bless the sons of Israel, saying to them,
Read in context
- 21ಪ್ರಮಾಣಮಾಡಿಕೊಂಡ ನಾಜೀರನ ನಿಯ ಮವು ಇದೇ. ಅವನ ಕೈಗೆ ದೊರಕಿದ್ದಲ್ಲದೆ ಅವನು ತನ್ನ ಪ್ರತ್ಯೇಕಿಸುವಿಕೆಗಾಗಿ ಕರ್ತನಿಗೆ ಅರ್ಪಿಸತಕ್ಕದ್ದು. ಅವನು ಪ್ರಮಾಣಮಾಡಿಕೊಂಡ ಪ್ರಕಾರ ತಾನು ಪ್ರತ್ಯೇಕಿಸಿಕೊಂಡಂತೆ ಅವನು ಮಾಡಬೇಕು.
- 22ಇದಲ್ಲದೆ ಕರ್ತನು ಮೋಶೆಯ ಸಂಗಡ ಮಾತ ನಾಡಿ ಹೇಳಿದ್ದೇನಂದರೆ--
- 23ನೀನು ಆರೋನನ ಸಂಗ ಡಲೂ ಅವನ ಕುಮಾರರ ಸಂಗಡಲೂ ಮಾತನಾಡಿ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು.
- 24ಕರ್ತನು ನಿನ್ನನ್ನು ಆಶೀರ್ವದಿಸಲಿ, ನಿನ್ನನ್ನು ಕಾಪಾಡಲಿ.
- 25ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ.
Cross references
- Genesis 48:20 ಆದಿಕಾಂಡ 48:20ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವ ದಿಸಿ--ನಿನ್ನಲ್ಲಿ ಇಸ್ರಾಯೇಲ್ ಆಶೀರ್ವದಿಸಲ್ಪಡು ವದು. ಎಫ್ರಾಯಾಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲೆಂದು ಹೇಳುವ ಹೇಳಿಕೆಯಾಗುವದು ಎಂದು ಹೇಳಿ ಎಫ್ರಾಯಾಮನನ್ನು ಮನಸ್ಸೆಯ ಮುಂದೆ ನಿಲ್ಲಿಸಿದನು.
- Deuteronomy 21:5 ಧರ್ಮೋಪದೇಶಕಾಂಡ 21:5ಆ ಮೇಲೆ ಲೇವಿಯ ಕುಮಾರರಾದ ಯಾಜಕರು ಹತ್ತಿರ ಬರಬೇಕು; ಅವರನ್ನು ನಿನ್ನ ದೇವರಾದ ಕರ್ತನು ತನಗೆ ಸೇವೆಮಾಡುವದಕ್ಕೂ ಕರ್ತನ ಹೆಸರಿನಲ್ಲಿ ಆಶೀರ್ವಾದ ಕೊಡುವದಕ್ಕೂ ಆದುಕೊಂಡಿದ್ದಾನೆ; ಅವರ ಮಾತಿನಿಂದ ಎಲ್ಲಾ ವಿವಾದ ಗಳಿಗೂ ಎಲ್ಲಾ ಪೆಟ್ಟುಗಳಿಗೂ ತೀರ್ಪು ಆಗಬೇಕು.
- 1 Chronicles 23:13 1 ಪೂರ್ವಕಾಲವೃತ್ತಾಂತ 23:13ಅಮ್ರಾಮನ ಕುಮಾರರು --ಆರೋನನು ಮೋಶೆಯು; ಆರೋನನು ಯುಗ ಯುಗಾಂತರಕ್ಕೂ ಕರ್ತನ ಮುಂದೆ ಧೂಪ ಸುಡು ವದಕ್ಕೂ ಆತನಿಗೆ ಸೇವೆಮಾಡುವದಕ್ಕೂ ಆತನ ಹೆಸರಿನಲ್ಲಿ ಆಶೀರ್ವದಿಸುವದಕ್ಕೂ ತಾನೂ ತನ್ನ ಕುಮಾರರೂ ಯುಗಯುಗಾಂತರಗಳಿಗೂ ಅತಿ ಪರಿ ಶುದ್ಧವಾದವುಗಳನ್ನು ಪ್ರತಿಷ್ಠೆಮಾಡುವದಕ್ಕೂ ಪ್ರತ್ಯೇ ಕಿಸಲ್ಪಟ್ಟನು.
- Hebrews 7:1 ಇಬ್ರಿಯರಿಗೆ 7:1ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದು ರಾಜರನ್ನು ಸಂಹರಿಸಿ ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶಿರ್ವದಿಸಿದನು.
- 2 John 1:3 2 ಯೋಹಾನನು 1:3ತಂದೆಯಾದ ದೇವರಿಂದಲೂ ಆ ತಂದೆಯ ಮಗನಾಗಿರುವ ಕರ್ತನಾದ ಯೇಸು ಕ್ರಿಸ್ತನಿಂದಲೂ ಕೃಪೆಯು ಕರುಣೆಯು ಮತ್ತು ಶಾಂತಿಯು ಸತ್ಯ ದಲ್ಲಿಯೂ ಪ್ರೀತಿಯಲ್ಲಿಯೂ ನಿಮ್ಮೊಂದಿಗಿರಲಿ.
- Leviticus 9:22–23 ಯಾಜಕಕಾಂಡ 9:22–23ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿ ಪಾಪದ ಬಲಿಯನ್ನೂ ದಹನಬಲಿಯನ್ನೂ ಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು. ಮೋಶೆಯೂ ಆರೋನನೂ ಸಭೆಯ ಗುಡಾರದ ಒಳಗೆ ಹೋಗಿ ಹೊರಗೆ ಬಂದು ಜನರನ್ನು ಆಶೀರ್ವ ದಿಸಿದರು; ಆಗ ಕರ್ತನ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು.ಆಗ ಅಲ್ಲಿ ಕರ್ತನ ಸನ್ನಿಧಿಯಿಂದ ಬೆಂಕಿಯು ಬಂದು ಯಜ್ಞವೇದಿಯ ಮೇಲಿದ್ದ ದಹನ ಬಲಿಯನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿ ಆರ್ಭಟಿಸಿ ಅಡ್ಡಬಿದ್ದರು.
- Hebrews 11:20–21 ಇಬ್ರಿಯರಿಗೆ 11:20–21ನಂಬಿಕೆಯಿಂದಲೇ ಇಸಾಕನು ಮುಂದೆ ಬರ ಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು. ನಂಬಿಕೆಯಿಂದಲೇ ಯಾಕೋಬನು ಸಾಯುತ್ತಿರುವಾಗ ಯೋಸೇಫನ ಇಬ್ಬರು ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
- Genesis 28:3–4 ಆದಿಕಾಂಡ 28:3–4ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನೀನು ಜನಸಮುದಾಯವಾಗುವಂತೆ ನಿನ್ನನ್ನು ಅಭಿವೃದ್ಧಿ ಮಾಡಿ ಹೆಚ್ಚಿಸಲಿ, ದೇವರು ಅಬ್ರಹಾಮನಿಗೆ ಕೊಟ್ಟಿರುವ ಮತ್ತು ನೀನು ಈಗ ಪ್ರವಾಸಿಯಾಗಿರುವ ದೇಶವನ್ನು ಬಾಧ್ಯವಾಗಿ ಹೊಂದುವಂತೆ ದೇವರು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಸಂತತಿಗೂ ಕೊಡಲಿ ಅಂದನು.
- Genesis 47:7 ಆದಿಕಾಂಡ 47:7ಯೋಸೇಫನು ತನ್ನ ತಂದೆಯಾದ ಯಾಕೋಬ ನನ್ನು ಕರಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವ ದಿಸಿದನು.
- 2 Corinthians 13:14 2 ಕೊರಿಂಥದವರಿಗೆ 13:14ಕರ್ತನಾದ ಯೇಸುಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡವಿರಲಿ. ಆಮೆನ್.
- Genesis 14:19–20 ಆದಿಕಾಂಡ 14:19–20ಇವನು ಅಬ್ರಾಮನನ್ನು ಆಶೀರ್ವದಿಸಿ--ಅಬ್ರಾಮನು ಆಕಾಶವನ್ನು ಭೂಮಿ ಯನ್ನು ಹೊಂದಿರುವ ಮಹೋನ್ನತನಾದ ದೇವರಿಂದ ಆಶೀರ್ವದಿಸಲ್ಪಡಲಿ. ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.
- Genesis 27:27–29 ಆದಿಕಾಂಡ 27:27–29ಆಗ ಯಾಕೋಬನು ಹತ್ತಿರ ಬಂದು ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ ಅವನನ್ನು ಆಶೀರ್ವದಿಸಿ--ಇಗೋ, ನನ್ನ ಮಗನ ವಾಸನೆಯು ಯೆಹೋವನು ಆಶೀರ್ವದಿಸಿದ ಹೊಲದ ವಾಸನೆಯಂತಿದೆ. ಆದದರಿಂದ ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯ ದ್ರಾಕ್ಷಾರಸವನ್ನೂ ಕೊಡಲಿ. ಜನಗಳು ನಿನ್ನನ್ನು ಸೇವಿಸಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆ ಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ, ನಿನ್ನನ್ನು ಶಪಿಸುವವರಿಗೆ ಶಾಪವೂ ಆಶೀರ್ವದಿಸುವ ವರಿಗೆ ಆಶೀರ್ವಾದವೂ ಆಗಲಿ ಅಂದನು.