Philippians · chapter 3 · verse 10
Philippians 3:10 in Kannada
ಹೀಗೆ ಆತನನ್ನೂ ಆತನ ಪುನರುತ್ಥಾನ ದಲ್ಲಿರುವ ಶಕ್ತಿಯನ್ನೂ ಆತನ ಬಾಧೆಗಳಲ್ಲಿ ಪಾಲುಗಾರ ನಾಗುವದನ್ನೂ ತಿಳಿದುಕೊಂಡು ಆತನ ಮರಣಕ್ಕೆ ಸರೂಪನಾಗುವೆನು.
Heege aatanannoo aatana punarutthaana dalliruva shaktiyannoo aatana baadhegalalli paalugaara naaguvadannoo tilidukondu aatana maranakke saroopanaaguvenu.
Philippians 3:10 in English
- King James Version (KJV)
- That I may know him, and the power of his resurrection, and the fellowship of his sufferings, being made conformable unto his death;
- World English Bible (WEB)
- that I may know him and the power of his resurrection, and the fellowship of his sufferings, becoming conformed to his death,
- American Standard Version (ASV)
- that I may know him, and the power of his resurrection, and the fellowship of his sufferings, becoming conformed unto his death;
- Bible in Basic English (BBE)
- That I may have knowledge of him, and of the power of his coming back from the dead, and a part with him in his pains, becoming like him in his death;
- Darby Translation (DBY)
- to know him, and the power of his resurrection, and the fellowship of his sufferings, being conformed to his death,
- Webster's Bible (WBS)
- That I may know him, and the power of his resurrection, and the fellowship of his sufferings, being made conformable to his death;
- Young's Literal Translation (YLT)
- to know him, and the power of his rising again, and the fellowship of his sufferings, being conformed to his death,
Read in context
- 8ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
- 9ನಾನು ಕ್ರಿಸ್ತನಲ್ಲಿರುವ ವನಾಗಿ ಕಾಣಿಸಿಕೊಳ್ಳಬೇಕೆಂದು ನ್ಯಾಯಪ್ರಮಾಣ ದಿಂದಾಗುವ ಸ್ವನೀತಿಯನ್ನಾಶ್ರಯಿಸದೆ ಆತನನ್ನು ನಂಬು ವದರಿಂದ ದೊರಕುವಂಥ ಅಂದರೆ ನಂಬಿಕೆಯ ಆಧಾರ ದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ದ್ದೇನೆ.
- 10ಹೀಗೆ ಆತನನ್ನೂ ಆತನ ಪುನರುತ್ಥಾನ ದಲ್ಲಿರುವ ಶಕ್ತಿಯನ್ನೂ ಆತನ ಬಾಧೆಗಳಲ್ಲಿ ಪಾಲುಗಾರ ನಾಗುವದನ್ನೂ ತಿಳಿದುಕೊಂಡು ಆತನ ಮರಣಕ್ಕೆ ಸರೂಪನಾಗುವೆನು.
- 11ಹೇಗಾದರೂ ಸತ್ತವರಿಗೆ ಆಗುವ ಪುನರುತ್ಥಾನವು ನನಗೆ ಆದೀತು.
- 12ಇಷ್ಟ ರೊಳಗೆ ನಾನು ಪಡಕೊಂಡು ಸಿದ್ಧಿಗೆ ಬಂದವನೆಂದು ಹೇಳುವದಿಲ್ಲ; ನಾನು ಯಾವದನ್ನು ಹೊಂದುವದಕ್ಕಾಗಿ ಕ್ರಿಸ್ತ ಯೇಸು ನನ್ನನ್ನು ಹಿಡಿದುಕೊಂಡನೊ ಅದನ್ನು ಹಿಡಿದುಕೊಳ್ಳುವದಕ್ಕೋಸ್ಕರ ಹಿಂದಟ್ಟುತ್ತಾ ಇದ್ದೇನೆ.
Cross references
- Galatians 2:20 ಗಲಾತ್ಯದವರಿಗೆ 2:20ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಆದಾಗ್ಯೂ ನಾನು ಜೀವಿ ಸುತ್ತೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸುವದು ದೇವಕುಮಾರನ ಮೇಲಣ ನಂಬಿಕೆ ಯಲ್ಲಿಯೇ, ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ನ್ಯಾಯಪ್ರಮಾಣದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದು ವ್ಯರ್ಥವಾಯಿತು.
- 1 Peter 4:1–2 1 ಪೇತ್ರನು 4:1–2ಕ್ರಿಸ್ತನು ಶರೀರದಲ್ಲಿ ನಮಗೋಸ್ಕರ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಮನಸ್ಸನ್ನು ಧರಿಸಿಕೊಳ್ಳಿರಿ. ಯಾಕಂದರೆ ಶರೀರ ದಲ್ಲಿ ಬಾಧೆಪಟ್ಟವನು ಪಾಪಮಾಡುವದನ್ನು ನಿಲ್ಲಿಸಿ ಬಿಟ್ಟಿದ್ದಾನೆ. ಹೀಗೆ ಶರೀರದಲ್ಲಿ ಇನ್ನು ಉಳಿದಿರುವ ತನ್ನ ಜೀವಿತಕಾಲದಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವನು.
- 2 Timothy 2:11–12 2 ತಿಮೊಥೆಯನಿಗೆ 2:11–12ಇದು ನಂಬತಕ್ಕ ದ್ದಾಗಿದೆ, ಏನೆಂದರೆ--ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ನಾವು ಸಹ ಜೀವಿಸುವೆವು. ನಾವು ಬಾಧೆಪಡುವವರಾಗಿದ್ದರೆ ಆತನೊಂದಿಗೆ ನಾವು ಸಹ ಆಳುವೆವು; ಆತನನ್ನು ಅಲ್ಲಗಳೆದರೆ ಆತನು ಸಹ ನಮ್ಮನ್ನು ಅಲ್ಲಗಳೆಯುವನು.
- Romans 8:17 ರೋಮಾಪುರದವರಿಗೆ 8:17ಮಕ್ಕಳಾ ಗಿದ್ದರೆ ಬಾಧ್ಯರಾಗಿದ್ದೇವೆ; ದೇವರಿಗೆ ಬಾಧ್ಯರು, ಕ್ರಿಸ್ತ ನೊಂದಿಗೆ ಸಹ ಬಾಧ್ಯರು; ಆತನೊಂದಿಗೆ ಶ್ರಮೆ ಯನ್ನನುಭವಿಸುವದಾದರೆ ಒಟ್ಟಾಗಿ ನಾವು ಸಹ ಮಹಿಮೆಯನ್ನು ಹೊಂದುವೆವು.
- Romans 6:3–11 ರೋಮಾಪುರದವರಿಗೆ 6:3–11ಯೇಸು ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? ಹೀಗಿರಲಾಗಿ ನಾವು ಬಾಪ್ತಿಸ್ಮ ಮಾಡಿಸಿ ಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗು ವದಕ್ಕೆ ಆತನೊಂದಿಗೆ ಹೂಣಲ್ಪಟ್ಟೆವು; ಕ್ರಿಸ್ತನು ತಂದೆಯ ಮಹಿಮೆಯಿಂದ ಹೇಗೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೋ ಹಾಗೆಯೇ ನಾವು ಕೂಡ ಜೀವ ದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು. ಹೇಗಂದರೆ ಆತನ ಮರಣದ ಹೋಲಿಕೆಯಲ್ಲಿ ನಾವು ಒಟ್ಟಾಗಿ ನೆಲೆಸಿದ್ದರೆ ಆತನ ಪುನರುತ್ಥಾನದ ಹೋಲಿಕೆ ಯಲ್ಲಿಯೂ ಇರುವೆವು. ಪಾಪದ ಶರೀರವು ನಾಶ ವಾಗಿ ನಾವು ಇನ್ನೂ ಪಾಪಕ್ಕೆ ದಾಸರಾಗಿರದಂತೆ ನಮ್ಮ ಹಳೇ ಮನುಷ್ಯನು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟ ನೆಂದು ತಿಳಿದಿದ್ದೇವೆ. ಯಾಕಂದರೆ ಸತ್ತವನು ಪಾಪ ದಿಂದ ಬಿಡುಗಡೆ ಹೊಂದಿದ್ದಾನೆ. ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ನಾವು ಸಹ ಜೀವಿಸುವೆವೆಂದು ನಂಬು ತ್ತೇವೆ. ಯಾಕಂದರೆ ಕ್ರಿಸ್ತನು ಸತ್ತಮೇಲೆ ಜೀವಿತ ನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ; ಮರಣವು ಇನ್ನು ಮುಂದೆ ಆತ ನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ. ಆತನು ಸತ್ತಿದ್ದರಲ್ಲಿ ಪಾಪಕ್ಕಾಗಿ ಒಂದೇ ಸಾರಿ ಸತ್ತನು. ಆದರೆ ಆತನು ಜೀವಿಸುವದರಲ್ಲಿ ದೇವರಿಗಾಗಿ ಜೀವಿಸುತ್ತಾನೆ. ಅದೇ ಪ್ರಕಾರ ನೀವು ಸಹ ಪಾಪದ ಪಾಲಿಗೆ ನಿಜವಾಗಿ ಸತ್ತವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗಾಗಿ ಜಿವಿಸುವವರೂ ಎಂದು ಎಣಿಸಿಕೊಳ್ಳಿರಿ.
- Ephesians 1:19–21 ಎಫೆಸದವರಿಗೆ 1:19–21ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದ ದ್ದೆಂಬದನ್ನೂ ಆತನ ಬಲಾತಿಶಯವು ಎಷ್ಟು ಮಹತ್ತಾದ ದ್ದೆಂಬದನ್ನೂ ನೀವು ತಿಳುಕೊಳ್ಳು ವಂತೆ ಅನುಗ್ರಹಿಸಲಿ. ಬಲಾತಿಶಯವು ಕ್ರಿಸ್ತನಲ್ಲಿ ತೋರಿಬಂದಿದೆ; ಹೇಗಂ ದರೆ ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾಧಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೊಕದೊಳಗೆ ತನ್ನ ಸ್ವಂತ ಬಲಪಾರ್ಶ್ವದಲ್ಲಿ ಆತನನ್ನು ಕೂಡ್ರಿಸಿಕೊಂಡನು.
- 1 Peter 4:13–14 1 ಪೇತ್ರನು 4:13–14ನೀವು ಕ್ರಿಸ್ತನ ಬಾಧೆ ಗಳಲ್ಲಿ ಪಾಲುಗಾರರಾಗಿರುವದರಿಂದ ಸಂತೋಷವುಳ್ಳ ವರಾಗಿರ್ರಿ; ಇದಲ್ಲದೆ ಆತನ ಮಹಿಮೆಯ ಪ್ರತ್ಯಕ್ಷತೆ ಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ. ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಸಂತೋಷಪಡಿರಿ; ಯಾಕಂದರೆ ಮಹಿಮೆ ಯುಳ್ಳ ದೇವರ ಆತ್ಮನು ನಿಮ್ಮ ಮೇಲೆ ನೆಲೆಗೊಂಡಿ ದ್ದಾನಲ್ಲಾ. ಅವರ ವಿಷಯದಲ್ಲಿ ಆತನು ದೂಷಿಸ ಲ್ಪಡುತ್ತಾನೆ; ಆದರೆ ನಿಮ್ಮ ವಿಷಯದಲ್ಲಿ ಆತನು ಮಹಿಮೆ ಹೊಂದುತ್ತಾನೆ.
- Philippians 3:8 ಫಿಲಿಪ್ಪಿಯವರಿಗೆ 3:8ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
- 1 John 2:3 1 ಯೋಹಾನನು 2:3ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯು ವದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳು ಕೊಳ್ಳುತ್ತೇವೆ.
- Colossians 3:1 ಕೊಲೊಸ್ಸೆಯವರಿಗೆ 3:1ಹಾಗಾದರೆ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟವರಾಗಿದ್ದರೆ ಮೇಲಿರುವ ವುಗಳನ್ನೇ ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.
- Colossians 1:24 ಕೊಲೊಸ್ಸೆಯವರಿಗೆ 1:24ನಾನು ಈಗ ನಿಮಗೋಸ್ಕರ ಅನುಭವಿ ಸುತ್ತಿರುವ ಬಾಧೆಗಳಲ್ಲಿ ಸಂತೋಷಪಟ್ಟು ಕ್ರಿಸ್ತನ ಸಂಕಟ ಗಳೊಳಗೆ ಇನ್ನೂ ಉಳಿದದ್ದನ್ನು ಸಭೆಯೆಂಬ ಆತನ ದೇಹಕ್ಕೋಸ್ಕರ ನನ್ನ ಶರೀರದಲ್ಲಿ ಅನುಭವಿಸಿ ತೀರಿಸು ತ್ತೇನೆ.
- John 11:25–26 ಯೋಹಾನನು 11:25–26ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು; ಯಾವನಾದರೂ ಬದುಕುತ್ತಾ ನನ್ನಲ್ಲಿ ನಂಬಿಕೆಯಿಡುವದಾದರೆ ಅವನು ಎಂದಿಗೂ ಸಾಯುವ ದಿಲ್ಲ. ಇದನ್ನು ನೀನು ನಂಬುತ್ತೀಯೋ ಎಂದು ಕೇಳಿದ್ದಕ್ಕೆ
Original words (Greek)
- That · G3588ὁ ho
- know · G1097γινώσκω ginṓskō
- him · G846αὐτός autós
- and · G2532καί kaí
- power · G1411δύναμις dýnamis
- of · G386ἀνάστασις anástasis
- his · G846αὐτός autós
- resurrection · G386ἀνάστασις anástasis
- and · G2532καί kaí
- fellowship · G2842κοινωνία koinōnía
- of · G3804πάθημα páthēma
- his · G846αὐτός autós
- sufferings · G3804πάθημα páthēma
- unto · G4833συμμορφόω symmorphóō
- his · G846αὐτός autós
- death · G2288θάνατος thánatos