Philippians · chapter 2 · verse 13
Philippians 2:13 in Kannada
ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯ ವನ್ನೂ ಸಾಧಿಸುವಾತನು ದೇವರೇ.
Tanna suchittada prakaara nimmalli uddeshavannoo kaarya vannoo saadhisuvaatanu devare.
Philippians 2:13 in English
- King James Version (KJV)
- For it is God which worketh in you both to will and to do of [his] good pleasure.
- World English Bible (WEB)
- For it is God who works in you both to will and to work for his good pleasure.
- American Standard Version (ASV)
- for it is God who worketh in you both to will and to work, for his good pleasure.
- Bible in Basic English (BBE)
- For it is God who is the cause of your desires and of your acts, for his good pleasure.
- Darby Translation (DBY)
- for it is God who works in you both the willing and the working according to [his] good pleasure.
- Webster's Bible (WBS)
- For it is God who worketh in you both to will and to do of [his] good pleasure.
- Young's Literal Translation (YLT)
- for God it is who is working in you both to will and to work for His good pleasure.
Read in context
- 11ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವದು.
- 12ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ಯಾವಾ ಗಲೂ ವಿಧೇಯರಾದಂತೆ ಈಗಲೂ ವಿಧೇಯರಾಗಿ ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರು ವಾಗಲೂ ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.
- 13ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯ ವನ್ನೂ ಸಾಧಿಸುವಾತನು ದೇವರೇ.
- 14ಗುಣಗುಟ್ಟದೆ ಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ.
- 15ಹೀಗೆ ನೀವು ದೋಷವಿಲ್ಲದವರೂ ಕೇಡುಮಾಡ ದವರೂ ನಿಂದಾರಹಿತರೂ ಆದ ದೇವಪುತ್ರರಾಗಿ ವಕ್ರವುಳ್ಳ ದುಷ್ಟಜನಾಂಗದ ಮಧ್ಯದಲ್ಲಿ ಜೀವದಾಯಕ ವಾಕ್ಯವನ್ನು ಹಿಡುಕೊಂಡು ಲೋಕದಲ್ಲಿ ಬೆಳಕುಗಳಂತೆ ಹೊಳೆಯುವವರಾಗಿದ್ದೀರಿ.
Cross references
- Hebrews 13:21 ಇಬ್ರಿಯರಿಗೆ 13:21ನಿಮ್ಮನ್ನು ಸಕಲ ಸತ್ಕಾರ್ಯಗಳಲ್ಲಿ ಆತನ ಚಿತ್ತವನ್ನು ಮಾಡುವಂತೆ ಪರಿಪೂರ್ಣ ಮಾಡಲಿ. ತನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದ ದ್ದನ್ನು ಯೇಸು ಕ್ರಿಸ್ತನ ಮೂಲಕ ನಿಮ್ಮಲ್ಲಿ ನಡಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.
- 2 Corinthians 3:5 2 ಕೊರಿಂಥದವರಿಗೆ 3:5ನಮ್ಮಿಂದಲೇ ಏನಾದರೂ ಉಂಟಾಯಿ ತೆಂದು ಆಲೋಚಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;
- 2 Timothy 1:9 2 ತಿಮೊಥೆಯನಿಗೆ 1:9ಆತನು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತನ್ನ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಕರೆಯಿಂದ ನಮ್ಮನ್ನು ಕರೆದನು. ಆತನು ಜಗದುತ್ಪತ್ತಿಗೆ ಮುಂಚೆಯೇ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದನು.
- Romans 9:16 ರೋಮಾಪುರದವರಿಗೆ 9:16ಹೀಗಿರುವಾಗ ಅದು ಇಚ್ಛಿಸುವವನಿಂದಾಗಲೀ ಪ್ರಯಾಸಪಡುವವನಿಂದಾಗಲೀ ಆಗದೆ ಕರುಣೆ ತೋರಿ ಸುವ ದೇವರಿಂದಲೇ ಆಗುವದು.
- 1 Corinthians 15:10 1 ಕೊರಿಂಥದವರಿಗೆ 15:10ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ; ನನಗುಂಟಾದ ಆತನ ಕೃಪೆಯು ನಿಷ್ಪಲವಾಗಲಿಲ್ಲ; ನಾನು ಅವರೆಲ್ಲರಿ ಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು; ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
- Ephesians 1:11 ಎಫೆಸದವರಿಗೆ 1:11ಆತನ ಸ್ವಚಿತ್ತದ ಆಲೋಚನೆಗನುಸಾರವಾಗಿ ಎಲ್ಲಾ ಕಾರ್ಯ ಗಳನ್ನು ಸಾಧಿಸುವ ಆತನ ಉದ್ದೇಶದ ಮೇರೆಗೆ ಮೊದಲೇ ನೇಮಿಸಲ್ಪಟ್ಟವರಾದ ನಾವು ಆತನಲ್ಲಿ ಬಾಧ್ಯತೆಯನ್ನು ಸಹ ಹೊಂದಿದೆವು.
- James 1:16–18 ಯಾಕೋಬನು 1:16–18ನನ್ನ ಪ್ರಿಯ ಸಹೋದರರೇ, ತಪ್ಪು ಮಾಡಬೇಡಿರಿ. ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ. ಆತನು ತನ್ನ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಿರಲಾಗಿ ನಾವು ಆತನ ಸೃಷ್ಟಿಗಳಲ್ಲಿ ಒಂದು ತರಹದ ಪ್ರಥಮ ಫಲ ಗಳಂತಾದೆವು.
- John 3:27 ಯೋಹಾನನು 3:27ಯೋಹಾನನು ಪ್ರತ್ಯುತ್ತರವಾಗಿ--ಪರಲೋಕ ದಿಂದ ಒಬ್ಬ ಮನುಷ್ಯನಿಗೆ ಕೊಡಲ್ಪಡದ ಹೊರತು ಅವನು ಯಾವದನ್ನೂ ಹೊಂದಲಾರನು.
- 2 Thessalonians 1:11 2 ಥೆಸಲೊನೀಕದವರಿಗೆ 1:11ಹೀಗಿರುವದರಿಂದ ನಾವು ಯಾವಾ ಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡಿ ಈ ಕರೆಯು ವಿಕೆಗೆ ದೇವರು ನಿಮ್ಮನ್ನು ಯೊಗ್ಯರೆಂದು ಎಣಿಸು ವಂತೆಯೂ ತನ್ನ ಒಳ್ಳೇತನದ ಒಳ್ಳೇ ಸಂತೋಷವನ್ನು ಮತ್ತು ಬಲದಿಂದಾದ ನಂಬಿಕೆಯ ಕಾರ್ಯವನ್ನು ಪೂರೈಸುವ ಹಾಗೆಯೂ ಬೇಡಿಕೊಳ್ಳುತ್ತೇವೆ.ಹೀಗಾದರೆ ನಮ್ಮ ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗನುಸಾರವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವದು, ಆತನಲ್ಲಿ ನೀವೂ ಮಹಿಮೆ ಹೊಂದುವಿರಿ.
- 1 Corinthians 12:6 1 ಕೊರಿಂಥದವರಿಗೆ 12:6ಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು, ಆದರೆ ಸರ್ವರಲ್ಲಿಯೂ ಸರ್ವಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.
- Ephesians 1:5 ಎಫೆಸದವರಿಗೆ 1:5ಆತನು ತನ್ನ ಚಿತ್ತದ ದಯಾ ಪೂರ್ವಕವಾದ ಆನಂದಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನಗೋಸ್ಕರ ದತ್ತುಪುತ್ರ ಸ್ವೀಕಾರ ಮಾಡುವಂತೆ ಮೊದಲೇ ಸಂಕಲ್ಪಿಸಿ.
- 1 Kings 8:58 1 ಅರಸುಗಳು 8:58ನಮ್ಮ ದೇವರಾದ ಕರ್ತನು ನಮ್ಮನ್ನು ಕೈ ಬಿಡದೆ, ನಮ್ಮನ್ನು ವಿಸರ್ಜಿಸದೆ, ನಮ್ಮ ಪಿತೃಗಳ ಸಂಗಡ ಹೇಗೆ ಇದ್ದನೋ ಹಾಗೆಯೇ ನಮ್ಮ ಸಂಗಡ ಇರಲಿ.