Numbers · chapter 7 · verse 2
Numbers 7:2 in Kannada
ಇಸ್ರಾಯೇಲ್ಯರ ಪ್ರಧಾನರೂ ತಮ್ಮ ತಂದೆಗಳ ಮನೆಯ ಮುಖ್ಯಸ್ಥರೂ ಗೋತ್ರಗಳ ಮುಖ್ಯಾಧಿಕಾರಿಗಳೂ ಎಣಿಸಲ್ಪಟ್ಟವರ ಮೇಲೆ ಇದ್ದ ವರು ಅರ್ಪಿಸಿದರು.
Israayelyara pradhaanaroo tamma tandegala maneya mukhyastharoo gotragala mukhyaadhikaarigaloo enisalpattavara mele idda varu arpisidaru.
Numbers 7:2 in English
- King James Version (KJV)
- That the princes of Israel, heads of the house of their fathers, who [were] the princes of the tribes, and were over them that were numbered, offered:
- World English Bible (WEB)
- the princes of Israel, the heads of their fathers’ houses, gave offerings. These were the princes of the tribes. These are they who were over those who were counted;
- American Standard Version (ASV)
- that the princes of Israel, the heads of their fathers’ houses, offered. These were the princes of the tribes, these are they that were over them that were numbered:
- Bible in Basic English (BBE)
- Then the chiefs of Israel, the heads of their fathers' houses, made offerings; these were the chiefs of the tribes, who were over those who were numbered.
- Darby Translation (DBY)
- that the princes of Israel, the heads of their fathers' houses, the princes of the tribes, they that were over them that had been numbered, offered;
- Webster's Bible (WBS)
- That the princes of Israel, heads of the house of their fathers, who [were] the princes of the tribes, and were over them that were numbered, offered:
- Young's Literal Translation (YLT)
- and the princes of Israel (heads of the house of their fathers, they [are] princes of the tribes, they who are standing over those numbered) bring near,
Read in context
- 1ಮೋಶೆಯು ಗುಡಾರವನ್ನು ನಿಲ್ಲಿಸಿಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ವಸ್ತುಗಳನ್ನೂ ಬಲಿಪೀಠವನ್ನೂ ಅದರ ಎಲ್ಲಾ ವಸ್ತು ಗಳನ್ನೂ ಅಭಿಷೇಕಿಸಿ ಪರಿಶುದ್ಧಮಾಡಿದ ಮೇಲೆ ಆದದ್ದೇನಂದರೆ--
- 2ಇಸ್ರಾಯೇಲ್ಯರ ಪ್ರಧಾನರೂ ತಮ್ಮ ತಂದೆಗಳ ಮನೆಯ ಮುಖ್ಯಸ್ಥರೂ ಗೋತ್ರಗಳ ಮುಖ್ಯಾಧಿಕಾರಿಗಳೂ ಎಣಿಸಲ್ಪಟ್ಟವರ ಮೇಲೆ ಇದ್ದ ವರು ಅರ್ಪಿಸಿದರು.
- 3ಅವರು ಕರ್ತನ ಎದುರಿನಲ್ಲಿ ತಂದ ಅರ್ಪಣೆ ಏನಂದರೆ--ಆರು ಕಮಾನು ಬಂಡಿ ಗಳೂ ಹನ್ನೆರಡು ಎತ್ತುಗಳೂ ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯನ್ನೂ, ಒಬ್ಬೊಬ್ಬನಿಗೆ ಒಂದೊಂದು ಎತ್ತನ್ನೂ ಅವರು ಗುಡಾರದ ಮುಂದೆ ತಂದರು.
- 4ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ
Cross references
- Numbers 1:4–16 ಅರಣ್ಯಕಾಂಡ 1:4–16ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ. ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್, ಸಿಮೆಯೋನ್ ಗೋತ್ರದಿಂದ ಚೂರೀಷದ್ದೈಯನ ಮಗನಾದ ಶೆಲುವಿಾಯೇಲ್, ಯೆಹೂದ ಗೋತ್ರ ದಿಂದ ಅವ್ಮೆಾನಾದಾಬನ ಮಗನಾದ ನಹಶೋನ್, ಇಸ್ಸಾಕಾರ್ ಗೋತ್ರದಿಂದ ಚೂವಾರನ ಮಗನಾದ ನೆತನೇಲ್, ಜೆಬುಲೂನ್ ಗೋತ್ರದಿಂದ ಹೇಲೋ ನನ ಮಗನಾದ ಎಲೀಯಾಬ್, ಯೋಸೇಫನ ಮಕ್ಕಳ ಗೋತ್ರದಲ್ಲಿ ಎಫ್ರಾಯಾಮ್ನಿಂದ ಅವ್ಮೆಾ ಹೂದನ ಮಗನಾದ ಎಲೀಷಾಮಾ, ಮನಸ್ಸೆ ಗೋತ್ರ ದಿಂದ ಪೆದಾಚೂರನ ಮಗನಾದ ಗವ್ಲೆಾಯೇಲ್, ಬೆನ್ಯಾವಿಾನ್ ಗೋತ್ರದಿಂದ ಗಿದ್ಯೋನಿಯ ಮಗ ನಾದ ಅಬೀದಾನ್, ದಾನ್ ಗೋತ್ರದಿಂದ ಅವ್ಮೆಾಷದ್ದೈಯ ಮಗನಾದ ಅಹೀಗೆಜೆರ್, ಆಶೇರ್ ಗೋತ್ರದಿಂದ ಒಕ್ರಾನನ ಮಗನಾದ ಪಗೀಯೆಲ್, ಗಾದ್ ಗೋತ್ರದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್. ನಫ್ತಾಲಿ ಗೋತ್ರದಿಂದ ಏನಾನನ ಮಗನಾದ ಅಹೀರನು, ಸಭೆಯವರಲ್ಲಿ ಪ್ರಸಿದ್ಧವಾದವರೂ ತಮ್ಮ ತಂದೆಗಳ ಗೋತ್ರಗಳ ಪ್ರಭುಗಳೂ ಇಸ್ರಾಯೇಲಿನಲ್ಲಿ ಸಹಸ್ರಗಳ ಮುಖ್ಯ ಸ್ಥರೂ ಇವರೇ.
- 1 Chronicles 29:6–8 1 ಪೂರ್ವಕಾಲವೃತ್ತಾಂತ 29:6–8ಆಗ ಪಿತೃಗಳ ಪ್ರಧಾನರೂ ಇಸ್ರಾಯೇಲ್ ಗೋತ್ರಗಳ ಪ್ರಧಾನರೂ ಸಹಸ್ರಗಳ ಶತಗಳ ಅಧಿಪತಿಗಳೂ ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು ಕರ್ತನ ಮನೆಯ ಸೇವೆಗೋಸ್ಕರ ಬಂಗಾರ ದಲ್ಲಿ ಐದು ಸಾವಿರ ತಲಾಂತುಗಳನ್ನೂ ಬೆಳ್ಳಿಯಲ್ಲಿ ಹತ್ತು ಸಾವಿರ ತಲಾಂತುಗಳನ್ನೂ ತಾಮ್ರದಲ್ಲಿ ಹದಿ ನೆಂಟು ಸಾವಿರ ತಲಾಂತುಗಳನ್ನೂ ಕಬ್ಬಿಣದಲ್ಲಿ ಲಕ್ಷ ತಲಾಂತುಗಳನ್ನೂ ಕೊಟ್ಟರು. ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವು ಗಳನ್ನು ಕರ್ತನ ಮನೆಯ ಬೊಕ್ಕಸಕ್ಕೆ ಕೊಟ್ಟರು.
- Numbers 2:1–34 ಅರಣ್ಯಕಾಂಡ 2:1–34ಕರ್ತನು ಮಾತನಾಡಿ ಮೋಶೆಗೂ ಆರೋನನಿಗೂ ಹೇಳಿದ್ದೇನಂದರೆ-- ಇಸ್ರಾಯೇಲ್ ಮಕ್ಕಳು ಒಬ್ಬೊಬ್ಬರಾಗಿ ತಂದೆ ಮನೆಯ ಗುರುತುಗಳ ಪ್ರಕಾರ ತಮ್ಮ ತಮ್ಮ ಧ್ವಜಗಳ ಬಳಿಯಲ್ಲಿ ಇಳುಕೊಳ್ಳಬೇಕು; ಅವರು ಸಭೆಯ ಗುಡಾರದ ಎದುರಿನಲ್ಲಿ ಸುತ್ತಮುತ್ತಲೂ ಇಳುಕೊಳ್ಳಬೇಕು. ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಇಳುಕೊಳ್ಳುವವರು ಅವರವರ ಸೈನ್ಯಗಳ ಪ್ರಕಾರ ಯೆಹೂದನ ದಂಡಿನ ಧ್ವಜವು; ಯೆಹೂದನ ಮಕ್ಕಳಿಗೆ ಅವ್ಮೆಾನಾದಾಬನ ಮಗನಾದ ನಹಶೋನನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಎಪ್ಪತ್ತನಾಲ್ಕು ಸಾವಿರದ ಆರುನೂರು. ಅವನ ಬಳಿ ಯಲ್ಲಿ ಇಳುಕೊಳ್ಳುವವರು ಇಸ್ಸಾಕಾರನ ಗೋತ್ರವು; ಇಸ್ಸಾಕಾರನ ಮಕ್ಕಳಿಗೆ ಚೂವಾರನ ಮಗನಾದ ನೆತನೇಲನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪ ಟ್ಟವರೂ ಐವತ್ತು ನಾಲ್ಕುಸಾವಿರದ ನಾಲ್ಕುನೂರು. ಜೆಬುಲೂನನ ಮಕ್ಕಳಿಗೆ ಹೇಲೋನನ ಮಗನಾದ ಎಲೀಯಾಬನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೇಳುಸಾವಿರದ ನಾಲ್ಕುನೂರು. ಯೆಹೂದನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರ ಲಕ್ಷದ ಎಂಭತ್ತಾರು ಸಾವಿರದ ನಾಲ್ಕುನೂರು. ಅವರು ಮೊದಲು ಹೊರಡತಕ್ಕವರು. ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತಾರು ಸಾವಿರದ ಐದುನೂರು. ಅವನ ಬಳಿ ಯಲ್ಲಿ ಇಳುಕೊಳ್ಳುವವರು ಸಿಮೆಯೋನನ ಗೋತ್ರ ದವರು; ಸಿಮೆಯೋನನ ಮಕ್ಕಳಿಗೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೊಂಭತ್ತು ಸಾವಿರದ ಮುನ್ನೂರು. ತರುವಾಯ ಗಾದನ ಗೋತ್ರವು: ಗಾದನ ಮಕ್ಕಳಿಗೆ ರೆಗೂವೇಲನ ಮಗ ನಾದ ಎಲ್ಯಾಸಾಫನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೈದು ಸಾವಿರದ ಆರುನೂರ ಐವತ್ತು. ರೂಬೇನನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರವರ ಸೈನ್ಯಗಳ ಪ್ರಕಾರ ಲಕ್ಷದ ಐವತ್ತೊಂದು ಸಾವಿರದ ನಾನೂರಐವತ್ತು; ಅವರು ಎರಡನೆಯದಾಗಿ ಹೊರಡತಕ್ಕದ್ದು. ತರುವಾಯ ಸಭೆಯ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಕಡೆ ಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು. ಎಫ್ರಾಯಾಮಿನವರ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಪಶ್ಚಿಮದಲ್ಲಿರುವದು; ಎಫ್ರಾ ಯಾಮನ ಮಕ್ಕಳಿಗೆ ಅವ್ಮೆಾಹೂದನ ಮಗನಾದ ಎಲೀಷಾಮಾನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತು ಸಾವಿರದ ಐದು ನೂರು. ಅವನ ಬಳಿಯಲ್ಲಿ ಮನಸ್ಸೆ ಗೋತ್ರವು; ಮನಸ್ಸೆ ಮಕ್ಕಳಿಗೆ ಪೆದಾಚೂರನ ಮಗನಾದ ಗವ್ಲೆಾಯೇಲನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಮೂವತ್ತೆರಡು ಸಾವಿರದ ಇನ್ನೂರು. ತರುವಾಯ ಬೆನ್ಯಾವಿಾನನ ಗೋತ್ರವು; ಬೆನ್ಯಾವಿಾನನ ಮಕ್ಕಳಿಗೆ ಗಿದ್ಯೋನಿಯ ಮಗನಾದ ಅಬೀದಾನನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಮುವತ್ತೈದು ಸಾವಿರದ ನಾಲ್ಕುನೂರು. ಎಫ್ರಾಯಾಮನ ಪಾಳೆ ಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರವಾಗಿ ಲಕ್ಷದ ಎಂಟುಸಾವಿರದ ನೂರು. ಇವರು ಮೂರನೆಯವರಾಗಿ ಹೊರಡತಕ್ಕವರು. ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವದು. ದಾನನ ಮಕ್ಕಳಿಗೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಅರವತ್ತೆರಡು ಸಾವಿರದ ಏಳು ನೂರು. ಅವನ ಬಳಿಯಲ್ಲಿ ಇಳುಕೊಳ್ಳುವವರು ಆಶೇರನ ಗೋತ್ರ ದವರು; ಆಶೇರನ ಮಕ್ಕಳಿಗೆ ಒಕ್ರಾನನ ಮಗನಾದ ಪಗೀಯೇಲನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೊಂದು ಸಾವಿರದ ಐದು ನೂರು. ತರುವಾಯ ನಫ್ತಾಲಿ ಗೋತ್ರದವರು; ನಫ್ತಾಲಿ ಮಕ್ಕಳಿಗೆ ಏನಾನನ ಮಗನಾದ ಅಹೀರನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತಮೂರು ಸಾವಿರದ ನಾಲ್ಕುನೂರು. ದಾನನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಲಕ್ಷದ ಐವತ್ತೇಳು ಸಾವಿರದ ಆರುನೂರು. ಅವರು ತಮ್ಮ ಧ್ವಜಗಳ ಪ್ರಕಾರ ಕಡೆಯವರಾಗಿ ಹೊರಡತಕ್ಕದ್ದು. ಇಸ್ರಾಯೇಲ್ ಮಕ್ಕಳಲ್ಲಿ ತಮ್ಮ ತಂದೆಗಳ ಮನೆಯ ಪ್ರಕಾರವಾಗಿ ಎಣಿಸಲ್ಪಟ್ಟವರು ಇವರೇ; ಪಾಳೆಯದೊಳಗೆ ಅವರವರ ಸೈನ್ಯಗಳ ಪ್ರಕಾರ ಎಣಿಸ ಲ್ಪಟ್ಟವರೆಲ್ಲರೂ ಆರುಲಕ್ಷ ಮೂರುಸಾವಿರದ ಐದು ನೂರಐವತ್ತು ಎಂಬದೇ. ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲ್ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ.ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್ ಮಕ್ಕಳು ಮಾಡಿ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ತಂದೆಗಳ ಮನೆಯ ಪ್ರಕಾರವೂ ಇಳುಕೊಳ್ಳುತ್ತಾ ಮುಂದುವರಿಯುತ್ತಿದ್ದರು. ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್ ಮಕ್ಕಳು ಮಾಡಿ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ತಂದೆಗಳ ಮನೆಯ ಪ್ರಕಾರವೂ ಇಳುಕೊಳ್ಳುತ್ತಾ ಮುಂದುವರಿಯುತ್ತಿದ್ದರು.
- 2 Chronicles 35:8 2 ಪೂರ್ವಕಾಲವೃತ್ತಾಂತ 35:8ಹಾಗೆಯೇ ಅವನ ಪ್ರಧಾನರು ಜನರಿಗೂ ಯಾಜಕ ರಿಗೂ ಲೇವಿಯರಿಗೂ ಮನಃಪೂರ್ವಕವಾಗಿ ಕೊಟ್ಟರು. ದೇವರ ಆಲಯದ ನಾಯಕರಾದ ಹಿಲ್ಕೀಯನೂ ಜೆಕರೀಯನೂ ಯೆಹೀಯೇಲನೂ ಪಸ್ಕದ ಬಲಿ ಗೋಸ್ಕರ ಎರಡು ಸಾವಿರದ ಆರು ನೂರು ಮರಿ ಗಳನ್ನೂ ಮುನ್ನೂರು ಎತ್ತುಗಳನ್ನೂ ಯಾಜಕರಿಗೆ ಕೊಟ್ಟರು.
- Ezra 2:68–69 ಎಜ್ರನು 2:68–69ಪಿತೃಗಳಲ್ಲಿ ಮುಖ್ಯರಾದ ಕೆಲವರು ಯೆರೂಸ ಲೇಮಿನಲ್ಲಿರುವ ಕರ್ತನ ಆಲಯಕ್ಕೆ ಬಂದ ತರುವಾಯ ದೇವರ ಆಲಯವನ್ನು ಅದರ ಸ್ಥಾನದಲ್ಲಿ ನಿಲ್ಲಿಸುವದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು. ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸದ ಬೊಕ್ಕಸಕ್ಕೆ ಅರವ ತ್ತೊಂದು ಸಾವಿರ ಬಂಗಾರದ ಪವನಗಳನ್ನು ಐದು ಸಾವಿರ ವಿಾನಾ ತೂಕ ಬೆಳ್ಳಿಯನ್ನೂ ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.ಯಾಜಕರೂ ಲೇವಿಯರೂ ಜನರಲ್ಲಿ ಕೆಲವರೂ ಹಾಡುಗಾರರೂ ಬಾಗಲು ಕಾಯುವವರು ನೆತನಿಮಿ ನವರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಇಸ್ರಾ ಯೇಲ್ಯರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
- Exodus 35:27 ವಿಮೋಚನಕಾಂಡ 35:27ಅಧಿಪತಿಗಳು ಎಫೋ ದಿನಲ್ಲಿಯೂ ಎದೆಪದಕದಲ್ಲಿಯೂ ಕೂಡ್ರಿಸುವದಕ್ಕೆ ಗೋಮೇಧಿಕಗಳನ್ನೂ ರತ್ನಗಳನ್ನೂ
- Nehemiah 7:70–72 ನೆಹೆಮೀಯ 7:70–72ಪಿತೃಗಳಲ್ಲಿ ಮುಖ್ಯರಾದ ಕೆಲವರು ಕೆಲಸಕ್ಕೆ ಕಾಣಿಕೆಗಳನ್ನು ಕೊಟ್ಟರು. ತಿರ್ಷತನು ಬೊಕ್ಕಸಕ್ಕೆ ಸಾವಿರ ಬಂಗಾರದ ಪವನುಗಳನ್ನು ಐವತ್ತು ಪಾತ್ರೆ ಗಳನ್ನೂ ಐನೂರ ಮೂವತ್ತು ಯಾಜಕರ ಅಂಗಿಗ ಳನ್ನೂ ಕೊಟ್ಟನು. ಇದಲ್ಲದೆ ಪಿತೃಗಳಲ್ಲಿ ಮುಖ್ಯ ರಾದ ಕೆಲವರು ಕೆಲಸದ ಬೊಕ್ಕಸಕ್ಕೆ ಇಪ್ಪತ್ತು ಸಾವಿರ ಬಂಗಾರದ ಪವನುಗಳನ್ನೂ ಎರಡು ಸಾವಿರದ ಇನ್ನೂರು ತೊಲೆ ಬೆಳ್ಳಿಯನ್ನೂ ಕೊಟ್ಟರು. ಮಿಕ್ಕಾದ ಜನರು ಕೊಟ್ಟದ್ದೇನಂದರೆ, ಇಪ್ಪತ್ತು ಸಾವಿರ ಬಂಗಾರದ ಪವನುಗಳನ್ನು ಎರಡುಸಾವಿರ ತೊಲೆ ಬೆಳ್ಳಿಯನ್ನೂ ಅರುವತ್ತೇಳು ಯಾಜಕರ ಅಂಗಿಗಳನ್ನೂ ಕೊಟ್ಟರು.ಹೀಗೇಯೇ ಯಾಜಕರೂ ಲೇವಿಯರೂ ದ್ವಾರ ಪಾಲಕರೂ ಹಾಡುಗಾರರೂ ಜನರಲ್ಲಿ ಕೆಲವರೂ ನೆತಿನಿಯರೂ ಸಮಸ್ತ ಇಸ್ರಾಯೇಲ್ಯರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸವಾಗಿದ್ದರು. ಏಳನೇ ತಿಂಗಳು ಬಂದಾಗ ಇಸ್ರಾಯೇಲನ ಮಕ್ಕಳು ತಮ್ಮ ತಮ್ಮ ಪಟ್ಟಣಗಳಲ್ಲಿದ್ದರು.
- Numbers 10:1–36 ಅರಣ್ಯಕಾಂಡ 10:1–36ಕರ್ತನು ಮೋಶೆಗೆ ಹೇಳಿದ್ದೇನೆಂದರೆ ಬೆಳ್ಳಿಯಿಂದ ಎರಡು ತುತೂರಿಗಳನ್ನು ಒಂದೇ ತುಂಡಿನಿಂದ ಮಾಡಿಸಿಕೋ; ಸಭೆಯನ್ನು ಕರೆಯುವದಕ್ಕಾಗಿಯೂ ಪಾಳೆಯಗಳ ಪ್ರಯಾಣಕ್ಕಾ ಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು. ಅವುಗಳನ್ನು ಊದುವಾಗ ಸಭೆಯೆಲ್ಲಾ ಸಭೆಯ ಗುಡಾರದ ಬಾಗಲ ಬಳಿಯಲ್ಲಿರುವ ನಿನ್ನ ಬಳಿಗೆ ಕೂಡಿಬರಬೇಕು. ಒಂದರಿಂದ ಊದುವಾಗ ಮಾತ್ರ ಇಸ್ರಾಯೇಲಿನ ಸಹಸ್ರಗಳಿಗೆ ಮುಖ್ಯಸ್ಥರಾದ ಪ್ರಧಾ ನರು ನಿನ್ನ ಬಳಿಗೆ ಕೂಡಿಬರಬೇಕು. ನೀವು ಎಚ್ಚರಿಸು ವಂತೆ ಊದುವಾಗ ಪೂರ್ವದಲ್ಲಿ ಇರುವಂತ ಪಾಳೆಯ ಗಳು ಮುಂದೆ ಹೊರಡಬೇಕು. ನೀವು ಎರಡನೇ ಸಾರಿ ಎಚ್ಚರಿಸುವಂತೆ ಊದುವಾಗ ದಕ್ಷಿಣದಲ್ಲಿ ಇರು ವಂತ ಪಾಳೆಯಗಳು ಪ್ರಯಾಣಮಾಡಬೇಕು; ಅವರ ಪ್ರಯಾಣಕ್ಕೆ ಎಚ್ಚರಿಸುವಂತೆ ಊದಬೇಕು. ಸಭೆ ಯನ್ನು ಕೂಡಿಸುವಾಗ ನೀವು ಊದಬೇಕು. ಎಚ್ಚರಿಸು ವಂತೆ ಶಬ್ದಮಾಡಬೇಡಿರಿ. ಯಾಜಕರಾಗಿರುವ ಆರೋನನ ಕುಮಾರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು. ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ನೀವು ತುತೂರಿಗಳನ್ನು ಎಚ್ಚರಿಸುವಂತೆ ಊದಬೇಕು. ಆಗ ನಿಮ್ಮ ದೇವರಾದ ಕರ್ತನ ಸಮ್ಮುಖದಲ್ಲಿ ನೀವು ಜ್ಞಾಪಕ ಮಾಡಲ್ಪಟ್ಟು ನಿಮ್ಮ ಶತ್ರುಗಳಿಂದ ರಕ್ಷಿಸಲ್ಪಡುವಿರಿ. ನಿಮ್ಮ ಸಂತೋಷದ ದಿವಸದಲ್ಲಿಯೂ ಹಬ್ಬಗಳ ಲ್ಲಿಯೂ ತಿಂಗಳಿನ ಆರಂಭದಲ್ಲಿಯೂ ನಿಮ್ಮ ದಹನ ಬಲಿಗಳನ್ನು ನಿಮ್ಮ ಸಮಾಧಾನದ ಬಲಿಗಳನ್ನು ಅರ್ಪಿಸು ವಾಗ ಅವುಗಳನ್ನು ಊದಬೇಕು. ಅವು ನಿಮಗೆ ನಿಮ್ಮ ದೇವರ ಎದುರಿನಲ್ಲಿ ಜ್ಞಾಪಕವಾಗಿರುವವು. ನಿಮ್ಮ ದೇವರಾಗಿರುವ ಕರ್ತನು ನಾನೇ. ಎರಡನೆಯ ವರುಷದ ಎರಡನೇ ತಿಂಗಳಿನ ಇಪ್ಪತ್ತನೇ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎತ್ತಲ್ಪಟ್ಟಿತು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕ್ರಮಗಳ ಪ್ರಕಾರ ಸೀನಾಯಿ ಅರಣ್ಯ ದಿಂದ ಪ್ರಯಾಣ ಮಾಡಿದರು; ಮೇಘವು ಪಾರಾನೆಂಬ ಅರಣ್ಯದಲ್ಲಿ ನಿಂತಿತು. ಆಗ ಅವರು ಮೊದಲನೇ ಸಾರಿ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಪ್ರಯಾಣಮಾಡಿದರು. ಯೂದನ ಮಕ್ಕಳ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅವ್ಮೆಾನಾದಾಬನ ಮಗನಾದ ನಹಶೋ ನನು ಇದ್ದನು. ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗನಾದ ನೆತನೇಲನು ಇದ್ದನು. ಜೆಬುಲೂನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗನಾದ ಎಲೀಯಾಬನು ಇದ್ದನು. ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ ಮೆರಾರೀಯ ಮಕ್ಕಳೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು. ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು. ಸಿಮೆಯೋನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಇದ್ದನು. ಗಾದನ ಮಕ್ಕಳ ಗೋತ್ರದ ಸೈನ್ಯದ ಮೇಲೆ ದೆಗೂವೇಲನ ಮಗನಾದ ಎಲ್ಯಾಸಾಫನು ಇದ್ದನು. ಪರಿಶುದ್ಧ ಸ್ಥಳವನ್ನು ಹೊರುವ ಕೆಹಾತ್ಯರು ಹೊರಟರು; ಇವರು ಬರುವಷ್ಟರೊಳಗೆ ಅವರು ಗುಡಾರವನ್ನು ನಿಲ್ಲಿಸಿದರು. ಎಫ್ರಾಯಾಮಿನ ಮಕ್ಕಳ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಅವ್ಮೆಾಹೂದನ ಮಗನಾದ ಎಲೀಷಾಮನು ಇದ್ದನು. ಮನಸ್ಸೆಯ ಮಕ್ಕಳ ಗೋತ್ರದ ಮೇಲೆ ಪೆದಾಚೂರನ ಮಗನಾದ ಗವ್ಮೆಾಯೇಲನು ಇದ್ದನು. ಬೆನ್ಯಾವಿಾನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗನಾದ ಅಬೀದಾನನು ಇದ್ದನು. ದಾನನ ಮಕ್ಕಳ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಇದ್ದನು. ಆಶೇರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಒಕ್ರಾನನ ಮಗ ನಾದ ಪಗೀಯೇಲನು ಇದ್ದನು. ನಫ್ತಾಲಿಯ ಮಕ್ಕಳ ಗೋತ್ರದ ಸೈನ್ಯದ ಮೇಲೆ ಏನಾನ ಮಗನಾದ ಅಹೀರನು ಇದ್ದನು. ಈ ಪ್ರಕಾರ ಇಸ್ರಾಯೇಲ್ ಮಕ್ಕಳು ತಮ್ಮ ಸೈನ್ಯಗಳ ಪ್ರಕಾರ ಪ್ರಯಾಣವಾಗಿ ಹೊರಡುತ್ತಿದ್ದರು. ಮೋಶೆ ತನ್ನ ಮಾವನಾದ ಮಿದ್ಯಾನಿನ ರೆಗೂ ವೇಲನ ಮಗನಾದ ಹೋಬಾಬನಿಗೆ--ನಿಮಗೆ ಕೊಡು ತ್ತೇನೆಂದು ಕರ್ತನು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ; ನಮ್ಮ ಸಂಗಡ ನೀನು ಬಾ; ನಾವು ನಿನಗೆ ಒಳ್ಳೇದನ್ನು ಮಾಡುವೆವು; ಕರ್ತನು ಇಸ್ರಾಯೇ ಲ್ಯರನ್ನು ಕುರಿತು ಒಳ್ಳೇದನ್ನು ಹೇಳಿದ್ದಾನೆ ಎಂದು ಹೇಳಿದನು. ಅದಕ್ಕೆ ಅವನು--ನಾನು ಬರುವದಿಲ್ಲ: ನಾನು ನನ್ನ ದೇಶಕ್ಕೂ ಬಂಧುಗಳ ಬಳಿಗೂ ಹೋಗು ತ್ತೇನೆ ಅಂದನು. ಅದಕ್ಕೆ ಮೋಶೆ--ನಮ್ಮನ್ನು ಬಿಟ್ಟುಹೋಗಬೇಡ, ನಾವು ಎಲ್ಲಿ ಇಳುಕೊಳ್ಳಬೇಕೋ ನಿನಗೆ ತಿಳಿದದೆ; ನೀನು ನಮಗೆ ಕಣ್ಣುಗಳಾಗಿರುವಿ. ನೀನು ನಮ್ಮ ಸಂಗಡ ಬಂದರೆ ಹೌದು, ಕರ್ತನು ನಮಗೆ ಮಾಡಲಿಕ್ಕಿರುವ ಒಳ್ಳೇದನ್ನು ನಾವು ನಿನಗೆ ಮಾಡುವೆವು ಅಂದನು. ಅವರು ಕರ್ತನ ಪರ್ವತದ ಬಳಿಯಿಂದ ಮೂರು ದಿವಸಗಳ ವರೆಗೆ ಪ್ರಯಾಣಮಾಡಿದರು. ಕರ್ತನ ಒಡಂಬಡಿಕೆಯ ಮಂಜೂಷವು ಅವರಿಗೆ ಇಳು ಕೊಳ್ಳುವ ಸ್ಥಳವನ್ನು ಹುಡುಕುವದಕ್ಕಾಗಿ ಮೂರು ದಿವಸ ಗಳ ಪ್ರಯಾಣದಷ್ಟು ಅವರ ಮುಂದಾಗಿ ಹೋಯಿತು. ಅವರು ಪಾಳೆಯದಿಂದ ಹೊರಟಾಗ ಕರ್ತನ ಮೇಘವು ಹಗಲಿನಲ್ಲಿ ಅವರ ಮೇಲೆ ಇತ್ತು. ಇದ ಲ್ಲದೆ ಮಂಜೂಷವು ಹೊರಡುವಾಗ ಮೋಶೆಯುಕರ್ತನೇ, ಎದ್ದೇಳು, ನಿನ್ನ ಶತ್ರುಗಳು ಚದರಿಹೋಗಲಿ; ನಿನ್ನನ್ನು ಹಗೆಮಾಡುವವರು ನಿನ್ನ ಎದುರಿನಿಂದ ಓಡಿ ಹೋಗಲಿ ಎಂದು ಹೇಳಿದನು.ಅದು ಇಳಿದಾಗ ಅವನು--ಓ ಕರ್ತನೇ, ಅನೇಕ ಸಹಸ್ರ ಇಸ್ರಾಯೇ ಲ್ಯರ ಬಳಿಗೆ ಹಿಂದಿರುಗು ಅಂದನು. ಅದು ಇಳಿದಾಗ ಅವನು--ಓ ಕರ್ತನೇ, ಅನೇಕ ಸಹಸ್ರ ಇಸ್ರಾಯೇ ಲ್ಯರ ಬಳಿಗೆ ಹಿಂದಿರುಗು ಅಂದನು.