Numbers · chapter 8 · verse 7
Numbers 8:7 in Kannada
ಅವರನ್ನು ಶುದ್ಧಮಾಡುವದಕ್ಕೆ ಅವರಿಗೆ ಮಾಡಬೇಕಾದದ್ದೇನಂದರೆ--ಶುದ್ಧಿಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಆಗ ಅವರು ತಮ್ಮ ಶರೀರವನ್ನೆಲ್ಲಾ ಕ್ಷೌರಮಾಡಿಸಿಕೊಂಡು ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧಮಾಡಿಕೊಳ್ಳುವಂತೆ ಮಾಡು.
Avarannu shuddhamaaduvadakke avarige maadabekaadaddenandare--shuddhimaaduva neerannu avara mele chimukisu. Aaga avaru tamma shareeravannellaa kshauramaadisikondu avaru tamma vastragalannu ogedukollali. Heege avaru tammannu taave shuddhamaadikolluvante maadu.
Numbers 8:7 in English
- King James Version (KJV)
- And thus shalt thou do unto them, to cleanse them: Sprinkle water of purifying upon them, and let them shave all their flesh, and let them wash their clothes, and [so] make themselves clean.
- World English Bible (WEB)
- You shall do this to them to cleanse them: sprinkle the water of cleansing on them, let them shave their whole bodies with a razor, let them wash their clothes, and cleanse themselves.
- American Standard Version (ASV)
- And thus shalt thou do unto them, to cleanse them: sprinkle the water of expiation upon them, and let them cause a razor to pass over all their flesh, and let them wash their clothes, and cleanse themselves.
- Bible in Basic English (BBE)
- And this is how you are to make them clean: let the holy water which takes away sin be put on them, and let the hair all over their bodies be cut off with a sharp blade, and let their clothing be washed and their bodies made clean.
- Darby Translation (DBY)
- And thus shalt thou do unto them, to cleanse them: sprinkle upon them water of purification from sin; and they shall pass the razor over all their flesh, and shall wash their garments, and make themselves clean.
- Webster's Bible (WBS)
- And thus shalt thou do to them, to cleanse them: Sprinkle water of purifying upon them, and let them shave all their flesh, and let them wash their clothes, and [so] make themselves clean.
- Young's Literal Translation (YLT)
- 'And thus thou dost to them to cleanse them: sprinkle upon them waters of atonement, and they have caused a razor to pass over all their flesh, and have washed their garments, and cleansed themselves,
Read in context
- 5ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ--
- 6ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡು ಅವರನ್ನು ಶುದ್ಧ ಮಾಡು.
- 7ಅವರನ್ನು ಶುದ್ಧಮಾಡುವದಕ್ಕೆ ಅವರಿಗೆ ಮಾಡಬೇಕಾದದ್ದೇನಂದರೆ--ಶುದ್ಧಿಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಆಗ ಅವರು ತಮ್ಮ ಶರೀರವನ್ನೆಲ್ಲಾ ಕ್ಷೌರಮಾಡಿಸಿಕೊಂಡು ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧಮಾಡಿಕೊಳ್ಳುವಂತೆ ಮಾಡು.
- 8ಅವರು ಒಂದು ಎಳೇ ಹೋರಿಯನ್ನು ಅದರೊಂದಿಗೆ ಆಹಾರ ಸಮರ್ಪಣೆಯನ್ನು ಅಂದರೆ ಎಣ್ಣೇ ಬೆರೆಸಿದ ನಯ ವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ಪಾಪದ ಬಲಿ ಗಾಗಿ ಮತ್ತೊಂದು ಎಳೇ ಹೋರಿಯನ್ನೂ ನೀನು ತೆಗೆದುಕೋ.
- 9ಆಗ ನೀನು ಲೇವಿಯರನ್ನು ಸಭೆಯ ಗುಡಾರದ ಮುಂದೆ ಕರತಂದು ಇಸ್ರಾಯೇಲ್ಯರ ಸಮಸ್ತ ಸಭೆಯನ್ನು ಒಟ್ಟುಗೂಡಿಸಬೇಕು.
Cross references
- Numbers 19:7–10 ಅರಣ್ಯಕಾಂಡ 19:7–10ಆಗ ಯಾಜಕನು ತನ್ನ ವಸ್ತ್ರಗಳನ್ನು ಒಗೆದುಕೊಂಡು ತನ್ನ ಶರೀರವನ್ನು ನೀರಿನಲ್ಲಿ ತೊಳೆಯ ಬೇಕು; ಆಮೇಲೆ ಪಾಳೆಯದೊಳಗೆ ಬರಬೇಕು. ಯಾಜ ಕನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಅದನ್ನು ಸುಟ್ಟವನೂ ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡು ವಸ್ತ್ರಗಳನ್ನು ಒಗೆದುಕೊಳ್ಳಬೇಕು. ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಶುದ್ಧ ನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಕೊಂಡು ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಹಾಕಬೇಕು; ಅದು ಅಲ್ಲಿ ಇಸ್ರಾಯೇಲ್ ಮಕ್ಕಳ ಸಭೆಗೆ ಹೊಲೆಗಳೆವ ನೀರಾಗಿ ಇಡಲ್ಪಡಬೇಕು; ಇದು ಪಾಪದ ಶುದ್ಧೀಕರಣವಾಗಿರುವದು. ಹಸುವಿನ ಬೂದಿಯನ್ನು ಕೂಡಿಸಿದವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು. ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಇಸ್ರಾಯೇಲ್ ಮಕ್ಕಳಿಗೂ ಅವರ ಮಧ್ಯದಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ಇದು ಶಾಶ್ವತ ಕಟ್ಟಳೆಯಾಗಿರಬೇಕು.
- Leviticus 8:6 ಯಾಜಕಕಾಂಡ 8:6ಮೋಶೆಯು ಆರೋನನನ್ನೂ ಅವನ ಕುಮಾರ ರನ್ನೂ ಹತ್ತಿರಕ್ಕೆ ಬರಮಾಡಿ ಅವರಿಗೆ ಸ್ನಾನಮಾಡಿಸಿ ದನು.
- Numbers 19:13 ಅರಣ್ಯಕಾಂಡ 19:13ಸತ್ತ ಮನುಷ್ಯನ ಹೆಣವನ್ನು ಮುಟ್ಟಿ ಶುದ್ಧಮಾಡಿ ಕೊಳ್ಳದ ಯಾವನಾದರೂ ಕರ್ತನ ಗುಡಾರವನ್ನು ಹೊಲೆಮಾಡುತ್ತಾನೆ; ಅವನು ಇಸ್ರಾಯೇಲಿನವರೊ ಳಗಿಂದ ತೆಗೆದುಹಾಕಲ್ಪಡಲಿ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚೆಲ್ಲಲ್ಪಡದ ಕಾರಣ ಅಶುದ್ಧನಾಗಿದ್ದಾನೆ; ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇದೆ.
- James 4:8 ಯಾಕೋಬನು 4:8ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ.
- Leviticus 15:6 ಯಾಜಕಕಾಂಡ 15:6ಇದಲ್ಲದೆ ಸ್ರಾವವಿರುವವನು ಕೂತುಕೊಂಡ ಯಾವುದೇ ವಸ್ತು ವಿನ ಮೇಲೆ ಕೂತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
- Leviticus 15:10–11 ಯಾಜಕಕಾಂಡ 15:10–11ಇದಲ್ಲದೆ ಅವನ ಕೆಳಗಿರುವ ಯಾವದಾದರೂ ವಸ್ತುವನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವುಗಳಲ್ಲಿ ಯಾವದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು. ಸ್ರಾವವುಳ್ಳ ವನು ತನ್ನ ಕೈಗಳನ್ನು ನೀರಿನಿಂದ ತೊಳೆದುಕೊಳ್ಳದೆ ಯಾರನ್ನಾದರೂ ಮುಟ್ಟಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
- Psalm 51:2 ಕೀರ್ತನೆಗಳು 51:2ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು.
- Leviticus 15:27 ಯಾಜಕಕಾಂಡ 15:27ಯಾವನಾದರು ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧ ನಾಗಿರುವನು, ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
- Isaiah 52:15 ಯೆಶಾಯ 52:15ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
- Leviticus 16:28 ಯಾಜಕಕಾಂಡ 16:28ಅವು ಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಕ್ಕೆ ಬರಬೇಕು.
- 1 Peter 3:21 1 ಪೇತ್ರನು 3:21ಆ ನೀರಿಗೆ ಅನುರೂಪವಾದ ಬಾಪ್ತಿಸ್ಮವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; (ಅದು ಮೈಕೊಳೆಯನ್ನು ಹೋಗಲಾಡಿ ಸುವಂಥದ್ದಲ್ಲ. ಆದರೆ ದೇವರ ಕಡೆಗಿರುವ ನಮ್ಮ ಒಳ್ಳೇ ಮನಸ್ಸಾಕ್ಷಿಯ ಉತ್ತರವಾಗಿದೆ).ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೂತರೂ ಪ್ರಭುತ್ವ ಗಳೂ ಅಧಿಕಾರಗಳೂ ಆತನಿಗೆ ಅಧೀನ ಮಾಡಲ್ಪಟ್ಟಿದ್ದಾರೆ.
- Numbers 19:17–19 ಅರಣ್ಯಕಾಂಡ 19:17–19ಅಪವಿತ್ರನಾದವನಿಗೋಸ್ಕರ ಸುಡಲ್ಪಟ್ಟ ಪಾಪ ಕಳೆಯುವ ಹಸುವಿನ ಬೂದಿಯನ್ನು ತಕ್ಕೊಂಡು ಒಂದು ಪಾತ್ರೆಯೊಳಗಿಟ್ಟು ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತಕ್ಕೊಂಡು ನೀರಿನಲ್ಲಿ ಅದ್ದಿ ಆ ಡೇರೆಯ ಮೇಲೆಯೂ ಸಮಸ್ತ ಸಾಮಾನುಗಳ ಮೇಲೆಯೂ ಅದರಲ್ಲಿರುವ ಮನುಷ್ಯರ ಮೇಲೆಯೂ ಎಲುಬನ್ನಾದರೂ ಕೊಲ್ಲಲ್ಪಟ್ಟ ವನನ್ನಾದರೂ ಸತ್ತವನನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವನ ಮೇಲೆ ಚಿಮುಕಿಸಬೇಕು. ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು.