Proverbs · chapter 11 · verse 5
Proverbs 11:5 in Kannada
ಸಂಪೂರ್ಣನ ನೀತಿಯು ಅವನ ಮಾರ್ಗವನ್ನು ಸರಾಗಮಾಡುವದು; ದುಷ್ಟನು ತನ್ನ ದುಷ್ಟತ್ವದಿಂದಲೇ ಬೀಳುವನು.
Sampoornana neetiyu avana maargavannu saraagamaaduvadu; dushtanu tanna dushtatvadindale beeluvanu.
Proverbs 11:5 in English
- King James Version (KJV)
- The righteousness of the perfect shall direct his way: but the wicked shall fall by his own wickedness.
- World English Bible (WEB)
- The righteousness of the blameless will direct his way, but the wicked shall fall by his own wickedness.
- American Standard Version (ASV)
- The righteousness of the perfect shall direct his way; But the wicked shall fall by his own wickedness.
- Bible in Basic English (BBE)
- The righteousness of the good man will make his way straight, but the sin of the evil-doer will be the cause of his fall.
- Darby Translation (DBY)
- The righteousness of the perfect maketh plain his way; but the wicked falleth by his own wickedness.
- Webster's Bible (WBS)
- The righteousness of the perfect shall direct his way: but the wicked shall fall by his own wickedness.
- Young's Literal Translation (YLT)
- The righteousness of the perfect maketh right his way, And by his wickedness doth the wicked fall.
Read in context
- 3ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.
- 4ಉಗ್ರತೆಯ ದಿನದಲ್ಲಿ ಐಶ್ವರ್ಯವು ಲಾಭಕರವಾಗುವದಿಲ್ಲ; ನೀತಿಯು ಮರಣ ದಿಂದ ಬಿಡಿಸುತ್ತದೆ.
- 5ಸಂಪೂರ್ಣನ ನೀತಿಯು ಅವನ ಮಾರ್ಗವನ್ನು ಸರಾಗಮಾಡುವದು; ದುಷ್ಟನು ತನ್ನ ದುಷ್ಟತ್ವದಿಂದಲೇ ಬೀಳುವನು.
- 6ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವದು; ತಮ್ಮ ಸ್ವಂತ ತುಂಟ ತನದಲ್ಲಿ ದೋಷಿಗಳು ಸಿಕ್ಕಿಬೀಳುವರು.
- 7ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವವು; ಅನೀತಿವಂತನ ನಿರೀಕ್ಷೆಯು ನಾಶವಾಗುವದು.
Cross references
- Proverbs 5:22 ಜ್ಞಾನೋಕ್ತಿಗಳು 5:22ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು.ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು.
- Psalm 9:15–16 ಕೀರ್ತನೆಗಳು 9:15–16ಜನಾಂಗಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲಿ ಅವರ ಕಾಲು ಸಿಕ್ಕಿಕೊಂಡಿತು. ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ. ಹಿಗ್ಗಾಯೋನ್. ಸೆಲಾ.
- Proverbs 3:6 ಜ್ಞಾನೋಕ್ತಿಗಳು 3:6ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು.
- Proverbs 11:3 ಜ್ಞಾನೋಕ್ತಿಗಳು 11:3ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.
- Matthew 27:4–5 ಮತ್ತಾಯನು 27:4–5ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು. ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.
- Proverbs 1:31–32 ಜ್ಞಾನೋಕ್ತಿಗಳು 1:31–32ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು. ಅಜ್ಞಾನಿ ಗಳ ವಿಮುಖವು ಅವರನ್ನು ಕೊಲ್ಲುವದು, ಜ್ಞಾನ ಹೀನರ ಏಳಿಗೆ ಅವರನ್ನು ನಾಶಪಡಿಸುವದು.ನನಗೆ ಕಿವಿಗೊಡುವವನಾದರೋ ಜೀವಿಸಿ ಯಾವ ಕೇಡಿನ ಭಯವಿಲ್ಲದೆ ನೆಮ್ಮದಿಯಲ್ಲಿರುವನು.
- Esther 7:3–10 ಎಸ್ತೇರಳು 7:3–10ಆಗ ರಾಣಿಯಾದ ಎಸ್ತೇರಳು ಪ್ರತ್ಯುತ್ತರ ಕೊಟ್ಟು--ಓ ಅರಸನೇ, ನಾನು ನಿನ್ನ ಮುಂದೆ ದಯ ಹೊಂದಿದ ವಳಾಗಿದ್ದರೆ ಅದು ಅರಸನಿಗೆ ಮೆಚ್ಚಿಕೆಯಾಗಿದ್ದರೆ ನನ್ನ ಬೇಡುವಿಕೆಗೆ ನನ್ನ ಪ್ರಾಣವೂ ನನ್ನ ವಿಜ್ಞಾಪನೆಗೆ ನನ್ನ ಜನವೂ ಕೊಡಲ್ಪಡಲಿ. ಯಾಕಂದರೆ ನಾನೂ ನನ್ನ ಜನವೂ ಸಂಹರಿಸಲ್ಪಡುವದಕ್ಕೂ ಕೊಲ್ಲಲ್ಪ ಡುವದಕ್ಕೂ ನಾಶಮಾಡಲ್ಪಡುವದಕ್ಕೂ ಮಾರಲ್ಪಟ್ಟೆವು. ನಾವು ದಾಸದಾಸಿಗಳಾಗಿ ಮಾರಲ್ಪಟ್ಟಿದ್ದರೆ ನಾನು ಸುಮ್ಮನೆ ಇರುತ್ತಿದ್ದೆನು; ಆದರೆ ವೈರಿ ಅರಸನ ನಷ್ಟಕ್ಕೆ ಸರಿಯಾಗಿ ಕೊಡಲಾರನು ಅಂದಳು. ಆಗ ಅರಸ ನಾದ ಅಹಷ್ವೇರೋಷನು--ರಾಣಿಯಾದ ಎಸ್ತೇರಳಿಗೆ ಪ್ರತ್ಯುತ್ತರವಾಗಿ ಈ ಪ್ರಕಾರ ಮಾಡಲು ತನ್ನ ಹೃದಯ ತುಂಬಿಕೊಂಡವನು ಯಾರು? ಅವನು ಎಲ್ಲಿ ಅಂದನು. ಅದಕ್ಕೆ ಎಸ್ತೇರಳು--ವೈರಿಯೂ ಶತ್ರುವೂ ಯಾರಂದರೆ ಈ ಕೆಟ್ಟವನಾದ ಹಾಮಾನನೇ ಅಂದಳು. ಆಗ ಹಾಮಾನನು ಅರಸನ, ರಾಣಿಯ ಸಮ್ಮುಖದಲ್ಲಿ ಹೆದರಿ ಕೊಂಡನು. ಅರಸನು ಕೋಪವುಳ್ಳವನಾಗಿ ದ್ರಾಕ್ಷಾ ರಸದ ಔತಣದಿಂದ ಎದ್ದು ಅರಮನೆಯ ತೋಟಕ್ಕೆ ಹೋದನು. ಆದರೆ ಹಾಮಾನನು ರಾಣಿಯಾದ ಎಸ್ತೇ ರಳ ಮುಂದೆ ತನ್ನ ಪ್ರಾಣಕ್ಕೋಸ್ಕರ ಬೇಡಿಕೊಳ್ಳುತ್ತಾ ನಿಂತನು, ಯಾಕಂದರೆ ಅರಸನಿಂದ ತನಗೆ ಕೇಡು ನಿರ್ಣಯವಾಯಿತೆಂದು ತಿಳಿದನು. ಅರಸನು ಅರ ಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ತಿರಿಗಿ ಬಂದಾಗ ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. ಆಗ ಅರಸನು--ನನ್ನ ಮುಂದೆ ಅವನು ರಾಣಿಯನ್ನು ಬಲಾತ್ಕಾರ ಮಾಡು ವನೋ ಅಂದನು. ಆ ಮಾತು ಅರಸನ ಬಾಯಿಂದ ಹೊರಟಾಗ ಸೇವಕರು ಹಾಮಾನನ ಮುಖವನ್ನು ಮುಚ್ಚಿದರು. ಆಗ ಮನೆ ವಾರ್ತೆಯರಲ್ಲಿ ಒಬ್ಬನಾದ ಹರ್ಬೋನನು ಅರಸನ ಮುಂದೆ--ಇಗೋ, ಅರಸ ನನ್ನು ಕುರಿತು ಒಳ್ಳೇದನ್ನು ಹೇಳಿದ ಮೊರ್ದೆಕೈಗೋಸ್ಕರ ಹಾಮಾನನು ಮಾಡಿಸಿದ ಐವತ್ತು ಮೊಳ ಉದ್ದವಾದ ಗಲ್ಲಿನ ಮರವು ಹಾಮಾನನ ಮನೆಯಲ್ಲಿ ಅದೆ ಅಂದನು. ಅದಕ್ಕೆ ಅರಸನು--ಅವನನ್ನು ಅದರಲ್ಲಿ ತೂಗು ಹಾಕಿರಿ ಅಂದನು.ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು. ಅವರು ಮೊರ್ದೆಕೈ ಗೋಸ್ಕರ ಹಾಮಾನನು ಸಿದ್ಧ ಮಾಡಿಸಿದ್ದ ಗಲ್ಲಿನ ಮರದಲ್ಲಿ ಅವನನ್ನು ಹಾಕಿದರು. ಆಗ ಅರಸನ ಕೋಪವು ಶಾಂತವಾಯಿತು.