Philippians · chapter 4 · verse 21
Philippians 4:21 in Kannada
ಕ್ರಿಸ್ತ ಯೇಸುವಿನಲ್ಲಿ ಪ್ರತಿಯೊಬ್ಬ ಪರಿಶುದ್ಧನಿಗೆ ವಂದನೆ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ.
Krista yesuvinalli pratiyobba parishuddhanige vandane. Nanna joteyalliruva sahodararu nimmannu vandisuttaare.
Philippians 4:21 in English
- King James Version (KJV)
- Salute every saint in Christ Jesus. The brethren which are with me greet you.
- World English Bible (WEB)
- Greet every saint in Christ Jesus. The brothers who are with me greet you.
- American Standard Version (ASV)
- Salute every saint in Christ Jesus. The brethren that are with me salute you.
- Bible in Basic English (BBE)
- Give words of love to every saint in Christ Jesus. The brothers who are with me send you their love.
- Darby Translation (DBY)
- Salute every saint in Christ Jesus. The brethren who [are] with me salute you.
- Webster's Bible (WBS)
- Salute every saint in Christ Jesus. The brethren who are with me greet you.
- Young's Literal Translation (YLT)
- Salute ye every saint in Christ Jesus; there salute you the brethren with me;
Read in context
- 19ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು.
- 20ನಮ್ಮ ತಂದೆಯೂ ದೇವರೂ ಆಗಿರುವಾತನಿಗೆ ಯುಗ ಯುಗಾಂತರಗಳಲ್ಲಿಯೂ ಮಹಿಮೆ ಇರಲಿ. ಆಮೆನ್.
- 21ಕ್ರಿಸ್ತ ಯೇಸುವಿನಲ್ಲಿ ಪ್ರತಿಯೊಬ್ಬ ಪರಿಶುದ್ಧನಿಗೆ ವಂದನೆ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ.
- 22ಪರಿಶುದ್ದರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಮುಖ್ಯವಾಗಿ ಕೈಸರನ ಮನೆಯವರು ನಿಮ್ಮನ್ನು ವಂದಿಸುತ್ತಾರೆ;ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
- 23ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
Cross references
- Galatians 1:2 ಗಲಾತ್ಯದವರಿಗೆ 1:2ನನ್ನ ಜೊತೆಯಲ್ಲಿರುವ ಎಲ್ಲಾ ಸಹೋದರರೂ ಗಲಾತ್ಯದಲ್ಲಿರುವ ಸಭೆಗಳಿಗೆ--
- Ephesians 1:1 ಎಫೆಸದವರಿಗೆ 1:1ದೇವರ ಚಿತ್ತಾನುಸಾರವಾಗಿ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನು ಎಫೆಸ ದಲ್ಲಿರುವ ಪರಿಶುದ್ಧರಿಗೂ ಕ್ರಿಸ್ತ ಯೇಸುವಿನಲ್ಲಿ ನಂಬಿಗಸ್ತರಿಗೂ--
- Philemon 1:23–24 ಫಿಲೆಮೋನನಿಗೆ 1:23–24ಕ್ರಿಸ್ತ ಯೇಸುವಿನಲ್ಲಿ ನನ್ನ ಜೊತೆ ಸೆರೆಯ ವನಾದ ಎಪಫ್ರನು ನಿನಗೆ ವಂದನೆ ತಿಳಿಸುತ್ತಾನೆ. ನನ್ನ ಜೊತೆಗೆಲಸದವರಾದ ಮಾರ್ಕ ಅರಿಸ್ತಾರ್ಕ ದೇಮಲೂ ಕರೂ ನಿನ್ನನ್ನು ವಂದಿಸುತ್ತಾರೆ.ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.
- Colossians 4:10–14 ಕೊಲೊಸ್ಸೆಯವರಿಗೆ 4:10–14ನನ್ನ ಜೊತೆಸೆರೆಯವನಾದ ಅರಿಸ್ತಾರ್ಕನೂ ಬಾರ್ನಬನ ಸಹೋದರಿಯ ಮಗನಾದ ಮಾರ್ಕನೂ (ಮಾರ್ಕನ) ವಿಷಯದಲ್ಲಿ ನೀವು ಅಪ್ಪಣೆ ಹೊಂದಿದ್ದೀರಲ್ಲಾ; ಅವನು ನಿಮ್ಮ ಬಳಿಗೆ ಬಂದರೆ ಸೇರಿಸಿಕೊಳ್ಳಿರಿ. ಯೂಸ್ತನೆನಿಸಿಕೊಳ್ಳುವ ಯೇಸುವೂ ನಿಮ್ಮನ್ನು ವಂದಿಸುತ್ತಾರೆ. ಇವರು ಸುನ್ನತಿಯವರಾಗಿ ದ್ದಾರೆ. ದೇವರ ರಾಜ್ಯಕ್ಕಾಗಿ ಇವರು ಮಾತ್ರ ನನ್ನ ಜೊತೆಗೆಲಸದವರಾಗಿದ್ದು ನನಗೆ ಆದರಣೆಯಾಗಿದ್ದಾರೆ. ನಿಮ್ಮಲ್ಲಿ ಒಬ್ಬನಾದ ಕ್ರಿಸ್ತನ ಸೇವಕನಾಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ಪರಿಪೂರ್ಣರಾಗಿಯೂ ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಂತಿರಬೇಕೆಂದು ಇವನು ನಿಮಗೋಸ್ಕರ ಕಷ್ಟಪಟ್ಟು ಪ್ರಾರ್ಥನೆಗಳಲ್ಲಿ ಹೋರಾಡುತ್ತಾನೆ. ನಿಮ್ಮ ವಿಷಯ ವಾಗಿಯೂ ಲವೊದಿಕೀಯರ ವಿಷಯವಾಗಿಯೂ ಹಿರಿಯಾಪೊಲಿಯರ ವಿಷಯವಾಗಿಯೂ ಅವನು ಬಹು ಆಸಕ್ತಿಯುಳ್ಳವನಾಗಿದ್ದಾನೆಂದು ಅವನ ವಿಷಯ ದಲ್ಲಿ ನಾನು ಸಾಕ್ಷಿ ಹೇಳುತ್ತೇನೆ. ಪ್ರಿಯ ವೈದ್ಯನಾಗಿ ರುವ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.
- Romans 16:21–22 ರೋಮಾಪುರದವರಿಗೆ 16:21–22ನನ್ನ ಜೊತೆ ಕೆಲಸದವನಾದ ತಿಮೊಥೆಯನೂ ನನ್ನ ಬಂಧುಗಳಾದ ಲೂಕ್ಯನೂ ಯಾಸೋನನೂ ಸೋಸಿಪತ್ರನೂ ನಿಮಗೆ ವಂದನೆಗಳನ್ನು ಹೇಳುತ್ತಾರೆ. ಈ ಪತ್ರಿಕೆಯನ್ನು ಬರೆದ ತೆರ್ತ್ಯನೆಂಬ ನಾನು ನಿಮ್ಮನ್ನು ಕರ್ತನಲ್ಲಿ ವಂದಿಸುತ್ತೇನೆ.
- 1 Corinthians 1:2 1 ಕೊರಿಂಥದವರಿಗೆ 1:2ಕೊರಿಂಥದಲ್ಲಿನ ದೇವರ ಸಭೆಗೆ ಅಂದರೆ ಕ್ರಿಸ್ತ ಯೇಸುವಿನಲ್ಲಿ ಪ್ರತಿಷ್ಠಿತರೂ ಪರಿಶುದ್ಧರಾಗು ವದಕ್ಕೆ ಕರೆಯಲ್ಪಟ್ಟವರೂ ಆಗಿರುವವರಿಗೆ ಮತ್ತು ಅವರಿಗೂ ನಮಗೂ ಪ್ರತಿಯೊಂದು ಸ್ಥಳದಲ್ಲಿ ನಮ್ಮ ಕರ್ತನಾಗಿರುವ ಯೇಸು ಕ್ರಿಸ್ತನ ನಾಮಸ್ಮರಣೆಯನ್ನು ಮಾಡುವವರೆಲ್ಲರಿಗೂ
- Philippians 1:1 ಫಿಲಿಪ್ಪಿಯವರಿಗೆ 1:1ಯೇಸು ಕ್ರಿಸ್ತನ ಸೇವಕರಾದ ಪೌಲ ತಿಮೊಥೆಯರು ಕ್ರಿಸ್ತ ಯೇಸುವಿನಲ್ಲಿ ಫಿಲಿಪ್ಪಿಯದ ಪರಿಶುದ್ಧರೆಲ್ಲರಿಗೂ ಅವರೊಂದಿಗಿರುವ ಸಭಾಧ್ಯಕ್ಷರಿಗೂ ಸಭಾಸೇವಕರಿಗೂ--
- Romans 16:3–16 ರೋಮಾಪುರದವರಿಗೆ 16:3–16ಕ್ರಿಸ್ತ ಯೇಸುವಿನಲ್ಲಿ ನನ್ನ ಸಹಾಯಕರಾದ ಪ್ರಿಸ್ಕಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ. ಅವರು ನನ್ನ ಪ್ರಾಣಕ್ಕಾಗಿ ತಮ್ಮ ಕುತ್ತಿಗೆಗಳನ್ನೇ ಒಡ್ಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರನ್ನು ವಂದಿಸುತ್ತಾರೆ. ಅದರಂತೆಯೇ ಅವರ ಮನೆಯಲ್ಲಿರುವ ಸಭೆಗೂ ವಂದನೆ ಹೇಳಿರಿ; ಅಖಾಯದಲ್ಲಿ ಕ್ರಿಸ್ತನಿಗೆ ಪ್ರಥಮ ಫಲವಾಗಿರುವ ನನ್ನ ಪ್ರಿಯನಾದ ಎಪೈನೆತನಿಗೂ ವಂದನೆ. ನಮಗೋಸ್ಕರ ಬಹು ಶ್ರಮೆಪಟ್ಟ ಮರಿಯಳಿಗೆ ವಂದನೆ. ನನಗಿಂತ ಮೊದಲು ಕ್ರಿಸ್ತ ನಲ್ಲಿದ್ದು ಅಪೊಸ್ತಲರಲ್ಲಿ ಪ್ರಖ್ಯಾತಿಗೊಂಡ ನನ್ನ ಬಂಧುಗಳೂ ನನ್ನ ಜೊತೆ ಸೆರೆಯವರೂ ಆಗಿರುವ ಅಂದ್ರೋನಿಕನಿಗೂ ಯೂನ್ಯನಿಗೂ ವಂದನೆಗಳು. ಕರ್ತನಲ್ಲಿ ನನ್ನ ಪ್ರಿಯನಾಗಿರುವ ಅಂಪ್ಲಿಯಾತನಿಗೆ ವಂದನೆ. ಕ್ರಿಸ್ತನಲ್ಲಿ ನಮ್ಮ ಸಹಾಯಕನಾದ ಉರ್ಬಾನನಿಗೂ ನನ್ನ ಪ್ರಿಯನಾದ ಸ್ತಾಖುನಿಗೂ ವಂದನೆಗಳು. ಕ್ರಿಸ್ತನಲ್ಲಿ ಮೆಚ್ಚಿಕೆ ಹೊಂದಿದ ಅಪೆಲ್ಲ ನಿಗೆ ವಂದನೆ; ಅರಿಸ್ತೊಬೂಲನ ಮನೆಯವರಿಗೆ ವಂದನೆಗಳು. ನನ್ನ ಬಂಧುವಾದ ಹೆರೊಡಿಯೋ ನನಿಗೆ ವಂದನೆ. ಕರ್ತನಲ್ಲಿರುವ ನಾರ್ಕಿಸ್ಸನ ಮನೆ ಯವರಿಗೆ ವಂದನೆಗಳು. ಕರ್ತನಲ್ಲಿ ಪ್ರಯಾಸಪ ಡುವ ತ್ರುಫೈನಳಿಗೂ ತ್ರುಫೋಸಳಿಗೂ ವಂದನೆಗಳು. ಕರ್ತನಲ್ಲಿ ಹೆಚ್ಚಾಗಿ ಪ್ರಯಾಸಪಟ್ಟಿರುವ ಪ್ರಿಯ ಪೆರ್ಸೀ ಸಳಿಗೆ ವಂದನೆ. ಕರ್ತನಲ್ಲಿ ಆರಿಸಲ್ಪಟ್ಟ ರೂಫನಿಗೂ ನನಗೆ ತಾಯಿಯಂತಿರುವ ಅವನ ತಾಯಿಗೂ ವಂದನೆ ಗಳು. ಅಸುಂಕ್ರಿತನಿಗೂ ಪ್ಲೆಗೋನನಿಗೂ ಹೆರ್ಮೇ ಯನಿಗೂ ಪತ್ರೋಬನಿಗೂ ಹೆರ್ಮಾನನಿಗೂ ಅವ ರೊಂದಿಗಿರುವ ಸಹೋದರರಿಗೂ ವಂದನೆಗಳು. ಫಿಲೊಲೊಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ಸಹೋದರರಿಗೂ ಒಲುಂಪನಿಗೂ ಅವರೊಂದಿ ಗಿರುವ ಪರಿಶುದ್ಧರೆಲ್ಲರಿಗೂ ವಂದನೆಗಳು. ಪವಿತ್ರ ವಾದ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳು ನಿಮ್ಮನ್ನು ವಂದಿಸುತ್ತವೆ.
- Galatians 2:3 ಗಲಾತ್ಯದವರಿಗೆ 2:3ನನ್ನ ಜೊತೆಯಲ್ಲಿದ್ದ ತೀತನು ಗ್ರೀಕನಾಗಿದ್ದರೂ ಅವನಿಗೆ ಸುನ್ನತಿಯಾಗಬೇಕೆಂದು ಯಾರೂ ಬಲಾತ್ಕಾರ ಮಾಡ ಲಿಲ್ಲ.