Philemon · chapter 1 · verse 12
Philemon 1:12 in Kannada
ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ; ಅದದ ರಿಂದ ನೀನು ಅವನನ್ನು ಸೇರಿಸಿಕೋ.
Avanu nanage praanadantiddaroo avanannu ninna balige hindakke kaluhisikottiddene; adada rinda neenu avanannu serisiko.
Philemon 1:12 in English
- King James Version (KJV)
- Whom I have sent again: thou therefore receive him, that is, mine own bowels:
- World English Bible (WEB)
- I am sending him back. Therefore receive him, that is, my own heart,
- American Standard Version (ASV)
- whom I have sent back to thee in his own person, that is, my very heart:
- Bible in Basic English (BBE)
- Whom I have sent back to you, him who is my very heart:
- Darby Translation (DBY)
- whom I have sent back to thee: [but do thou receive] him, that is, my bowels:
- Webster's Bible (WBS)
- Whom I have sent again: thou therefore receive him, that is, my own bowels:
- Young's Literal Translation (YLT)
- whom I did send again, and thou him (that is, my own bowels) receive,
Read in context
- 10ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ.
- 11ಅವನು ಕಳೆದುಹೋದ ಸಮಯದಲ್ಲಿ ನಿನಗೆ ಅಪ್ರಯೋಜಕ ನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜನ ವಾಗಿದ್ದಾನೆ.
- 12ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ; ಅದದ ರಿಂದ ನೀನು ಅವನನ್ನು ಸೇರಿಸಿಕೋ.
- 13ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲಿರಲಾಗಿ ನಿನಗೆ ಬದಲಾಗಿ ಅವನು ನನಗೆ ಉಪಚಾರ ಮಾಡುವಂತೆ ಅವನನ್ನು ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಅಪೇಕ್ಷಿಸಿದ್ದೆನು.
- 14ಆದರೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃ ಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.
Cross references
- Matthew 6:14–15 ಮತ್ತಾಯನು 6:14–15ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು. ನೀವು ಮನುಷ್ಯರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯೂ ನಿಮ್ಮ ಅಪರಾಧಗಳನ್ನು ಕ್ಷಮಿಸು ವದಿಲ್ಲ.
- Ephesians 4:32 ಎಫೆಸದವರಿಗೆ 4:32ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿ ದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾ ಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವ ರಾಗಿಯೂ ಇರ್ರಿ.
- Mark 11:25 ಮಾರ್ಕನು 11:25ನೀವು ನಿಂತು ಕೊಂಡು ಪ್ರಾರ್ಥಿಸುವಾಗ ಯಾವನಿಗಾದರೂ ವಿರೋ ಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ; ಆಗ ಪರಲೋಕ ದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ನಿಮಗೆ ಕ್ಷಮಿಸುವನು.
- Luke 15:20 ಲೂಕನು 15:20ಎದ್ದು ತನ್ನ ತಂದೆಯ ಬಳಿಗೆ ಬಂದನು. ಆದರೆ ಅವನು ಇನ್ನೂ ಬಹಳ ದೂರದಲ್ಲಿರುವಾಗಲೇ ಅವನ ತಂದೆಯು ಅವನನ್ನು ನೋಡಿ ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಮುದ್ದಿಟ್ಟನು.
- Jeremiah 31:20 ಯೆರೆಮೀಯ 31:20ಎಫ್ರಾಯಾಮನು ನನಗೆ ಪ್ರಿಯಕುಮಾರನೋ? ಅವನು ಆನಂದವುಳ್ಳ ಮಗುವೋ? ನಾನು ಅವನಿಗೆ ವಿರೋಧವಾಗಿ ಮಾತ ನಾಡಿದಂದಿನಿಂದ ಅವನನ್ನು ಇನ್ನು ಬಹಳವಾಗಿ ಜ್ಞಾಪಕಮಾಡುತ್ತೇನೆ; ಆದದರಿಂದ ನನ್ನ ಕರುಳುಗಳು ಅವನಿಗೋಸ್ಕರ ಕಳವಳಪಡುತ್ತವೆ. ನಾನು ನಿಶ್ಚಯವಾಗಿ ಅವನನ್ನು ಕನಿಕರಿಸುವೆನೆಂದು ಕರ್ತನು ಅನ್ನುತ್ತಾನೆ.
- Matthew 18:21–35 ಮತ್ತಾಯನು 18:21–35ತರುವಾಯ ಪೇತ್ರನು ಆತನ ಬಳಿಗೆ ಬಂದು--ಕರ್ತನೇ, ನನ್ನ ಸಹೋದರನು ನನಗೆ ವಿರೋಧ ವಾಗಿ ಪಾಪಮಾಡಿದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ ಎಂದು ಕೇಳಿದನು. ಯೇಸು ಅವನಿಗೆ--ಏಳು ಸಾರಿಯಲ್ಲ, ಆದರೆ ಏಳೆಪ್ಪತ್ತು ಸಾರಿ ಎಂದು ನಾನು ನಿನಗೆ ಹೇಳುತ್ತೇನೆ; ಆದದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತಕ್ಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನು ಲೆಕ್ಕವನ್ನು ತಕ್ಕೊಳ್ಳಲು ಪ್ರಾರಂಭಿಸಿದಾಗ ಹತ್ತು ಸಾವಿರ ತಲಾಂತುಗಳನ್ನು ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು. ಆದರೆ ಕೊಡುವದಕ್ಕೆ ಅವನಿಗೆ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅವನ ಯಜಮಾನನು ಅಪ್ಪಣೆ ಕೊಟ್ಟನು. ಆಗ ಆ ಸೇವಕನು ನೆಲಕ್ಕೆ ಬಿದ್ದು ಅವನನ್ನು ವಂದಿಸಿ--ಧಣಿಯೇ, ನನ್ನನ್ನು ತಾಳಿಕೋ; ನಾನು ಎಲ್ಲವನ್ನು ನಿನಗೆ ಸಲ್ಲಿಸುವೆನು ಎಂದು ಹೇಳಿದನು. ಆ ಸೇವಕನ ಧಣಿಯು ಅವನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಅವನ ಸಾಲವನ್ನೆಲ್ಲಾ ಬಿಟ್ಟು ಬಿಟ್ಟನು. ಆದರೆ ಅದೇ ಸೇವಕನು ಹೊರಗೆ ಹೋಗಿ ತನಗೆ ನೂರು ದೇನಾರುಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆ ಸೇವಕರಲ್ಲಿ ಒಬ್ಬನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ--ನನ್ನ ಸಾಲವನ್ನು ತೀರಿಸು ಅಂದನು. ಆಗ ಅವನ ಜೊತೇ ಸೇವಕನು ಅವನ ಪಾದಕ್ಕೆ ಬಿದ್ದು ಅವನಿಗೆ--ನನ್ನನ್ನು ತಾಳಿಕೋ; ನಾನು ನಿನ್ನದನ್ನೆಲ್ಲಾ ತೀರಿಸುತ್ತೇನೆ ಎಂದು ಅವನನ್ನು ಬೇಡಿಕೊಂಡನು. ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಹೀಗೆ ಅವನ ಜೊತೆ ಸೇವಕರು ನಡೆದದ್ದನ್ನು ನೋಡಿ ಬಹಳ ವ್ಯಥೆಪಟ್ಟು ಹೋಗಿ ತಮ್ಮ ಧಣಿಗೆ ನಡೆದದ್ದೆಲ್ಲವನ್ನು ತಿಳಿಯಪಡಿಸಿದರು. ಆಗ ಅವನ ಧಣಿಯು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ--ಓ ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಾನು ನಿನ್ನ ಸಾಲವನ್ನೆಲಾ ಮನ್ನಿಸಿದೆನು. ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿ ತ್ತಲ್ಲವೇ ಎಂದು ಹೇಳಿದನು. ಅವನ ಧಣಿಯು ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಸಂಕಟಪಡಿಸುವವರಿಗೆ ಒಪ್ಪಿಸಿದನು.ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು. ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
- 2 Samuel 16:11 2 ಸಮುವೇಲನು 16:11ದಾವೀದನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ--ಇಗೋ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ ಎಷ್ಟೋ ಅಧಿಕವಾಗಿ ಈ ಬೆನ್ಯಾವಿಾನ್ಯನಾದವನು ಹೀಗೆ ಮಾಡುವದು ಯಾವ ದೊಡ್ಡಮಾತು? ಅವ ನನ್ನು ಬಿಟ್ಟುಬಿಡಿರಿ; ಅವನು ದೂಷಿಸಲಿ; ಯಾಕಂದರೆ ಕರ್ತನು ಅವನಿಗೆ ಹಾಗೆಯೇ ಹೇಳಿದ್ದಾನೆ.
- Deuteronomy 13:6 ಧರ್ಮೋಪದೇಶಕಾಂಡ 13:6ನಿನ್ನ ತಾಯಿಯ ಮಗನಾದ ನಿನ್ನ ಸಹೋದರ ನಾಗಲಿ ಮಗನಾಗಲಿ ಮಗಳಾಗಲಿ ಮಗ್ಗುಲಲ್ಲಿರುವ ಹೆಂಡತಿಯಾಗಲಿ ನಿನ್ನ ಪ್ರಾಣದಂತೆ ನಿನಗಿರುವ ಸ್ನೇಹಿತ ನಾಗಲಿ ನೀನೂ ನಿನ್ನ ಪಿತೃಗಳೂ ತಿಳಿಯದ ಬೇರೆ ದೇವರುಗಳನ್ನು