Proverbs · chapter 17 · verse 25
Proverbs 17:25 in Kannada
ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
Buddhiheena naada maganu tanna tandege duhkhavoo tannannu hettavalige kahiyoo aagiddaane.
Proverbs 17:25 in English
- King James Version (KJV)
- A foolish son [is] a grief to his father, and bitterness to her that bare him.
- World English Bible (WEB)
- A foolish son brings grief to his father, and bitterness to her who bore him.
- American Standard Version (ASV)
- A foolish son is a grief to his father, And bitterness to her that bare him.
- Bible in Basic English (BBE)
- A foolish son is a grief to his father, and bitter pain to her who gave him birth.
- Darby Translation (DBY)
- A foolish son is a grief to his father, and bitterness to her that bore him.
- Webster's Bible (WBS)
- A foolish son [is] a grief to his father, and bitterness to her that bore him.
- Young's Literal Translation (YLT)
- A provocation to his father [is] a foolish son, And bitterness to her that bare him.
Read in context
- 23ನ್ಯಾಯದ ಮಾರ್ಗ ಗಳನ್ನು ತಿರುಗಿಸಿಬಿಡುವದಕ್ಕೆ ದುಷ್ಟನು ಎದೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ.
- 24ವಿವೇಕಿಯ ಮುಂದೆ ಜ್ಞಾನವಿದೆ; ಬುದ್ಧಿಹೀನನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಇರುವವು.
- 25ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
- 26ನೀತಿವಂತನನ್ನು ಶಿಕ್ಷಿಸುವದು ಇಲ್ಲವೆ ಅಕ್ರಮಕ್ಕಾಗಿ ರಾಜಪುತ್ರರನ್ನು ಹೊಡೆಯುವದು ಯುಕ್ತವಲ್ಲ.
- 27ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆಂದು ಎಣಿಸಲ್ಪಡುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು.
Cross references
- Proverbs 10:1 ಜ್ಞಾನೋಕ್ತಿಗಳು 10:1ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನುಂಟು ಮಾಡುತ್ತಾನೆ; ಆಜ್ಞಾನಿ ಯಾದ ಮಗನಾದರೋ ತನ್ನ ತಾಯಿಗೆ ಭಾರವಾಗಿ ದ್ದಾನೆ.
- Proverbs 15:20 ಜ್ಞಾನೋಕ್ತಿಗಳು 15:20ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸ ಗೊಳಿಸುತ್ತಾನೆ; ಬುದ್ಧಿಹೀನನಾದರೋ ತನ್ನ ತಾಯಿ ಯನ್ನು ತಿರಸ್ಕರಿಸುತ್ತಾನೆ.
- 2 Samuel 13:1–22 2 ಸಮುವೇಲನು 13:1–22ತರುವಾಯ ಏನಾಯಿತಂದರೆ, ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸೌಂದರ್ಯವತಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗನಾದ ಅಮ್ನೋನನು ಪ್ರೀತಿಮಾಡಿದನು. ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ತಾಪಪಟ್ಟು ಅಸ್ವಸ್ಥನಾದನು; ಅವಳು ಕನ್ನಿಕೆಯಾಗಿದ್ದಳು; ಆದದರಿಂದ ಅವಳನ್ನು ಏನಾದರೂ ಮಾಡುವದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು. ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮ್ಮನ ಮಗನಾದ ಯೋನಾದಾಬನೆಂಬ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಮಹಾ ಕುಯುಕ್ತಿಯುಳ್ಳವನಾಗಿ ದ್ದನು. ಇವನು ಅವನಿಗೆ--ಅರಸನ ಮಗನಾದ ನೀನು ದಿನದಿನಕ್ಕೆ ಯಾಕೆ ಕ್ಷೀಣನಾಗಿ ಹೋಗುತ್ತೀ? ನನಗೆ ತಿಳಿಸುವದಿಲ್ಲವೋ ಅಂದನು. ಅದಕ್ಕೆ ಅಮ್ನೋನನು ಅವನಿಗೆ--ನಾನು ನನ್ನ ಸಹೋದರನಾಗಿರುವ ಅಬ್ಷಾ ಲೋಮನ ಸಹೋದರಿಯಾದ ತಾಮಾರಳನ್ನು ಪ್ರೀತಿ ಮಾಡುತ್ತೇನೆ ಅಂದನು. ಆಗ ಯೋನಾದಾಬನು ಅವನಿಗೆ--ನೀನು ರೋಗಿಷ್ಟನ ಹಾಗೆ ಮಂಚದ ಮೇಲೆ ಮಲಗು; ನಿನ್ನನ್ನು ನೋಡುವದಕ್ಕೆ ನಿನ್ನ ತಂದೆ ಬರುವಾಗ ನೀನು ಅವನಿಗೆ--ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣೆದುರಿನಲ್ಲಿ ಅಡಿಗೆಯನ್ನು ಮಾಡಿ ನನಗೆ ಆಹಾರ ಕೊಡಲಿ ಎಂದು ಹೇಳು ಅಂದನು. ಅವನು ಅದೇ ಪ್ರಕಾರ ರೋಗಿಷ್ಟನ ಹಾಗೆ ಮಲಗಿದನು. ಅರಸನು ತನ್ನನ್ನು ನೋಡುವದಕ್ಕೆ ಬಂದಾಗ ಅಮ್ನೋನನು ಅರಸನಿಗೆ--ನೀನು ನನ್ನ ಸಹೋದರಿಯಾದ ತಾಮಾರಳು ಬರುವ ಹಾಗೆ ದಯಮಾಡಬೇಕು; ನಾನು ಅವಳ ಕೈಯಿಂದ ಉಣ್ಣುವ ಹಾಗೆ ಅವಳು ನನ್ನ ಕಣ್ಣುಮುಂದೆ ಎರಡು ಭಕ್ಷ್ಯಗಳನ್ನು ಮಾಡುವದಕ್ಕೆ ಬರಲಿ ಅಂದನು. ಆಗ ದಾವೀದನು ತನ್ನ ಮನೆಯಲ್ಲಿರುವ ತಾಮಾರಳ ಬಳಿಗೆ ಮನುಷ್ಯನನ್ನು ಕಳುಹಿಸಿ--ನೀನು ನಿನ್ನ ಸಹೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೆ ಅಡಿಗೆಯನ್ನು ಮಾಡು ಅಂದನು. ಹಾಗೆಯೇ ತನ್ನ ಸಹೋದರನಾದ ಅಮ್ನೋನನ ಮನೆಗೆ ಹೋದಳು. ಆಗ ಅವನು ಮಲಗಿದ್ದನು. ಅವಳು ಹಿಟ್ಟನ್ನು ತೆಗೆದುಕೊಂಡು ಅವನ ಕಣ್ಣು ಮುಂದೆ ಹಿಸಿಕಿ ನಾದಿ ಭಕ್ಷ್ಯಗಳನ್ನು ಮಾಡಿ ಪಾತ್ರೆ ತಕ್ಕೊಂಡು ಅವನ ಮುಂದೆ ಇಟ್ಟಳು. ಆದರೆ ಅಮ್ನೋನನು--ನಾನು ಉಣ್ಣುವದಿಲ್ಲ ಎಂದು ಹೇಳಿ ನನ್ನ ಬಳಿಯಿಂದ ಎಲ್ಲಾ ಜನರನ್ನು ಕಳುಹಿಸಿಬಿಡಿರಿ ಅಂದನು. ಹಾಗೆಯೇ ಎಲ್ಲರೂ ಅವನನ್ನು ಬಿಟ್ಟು ಹೊರಗೆ ಹೋದರು. ಆಗ ಅಮ್ನೋನನು--ನಾನು ನಿನ್ನ ಕೈಯಿಂದ ತಿನ್ನುವಂತೆ ಆ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತೆಗೆದುಕೊಂಡು ಬಾ ಅಂದನು. ಹಾಗೆಯೇ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಕೊಠಡಿ ಯೊಳಗೆ ತನ್ನ ಸಹೋದರನಾದ ಅಮ್ನೋನನ ಬಳಿಗೆ ತಕ್ಕೊಂಡು ಬಂದಳು. ಆದರೆ ಅವನು ಅವುಗಳನ್ನು ಉಣ್ಣುವ ಹಾಗೆ ಅವಳು ಅವನ ಬಳಿಗೆ ತಂದಾಗ ಅವನು ಅವಳನ್ನು ಹಿಡಿದು ಅವಳಿಗೆ--ನನ್ನ ಸಹೋ ದರಿಯೇ, ನನ್ನ ಸಂಗಡ ಮಲಗು; ಬಾ ಅಂದನು. ಅದಕ್ಕವಳು--ನನ್ನ ಸಹೋದರನೇ, ಬೇಡ; ನನ್ನನ್ನು ಒತ್ತಾಯಮಾಡಬೇಡ; ಯಾಕಂದರೆ ಇಸ್ರಾಯೇಲಿನಲ್ಲಿ ಇಂಥಾ ಕಾರ್ಯಮಾಡಕೂಡದು; ಇಂಥಾ ಬುದ್ಧಿಹೀನ ವಾದ ಕೆಲಸ ಮಾಡಬೇಡ. ನಾನಾದರೋ ನನ್ನ ನಿಂದೆಯನ್ನು ಎಲ್ಲಿಗೆ ಹೋಗಮಾಡಲಿ; ಇದಲ್ಲದೆ ನೀನು ಇಸ್ರಾಯೇಲಿನಲ್ಲಿ ಬುದ್ಧಿಹೀನರೊಳಗೆ ಒಬ್ಬನ ಹಾಗೆ ಇರುವಿ. ಹಾಗಾದರೆ ಈಗ ದಯಮಾಡಿ ಅರಸನ ಸಂಗಡ ಮಾತನಾಡು; ಅವನು ನಿನ್ನ ಬಳಿಯಿಂದ ನನ್ನನ್ನು ಹೇಗಾದರೂ ಹಿಂತೆಗೆಯುವುದಿಲ್ಲ ಅಂದಳು. ಅವನು ಅವಳ ಮಾತನ್ನು ಕೇಳಲೊಲ್ಲದೆ ತಾನು ಅವಳಿಗಿಂತ ಬಲವುಳ್ಳವನಾಗಿದ್ದದರಿಂದ ಅವಳನ್ನು ಕುಂದಿಸಿ ಅವಳ ಸಂಗಡ ಮಲಗಿದನು. ಆಗ ಅಮ್ನೊನನು ಅವಳನ್ನು ಅತ್ಯಂತ ಹಗೆಮಾಡಿದನು; ಅವನು ಅವಳನ್ನು ಹಗೆಮಾಡಿದ ಹಗೆಯು ಮೊದಲು ಮಾಡಿದ ಪ್ರೀತಿಗಿಂತ ಅಧಿಕವಾಗಿತ್ತು; ಆದದರಿಂದ ಅಮ್ನೋನನು ಅವಳಿಗೆ--ಎದ್ದು ಹೋಗು ಅಂದನು. ಆಗ ಅವಳು ಅವನಿಗೆ--ಇದಕ್ಕೆ ಕಾರಣವಿಲ್ಲ; ನನಗೆ ಮಾಡಿದ ಆ ಕೆಟ್ಟತನಕ್ಕಿಂತ ನೀನು ನನ್ನನ್ನು ಕಳುಹಿಸಿಬಿಡುವ ಈ ಕೆಟ್ಟತನವು ಮತ್ತೂ ಅಧಿಕವಾಗಿದೆ ಅಂದಳು. ಆದರೆ ಅವನು ಅವಳ ಮಾತನ್ನು ಕೇಳಲೊಲ್ಲದೆ ತನ್ನನ್ನು ಸೇವಿಸುವ ತನ್ನ ದಾಸರನ್ನು ಕರೆದು--ಇವಳನ್ನು ನನ್ನ ಬಳಿಯಿಂದ ಹೊರಗೆ ತಳ್ಳಿ ಬಾಗಲು ಮುಚ್ಚಿ ಬೀಗಹಾಕು ಅಂದನು. ಅವಳು ವಿವಿಧವಾದ ವಸ್ತ್ರವನ್ನು ಉಟ್ಟಿದ್ದಳು; ಯಾಕಂದರೆ ಅರಸನ ಕುಮಾರ್ತೆಯರಾದ ಕನ್ಯಾಸ್ತ್ರೀಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಆದರೆ ಅವನ ಸೇವಕನು ಅವಳನ್ನು ಹೊರಗೆ ಕಳುಹಿಸಿ ಬಾಗಲು ಮುಚ್ಚಿ ಬೀಗಹಾಕಿದನು. ಆಗ ತನ್ನ ತಲೆಯಮೇಲೆ ಬೂದಿಯನ್ನು ಹಾಕಿಕೊಂಡು ತಾನು ಧರಿಸಿಕೊಂಡಿದ್ದ ವಿವಿಧವಾದ ವಸ್ತ್ರವನ್ನು ಹರಿದು ತನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಅಳುತ್ತಾ ಹೋದಳು. ಆಗ ಅವಳ ಸಹೋದರನಾದ ಅಬ್ಷಾಲೋಮನು ಅವಳಿಗೆ --ನಿನ್ನ ಸಹೋದರನಾದ ಅಮ್ನೋನನು ನಿನ್ನ ಸಂಗಡ ಇದ್ದನೋ? ನನ್ನ ಸಹೋದರಿಯೇ, ಈಗ ಮೌನ ವಾಗಿರು; ಅವನು ನಿನ್ನ ಸಹೋದರನು; ಈ ಕಾರ್ಯ ವನ್ನು ನಿನ್ನ ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂದನು. ಹಾಗೆಯೇ ತಾಮಾರಳು ತನ್ನ ಸಹೋದರನಾದ ಅಬ್ಷಾಲೋಮನ ಮನೆಯಲ್ಲಿ ಒಂಟಿಗಳಾಗಿದ್ದಳು. ಅರಸನಾದ ದಾವೀದನು ಇವುಗಳನೆಲ್ಲಾ ಕೇಳಿದಾಗ ಬಹುಕೋಪಗೊಂಡನು. ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೇದಾ ದರೂ ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಅವನು ತನ್ನ ಸಹೋದರಿಯಾದ ತಾಮಾರಳನ್ನು ಬಲವಂತ ಮಾಡಿದ್ದರಿಂದ ಅಬ್ಷಾಲೋಮನು ಅವನನ್ನು ಹಗೆ ಮಾಡಿದನು.
- Proverbs 19:13 ಜ್ಞಾನೋಕ್ತಿಗಳು 19:13ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕ ರನು; ಹೆಂಡತಿಯ ಕಲಹಗಳು ಯಾವಾಗಲೂ ತೊಟ್ಟಿ ಕ್ಕುವ ಹನಿಗಳು.
- Ecclesiastes 2:18–19 ಪ್ರಸಂಗಿ 2:18–19ಹೌದು, ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆಮಾಡಿದೆನು; ನನ್ನ ತರು ವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕು. ಅವನು ಜ್ಞಾನಿಯೋ ಮೂಢ ನೋ ಯಾರಿಗೆ ಗೊತ್ತು? ಆದರೂ ನಾನು ಪಟ್ಟ ಎಲ್ಲಾ ಪ್ರಯಾಸದ ಮೇಲೆಯೂ ಸೂರ್ಯನ ಕೆಳಗೆ ನಾನು ಜ್ಞಾನಿಯೆಂದು ತೋರ್ಪಡಿಸಿಕೊಂಡವರ ಮೇಲೆಯೂ ಅವನು ಆಳುವನು. ಇದೂ ವ್ಯರ್ಥವೇ.