Skip to content
ThuthiThuthiThuthi
Proverbs · chapter 11 of 31 · 31 verses

Proverbs 11 in Kannada

ಜ್ಞಾನೋಕ್ತಿಗಳು 11

  1. ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.

    A false balance [is] abomination to the LORD: but a just weight [is] his delight.

  2. ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ದೀನರಲ್ಲಿ ಜ್ಞಾನವಿದೆ.

    [When] pride cometh, then cometh shame: but with the lowly [is] wisdom.

  3. ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.

    The integrity of the upright shall guide them: but the perverseness of transgressors shall destroy them.

  4. ಉಗ್ರತೆಯ ದಿನದಲ್ಲಿ ಐಶ್ವರ್ಯವು ಲಾಭಕರವಾಗುವದಿಲ್ಲ; ನೀತಿಯು ಮರಣ ದಿಂದ ಬಿಡಿಸುತ್ತದೆ.

    Riches profit not in the day of wrath: but righteousness delivereth from death.

  5. ಸಂಪೂರ್ಣನ ನೀತಿಯು ಅವನ ಮಾರ್ಗವನ್ನು ಸರಾಗಮಾಡುವದು; ದುಷ್ಟನು ತನ್ನ ದುಷ್ಟತ್ವದಿಂದಲೇ ಬೀಳುವನು.

    The righteousness of the perfect shall direct his way: but the wicked shall fall by his own wickedness.

  6. ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವದು; ತಮ್ಮ ಸ್ವಂತ ತುಂಟ ತನದಲ್ಲಿ ದೋಷಿಗಳು ಸಿಕ್ಕಿಬೀಳುವರು.

    The righteousness of the upright shall deliver them: but transgressors shall be taken in [their own] naughtiness.

  7. ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವವು; ಅನೀತಿವಂತನ ನಿರೀಕ್ಷೆಯು ನಾಶವಾಗುವದು.

    When a wicked man dieth, [his] expectation shall perish: and the hope of unjust [men] perisheth.

  8. ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ; ಅವನ ಸ್ಥಳದಲ್ಲಿ ದುಷ್ಟನು ಬರುತ್ತಾನೆ.

    The righteous is delivered out of trouble, and the wicked cometh in his stead.

  9. ಒಬ್ಬ ಕಪಟಿಯು ಬಾಯಿಂದ ತನ್ನ ನೆರೆಯವನನ್ನು ಹಾಳುಮಾಡುತ್ತಾನೆ; ತಿಳುವಳಿಕೆಯ ಮೂಲಕ ನೀತಿವಂತನು ಬಿಡಿಸಲ್ಪ ಡುವನು.

    An hypocrite with [his] mouth destroyeth his neighbour: but through knowledge shall the just be delivered.

  10. ನೀತಿವಂತರು ಚೆನ್ನಾಗಿದ್ದರೆ ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ ಆರ್ಭಟವಿರು ತ್ತದೆ.

    When it goeth well with the righteous, the city rejoiceth: and when the wicked perish, [there is] shouting.

  11. ಯಥಾರ್ಥವಂತರ ಆಶೀರ್ವಾದದಿಂದ ಪಟ್ಟ ಣವು ಹೆಚ್ಚಿಸಲ್ಪಡುತ್ತದೆ. ದುಷ್ಟರ ಬಾಯಿಂದ ಅದು ಕೆಡವಲ್ಪಡುತ್ತದೆ.

    By the blessing of the upright the city is exalted: but it is overthrown by the mouth of the wicked.

  12. ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ.

    He that is void of wisdom despiseth his neighbour: but a man of understanding holdeth his peace.

  13. ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ.

    A talebearer revealeth secrets: but he that is of a faithful spirit concealeth the matter.

  14. ಆಲೋಚನೆ ಇಲ್ಲದಿರುವಲ್ಲಿ ಜನರು ಬೀಳುತ್ತಾರೆ; ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.

    Where no counsel [is], the people fall: but in the multitude of counsellors [there is] safety.

  15. ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ; ಹೊಣೆಗಾರತ್ವವನ್ನು ಹಗೆಮಾಡಿ ಕೊಳ್ಳುವವನು ಭದ್ರವಾಗಿರುವನು.

    He that is surety for a stranger shall smart [for it:] and he that hateth suretiship is sure.

  16. ಕೃಪೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಕಾಪಾಡಿಕೊಳ್ಳುತ್ತಾಳೆ. ಬಲಿಷ್ಠರು ಐಶ್ವರ್ಯವನ್ನು ಕಾಪಾಡಿಕೊಳ್ಳುತ್ತಾರೆ.

    A gracious woman retaineth honour: and strong [men] retain riches.

  17. ಕರುಣೆಯುಳ್ಳವನು ತನ್ನ ಪ್ರಾಣಕ್ಕೆ ಒಳ್ಳೇದನ್ನು ಮಾಡಿಕೊಳ್ಳುತ್ತಾನೆ; ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.

    The merciful man doeth good to his own soul: but [he that is] cruel troubleth his own flesh.

  18. ದುಷ್ಟನು ಮೋಸದ ಕೃತ್ಯವನ್ನು ಮಾಡುತ್ತಾನೆ; ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹ ವಾಗಿ ಬಹುಮಾನವಿರುವದು.

    The wicked worketh a deceitful work: but to him that soweth righteousness [shall be] a sure reward.

  19. ನೀತಿಯು ಜೀವಕ್ಕೆ ಒಲಿಯುತ್ತದೆ; ಕೆಟ್ಟದ್ದನ್ನು ಹಿಂದಟ್ಟುವವನು ತನ್ನ ಮರ ಣಕ್ಕೆ ಹಿಂದಟ್ಟುತ್ತಾನೆ.

    As righteousness [tendeth] to life: so he that pursueth evil [pursueth it] to his own death.

  20. ಮೂರ್ಖ ಹೃದಯವುಳ್ಳವರು ಕರ್ತನಿಗೆ ಅಸಹ್ಯವಾದವರು; ತಮ್ಮ ಮಾರ್ಗದಲ್ಲಿ ಯಥಾರ್ಥವಾಗಿ ಇರುವವರು ಆತನ ಆನಂದವಾಗಿ ದ್ದಾರೆ.

    They that are of a froward heart [are] abomination to the LORD: but [such as are] upright in [their] way [are] his delight.

  21. ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ; ನೀತಿವಂತರ ವಂಶವು ತಪ್ಪಿಸಿಕೊಳ್ಳುವದು.

    [Though] hand [join] in hand, the wicked shall not be unpunished: but the seed of the righteous shall be delivered.

  22. ಹಂದಿಯ ಮೂಗಿನಲ್ಲಿರುವ ಬಂಗಾರದ ಒಡವೆಯು ಹೇಗೋ ಹಾಗೆಯೇ ವಿವೇಕವಿಲ್ಲದ ಸುಂದರವಾದ ಸ್ತ್ರೀಯು ಇರುವಳು.

    [As] a jewel of gold in a swine’s snout, [so is] a fair woman which is without discretion.

  23. ನೀತಿವಂತರು ಒಳ್ಳೇಯದನ್ನು ಮಾತ್ರ ಅಪೇಕ್ಷಿಸುತ್ತಾರೆ; ದುಷ್ಟರ ಅಪೇಕ್ಷೆಯು ಕೋಪ ವಾಗಿದೆ.

    The desire of the righteous [is] only good: [but] the expectation of the wicked [is] wrath.

  24. ಚದುರಿಸಿದಾಗ್ಯೂ ವೃದ್ಧಿಯಾಗುತ್ತದೆ; ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಬಿಗಿಹಿಡಿಯುವಂಥದ್ದು ಬಡತನಕ್ಕೆ ನಡಿಸುತ್ತದೆ.

    There is that scattereth, and yet increaseth; and [there is] that withholdeth more than is meet, but [it tendeth] to poverty.

  25. ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು.

    The liberal soul shall be made fat: and he that watereth shall be watered also himself.

  26. ಧಾನ್ಯವನ್ನು ಬಿಗಿಹಿಡಿಯುವವನನ್ನು ಜನರು ಶಪಿಸುವರು; ಅದನ್ನು ಮಾರುವವನ ತಲೆಯ ಮೇಲೆ ಆಶೀರ್ವಾದವು ನೆಲೆಯಾಗಿರುವದು.

    He that withholdeth corn, the people shall curse him: but blessing [shall be] upon the head of him that selleth [it].

  27. ಒಳ್ಳೇದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದು ತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವದು.

    He that diligently seeketh good procureth favour: but he that seeketh mischief, it shall come unto him.

  28. ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು ಕೊಂಬೆಯ ಹಾಗೆ ಚಿಗುರುವರು.

    He that trusteth in his riches shall fall: but the righteous shall flourish as a branch.

  29. ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಜ್ಞಾನವುಳ್ಳ ಹೃದಯದವನಿಗೆ ಅವಿವೇಕಿಯು ಸೇವಕನಾಗಿರುವನು.

    He that troubleth his own house shall inherit the wind: and the fool [shall be] servant to the wise of heart.

  30. ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ.ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.

    The fruit of the righteous [is] a tree of life; and he that winneth souls [is] wise.

  31. ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.

    Behold, the righteous shall be recompensed in the earth: much more the wicked and the sinner.

All chapters of Proverbs · Kannada Bible · Proverbs 11 in Tamil

Kannada Bible: Kannada Old Version, public domain.

King James Version: public domain.