Numbers · chapter 1 · verse 4
Numbers 1:4 in Kannada
ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ.
Tanna tandeya manege mukhyasthanaada pratiyobbanu ondondu gotrakkoskara nimma sangada irali.
Numbers 1:4 in English
- King James Version (KJV)
- And with you there shall be a man of every tribe; every one head of the house of his fathers.
- World English Bible (WEB)
- With you there shall be a man of every tribe, each one head of his fathers’ house.
- American Standard Version (ASV)
- And with you there shall be a man of every tribe; every one head of his fathers’ house.
- Bible in Basic English (BBE)
- And to give you help, take one man from every tribe, the head of his father's house.
- Darby Translation (DBY)
- And with you there shall be a man for every tribe, a man who is the head of his father's house.
- Webster's Bible (WBS)
- And with you there shall be a man of every tribe; every one head of the house of his fathers.
- Young's Literal Translation (YLT)
- and with you there is a man for a tribe, each is a head to the house of his fathers.
Read in context
- 2ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಗಳ ಪ್ರಕಾರ ವಾಗಿಯೂ ಗಂಡಸರೆಲ್ಲರ ಹೆಸರುಗಳ ಎಣಿಕೆಯೊಂದಿಗೆ ತಲೆ ತಲೆಗೂ ನೀವು ತಕ್ಕೊಳ್ಳಿರಿ.
- 3ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡುವವರೆಲ್ಲರನ್ನು ಅಂದರೆ ಇಪ್ಪತ್ತು ವರುಷದವರನ್ನೂ ಅದಕ್ಕೆ ಹೆಚ್ಚಾದ ಪ್ರಾಯವುಳ್ಳವ ರನ್ನೂ ಅವರ ಸೈನ್ಯಗಳ ಪ್ರಕಾರ ನೀನೂ ಆರೋನನೂ ಲೆಕ್ಕಮಾಡಿರಿ.
- 4ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ.
- 5ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್,
- 6ಸಿಮೆಯೋನ್ ಗೋತ್ರದಿಂದ ಚೂರೀಷದ್ದೈಯನ ಮಗನಾದ ಶೆಲುವಿಾಯೇಲ್,
Cross references
- Numbers 1:16 ಅರಣ್ಯಕಾಂಡ 1:16ಸಭೆಯವರಲ್ಲಿ ಪ್ರಸಿದ್ಧವಾದವರೂ ತಮ್ಮ ತಂದೆಗಳ ಗೋತ್ರಗಳ ಪ್ರಭುಗಳೂ ಇಸ್ರಾಯೇಲಿನಲ್ಲಿ ಸಹಸ್ರಗಳ ಮುಖ್ಯ ಸ್ಥರೂ ಇವರೇ.
- Exodus 18:25 ವಿಮೋಚನಕಾಂಡ 18:25ಮೋಶೆಯು ಇಸ್ರಾಯೇಲ್ಯರಲ್ಲಿ ಸಮರ್ಥರನ್ನು ಆರಿಸಿಕೊಂಡು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು.
- 1 Chronicles 27:1–22 1 ಪೂರ್ವಕಾಲವೃತ್ತಾಂತ 27:1–22ಆದರೆ ಇಸ್ರಾಯೇಲ್ ಮಕ್ಕಳು ತಮ್ಮ ಲೆಕ್ಕದ ಪ್ರಕಾರವಾಗಿ ಹೀಗೆಯೇ ಇದ್ದರು; ಹೇಗಂದರೆ, ಮುಖ್ಯಸ್ಥರಾದ ಪಿತೃಗಳು ಸಹಸ್ರಗಳಿಗೂ ಶತಗಳಿಗೂ ಅಧಿಪತಿಗಳು. ವರುಷದ ಎಲ್ಲಾ ತಿಂಗಳು ಗಳಲ್ಲಿ ಪ್ರತಿ ತಿಂಗಳು ಒಳಗೆ ಹೋಗಿ ಬರುವ ವರ್ಗ ಗಳ ಕಾರ್ಯಗಳಲ್ಲಿ ಅರಸನನ್ನು ಸೇವಿಸಿದ ಅವರ ಪಾರುಪತ್ಯಗಾರರೂ ಪ್ರತಿ ವರ್ಗಕ್ಕೆ ಇಪ್ಪತ್ತನಾಲ್ಕು ಸಾವಿರ ಮಂದಿಯಾಗಿದ್ದರು. ಮೊದಲನೇ ತಿಂಗಳಿಗೋಸ್ಕರ ಮೊದಲನೇ ವರ್ಗದ ಮೇಲೆ ಜಬ್ದೀಯೇಲನ ಮಗನಾದ ಯಾಷೊ ಬ್ಬಾಮನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಮೊದಲನೇ ತಿಂಗಳಿನ ಸೈನ್ಯದ ಸಮಸ್ತ ಅಧಿಪತಿಗಳಲ್ಲಿದ್ದ ಮುಖ್ಯನಾದವನು ಪೇರಚನ ಮಕ್ಕ ಳಲ್ಲಿ ಒಬ್ಬನಾಗಿದ್ದನು. ಎರಡನೇ ತಿಂಗಳಿನ ವರ್ಗದ ಮೇಲೆ ಅಹೋಹಿಯನಾದ ದೋದೈಯು; ಅವನ ವರ್ಗದಲ್ಲಿ ಮಿಕ್ಲೋತನು ನಾಯಕನಾಗಿದ್ದನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಮೂರನೇ ತಿಂಗಳಿನ ಸೈನ್ಯದ ಮೂರನೇ ಅಧಿಪತಿಯು ಮುಖ್ಯ ನಾಗಿರುವ ಯೆಹೋಯಾದನ ಮಗನಾದ ಬೆನಾ ಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಈ ಬೆನಾಯನು ಮೂವತ್ತು ಮಂದಿಯಲ್ಲಿ ಪರಾಕ್ರಮಶಾಲಿಯಾದವನಾಗಿ ಮೂವತ್ತು ಮಂದಿಯ ಮೇಲೆ ಮುಖ್ಯಸ್ಥನಾಗಿದ್ದನು; ಅವನ ವರ್ಗದಲ್ಲಿ ಅವನ ಮಗನಾದ ಅವ್ಮೆಾಜಾಬಾದನು ಇದ್ದನು. ನಾಲ್ಕನೇ ತಿಂಗಳಿನ ನಾಲ್ಕನೆಯವನು ಯೋವಾಬನ ಸಹೋ ದರನಾದ ಅಸಾಹೇಲನು; ಅವನ ತರುವಾಯ ಅವನ ಮಗನಾದ ಜೆಬದ್ಯನು; ಅವನ ವರ್ಗದಲ್ಲಿ ಇಪ್ಪತ್ತ ನಾಲ್ಕು ಸಾವಿರ ಜನರು. ಐದನೇ ತಿಂಗಳಿನ ಐದನೇ ಅಧಿಪತಿಯು ಇಜ್ರಾಹ್ಯನಾದ ಶಮ್ಹೂತನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಆರನೇ ತಿಂಗಳಿನ ಆರನೆಯವನು ತೆಕೋವಿಯನಾಗಿರುವ ಇಕ್ಕೇಷನ ಮಗನಾದ ಈರನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಏಳನೇ ತಿಂಗಳಿನ ಏಳನೇಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬ ನಾಗಿರುವ ಪೆಲೋನ್ಯನಾದ ಹೆಲೆಚನು; ಅವನ ವರ್ಗ ದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಎಂಟನೇ ತಿಂಗಳಿನ ಎಂಟನೆಯವನು ಜೆರಹೀಯರಲ್ಲಿ ಒಬ್ಬ ನಾಗಿರುವ ಹುಷಾತ್ಯನಾದ ಸಿಬ್ಬೆಕೈಯು; ಅವನ ವರ್ಗ ದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು; ಒಂಭತ್ತನೇ ತಿಂಗಳಿನ ಒಂಭತ್ತನೆಯವನು ಬೆನ್ಯಾವಿಾನ್ಯರಲ್ಲಿ ಒಬ್ಬನಾಗಿರುವ ಅನತೋತ್ಯನಾದ ಅಬೀಯೆಜೆರನು; ಅವನ ವರ್ಗದಲ್ಲಿ ಇಪ್ಪತ್ತುನಾಲ್ಕು ಸಾವಿರ ಜನರು. ಹತ್ತನೇ ತಿಂಗಳಿನ ಹತ್ತನೆಯವನು ಜೆರಹೀಯರಲ್ಲಿ ಒಬ್ಬನಾಗಿರುವ ನೆಟೋಫದವನಾದ ಮಹರೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕುಸಾವಿರ ಜನರು. ಹನ್ನೊಂದನೇ ತಿಂಗಳಿನ ಹನ್ನೊಂದನೆಯವನು ಎಫ್ರಾಯಾಮನ ಮಕ್ಕಳಲ್ಲಿ ಒಬ್ಬನಾಗಿರುವ ಪಿರ್ರಾ ತೋನ್ಯನಾದ ಬೆನಾಯನು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಹನ್ನೆರಡನೇ ತಿಂಗ ಳಿನ ಹನ್ನೆರಡನೆಯವನು ಒತ್ನೀಯೇಲನ ಮಕ್ಕಳಲ್ಲಿ ಒಬ್ಬನಾಗಿರುವ ನೆಟೋಫದವನಾದ ಹೆಲ್ದೈಯು; ಅವನ ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಜನರು. ಇಸ್ರಾಯೇಲಿನ ಗೋತ್ರಗಳ ಮೇಲೆ ಇರುವ ವರು ಯಾರಂದರೆ, ರೂಬೇನ್ಯರ ನಾಯಕನು ಜಿಕ್ರೀಯ ಮಗನಾದ ಎಲೀಯೆಜೆರನು. ಸಿಮೆಯೋನ್ಯರಿಗೆ ಮಾಕನ ಮಗನಾದ ಶೆಫಟ್ಯನು. ಲೇವಿಯರಿಗೆ ಕೆಮು ವೇಲನ ಮಗನಾದ ಹಷಬ್ಯನು. ಆರೋನ್ಯರಿಗೆ ಚಾದೋಕನು; ಯೆಹೂದನಿಗೆ ದಾವೀದನ ಸಹೋ ದರರಲ್ಲಿ ಒಬ್ಬನಾಗಿರುವ ಎಲೀಹುವು; ಇಸ್ಸಾಕಾರನಿಗೆ ವಿಾಕಾಯೇಲನ ಮಗನಾದ ಒಮ್ರಿಯು; ಜೆಬು ಲೋನನಿಗೆ, ಒಬದ್ಯನ ಮಗನಾದ ಇಷ್ಮಾಯನು; ನಫ್ತಾಲಿಯ ಗೋತ್ರಕ್ಕೆ ಅಜ್ರಿಯೇಲನ ಮಗನಾದ ಯೆರೀಮೋತನು; ಎಫ್ರಾಯಾಮನ ಮಕ್ಕಳಿಗೆ ಅಜಜ್ಯನ ಮಗನಾದ ಹೊಷೇಯನು; ಮನಸ್ಸೆಯ ಅರ್ಧಗೋತ್ರಕ್ಕೆ ಪೆದಾಯನ ಮಗನಾದ ಯೋವೇ ಲನು. ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರಕ್ಕೆ ಜೆಕರ್ಯನ ಮಗನಾದ ಇದ್ದೋನು, ಬೆನ್ಯಾವಿಾನನ ಗೋತ್ರಕ್ಕೆ ಅಬ್ನೇರನ ಮಗನಾದ ಯಗಸೀಯೇಲನು. ದಾನನ ಗೋತ್ರಕ್ಕೆ ಯೆರೋ ಹಾಮನ ಮಗನಾದ ಅಜರೇಲನು. ಇವರೇ ಇಸ್ರಾ ಯೇಲಿನ ಗೋತ್ರಗಳ ಪ್ರಧಾನರು.
- Joshua 22:14 ಯೆಹೋಶುವ 22:14ಅವನ ಸಂಗಡ ಇಸ್ರಾಯೇಲಿನ ಎಲ್ಲಾ ಗೋತ್ರಗಳ ಪ್ರತಿ ತಂದೆ ಮನೆಯ ಮುಖ್ಯಸ್ಥನ ಪ್ರಕಾರ ಹತ್ತುಮಂದಿ ಪ್ರಧಾನ ರನ್ನೂ ಕಳುಹಿಸಿದರು. ಇವರಲ್ಲಿ ಪ್ರತಿ ಮನುಷ್ಯನು ಇಸ್ರಾಯೇಲ್ ಸಹಸ್ರಗಳಲ್ಲಿ ತನ್ನ ತನ್ನ ತಂದೆಯ ಮನೆಗೆ ಮುಖ್ಯಸ್ಥನಾಗಿದ್ದನು.
- Deuteronomy 1:15 ಧರ್ಮೋಪದೇಶಕಾಂಡ 1:15ನಾನು ನಿಮ್ಮ ಕುಟುಂಬಗಳ ಮುಖ್ಯಸ್ಥರಾಗಿದ್ದ ಜ್ಞಾನಿಗಳಾದ ಪ್ರಸಿದ್ಧ ಮನುಷ್ಯರನ್ನು ತಕ್ಕೊಂಡು ನಿಮ್ಮ ಮೇಲೆ ಮುಖ್ಯಸ್ಥರಾಗಿರುವ ಹಾಗೆ ಸಹಸ್ರಾಧಿ ಪತಿಗಳಾಗಿಯೂ ಶತಾಧಿಪತಿಗಳಾಗಿಯೂ ಪಂಚಶ ತಾಧಿಪತಿಗಳಾಗಿಯೂ ದಶಾಧಿಪತಿಗಳಾಗಿಯೂ
- Numbers 2:3–31 ಅರಣ್ಯಕಾಂಡ 2:3–31ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಇಳುಕೊಳ್ಳುವವರು ಅವರವರ ಸೈನ್ಯಗಳ ಪ್ರಕಾರ ಯೆಹೂದನ ದಂಡಿನ ಧ್ವಜವು; ಯೆಹೂದನ ಮಕ್ಕಳಿಗೆ ಅವ್ಮೆಾನಾದಾಬನ ಮಗನಾದ ನಹಶೋನನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಎಪ್ಪತ್ತನಾಲ್ಕು ಸಾವಿರದ ಆರುನೂರು. ಅವನ ಬಳಿ ಯಲ್ಲಿ ಇಳುಕೊಳ್ಳುವವರು ಇಸ್ಸಾಕಾರನ ಗೋತ್ರವು; ಇಸ್ಸಾಕಾರನ ಮಕ್ಕಳಿಗೆ ಚೂವಾರನ ಮಗನಾದ ನೆತನೇಲನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪ ಟ್ಟವರೂ ಐವತ್ತು ನಾಲ್ಕುಸಾವಿರದ ನಾಲ್ಕುನೂರು. ಜೆಬುಲೂನನ ಮಕ್ಕಳಿಗೆ ಹೇಲೋನನ ಮಗನಾದ ಎಲೀಯಾಬನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೇಳುಸಾವಿರದ ನಾಲ್ಕುನೂರು. ಯೆಹೂದನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರ ಲಕ್ಷದ ಎಂಭತ್ತಾರು ಸಾವಿರದ ನಾಲ್ಕುನೂರು. ಅವರು ಮೊದಲು ಹೊರಡತಕ್ಕವರು. ರೂಬೇನನ ಪಾಳೆಯದ ಧ್ವಜವು ಅವರವರ ಸೈನ್ಯಗಳ ಪ್ರಕಾರ ತೆಂಕಣದಲ್ಲಿರುವದು; ರೂಬೇನನ ಮಕ್ಕಳಿಗೆ ಶೆದೇಯೂರನ ಮಗನಾದ ಎಲೀಚೂರನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತಾರು ಸಾವಿರದ ಐದುನೂರು. ಅವನ ಬಳಿ ಯಲ್ಲಿ ಇಳುಕೊಳ್ಳುವವರು ಸಿಮೆಯೋನನ ಗೋತ್ರ ದವರು; ಸಿಮೆಯೋನನ ಮಕ್ಕಳಿಗೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತೊಂಭತ್ತು ಸಾವಿರದ ಮುನ್ನೂರು. ತರುವಾಯ ಗಾದನ ಗೋತ್ರವು: ಗಾದನ ಮಕ್ಕಳಿಗೆ ರೆಗೂವೇಲನ ಮಗ ನಾದ ಎಲ್ಯಾಸಾಫನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೈದು ಸಾವಿರದ ಆರುನೂರ ಐವತ್ತು. ರೂಬೇನನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರವರ ಸೈನ್ಯಗಳ ಪ್ರಕಾರ ಲಕ್ಷದ ಐವತ್ತೊಂದು ಸಾವಿರದ ನಾನೂರಐವತ್ತು; ಅವರು ಎರಡನೆಯದಾಗಿ ಹೊರಡತಕ್ಕದ್ದು. ತರುವಾಯ ಸಭೆಯ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಕಡೆ ಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು. ಎಫ್ರಾಯಾಮಿನವರ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಪಶ್ಚಿಮದಲ್ಲಿರುವದು; ಎಫ್ರಾ ಯಾಮನ ಮಕ್ಕಳಿಗೆ ಅವ್ಮೆಾಹೂದನ ಮಗನಾದ ಎಲೀಷಾಮಾನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತು ಸಾವಿರದ ಐದು ನೂರು. ಅವನ ಬಳಿಯಲ್ಲಿ ಮನಸ್ಸೆ ಗೋತ್ರವು; ಮನಸ್ಸೆ ಮಕ್ಕಳಿಗೆ ಪೆದಾಚೂರನ ಮಗನಾದ ಗವ್ಲೆಾಯೇಲನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಮೂವತ್ತೆರಡು ಸಾವಿರದ ಇನ್ನೂರು. ತರುವಾಯ ಬೆನ್ಯಾವಿಾನನ ಗೋತ್ರವು; ಬೆನ್ಯಾವಿಾನನ ಮಕ್ಕಳಿಗೆ ಗಿದ್ಯೋನಿಯ ಮಗನಾದ ಅಬೀದಾನನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಮುವತ್ತೈದು ಸಾವಿರದ ನಾಲ್ಕುನೂರು. ಎಫ್ರಾಯಾಮನ ಪಾಳೆ ಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಅವರ ಸೈನ್ಯಗಳ ಪ್ರಕಾರವಾಗಿ ಲಕ್ಷದ ಎಂಟುಸಾವಿರದ ನೂರು. ಇವರು ಮೂರನೆಯವರಾಗಿ ಹೊರಡತಕ್ಕವರು. ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವದು. ದಾನನ ಮಕ್ಕಳಿಗೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಅರವತ್ತೆರಡು ಸಾವಿರದ ಏಳು ನೂರು. ಅವನ ಬಳಿಯಲ್ಲಿ ಇಳುಕೊಳ್ಳುವವರು ಆಶೇರನ ಗೋತ್ರ ದವರು; ಆಶೇರನ ಮಕ್ಕಳಿಗೆ ಒಕ್ರಾನನ ಮಗನಾದ ಪಗೀಯೇಲನು ಸೈನ್ಯಾಧಿಪತಿ; ಅವನ ಸೈನ್ಯವೂ ಎಣಿಸಲ್ಪಟ್ಟವರೂ ನಲವತ್ತೊಂದು ಸಾವಿರದ ಐದು ನೂರು. ತರುವಾಯ ನಫ್ತಾಲಿ ಗೋತ್ರದವರು; ನಫ್ತಾಲಿ ಮಕ್ಕಳಿಗೆ ಏನಾನನ ಮಗನಾದ ಅಹೀರನು ಸೈನ್ಯಾಧಿಪತಿ. ಅವನ ಸೈನ್ಯವೂ ಎಣಿಸಲ್ಪಟ್ಟವರೂ ಐವತ್ತಮೂರು ಸಾವಿರದ ನಾಲ್ಕುನೂರು. ದಾನನ ಪಾಳೆಯದಲ್ಲಿ ಎಣಿಸಲ್ಪಟ್ಟವರೆಲ್ಲರೂ ಲಕ್ಷದ ಐವತ್ತೇಳು ಸಾವಿರದ ಆರುನೂರು. ಅವರು ತಮ್ಮ ಧ್ವಜಗಳ ಪ್ರಕಾರ ಕಡೆಯವರಾಗಿ ಹೊರಡತಕ್ಕದ್ದು.
- Numbers 7:10–83 ಅರಣ್ಯಕಾಂಡ 7:10–83ಪ್ರಧಾನರು ಬಲೀಪೀಠದ ಪ್ರತಿಷ್ಠೆಗಾಗಿ ಅಭಿಷೇ ಕಿಸಿದ ದಿನದಲ್ಲಿ ಅದನ್ನು ಅರ್ಪಿಸಿದರು. ಪ್ರಧಾನರು ಬಲಿಪೀಠದ ಮುಂದೆ ತಮ್ಮ ಅರ್ಪಣೆಯನ್ನು ಅರ್ಪಿಸಿ ದರು. ಕರ್ತನು ಮೋಶೆಗೆ ಹೇಳಿದ್ದೇನಂದರೆ--ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿ ಪೀಠದ ಪ್ರತಿಷ್ಠೆಗಾಗಿ ತನ್ನ ಅರ್ಪಣೆಯನ್ನು ಅರ್ಪಿಸಬೇಕು. ಮೊದಲನೇ ದಿವಸದಲ್ಲಿ ತನ್ನ ಅರ್ಪಣೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅವ್ಮೆಾನಾ ದಾಬನ ಮಗನಾದ ನಹಶೋನನು. ಅವನ ಅರ್ಪಣೆ ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರದ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾನಾ ದಾಬನ ಮಗನಾದ ನಹಶೋನನ ಅರ್ಪಣೆಯು. ಎರಡನೇ ದಿವಸದಲ್ಲಿ ಇಸ್ಸಾಕಾರನ ಪ್ರಧಾನ ನಾಗಿರುವ ಚೂವಾರನ ಮಗನಾದ ನೆತನೇಲನು ಅರ್ಪಿ ಸಿದನು. ಅವನು ಅರ್ಪಿಸಿದ ಅರ್ಪಣೆ ಏನಂದರೆ, ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯನ್ನೂ ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂವಾರನ ಮಗನಾದ ನೆತನೇಲನ ಅರ್ಪಣೆಯು. ಮೂರನೆ ದಿವಸದಲ್ಲಿ ಜೆಬುಲೂನನ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗನಾದ ಎಲೀಯಾಬನು ಅರ್ಪಿಸಿದ್ದು. ಅವನ ಅರ್ಪಣೆ ಏನಂದರೆ-- ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಹೇಲೋನನ ಮಗನಾದ ಎಲೀಯಾಬನ ಅರ್ಪಣೆಯು. ನಾಲ್ಕನೇ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾ ನನಾಗಿರುವ ಶೆದೇಯೂರನ ಮಗನಾದ ಎಲೀಚೂ ರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರು ಷದ ಐದು ಕುರಿಮರಿಗಳೂ. ಇದು ಶೆದೇಯೂರನ ಮಗನಾದ ಎಲೀಚೂರನ ಅರ್ಪಣೆಯು. ಐದನೇ ದಿನದಲ್ಲಿ ಸಿಮೆಯೋನ ಮಕ್ಕಳಿಗೆ ಪ್ರಧಾನನಾಗಿರುವ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಅರ್ಪಿಸಿದನು. ಅವನ ಅರ್ಪ ಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂರಿಷದ್ದೈ ಯನ ಮಗನಾದ ಶೆಲುವಿಾಯೇಲನ ಅರ್ಪಣೆಯು. ಆರನೇ ದಿನದಲ್ಲಿ ಗಾದನ ಮಕ್ಕಳಿಗೆ ಪ್ರಧಾನ ನಾಗಿರುವ ದೆಗೂವೇಲನ ಮಗನಾದ ಎಲ್ಯಾಸಾಫನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ದೆಗೂವೇಲನ ಮಗನಾದ ಎಲ್ಯಾಸಾಫನ ಅರ್ಪಣೆಯು. ಏಳನೇ ದಿನದಲ್ಲಿ ಎಫ್ರಾಯಾಮ್ ಮಕ್ಕಳಿಗೆ ಪ್ರಧಾನನಾದ ಅವ್ಮೆಾಹೂದನ ಮಗನಾದ ಎಲೀಷಾಮನು ಅರ್ಪಿಸಿದನು. ಅವನ ಅರ್ಪಣೆ ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಹೂದನ ಮಗನಾದ ಎಲೀಷಾಮನ ಅರ್ಪಣೆಯು. ಎಂಟನೇ ದಿನದಲ್ಲಿ ಮನಸ್ಸೆ ಮಕ್ಕಳಿಗೆ ಪ್ರಧಾನನಾದ ಪೆದಾಚೂರನ ಮಗನಾದ ಗವ್ಲೆಾ ಯೇಲ್ ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ,--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಪೆದಾಚೂರನ ಮಗನಾದ ಗವ್ಲೆಾಯೇಲನ ಅರ್ಪಣೆಯು. ಒಂಭತ್ತನೇ ದಿನದಲ್ಲಿ ಬೆನ್ಯಾವಿಾನನ ಮಕ್ಕಳಿಗೆ ಪ್ರಧಾನನಾದ ಗಿದ್ಯೋನಿಯ ಮಗನಾದ ಅಬೀದಾ ನನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಗಿದ್ಯೋನಿಯ ಮಗನಾದ ಅಬೀದಾನನ ಅರ್ಪಣೆಯು. ಹತ್ತನೆಯ ದಿನದಲ್ಲಿ ದಾನನ ಮಕ್ಕಳಿಗೆ ಪ್ರಧಾನ ನಾದ ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನ ಅರ್ಪಣೆಯು. ಹನ್ನೊಂದನೆಯ ದಿನದಲ್ಲಿ ಆಶೇರನ ಮಕ್ಕಳಿಗೆ ಪ್ರಧಾನನಾದ ಒಕ್ರಾನನ ಮಗನಾದ ಪಗೀಯೇಲನು ಅರ್ಪಿಸಿದನು. ಅವನ ಆರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ ಇದು ಒಕ್ರಾನನ ಮಗನಾದ ಪಗೀ ಯೇಲನ ಅರ್ಪಣೆಯು. ಹನ್ನೆರಡನೆ ದಿನದಲ್ಲಿ ನಫ್ತಾಲಿ ಮಕ್ಕಳಿಗೆ ಪ್ರಧಾನ ನಾದ ಏನಾನನ ಮಗನಾದ ಅಹೀರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಏನಾನನ ಮಗನಾದ ಅಹೀರನ ಅರ್ಪಣೆಯು.
- Numbers 10:14–27 ಅರಣ್ಯಕಾಂಡ 10:14–27ಯೂದನ ಮಕ್ಕಳ ಪಾಳೆಯದ ಧ್ವಜವು ಅದರ ಸೈನ್ಯಗಳ ಪ್ರಕಾರ ಮೊದಲು ಹೊರಟಿತು. ಅವರ ಸೈನ್ಯದ ಮೇಲೆ ಅವ್ಮೆಾನಾದಾಬನ ಮಗನಾದ ನಹಶೋ ನನು ಇದ್ದನು. ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗನಾದ ನೆತನೇಲನು ಇದ್ದನು. ಜೆಬುಲೂನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗನಾದ ಎಲೀಯಾಬನು ಇದ್ದನು. ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ ಮೆರಾರೀಯ ಮಕ್ಕಳೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು. ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು. ಸಿಮೆಯೋನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಇದ್ದನು. ಗಾದನ ಮಕ್ಕಳ ಗೋತ್ರದ ಸೈನ್ಯದ ಮೇಲೆ ದೆಗೂವೇಲನ ಮಗನಾದ ಎಲ್ಯಾಸಾಫನು ಇದ್ದನು. ಪರಿಶುದ್ಧ ಸ್ಥಳವನ್ನು ಹೊರುವ ಕೆಹಾತ್ಯರು ಹೊರಟರು; ಇವರು ಬರುವಷ್ಟರೊಳಗೆ ಅವರು ಗುಡಾರವನ್ನು ನಿಲ್ಲಿಸಿದರು. ಎಫ್ರಾಯಾಮಿನ ಮಕ್ಕಳ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಅವ್ಮೆಾಹೂದನ ಮಗನಾದ ಎಲೀಷಾಮನು ಇದ್ದನು. ಮನಸ್ಸೆಯ ಮಕ್ಕಳ ಗೋತ್ರದ ಮೇಲೆ ಪೆದಾಚೂರನ ಮಗನಾದ ಗವ್ಮೆಾಯೇಲನು ಇದ್ದನು. ಬೆನ್ಯಾವಿಾನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಗಿದ್ಯೋನಿಯ ಮಗನಾದ ಅಬೀದಾನನು ಇದ್ದನು. ದಾನನ ಮಕ್ಕಳ ಪಾಳೆಯದ ಧ್ವಜವು ಸಮಸ್ತ ಪಾಳೆಯಗಳ ಹಿಂದೆ ಅವರ ಸೈನ್ಯಗಳ ಪ್ರಕಾರ ಹೊರಟಿತು. ಅವನ ಸೈನ್ಯದ ಮೇಲೆ ಅವ್ಮೆಾಷದ್ದೈಯನ ಮಗನಾದ ಅಹೀಗೆಜರನು ಇದ್ದನು. ಆಶೇರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಒಕ್ರಾನನ ಮಗ ನಾದ ಪಗೀಯೇಲನು ಇದ್ದನು. ನಫ್ತಾಲಿಯ ಮಕ್ಕಳ ಗೋತ್ರದ ಸೈನ್ಯದ ಮೇಲೆ ಏನಾನ ಮಗನಾದ ಅಹೀರನು ಇದ್ದನು.
- Numbers 25:4 ಅರಣ್ಯಕಾಂಡ 25:4ಆಗ ಕರ್ತನು ಮೋಶೆಗೆ--ಕರ್ತನ ಕೋಪಾಗ್ನಿಯು ಇಸ್ರಾಯೇಲಿ ನಿಂದ ತಿರುಗಿಕೊಳ್ಳುವ ಹಾಗೆ ನೀನು ಜನರ ಮುಖ್ಯಸ್ಥ ರೆಲ್ಲರನ್ನು ತಕ್ಕೊಂಡು ಅವರನ್ನು ಸೂರ್ಯನಿಗೆದುರಾಗಿ ಕರ್ತನ ಮುಂದೆ ತೂಗಹಾಕು.
- Numbers 17:3 ಅರಣ್ಯಕಾಂಡ 17:3ಆರೋನನ ಹೆಸರನ್ನು ಲೇವಿಯ ಕೋಲಿನ ಮೇಲೆ ಬರೆಯಬೇಕು. ಅವರ ಪಿತೃಗಳ ಮನೆಯ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು.
- Numbers 34:18–28 ಅರಣ್ಯಕಾಂಡ 34:18–28ದೇಶದ ಸ್ವಾಸ್ತ್ಯವನ್ನು ಹಂಚುವದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತಕ್ಕೊಳ್ಳಿರಿ. ಈ ಮನುಷ್ಯರ ಹೆಸರುಗಳು ಇವೇ: ಯೆಹೂದನ ಕುಟುಂಬದಿಂದ ಯೆಪುನ್ನೆಯ ಮಗನಾದ ಕಾಲೇಬನೂ ಸಿಮೆಯೋನನ ಮಕ್ಕಳ ಗೋತ್ರದಿಂದ ಅವ್ಮೆಾಹೂ ದನ ಮಗನಾದ ಶೆಮೂವೇಲನೂ ಬೆನ್ಯಾವಿಾನನ ಗೋತ್ರದಿಂದ ಕಿಸ್ಲೋನನ ಮಗನಾದ ಎಲೀದಾದನೂ ದಾನನ ಮಕ್ಕಳ ಗೋತ್ರದ ಪ್ರಧಾನನು ಯೊಗ್ಲೀಯ ಮಗನಾದ ಬುಕ್ಕೀಯೂ ಯೋಸೇಫನ ಮಕ್ಕಳಾದ ಮನಸ್ಸೆಯ ಗೋತ್ರದ ಪ್ರಧಾನನು ಎಫೋದನ ಮಗನಾದ ಹನ್ನೀಯೇಲನೂ ಎಫ್ರಾಯಾಮ್ ಮಕ್ಕಳ ಗೋತ್ರದ ಪ್ರಧಾನನು ಶಿಫ್ಟಾನನ ಮಗನಾದ ಕೆಮೂವೇಲನೂ ಜೆಬುಲೂನನ ಮಕ್ಕಳ ಗೋತ್ರದ ಪ್ರಧಾನನು ಪರ್ನಾಕನ ಮಗನಾದ ಎಲೀಚಾಫಾನನೂ ಇಸ್ಸಾಕಾರನ ಮಕ್ಕಳ ಗೋತ್ರದ ಪ್ರಧಾನನು ಅಜ್ಜಾನನ ಮಗನಾದ ಪಲ್ಟೀಯೇಲನೂ ಆಶೇರನ ಮಕ್ಕಳ ಗೋತ್ರದ ಪ್ರಧಾನನು ಶೆಲೋಮಿಯ ಮಗನಾದ ಅಹೀಹೂದನೂ ನಫ್ತಾಲಿಯ ಮಕ್ಕಳ ಗೋತ್ರದ ಪ್ರಧಾನನು ಅವ್ಮೆಾಹೂದನ ಮಗನಾದ ಪೆದಹೇಲನೂ.ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಸ್ವಾಸ್ತ್ಯವನ್ನು ಹಂಚುವದಕ್ಕೆ ಕರ್ತನು ನೇಮಿಸಿದ ಮನುಷ್ಯರು ಇವರೇ.
- Numbers 13:2–15 ಅರಣ್ಯಕಾಂಡ 13:2–15ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು. ಆಗ ಮೋಶೆಯು ಕರ್ತನ ಆಜ್ಞೆಯಂತೆ ಪಾರಾನ್ ಅರಣ್ಯ ದಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾ ಯೇಲ್ ಮಕ್ಕಳ ಮುಖ್ಯಸ್ಥರಾಗಿದ್ದರು. ಅವರ ಹೆಸರುಗಳು ಯಾವವಂದರೆ: ರೂಬೇನ್ ಗೋತ್ರದ ಜಕ್ಕೂರನ ಮಗನಾದ ಶಮ್ಮೂವನು, ಸಿಮೆಯೋನ್ ಗೋತ್ರದ ಹೋರಿಯ ಮಗನಾದ ಶಾಫಾಟನು, ಯೂದಾ ಗೋತ್ರದ ಯೆಫುನ್ನೆಯ ಮಗನಾದ ಕಾಲೇಬನು, ಇಸ್ಸಾಕಾರ್ ಗೋತ್ರದ ಯೋಸೇಫನ ಮಗನಾದ ಇಗಾಲನು, ಎಫ್ರಾಯಾಮ್ ಗೋತ್ರದ ನೂನನ ಮಗನಾದ ಹೋಶೇಯನು, ಬೆನ್ಯಾವಿಾನ್ ಗೋತ್ರದ ರಾಫೂವನ ಮಗನಾದ ಪಲ್ಟೀಯು, ಜೆಬುಲೂನ್ ಗೋತ್ರದ ಸೋದೀಯ ಮಗನಾದ ಗದ್ದೀಯೇಲ್, ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗನಾದ ಗದ್ದೀ, ದಾನ್ ಗೋತ್ರದ ಗೆಮಲ್ಲೀಯನ ಮಗನಾದ ಅವ್ಮೆಾಯೇಲನು, ಆಶೇರ್ ಗೋತ್ರದ ವಿಾಕಾ ಯೇಲನ ಮಗನಾದ ಸೆತೂರ್, ನಫ್ತಾಲಿ ಗೋತ್ರದ ವಾಪೆಸೀಯನ ಮಗನಾದ ನಹಬೀ, ಗಾದನ ಗೋತ್ರದ ಮಾಕೀಯನ ಮಗನಾದ ಗೆಯೂವೇಲ್.