Skip to content
ThuthiThuthiThuthi
Philemon · chapter 1 of 1 · 25 verses

Philemon 1 in Kannada

ಫಿಲೆಮೋನನಿಗೆ 1

  1. ಯೇಸು ಕ್ರಿಸ್ತನ ಸೆರೆಯವನಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ ನಮಗೆ ಅತಿ ಪ್ರಿಯನೂ ಜೊತೆಗೆಲಸದವನೂ ಆಗಿರುವ ಫಿಲೆ ಮೋನನಿಗೂ

    Paul, a prisoner of Jesus Christ, and Timothy [our] brother, unto Philemon our dearly beloved, and fellowlabourer,

  2. ನಮ್ಮ ಪ್ರಿಯ ಅಪ್ಫಿಯಳಿಗೂ ನಮ್ಮ ಸಹಭಟನಾದ ಅರ್ಖಿಪ್ಪನಿಗೂ ನಿನ್ನ ಮನೆಯಲ್ಲಿ ಕೂಡುವ ಸಭೆಯವರಿಗೂ ಬರೆಯುವದೇನಂದರೆ--

    And to [our] beloved Apphia, and Archippus our fellowsoldier, and to the church in thy house:

  3. ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.

    Grace to you, and peace, from God our Father and the Lord Jesus Christ.

  4. ನನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿನ್ನನ್ನು ಜ್ಞಾಪಕಮಾಡಿಕೊಂಡು ನನ್ನ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.

    I thank my God, making mention of thee always in my prayers,

  5. ಕರ್ತನಾದ ಯೇಸುವಿನ ಮೇಲೆಯೂ ಪರಿಶುದ್ಧರೆಲ್ಲರ ಮೇಲೆಯೂ ನಿನಗಿರುವ ಪ್ರೀತಿಯನೂ ನಂಬಿಕೆಯನ್ನೂ ಕುರಿತು ಕೇಳಿದ್ದೇನೆ.

    Hearing of thy love and faith, which thou hast toward the Lord Jesus, and toward all saints;

  6. ಹೀಗೆ ನಿನ್ನ ವಿಶ್ವಾಸದ ಅನ್ಯೋನ್ಯತೆಯು ಕ್ರಿಸ್ತ ಯೇಸುವಿನಲ್ಲಿ ಮತ್ತು ನಿನ್ನಲ್ಲಿರುವ ಎಲ್ಲಾ ಒಳ್ಳೇದರ ತಿಳುವಳಿಕೆಯಲ್ಲಿ ಬಲ ವಾಗಿರುವದು.

    That the communication of thy faith may become effectual by the acknowledging of every good thing which is in you in Christ Jesus.

  7. ಸಹೋದರನೇ, ನಿನ್ನ ಮೂಲಕ ಪರಿಶುದ್ಧರ ಹೃದಯಗಳಿಗೆ ಉತ್ತೇಜನವಾದದರಿಂದ ನಿನ್ನ ಪ್ರೀತಿಯ ನಿಮಿತ್ತ ನನಗೆ ಬಹಳ ಸಂತೋಷವೂ ಆದರಣೆಯೂ ಉಂಟಾದವು.

    For we have great joy and consolation in thy love, because the bowels of the saints are refreshed by thee, brother.

  8. ಆದಕಾರಣ ನಿನಗೆ ಯುಕ್ತವಾದದ್ದನ್ನು ಆಜ್ಞಾಪಿಸು ವದಕ್ಕೆ ಕ್ರಿಸ್ತನಲ್ಲಿ ನನಗೆ ಬಹು ಧೈರ್ಯವಿದ್ದರೂ ಹಾಗೆ ಆಜ್ಞಾಪಿಸದೆ

    Wherefore, though I might be much bold in Christ to enjoin thee that which is convenient,

  9. ಮುದುಕನೂ ಈಗ ಯೇಸು ಕ್ರಿಸ್ತನ ಸೆರೆಯವನೂ ಆಗಿರುವ ಪೌಲನೆಂಬ ನಾನು ಪ್ರೀತಿಯ ನಿಮಿತ್ತವೇ ನಿನ್ನನ್ನು ಬೇಡಿಕೊಳ್ಳುತ್ತೇನೆ.

    Yet for love’s sake I rather beseech [thee], being such an one as Paul the aged, and now also a prisoner of Jesus Christ.

  10. ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ.

    I beseech thee for my son Onesimus, whom I have begotten in my bonds:

  11. ಅವನು ಕಳೆದುಹೋದ ಸಮಯದಲ್ಲಿ ನಿನಗೆ ಅಪ್ರಯೋಜಕ ನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜನ ವಾಗಿದ್ದಾನೆ.

    Which in time past was to thee unprofitable, but now profitable to thee and to me:

  12. ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ; ಅದದ ರಿಂದ ನೀನು ಅವನನ್ನು ಸೇರಿಸಿಕೋ.

    Whom I have sent again: thou therefore receive him, that is, mine own bowels:

  13. ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲಿರಲಾಗಿ ನಿನಗೆ ಬದಲಾಗಿ ಅವನು ನನಗೆ ಉಪಚಾರ ಮಾಡುವಂತೆ ಅವನನ್ನು ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಅಪೇಕ್ಷಿಸಿದ್ದೆನು.

    Whom I would have retained with me, that in thy stead he might have ministered unto me in the bonds of the gospel:

  14. ಆದರೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃ ಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.

    But without thy mind would I do nothing; that thy benefit should not be as it were of necessity, but willingly.

  15. ಅವನು ಸ್ವಲ್ಪಕಾಲ ನಿನ್ನಿಂದ ಅಗಲಿಸ ಲ್ಪಟ್ಟದ್ದು ನೀನು ಅವನನ್ನು ನಿರಂತರಕ್ಕೂ ಸೇರಿಸಿಕೊಳ್ಳುವ ದಕ್ಕೋ ಏನೋ.

    For perhaps he therefore departed for a season, that thou shouldest receive him for ever;

  16. ಇನ್ನು ಮೇಲೆ ಅವನು ಸೇವಕನಾಗದೆ ಸೇವಕನಿಗಿಂತ ಉತ್ತಮನಾಗಿ ಪ್ರಿಯ ಸಹೋದರ ನಂತಾಗಬೇಕು; ಅವನು ನನಗೆ ಬಹಳ ಪ್ರಿಯನಾಗಿ ರುವಲ್ಲಿ ನಿನಗೆ ಶರೀರಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ಇನ್ನು ಎಷ್ಟೋ ಪ್ರಿಯನಾಗಿರು ವನು.

    Not now as a servant, but above a servant, a brother beloved, specially to me, but how much more unto thee, both in the flesh, and in the Lord?

  17. ಹಾಗಾದರೆ ನೀನು ನನ್ನನ್ನು ಜೊತೆಗಾರನೆಂದು ಎಣಿಸಿ ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ಅವನನ್ನು ಸೇರಿಸಿಕೋ.

    If thou count me therefore a partner, receive him as myself.

  18. ಅವನಿಂದ ನೀನು ಏನಾದರೂ ನಷ್ಟಪಟ್ಟಿ ದ್ದರೆ ಅಥವಾ ಅವನು ಸಾಲವೇನಾದರೂ ತೀರಿಸಬೇಕಾ ಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು;

    If he hath wronged thee, or oweth [thee] ought, put that on mine account;

  19. ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ; ನಿನ್ನ ವಿಷಯದಲ್ಲಿ ನೀನೇ ನನ್ನ ಸಾಲ ದಲ್ಲಿದ್ದಿ ಎಂದು ನಾನು ಬೇರೆ ಹೇಳಬೇಕೇ?

    I Paul have written [it] with mine own hand, I will repay [it]: albeit I do not say to thee how thou owest unto me even thine own self besides.

  20. ಸಹೋದ ರನೇ, ಹೌದು, ಕರ್ತನಲ್ಲಿ ನಿನ್ನಿಂದ ನನಗೆ ಸಂತೋಷ ಉಂಟಾಗಲಿ; ಕರ್ತನಲ್ಲಿ ನನ್ನ ಹೃದಯವನ್ನು ಉತ್ತೇಜನ ಗೊಳಿಸು.

    Yea, brother, let me have joy of thee in the Lord: refresh my bowels in the Lord.

  21. ನನ್ನ ಮಾತನ್ನು ಕೇಳುವಿ ಎಂಬ ಭರವಸ ವುಳ್ಳವನಾಗಿ ನಿನಗೆ ಬರೆದಿದ್ದೇನೆ; ನಾನು ಹೇಳಿದ್ದ ಕ್ಕಿಂತಲೂ ಹೆಚ್ಚಾಗಿ ಮಾಡುವಿಯೆಂದು ನನಗೆ ಗೊತ್ತುಂಟು.

    Having confidence in thy obedience I wrote unto thee, knowing that thou wilt also do more than I say.

  22. ಇದಲ್ಲದೆ ನಿಮ್ಮ ಪ್ರಾರ್ಥನೆಗಳ ಮುಖಾಂತರ ನಾನು ನಿಮ್ಮ ಬಳಿಗೆ ಬರುವದಕ್ಕೆ ಅನುಗ್ರಹವಾಗುವ ದೆಂದು ನನಗೆ ನಿರೀಕ್ಷೆ ಉಂಟು; ಆದಕಾರಣ ನನ ಗೋಸ್ಕರ ಇಳುಕೊಳ್ಳುವ ಸ್ಥಳವನ್ನು ಸಿದ್ಧಮಾಡು.

    But withal prepare me also a lodging: for I trust that through your prayers I shall be given unto you.

  23. ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಸೆರೆಯ ವನಾದ ಎಪಫ್ರನು ನಿನಗೆ ವಂದನೆ ತಿಳಿಸುತ್ತಾನೆ.

    There salute thee Epaphras, my fellowprisoner in Christ Jesus;

  24. ನನ್ನ ಜೊತೆಗೆಲಸದವರಾದ ಮಾರ್ಕ ಅರಿಸ್ತಾರ್ಕ ದೇಮಲೂ ಕರೂ ನಿನ್ನನ್ನು ವಂದಿಸುತ್ತಾರೆ.ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್‌.

    Marcus, Aristarchus, Demas, Lucas, my fellowlabourers.

  25. ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್‌.

    The grace of our Lord Jesus Christ [be] with your spirit. Amen.

All chapters of Philemon · Kannada Bible · Philemon 1 in Tamil

Kannada Bible: Kannada Old Version, public domain.

King James Version: public domain.