Proverbs · chapter 18 · verse 24
Proverbs 18:24 in Kannada
ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
Snehitariddavanu snehavaagi nadedukollabeku. Sahodaraniginta hattira hondikolluva snehitaniddaane.
Proverbs 18:24 in English
- King James Version (KJV)
- A man [that hath] friends must shew himself friendly: and there is a friend [that] sticketh closer than a brother.
- World English Bible (WEB)
- A man of many companions may be ruined, but there is a friend who sticks closer than a brother.
- American Standard Version (ASV)
- He that maketh many friends [doeth it] to his own destruction; But there is a friend that sticketh closer than a brother.
- Bible in Basic English (BBE)
- There are friends who may be a man's destruction, but there is a lover who keeps nearer than a brother.
- Darby Translation (DBY)
- A man of [many] friends will come to ruin but there is a friend [that] sticketh closer than a brother.
- Webster's Bible (WBS)
- A man [that hath] friends must show himself friendly: and there is a friend [that] sticketh closer than a brother.
- Young's Literal Translation (YLT)
- A man with friends [is] to show himself friendly, And there is a lover adhering more than a brother!
Read in context
- 22ಪತ್ನಿ ಯನ್ನು ದೊರಕಿಸಿಕೊಂಡವನು ಒಳ್ಳೇದನ್ನು ಸಂಪಾದಿಸಿ ದವನಾಗಿ ಕರ್ತನ ದಯೆಯನ್ನು ಹೊಂದುತ್ತಾನೆ.
- 23ಬಡವನು ವಿಜ್ಞಾಪನೆಗಳನ್ನು ಮಾಡುತ್ತಾನೆ; ಧನಿಕರು ಕಠಿಣವಾಗಿ ಉತ್ತರಕೊಡು ತ್ತಾರೆ.ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
- 24ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
Cross references
- Proverbs 17:17 ಜ್ಞಾನೋಕ್ತಿಗಳು 17:17ಸ್ನೇಹಿತನು ಎಲ್ಲಾ ಸಮ ಯಗಳಲ್ಲಿ ಪ್ರೀತಿಸುತ್ತಾನೆ; ಇಕ್ಕಟ್ಟಿಗೋಸ್ಕರ ಸಹೋ ದರನು ಹುಟ್ಟಿದ್ದಾನೆ.
- John 15:13–15 ಯೋಹಾನನು 15:13–15ಒಬ್ಬನು ತನ್ನ ಸ್ನೇಹಿತರಿ ಗೋಸ್ಕರ ತನ್ನ ಪ್ರಾಣವನ್ನು ಕೊಡುವ ಪ್ರೀತಿಗಿಂತ ಹೆಚ್ಚಿನದು ಯಾವದೂ ಇಲ್ಲ. ನಾನು ನಿಮಗೆ ಆಜ್ಞಾಪಿಸಿರುವವುಗಳನ್ನು ಮಾಡಿದರೆ ನೀವು ನನ್ನ ಸ್ನೇಹಿತರಾಗಿರುವಿರಿ. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವದಿಲ್ಲ; ಯಾಕಂದರೆ ತನ್ನ ದಣಿಯು ಮಾಡುವಂಥದ್ದು ಆಳಿಗೆ ತಿಳಿಯುವದಿಲ್ಲ; ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ; ಯಾಕಂದರೆ ನನ್ನ ತಂದೆಯಿಂದ ಕೇಳಿದವುಗಳನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ.
- Proverbs 27:9 ಜ್ಞಾನೋಕ್ತಿಗಳು 27:9ತೈಲವೂ ಸುಗಂಧ ದ್ರವ್ಯವೂ ಹೃದಯವನ್ನು ಸಂತೋಷಪಡಿಸುತ್ತದೆ, ಹಾಗೆಯೇ ಆದರಣೆಯ ಸಲಹೆಯಿಂದ ಸ್ನೇಹಿತನ ಮಧುರತ್ವವು ಇರುತ್ತದೆ.
- 2 Samuel 1:26 2 ಸಮುವೇಲನು 1:26ನನ್ನ ಸಹೋದರನಾದ ಯೋನಾತಾನನೇ, ನಾನು ನಿನ ಗೋಸ್ಕರ ಸಂಕಟಪಡುತ್ತೇನೆ; ನೀನು ನನಗೆ ಬಹಳ ಮನೋಹರನಾಗಿದ್ದೀ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ; ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.
- 2 Samuel 9:1–13 2 ಸಮುವೇಲನು 9:1–13ದಾವೀದನು--ಸೌಲನ ಮನೆಯವರಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ ಎಂದು ಕೇಳಿದನು. ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ--ನೀನು ಚೀಬನೋ ಅಂದನು. ಅದಕ್ಕ ವನು--ನಿನ್ನ ದಾಸನು ಅವನೇ ಅಂದನು. ಅರಸನು ಅವನಿಗೆ--ನಾನು ಅವನಿಗೆ ದೇವರ ದಯೆತೋರಿಸುವ ಹಾಗೆ ಸೌಲನ ಮನೆಯವರಲ್ಲಿ ಇನ್ನೂ ಯಾವನಾ ದರೂ ಇದ್ದಾನೋ ಅಂದನು. ಆಗ ಚೀಬನು ಅರಸ ನಿಗೆ--ಯೋನಾತಾನನಿಗೆ ಎರಡು ಕಾಲುಕುಂಟಾದ ಒಬ್ಬ ಮಗನಿದ್ದಾನೆ ಅಂದನು. ಅವನು ಎಲ್ಲಿ ಇದ್ದಾ ನೆಂದು ಅರಸನು ಅವನನ್ನು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಲ್ಲಿ ಇದ್ದಾನೆ ಅಂದನು. ಅರಸನಾದ ದಾವೀದನು ಅವ ನನ್ನು ಆಗ ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಿಂದ ಕರೆಕಳುಹಿ ಸಿದನು. ಸೌಲನ ಮಗನಾಗಿರುವ ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರಮಾಡಿದನು. ದಾವೀ ದನು--ಮೆಫೀಬೋಶೆತನೇ ಅಂದನು. ಅವನು--ಇಗೋ, ನಿನ್ನ ದಾಸನು ಅಂದನು. ಆಗ ದಾವೀದನು ಅವನಿಗೆ -- ಭಯಪಡಬೇಡ, ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು. ನಿನ್ನ ತಂದೆಯಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರಿಗಿ ಕೊಡುವೆನು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವಿ ಅಂದನು. ಆಗ ಅವನು ಅಡ್ಡಬಿದ್ದು--ನೀನು ನನ್ನಂಥ ಸತ್ತನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು ಅಂದನು. ಆಗ ಅರಸನು ಸೌಲನ ದಾಸನಾದ ಚೀಬನನ್ನು ಕರೆದು ಅವನಿಗೆ--ನಾನು ಸೌಲನಿಗೂ ಅವನ ಎಲ್ಲ ಮನೆಗೂ ಹೊಂದಿದ ಎಲ್ಲವನ್ನೂ ನಿನ್ನ ಯಜಮಾನನ ಮಗನಿಗೆ ಕೊಟ್ಟಿದ್ದೇನೆ. ಆದದರಿಂದ ನೀನೂ ನಿನ್ನ ಕುಮಾರರೂ ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮಗನಾದ ಮೆಫೀಬೋಶೆ ತನು ನಿತ್ಯವೂ ನನ್ನ ಮೇಜಿನಲ್ಲಿ ಊಟ ಮಾಡುವನು ಅಂದನು. ಈ ಚೀಬನಿಗೆ ಹದಿನೈದು ಮಂದಿ ಕುಮಾ ರರೂ ಇಪ್ಪತ್ತು ಮಂದಿ ದಾಸರೂ ಇದ್ದರು. ಆಗ ಚೀಬನು ಅರಸನಿಗೆ--ಅರಸನಾದ ನನ್ನ ಒಡೆಯನು ತನ್ನ ದಾಸನಿಗೆ ಆಜ್ಞಾಪಿಸಿದ್ದನ್ನೆಲ್ಲಾ ನಿನ್ನ ದಾಸನು ಹಾಗೆಯೇ ಮಾಡುವನು ಅಂದನು. ಅರಸನ ಕುಮಾರ ರಲ್ಲಿ ಒಬ್ಬನ ಹಾಗೆ ಮೆಫೀಬೋಶೆತನು ಭೋಜನ ಮಾಡುವನೆಂದು ಅರಸನು ಹೇಳಿದನು. ಆದರೆ ಮೆಫೀಬೋಶೆತನಿಗೆ ವಿಾಕನೆಂಬ ಹೆಸರುಳ್ಳ ಒಬ್ಬ ಚಿಕ್ಕ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾ ಗಿದ್ದ ಎಲ್ಲರೂ ಮೆಫೀಬೋಶೆತನಿಗೆ ದಾಸರಾಗಿದ್ದರು.ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದದ್ದರಿಂದ ಯೆರೂ ಸಲೇಮಿನಲ್ಲೇ ವಾಸವಾಗಿದ್ದನು. ಅವನ ಎರಡು ಕಾಲು ಕುಂಟಾಗಿದ್ದವು. ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದದ್ದರಿಂದ ಯೆರೂ ಸಲೇಮಿನಲ್ಲೇ ವಾಸವಾಗಿದ್ದನು. ಅವನ ಎರಡು ಕಾಲು ಕುಂಟಾಗಿದ್ದವು.
- 1 Samuel 19:4–5 1 ಸಮುವೇಲನು 19:4–5ಹಾಗೆಯೇ ಯೋನಾತಾನನು ತನ್ನ ತಂದೆಯಾದ ಸೌಲನ ಸಂಗಡ ದಾವೀದನನ್ನು ಕುರಿತು ಒಳ್ಳೇದನ್ನು ಮಾತನಾಡಿ ಅವನಿಗೆ--ಅರಸನು ತನ್ನ ಸೇವಕನಾದ ದಾವೀದನಿಗೆ ವಿರೋಧವಾಗಿ ಪಾಪಮಾಡದೆ ಇರಲಿ, ಅವನು ನಿನಗೆ ವಿರೋಧವಾಗಿ ಪಾಪಮಾಡಲಿಲ್ಲ; ಅವನ ಕ್ರಿಯೆಗಳು ನಿನಗೆ ಬಹಳ ಉತ್ತಮವಾಗಿವೆ; ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡುಕೊಂಡು ಫಿಲಿಷ್ಟಿಯನನ್ನು ಕೊಂದನು. ಕರ್ತನು ಎಲ್ಲಾ ಇಸ್ರಾಯೇಲಿಗೋಸ್ಕರ ದೊಡ್ಡ ರಕ್ಷಣೆ ಯನ್ನುಂಟು ಮಾಡಿದನು. ನೀನೂ ನೋಡಿ ಸಂತೋಷ ಪಟ್ಟೆ; ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರಪರಾಧಿಯ ರಕ್ತಕ್ಕೆ ವಿರೋಧವಾಗಿ ಪಾಪವನ್ನು ಮಾಡುವದು ಯಾಕೆ ಅಂದನು.
- 2 Samuel 21:7 2 ಸಮುವೇಲನು 21:7ಆದರೆ ತಮಗೂ ದಾವೀದ ನಿಗೂ ಸೌಲನ ಮಗನಾದ ಯೋನಾತಾನನಿಗೂ ಕರ್ತ ನನ್ನು ಕುರಿತು ಮಾಡಿದ ಪ್ರಮಾಣಕ್ಕೋಸ್ಕರ ಅರಸನು ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿ
- 2 Samuel 16:17 2 ಸಮುವೇಲನು 16:17ಅಬ್ಷಾಲೋಮನು ಅವನಿಗೆ--ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ ಅಂದನು.
- Matthew 26:49–50 ಮತ್ತಾಯನು 26:49–50ಕೂಡಲೆ ಅವನು ಯೇಸುವಿನ ಬಳಿಗೆ ಬಂದು ಬೋಧಕನೇ, ವಂದನೆ ಎಂದು ಹೇಳಿ ಆತನಿಗೆ ಮುದ್ದಿಟ್ಟನು. ಅದಕ್ಕೆ ಯೇಸು ಅವನಿಗೆ--ಸ್ನೇಹಿತನೇ, ನೀನು ಯಾಕೆ ಬಂದಿರುತ್ತೀ ಎಂದು ಕೇಳಿದನು; ಆಗ ಅವರು ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.
- 1 Chronicles 12:38–40 1 ಪೂರ್ವಕಾಲವೃತ್ತಾಂತ 12:38–40ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು. ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಇದ್ದು ತಿನ್ನುತ್ತಾ ಕುಡಿಯುತ್ತಾ ಇದ್ದರು.ಅವರ ಸಹೋದರರು ಅವರಿಗೋಸ್ಕರ ಸಿದ್ಧಮಾಡಿ ದರು.ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು. ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು.
- 2 Samuel 17:27–29 2 ಸಮುವೇಲನು 17:27–29ದಾವೀದನು ಮಹನಯಿಮಿಗೆ ಬಂದಾಗ ಏನಾ ಯಿತಂದರೆ, ಅಮ್ಮೋನನ ಮಕ್ಕಳ ರಬ್ಬಾ ಪಟ್ಟಣದ ನಾಹಾಷನ ಮಗನಾದ ಶೋಬಿಯೂ ಲೋದೆಬಾ ರಿನ ಊರಿನವನಾಗಿರುವ ಅವ್ಮೆಾಯೇಲನ ಮಗನಾದ ಮಾಕೀರ್ ರೋಗೆಲೀಮ್ ಊರಿನ ಗಿಲ್ಯಾದ್ಯ ನಾದ ಬರ್ಜಿಲೈಯೂ ಹಾಸಿಗೆಗಳನ್ನೂ ಬಟ್ಟಲು ಗಳನ್ನೂ ಮಡಿಕೆಗಳನ್ನೂ ಗೋಧಿಯನ್ನೂ ಜವೆಗೋಧಿ ಯನ್ನೂ ಹಿಟ್ಟನ್ನೂ ಹುರಿದ ಕಾಳನ್ನೂಅವರೆಯನ್ನೂ ಹೆಸರನ್ನೂ ಹುರಿದ ಕಡಲೆಯನ್ನೂ ಜೇನು ತುಪ್ಪವನ್ನೂ ಬೆಣ್ಣೆಯನ್ನೂ ಕುರಿಗಳನ್ನೂ ಹಸುವಿನ ಗಿಣ್ಣದ ಗಡ್ಡೆಗಳನ್ನೂ ದಾವೀದನಿಗೂ ಅವನ ಸಂಗಡ ಲಿದ್ದ ಜನರಿಗೂ ತಿನ್ನುವದಕ್ಕೆ ತಂದರು. ಯಾಕಂದರೆ ಅರಣ್ಯದಲ್ಲಿ ಜನರು ಹಸಿದು ದಣಿದು ದಾಹವಾಗಿರು ವರೆಂದು ಅಂದುಕೊಂಡರು. ಅವರೆಯನ್ನೂ ಹೆಸರನ್ನೂ ಹುರಿದ ಕಡಲೆಯನ್ನೂ ಜೇನು ತುಪ್ಪವನ್ನೂ ಬೆಣ್ಣೆಯನ್ನೂ ಕುರಿಗಳನ್ನೂ ಹಸುವಿನ ಗಿಣ್ಣದ ಗಡ್ಡೆಗಳನ್ನೂ ದಾವೀದನಿಗೂ ಅವನ ಸಂಗಡ ಲಿದ್ದ ಜನರಿಗೂ ತಿನ್ನುವದಕ್ಕೆ ತಂದರು. ಯಾಕಂದರೆ ಅರಣ್ಯದಲ್ಲಿ ಜನರು ಹಸಿದು ದಣಿದು ದಾಹವಾಗಿರು ವರೆಂದು ಅಂದುಕೊಂಡರು.
- 2 Samuel 19:30–39 2 ಸಮುವೇಲನು 19:30–39ಮೆಫೀಬೋಶೆತನು ಅರಸನಿಗೆ--ಹೌದು, ಅರಸ ನಾದ ನನ್ನ ಒಡೆಯನು ಸಮಾಧಾನದಿಂದ ತಿರಿಗಿ ತನ್ನ ಮನೆಗೆ ಬಂದದ್ದೇ ಸಾಕು. ಅವನೇ ಎಲ್ಲವನ್ನು ತಕ್ಕೊಳ್ಳಲಿ ಅಂದನು. ಇದಲ್ಲದೆ ಗಿಲ್ಯಾದ್ಯನಾದ ಬರ್ಜಿಲ್ಲೈಯು ಅರಸ ನನ್ನು ಎನ್ರೋಗೆಲೀಮಿನಿಂದ ಯೊರ್ದನನ್ನು ದಾಟಿ ಸಲು ಬಂದನು. ಈ ಬರ್ಜಿಲ್ಲೈಯು ಎಂಭತ್ತು ವರುಷ ದವನಾಗಿ ಮಹಾವೃದ್ಧನಾಗಿದ್ದನು. ಅರಸನು ಮಹನ ಯಿಮಿನಲ್ಲಿ ವಾಸಿಸಿರುವ ವರೆಗೂ ಇವನು ಅವನನ್ನು ಸಂರಕ್ಷಿಸಿದನು; ಯಾಕಂದರೆ ಅವನು ಮಹಾ ದೊಡ್ಡ ಮನುಷ್ಯನಾಗಿದ್ದನು. ಆದದರಿಂದ ಅರಸನು ಬರ್ಜಿಲ್ಲೈಗೆ--ನೀನು ನನ್ನ ಸಂಗಡ ಬಾ, ಯೆರೂಸ ಲೇಮಿನಲ್ಲಿ ನಿನ್ನನ್ನು ನನ್ನ ಬಳಿಯಲ್ಲಿ ಸಂರಕ್ಷಿಸುವೆನು ಅಂದನು. ಆದರೆ ಬರ್ಜಿಲ್ಲೈಯು ಅರಸನಿಗೆ--ನಾನು ಅರಸನ ಸಂಗಡ ಯೆರೂಸಲೇಮಿಗೆ ಹೋಗುವ ಹಾಗೆ ನಾನು ಬದುಕುವ ವರುಷ ಎಷ್ಟು ಉಂಟು? ನಾನು ಈಹೊತ್ತು ಎಂಭತ್ತು ವರುಷದವನು; ಇನ್ನು ಒಳ್ಳೇದು ಕೆಟ್ಟದ್ದು ಎಂಬ ಭೇದ ತಿಳಿಯುವೆನೋ? ತಿನ್ನುವದೂ ಕುಡಿಯುವದೂ ನಿನ್ನ ಸೇವಕನಿಗೆ ರುಚಿಕರ ವಾಗಿರುವದೋ? ಸಂಗೀತಗಾರರ ಸಂಗೀತಗಾರ್ತಿ ಯರ ಶಬ್ದವನ್ನು ಇನ್ನು ಕೇಳುವೆನೋ? ಹಾಗಾದರೆ ನಿನ್ನ ಸೇವಕನು ಅರಸನಾದ ನನ್ನ ಒಡೆಯನಿಗೆ ಯಾಕೆ ಇನ್ನು ಭಾರವಾಗಿರಬೇಕು? ನಿನ್ನ ಸೇವಕನು ಸ್ವಲ್ಪ ದೂರ ಯೊರ್ದನನ್ನು ದಾಟುವ ವರೆಗೂ ಅರಸನ ಸಂಗಡ ಬರುವನು; ಅದಕ್ಕೆ ಇಂಥಾ ಬಹುಮಾನ ಕೊಡುವದೇನು? ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರಿಗಿ ಹೋಗಿ ನನ್ನ ಪಟ್ಟಣದಲ್ಲಿ ನನ್ನ ತಂದೆ ತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ಇಗೋ, ನಿನ್ನ ಸೇವಕನಾದ ಕಿಮ್ಹಾಮನು ಬರುವನು; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅವನಿಗೆ ಮಾಡು ಅಂದನು. ಅರಸನು--ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ನಾನು ಅವನಿಗೆ ಮಾಡುವೆನು; ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು ಅಂದನು. ಜನರೆಲ್ಲರು ಯೊರ್ದನನ್ನು ದಾಟಿದರು. ಅರಸನು ದಾಟಿ ಬಂದಾಗ ಬರ್ಜಿಲ್ಲೈ ಯನ್ನು ಮುದ್ದಿಟ್ಟು ಅವನನ್ನು ಆಶೀರ್ವದಿಸಿದನು.