Numbers · chapter 6 · verse 24
Numbers 6:24 in Kannada
ಕರ್ತನು ನಿನ್ನನ್ನು ಆಶೀರ್ವದಿಸಲಿ, ನಿನ್ನನ್ನು ಕಾಪಾಡಲಿ.
Kartanu ninnannu aasheervadisali, ninnannu kaapaadali.
Numbers 6:24 in English
- King James Version (KJV)
- The LORD bless thee, and keep thee:
- World English Bible (WEB)
- ‘The LORD bless you, and keep you.
- American Standard Version (ASV)
- Jehovah bless thee, and keep thee:
- Bible in Basic English (BBE)
- May the Lord send his blessing on you and keep you:
- Darby Translation (DBY)
- Jehovah bless thee, and keep thee;
- Webster's Bible (WBS)
- The LORD bless thee, and keep thee:
- Young's Literal Translation (YLT)
- 'Jehovah bless thee and keep thee;
Read in context
- 22ಇದಲ್ಲದೆ ಕರ್ತನು ಮೋಶೆಯ ಸಂಗಡ ಮಾತ ನಾಡಿ ಹೇಳಿದ್ದೇನಂದರೆ--
- 23ನೀನು ಆರೋನನ ಸಂಗ ಡಲೂ ಅವನ ಕುಮಾರರ ಸಂಗಡಲೂ ಮಾತನಾಡಿ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು.
- 24ಕರ್ತನು ನಿನ್ನನ್ನು ಆಶೀರ್ವದಿಸಲಿ, ನಿನ್ನನ್ನು ಕಾಪಾಡಲಿ.
- 25ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಪ್ರಕಾಶಿಸುವಂತೆ ಮಾಡಿ ನಿನಗೆ ದಯೆ ತೋರಿಸಲಿ.
- 26ಕರ್ತನು ತನ್ನ ಮುಖವನ್ನು ನಿನ್ನ ಕಡೆಗೆ ಎತ್ತಿ ನಿನಗೆ ಸಮಾಧಾನ ಅನುಗ್ರಹಿಸಲಿ.ಅವರು ನನ್ನ ಹೆಸರನ್ನು ಇಸ್ರಾಯೇಲ್ ಮಕ್ಕಳ ಮೇಲೆ ಇಡಬೇಕು. ನಾನೇ ಅವರನ್ನು ಆಶೀರ್ವದಿಸುವೆನು.
Cross references
- 1 Thessalonians 5:23 1 ಥೆಸಲೊನೀಕದವರಿಗೆ 5:23ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರ ಮಾಡಲಿ; ಇದಲ್ಲದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಬರೋಣದಲ್ಲಿ ನಿಮ್ಮ ಆತ್ಮ ಪ್ರಾಣ ಶರೀರಗಳು ದೋಷವಿಲ್ಲದೆ ಸಂಪೂರ್ಣ ವಾಗಿ ಕಾಣಿಸುವಂತೆ ಮಾಡಲಿ.
- Psalm 121:4–7 ಕೀರ್ತನೆಗಳು 121:4–7ಇಗೋ, ಇಸ್ರಾಯೇಲನ್ನು ಕಾಪಾಡುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ. ಕರ್ತನು ನಿನ್ನನ್ನು ಕಾಪಾಡುವಾತನಾಗಿದ್ದಾನೆ; ಕರ್ತನು ನಿನ್ನ ಬಲ ಗಡೆಯಲ್ಲಿ ನಿನ್ನ ನೆರಳಿನಂತೆ ಇದ್ದಾನೆ. ಹಗಲಲ್ಲಿ ಸೂರ್ಯನೂ ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವದಿಲ್ಲ. ಕರ್ತನು ಎಲ್ಲಾ ಕೇಡಿನಿಂದ ನಿನ್ನನೂ ನಿನ್ನ ಪ್ರಾಣವನ್ನೂ ಕಾಪಾಡುವನು.ಕರ್ತನು ನಿನ್ನ ಹೋಗೋಣವನ್ನೂ ಬರೋಣವನ್ನೂ ಇಂದಿನಿಂದ ಸದಾಕಾಲವೂ ಕಾಪಾಡುವನು.
- Philippians 4:7 ಫಿಲಿಪ್ಪಿಯವರಿಗೆ 4:7ಆಗ ಎಲ್ಲಾ ಗ್ರಹಿಕೆಯನ್ನೂ ವಿಾರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಮನಸ್ಸು ಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವದು.
- Jude 1:24 ಯೂದನು 1:24ಎಡವಿಬೀಳದಂತೆ ನಿಮ್ಮನ್ನು ಕಾಪಾಡುವದಕ್ಕೂ ತನ್ನ ಪ್ರಭಾವದ ಸಮಕ್ಷಮದಲ್ಲಿ ನಿಮ್ಮನ್ನು ನಿರ್ದೋಷಿ ಗಳನ್ನಾಗಿ ಅತ್ಯಂತ ಹರ್ಷದೊಡನೆ ನಿಲ್ಲಿಸುವದಕ್ಕೂ ಶಕ್ತನಾಗಿರುವಒಬ್ಬನೇ ಜ್ಞಾನವುಳ್ಳ ನಮ್ಮ ರಕ್ಷಕನಾದ ದೇವರಿಗೆ ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಈಗಲೂ ಯಾವಾಗಲೂ ಇರಲಿ. ಆಮೆನ್.
- Isaiah 42:6 ಯೆಶಾಯ 42:6ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಬಂದಿ ಗಳನ್ನು ಸೆರೆಯಿಂದಲೂ ಕತ್ತಲೆಯಲ್ಲಿ ವಾಸಿಸುವವ ರನ್ನು ಕಾರಾಗೃಹದಿಂದಲೂ ಹೊರಗೆ ತರಬೇಕು ಎಂದು --
- Psalm 91:11 ಕೀರ್ತನೆಗಳು 91:11ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.
- Deuteronomy 28:3–6 ಧರ್ಮೋಪದೇಶಕಾಂಡ 28:3–6ಪಟ್ಟಣದಲ್ಲಿ ನಿನಗೆ ಆಶೀರ್ವಾದ, ಹೊಲದಲ್ಲಿ ನಿನಗೆ ಆಶೀರ್ವಾದ, ನಿನ್ನ ಗರ್ಭದ ಫಲಕ್ಕೂ ನಿನ್ನ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ. ನಿನ್ನ ಪುಟ್ಟಿಗೂ ಕಣಜಕ್ಕೂ ಆಶೀರ್ವಾದ. ಬರುವಾಗ ನಿನಗೆ ಆಶೀರ್ವಾದ; ಹೊರಡುವಾಗ ನಿನಗೆ ಆಶೀರ್ವಾದ.
- John 17:11 ಯೋಹಾನನು 17:11ಇನ್ನು ಮೇಲೆ ನಾನು ಲೋಕದಲ್ಲಿ ಇರುವದಿಲ್ಲ; ಆದರೆ ಇವರು ಲೋಕದಲ್ಲಿದ್ದಾರೆ; ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆಯೇ ಅವರು ಸಹ ಒಂದಾಗಿರುವಂತೆ ನೀನು ನನಗೆ ಕೊಟ್ಟಿರುವವರನ್ನು ನಿನ್ನ ಸ್ವಂತ ಹೆಸರಿನಲ್ಲಿ ಕಾಪಾಡು.
- Psalm 134:3 ಕೀರ್ತನೆಗಳು 134:3ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನು ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.
- 1 Samuel 2:9 1 ಸಮುವೇಲನು 2:9ಆತನು ತನ್ನ ಪರಿಶುದ್ಧರ ಕಾಲುಗಳನ್ನು ಕಾಯು ವನು; ಆದರೆ ದುಷ್ಟರು ಕತ್ತಲಲ್ಲಿ ಮೌನವಾಗಿರುವರು; ಶಕ್ತಿಯಿಂದ ಒಬ್ಬನೂ ಜಯಿಸನು.
- Ruth 2:4 ರೂತಳು 2:4ಇಗೋ, ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ ಕರ್ತನು ನಿಮ್ಮ ಸಂಗಡ ಇರಲಿ ಅಂದನು. ಅದಕ್ಕೆ ಅವರು ಕರ್ತನು ನಿನ್ನನ್ನು ಆಶೀರ್ವ ದಿಸಲಿ ಅಂದರು.
- Philippians 4:23 ಫಿಲಿಪ್ಪಿಯವರಿಗೆ 4:23ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ. ಆಮೆನ್.