Philippians · chapter 4 · verse 20
Philippians 4:20 in Kannada
ನಮ್ಮ ತಂದೆಯೂ ದೇವರೂ ಆಗಿರುವಾತನಿಗೆ ಯುಗ ಯುಗಾಂತರಗಳಲ್ಲಿಯೂ ಮಹಿಮೆ ಇರಲಿ. ಆಮೆನ್.
Namma tandeyoo devaroo aagiruvaatanige yuga yugaantaragalalliyoo mahime irali. Aamen.
Philippians 4:20 in English
- King James Version (KJV)
- Now unto God and our Father [be] glory for ever and ever. Amen.
- World English Bible (WEB)
- Now to our God and Father be the glory forever and ever! Amen.
- American Standard Version (ASV)
- Now unto our God and Father [be] the glory for ever and ever. Amen.
- Bible in Basic English (BBE)
- Now to God our Father be glory for ever and ever. So be it.
- Darby Translation (DBY)
- But to our God and Father [be] glory to the ages of ages. Amen.
- Webster's Bible (WBS)
- Now to God and our Father [be] glory for ever and ever. Amen.
- Young's Literal Translation (YLT)
- and to God, even our Father, [is] the glory — to the ages of the ages. Amen.
Read in context
- 18ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆ ಯಾದದ್ದು; ಸುಗಂಧವಾಸನೆಯೇ, ಇಷ್ಟಯಜ್ಞವೇ
- 19ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು.
- 20ನಮ್ಮ ತಂದೆಯೂ ದೇವರೂ ಆಗಿರುವಾತನಿಗೆ ಯುಗ ಯುಗಾಂತರಗಳಲ್ಲಿಯೂ ಮಹಿಮೆ ಇರಲಿ. ಆಮೆನ್.
- 21ಕ್ರಿಸ್ತ ಯೇಸುವಿನಲ್ಲಿ ಪ್ರತಿಯೊಬ್ಬ ಪರಿಶುದ್ಧನಿಗೆ ವಂದನೆ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ.
- 22ಪರಿಶುದ್ದರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಮುಖ್ಯವಾಗಿ ಕೈಸರನ ಮನೆಯವರು ನಿಮ್ಮನ್ನು ವಂದಿಸುತ್ತಾರೆ;ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
Cross references
- Romans 11:36 ರೋಮಾಪುರದವರಿಗೆ 11:36ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
- Psalm 115:1 ಕೀರ್ತನೆಗಳು 115:1ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
- Revelation 14:7 ಪ್ರಕಟನೆ 14:7ಅವನು--ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ; ಯಾಕಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆ ಬಂದದೆ; ಪರಲೋಕವನ್ನೂ ಭೂ ಲೋಕವನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟು ಮಾಡಿದಾತನನ್ನೇ ಆರಾಧಿಸಿರಿ ಎಂದು ಮಹಾ ಶಬ್ದದಿಂದ ಹೇಳಿದನು.
- Revelation 7:12 ಪ್ರಕಟನೆ 7:12ಆಮೆನ್. ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಸಾಮ ರ್ಥ್ಯವೂ ಯುಗಯುಗಾಂತರಗಳಲ್ಲಿ ಇರಲಿ ಎಂದು ಹೇಳಿದರು. ಆಮೆನ್.
- Revelation 4:9–11 ಪ್ರಕಟನೆ 4:9–11ಯುಗ ಯುಗಾಂತರಗಳಲ್ಲಿಯೂ ಜೀವಿಸುವಾತನಾಗಿ ಸಿಂಹಾ ಸನದ ಮೇಲೆ ಕೂತಿರುವಾತನಿಗೆ ಆ ಜೀವಿಗಳು ಪ್ರಭಾವಮಾನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಆಗ ಆ ಇಪ್ಪತ್ತನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಿದ್ದಾತನ ಮುಂದೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಯುಗಯುಗಾಂತರ ಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾ--ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು. ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
- Revelation 5:12 ಪ್ರಕಟನೆ 5:12ಅವರು--ವಧಿತನಾದ ಕುರಿಮರಿಯು ಬಲ ಐಶ್ವರ್ಯ ಜ್ಞಾನ ಸಾಮರ್ಥ್ಯ ಮಾನಪ್ರಭಾವ ಸ್ತೋತ್ರಗಳನ್ನು ಹೊಂದುವದಕ್ಕೆ ಯೋಗ್ಯನು ಎಂದು ಮಹಾಶಬ್ದದಿಂದ ಹೇಳಿದರು.
- Philippians 1:11 ಫಿಲಿಪ್ಪಿಯವರಿಗೆ 1:11ಯೇಸು ಕ್ರಿಸ್ತನ ಮೂಲಕ ನೀತಿಯೆಂಬ ಫಲಗಳಿಂದ ತುಂಬಿದವರಾಗಿ ದೇವರಿಗೆ ಮಹಿಮೆಯನ್ನೂ ಸ್ತೋತ್ರ ವನ್ನೂ ತರುವವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
- Jude 1:25 ಯೂದನು 1:25ಒಬ್ಬನೇ ಜ್ಞಾನವುಳ್ಳ ನಮ್ಮ ರಕ್ಷಕನಾದ ದೇವರಿಗೆ ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಈಗಲೂ ಯಾವಾಗಲೂ ಇರಲಿ. ಆಮೆನ್.
- Galatians 1:4–5 ಗಲಾತ್ಯದವರಿಗೆ 1:4–5ಈತನು ನಮ್ಮನ್ನು ಕೆಟ್ಟದ್ದಾಗಿರುವ ಈಗಿನ ಪ್ರಪಂಚದೊಳಗಿಂದ ಬಿಡಿಸಬೇಕೆಂದು ನಮ್ಮ ತಂದೆ ಯಾದ ದೇವರ ಚಿತ್ತಕ್ಕನುಸಾರವಾಗಿ ನಮ್ಮ ಪಾಪಗಳಿಗೋಸ್ಕರ ತನ್ನನ್ನು ತಾನೇ ಒಪ್ಪಿಸಿದನು. ಆತನಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯಾಗಲಿ. ಆಮೆನ್.
- Revelation 1:6 ಪ್ರಕಟನೆ 1:6ತನ್ನ ತಂದೆ ಯಾದ ದೇವರಿಗೆ ನಮ್ಮನ್ನು ರಾಜರನ್ನಾಗಿಯೂ ಯಾಜಕ ರನ್ನಾಗಿಯೂ ಮಾಡಿದನು. ಆತನಿಗೆ ಯುಗ ಯುಗಾಂತರಗಳಲ್ಲಿ ಮಹಿಮೆಯೂ ಅಧಿಪತ್ಯವೂ ಇರಲಿ. ಆಮೆನ್.
- Psalm 72:19 ಕೀರ್ತನೆಗಳು 72:19ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್. ಆಮೆನ್.ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.
- Ephesians 3:21 ಎಫೆಸದವರಿಗೆ 3:21ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್.