Proverbs · chapter 16 · verse 6
Proverbs 16:6 in Kannada
ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ಧೀಕರಿಸಲ್ಪಡುತ್ತದೆ; ಕರ್ತನ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
Kanikara mattu satyadinda akramavu shuddheekarisalpaduttade; kartana bhayada moolaka manushyaru kettaddarinda tolaguttaare.
Proverbs 16:6 in English
- King James Version (KJV)
- By mercy and truth iniquity is purged: and by the fear of the LORD [men] depart from evil.
- World English Bible (WEB)
- By mercy and truth iniquity is atoned for. By the fear of the LORD men depart from evil.
- American Standard Version (ASV)
- By mercy and truth iniquity is atoned for; And by the fear of Jehovah men depart from evil.
- Bible in Basic English (BBE)
- By mercy and good faith evil-doing is taken away: and by the fear of the Lord men are turned away from evil.
- Darby Translation (DBY)
- By loving-kindness and truth iniquity is atoned for; and by the fear of Jehovah [men] depart from evil.
- Webster's Bible (WBS)
- By mercy and truth iniquity is purged: and by the fear of the LORD [men] depart from evil.
- Young's Literal Translation (YLT)
- In kindness and truth pardoned is iniquity, And in the fear of Jehovah Turn thou aside from evil.
Read in context
- 4ಎಲ್ಲವುಗಳನ್ನು ಕರ್ತನು ತನಗಾಗಿ ಮಾಡಿದ್ದಾನೆ; ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿ ದ್ದಾನೆ.
- 5ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಕರ್ತನಿಗೆ ಅಸಹ್ಯ. ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ.
- 6ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ಧೀಕರಿಸಲ್ಪಡುತ್ತದೆ; ಕರ್ತನ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
- 7ಮನುಷ್ಯನ ಮಾರ್ಗಗಳು ಕರ್ತನನ್ನು ಮೆಚ್ಚಿಸಿದಾಗ ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನ ದಲ್ಲಿರುವಂತೆ ಆತನು ಮಾಡುತ್ತಾನೆ.
- 8ಅನ್ಯಾಯದ ಬಹು ಆದಾಯಕ್ಕಿಂತಲೂ ನೀತಿಯೊಂದಿಗಿರುವ ಸ್ವಲ್ಪವೇ ಉತ್ತಮ.
Cross references
- Proverbs 14:16 ಜ್ಞಾನೋಕ್ತಿಗಳು 14:16ಜ್ಞಾನಿ ಯು ಭಯಪಟ್ಟು ಕೆಟ್ಟತನದಿಂದ ಹೊರಟುಹೋಗು ವನು; ಬುದ್ಧಿಹೀನನು ಕೋಪಿಸಿಕೊಂಡು ಧೈರ್ಯದಿಂದ ಇರುತ್ತಾನೆ.
- Job 28:28 ಯೋಬನು 28:28ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
- 2 Corinthians 7:1 2 ಕೊರಿಂಥದವರಿಗೆ 7:1ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.
- Daniel 4:27 ದಾನಿಯೇಲನು 4:27ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.
- Proverbs 14:27 ಜ್ಞಾನೋಕ್ತಿಗಳು 14:27ಮರಣದ ಪಾಶಗಳಿಂದ ತೊಲಗುವದಕ್ಕೆ ಕರ್ತನ ಭಯವು ಜೀವದ ಬುಗ್ಗೆ.
- Luke 11:41 ಲೂಕನು 11:41ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು.
- Proverbs 8:13 ಜ್ಞಾನೋಕ್ತಿಗಳು 8:13ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ.
- Proverbs 20:28 ಜ್ಞಾನೋಕ್ತಿಗಳು 20:28ಕರುಣೆಯೂ ಸತ್ಯವೂ ಅರಸನನ್ನು ಕಾಯುತ್ತದೆ; ಕರುಣೆಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ.
- Job 1:1–8 ಯೋಬನು 1:1–8ಊಚ್ ಎಂಬ ದೇಶದಲ್ಲಿ ಒಬ್ಬ ಮನುಷ್ಯನು ಇದ್ದನು. ಅವನ ಹೆಸರು ಯೋಬ. ಆ ಮನುಷ್ಯನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲ ಗುವವನೂ ಆಗಿದ್ದನು. ಅವನಿಗೆ ಏಳುಮಂದಿ ಕುಮಾ ರರೂ ಮೂರು ಮಂದಿ ಕುಮಾರ್ತೆಯರೂ ಹುಟ್ಟಿ ದರು. ಅವನ ಸಂಪತ್ತು--ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡು ಎತ್ತುಗಳು, ಐನೂರು ಹೆಣ್ಣು ಕತ್ತೆಗಳೂ ಮತ್ತು ಬಹು ಸೇವಕರ ಸಮೂಹವಿತ್ತು. ಹೀಗೆ ಆ ಮನುಷ್ಯನು ಎಲ್ಲಾ ಮೂಡಣದವರಿಗಿಂತಲೂ ಬಹು ಸ್ವಾಸ್ತ್ಯವುಳ್ಳವ ನಾಗಿದ್ದನು. ಅವನ ಕುಮಾರರು ಹೋಗಿ ತಮ್ಮ ತಮ್ಮ ಮನೆಗಳಲ್ಲಿ ಅವನವನ ದಿವಸದಲ್ಲಿ ಔತಣವನ್ನು ಮಾಡಿಸಿ ತಮ್ಮ ಸಂಗಡ ತಿನ್ನುವದಕ್ಕೂ ಕುಡಿಯುವ ದಕ್ಕೂ ತಮ್ಮ ಮೂವರು ಸಹೋದರಿಯರನ್ನು ಕರೆ ಕಳುಹಿಸುತ್ತಿದ್ದರು. ಔತಣದ ದಿನಗಳು ಮುಗಿದ ಬಳಿಕ ಯೋಬನು ಅವರನ್ನು ಕರೆಕಳುಹಿಸಿ ಅವರನ್ನು ಶುದ್ಧಿ ಮಾಡಿ ಬೆಳಿಗ್ಗೆ ಎದ್ದು ಅವರೆಲ್ಲರ ಲೆಕ್ಕದ ಪ್ರಕಾರ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಯೋಬನುಒಂದುವೇಳೆ ನನ್ನ ಕುಮಾರರು ಪಾಪ ಮಾಡಿ ತಮ್ಮ ಹೃದಯಗಳಲ್ಲಿ ದೇವರನ್ನು ಶಪಿಸಿರಬಹುದು ಅಂದು ಕೊಂಡನು. ಹೀಗೆಯೇ ಯೋಬನು ಕ್ರಮವಾಗಿ ಮಾಡುತ್ತಿದ್ದನು. ಒಂದು ದಿನ ದೇವರ ಪುತ್ರರು ಕರ್ತನ ಮುಂದೆ ನಿಂತುಕೊಳ್ಳುವದಕ್ಕೆ ಬಂದಾಗ ಸೈತಾನನು ಸಹ ಅವ ರೊಂದಿಗೆ ಬಂದನು. ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದಿ ಅಂದನು. ಸೈತಾನನು ಕರ್ತನಿಗೆ ಪ್ರತ್ಯುತ್ತರವಾಗಿ--ಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗಾಡಿ ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆದಾಡಿ ಬಂದೆನು ಅಂದನು. ಕರ್ತನು ಸೈತಾನನಿಗೆ--ನನ್ನ ಸೇವಕನಾದ ಯೋಬನ ಮೇಲೆ ನೀನು ಗಮನವಿಟ್ಟೆಯಾ? ಅವನು ಸಂಪೂರ್ಣನೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ಬಿಟ್ಟು ತೊಲಗುವವನೂ ಆಗಿದ್ದಾನೆ ಅವನ ಹಾಗೆ ಭೂಮಿಯಲ್ಲಿ ಒಬ್ಬನೂ ಇಲ್ಲ ಅಂದನು.
- Micah 7:18–20 ಮೀಕ 7:18–20ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ. ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ. ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- Acts 15:9 ಅಪೊಸ್ತಲರ ಕೃತ್ಯಗಳು 15:9ಇದಲ್ಲದೆ ಆತನು ನಮಗೂ ಅವರಿಗೂ ಏನೂ ಭೇದ ಮಾಡದೆ ಅವರ ಹೃದಯ ಗಳನ್ನೂ ನಂಬಿಕೆಯ ಮೂಲಕವಾಗಿ ಶುದ್ಧೀಕರಿಸಿದನು.
- Nehemiah 5:15 ನೆಹೆಮೀಯ 5:15ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ.