Philippians · chapter 3 · verse 2
Philippians 3:2 in Kannada
ನಾಯಿಗಳಿಗೆ ಎಚ್ಚರಿಕೆಯಾಗಿರ್ರಿ; ದುಷ್ಟ ಕೆಲಸದವರಿಗೆ ಎಚ್ಚರಿಕೆ ಯಾಗಿರ್ರಿ. ಅಂಗಚ್ಛೇದನೆಯ ವಿಷಯದಲ್ಲಿ ಎಚ್ಚರಿಕೆ ಯಾಗಿರ್ರಿ.
Naayigalige echcharikeyaagirri; dushta kelasadavarige echcharike yaagirri. Angachchhedaneya vishayadalli echcharike yaagirri.
Philippians 3:2 in English
- King James Version (KJV)
- Beware of dogs, beware of evil workers, beware of the concision.
- World English Bible (WEB)
- Beware of the dogs; beware of the evil workers; beware of the false circumcision.
- American Standard Version (ASV)
- Beware of the dogs, beware of the evil workers, beware of the concision:
- Bible in Basic English (BBE)
- Be on the watch against dogs, against the workers of evil, against those of the circumcision:
- Darby Translation (DBY)
- See to dogs, see to evil workmen, see to the concision.
- Webster's Bible (WBS)
- Beware of dogs, beware of evil-workers, beware of the concision.
- Young's Literal Translation (YLT)
- look to the dogs, look to the evil-workers, look to the concision;
Read in context
- 1ಕಡೇದಾಗಿ ನನ್ನ ಸಹೋದರರೇ, ಕರ್ತ ನಲ್ಲಿ ಸಂತೋಷಪಡಿರಿ. ತಿರಿಗಿ ನಿಮಗೆ ಬರೆಯುವದರಲ್ಲಿ ನನಗೇನೂ ಬೇಸರವಿಲ್ಲ; ನಿಮ್ಮನ್ನಾ ದರೋ ಅದು ಭದ್ರಪಡಿಸುವದು.
- 2ನಾಯಿಗಳಿಗೆ ಎಚ್ಚರಿಕೆಯಾಗಿರ್ರಿ; ದುಷ್ಟ ಕೆಲಸದವರಿಗೆ ಎಚ್ಚರಿಕೆ ಯಾಗಿರ್ರಿ. ಅಂಗಚ್ಛೇದನೆಯ ವಿಷಯದಲ್ಲಿ ಎಚ್ಚರಿಕೆ ಯಾಗಿರ್ರಿ.
- 3ಆತ್ಮದಲ್ಲಿ ದೇವರನ್ನು ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಸಂತೋಷಿಸುವವರೂ ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿ ದ್ದೇವೆ.
- 4ನಾನಾದರೋ ಶರೀರ ಸಂಬಂಧವಾದವು ಗಳಲ್ಲಿ ಭರವಸವಿಟ್ಟರೂ ಇಡಬಹುದು, ಬೇರೆ ಯಾವ ನಾದರೂ ಶರೀರ ಸಂಬಂಧವಾದವುಗಳಲ್ಲಿ ಭರವಸವಿಡ ಬಹುದೆಂದು ಯೋಚಿಸುವದಾದರೆ ನಾನು ಅವನಿ ಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.
Cross references
- 2 Corinthians 11:13 2 ಕೊರಿಂಥದವರಿಗೆ 11:13ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ.
- Titus 1:16 ತೀತನಿಗೆ 1:16ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.
- Revelation 22:15 ಪ್ರಕಟನೆ 22:15ಆದರೆ ನಾಯಿಗಳೂ ಮಾಟಗಾರರೂ ಜಾರರೂ ಕೊಲೆ ಗಾರರೂ ವಿಗ್ರಹಾರಾಧಕರೂ ಸುಳ್ಳಾದದ್ದನ್ನು ಪ್ರೀತಿಸಿ ನಡಿಸುವವರೆಲ್ಲರೂ ಹೊರಗಿರುವರು ಎಂದು ಹೇಳಿದನು.
- Isaiah 56:10–11 ಯೆಶಾಯ 56:10–11ಅವನ ಕಾವಲುಗಾರರು ಕುರುಡರು, ಅವರೆಲ್ಲರೂ ತಿಳುವಳಿಕೆ ಯಿಲ್ಲದವರು; ಅವರೆಲ್ಲರೂ ಮೂಕ ನಾಯಿಗಳು; ಅವು ಬೊಗಳಲಾರವು, ನಿದ್ರಿಸುತ್ತವೆ, ಬಿದ್ದುಕೊಂಡಿ ರುತ್ತವೆ. ತೂಕಡಿಕೆಯನ್ನು ಪ್ರೀತಿಸುತ್ತವೆ. ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.
- 2 Timothy 3:1–6 2 ತಿಮೊಥೆಯನಿಗೆ 3:1–6ಆದರೆ ಕಡೇ ದಿವಸಗಳಲ್ಲಿ ಅಪಾಯಕರ ವಾದ ಕಾಲಗಳು ಬರುವವೆಂಬದನ್ನು ಸಹ ತಿಳಿದುಕೋ. ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿ ಕೊಳ್ಳುವವರೂ ಲೋಭಿಗಳೂ ಬಡಾಯಿ ಕೊಚ್ಚುವ ವರೂ ಅಹಂಕಾರಿಗಳೂ ದೇವದೂಷಕರೂ ತಂದೆ ತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ಅಶುದ್ಧರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಒಪ್ಪಂದವನ್ನು ಮುರಿಯುವವರೂ ಸುಳ್ಳಾಗಿ ದೂರು ವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯವರನ್ನೂ ಹೀನೈಸುವವರೂ ದ್ರೋಹಿಗಳೂ ದುಡಿಕಿನವರೂ ಉಬ್ಬಿಕೊಂಡವರೂ ದೇವರಿಗಿಂತ ಹೆಚ್ಚಾಗಿ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು; ಇಂಥವರಿಂದ ಪ್ರತ್ಯೇಕವಾಗಿರು. ಮನೆ ಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ನಡಿಸಲ್ಪಟ್ಟವರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳು ವವರೂ ಇವರೊಳಗೆ ಸೇರಿದವರೇ.
- Galatians 5:15 ಗಲಾತ್ಯದವರಿಗೆ 5:15ಆದರೆ ನೀವು ಒಬ್ಬರನ್ನೊಬ್ಬರು ಕಚ್ಚಿ ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ಎಚ್ಚರವಾಗಿರ್ರಿ.
- Philippians 3:19 ಫಿಲಿಪ್ಪಿಯವರಿಗೆ 3:19ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆ ಕೆಲಸಗಳಲ್ಲಿಯೇ ಅವರ ಗೌರವವು. ಅವರು ಭೂಸಂಬಂಧವಾದವುಗಳ ಮೇಲೆ ಮನಸ್ಸಿಡುತ್ತಾರೆ.)
- Psalm 22:16 ಕೀರ್ತನೆಗಳು 22:16ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
- Matthew 7:15 ಮತ್ತಾಯನು 7:15ಕುರಿ ವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳಿಗೆ ಎಚ್ಚರವಾಗಿರ್ರಿ; ಯಾಕಂದರೆ ಅವರು ಒಳಗೆ ದೋಚಿಕೊಳ್ಳುವ ತೋಳಗಳಾಗಿದ್ದಾರೆ.
- Galatians 5:6 ಗಲಾತ್ಯದವರಿಗೆ 5:6ಯಾಕಂದರೆ ಯೇಸು ಕ್ರಿಸ್ತನಲ್ಲಿರುವವರಿಗೆ ಸುನ್ನತಿ ಯಾದರೂ ಪ್ರಯೋಜನವಿಲ್ಲ, ಆಗದಿದ್ದರೂ ಪ್ರಯೋ ಜನವಿಲ್ಲ. ಪ್ರೀತಿಯಿಂದ ಕೆಲಸನಡಿಸುವ ನಂಬಿಕೆ ಯಿಂದಲೇ ಪ್ರಯೋಜನವಾಗುತ್ತದೆ.
- Psalm 22:20 ಕೀರ್ತನೆಗಳು 22:20ನನ್ನ ಪ್ರಾಣವನ್ನು ಕತ್ತಿಯಿಂದಲೂ ನನಗೆ ಪ್ರಿಯವಾದದ್ದನ್ನು ನಾಯಿಯ ಬಲದಿಂದಲೂ ಬಿಡಿಸು.
- 2 Timothy 4:3–4 2 ತಿಮೊಥೆಯನಿಗೆ 4:3–4ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸ ಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಯುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲ ವಾದ ಉಪದೇಶಕರನ್ನು ಇಟ್ಟುಕೊಳ್ಳುವರು. ಅವರು ಸತ್ಯಕ್ಕೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ತಿರುಗಿಕೊಳ್ಳುವರು.