2 Samuel · chapter 9 · verse 1
2 Samuel 9:1 in Kannada
ದಾವೀದನು--ಸೌಲನ ಮನೆಯವರಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ ಎಂದು ಕೇಳಿದನು.
Daaveedanu--saulana maneyavaralli yonaataananigoskara naanu avanige dayetorisuva haage innoo yaavanaadaroo ulididdaano endu kelidanu.
2 Samuel 9:1 in English
- King James Version (KJV)
- And David said, Is there yet any that is left of the house of Saul, that I may shew him kindness for Jonathan’s sake?
- World English Bible (WEB)
- David said, “Is there yet any who is left of Saul’s house, that I may show him kindness for Jonathan’s sake?”
- American Standard Version (ASV)
- And David said, Is there yet any that is left of the house of Saul, that I may show him kindness for Jonathan’s sake?
- Bible in Basic English (BBE)
- And David said, Is there still anyone of Saul's family living, so that I may be a friend to him, because of Jonathan?
- Darby Translation (DBY)
- And David said, Is there yet any that is left of the house of Saul, that I may shew him kindness for Jonathan's sake?
- Webster's Bible (WBS)
- And David said, Is there yet any that is left of the house of Saul, that I may show him kindness for Jonathan's sake?
- Young's Literal Translation (YLT)
- And David saith, 'Is there yet any left to the house of Saul, and I do with him kindness because of Jonathan?'
Read in context
- 1ದಾವೀದನು--ಸೌಲನ ಮನೆಯವರಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ ಎಂದು ಕೇಳಿದನು.
- 2ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ--ನೀನು ಚೀಬನೋ ಅಂದನು. ಅದಕ್ಕ ವನು--ನಿನ್ನ ದಾಸನು ಅವನೇ ಅಂದನು.
- 3ಅರಸನು ಅವನಿಗೆ--ನಾನು ಅವನಿಗೆ ದೇವರ ದಯೆತೋರಿಸುವ ಹಾಗೆ ಸೌಲನ ಮನೆಯವರಲ್ಲಿ ಇನ್ನೂ ಯಾವನಾ ದರೂ ಇದ್ದಾನೋ ಅಂದನು. ಆಗ ಚೀಬನು ಅರಸ ನಿಗೆ--ಯೋನಾತಾನನಿಗೆ ಎರಡು ಕಾಲುಕುಂಟಾದ ಒಬ್ಬ ಮಗನಿದ್ದಾನೆ ಅಂದನು.
Cross references
- 1 Samuel 20:42 1 ಸಮುವೇಲನು 20:42ಆಗ ಯೋನಾತಾನನು ದಾವೀದನಿಗೆ--ನೀನು ಸಮಾಧಾನದಿಂದ ಹೋಗು; ಕರ್ತನು ಎಂದೆಂದಿಗೂ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾ ನಕ್ಕೂ ಮಧ್ಯದಲ್ಲಿ ಕರ್ತನ ಹೆಸರಿನಿಂದ ನಾವಿಬ್ಬರೂ ಪ್ರಮಾಣ ಇಟ್ಟುಕೊಂಡೆವಲ್ಲಾ ಅಂದನು. ಆಗ ದಾವೀದನು ಎದ್ದು ಹೋದನು; ಯೋನಾತಾನನು ಪಟ್ಟಣಕ್ಕೆ ಹೋದನು.
- Mark 9:41 ಮಾರ್ಕನು 9:41ಇದಲ್ಲದೆ ನೀವು ಕ್ರಿಸ್ತನಿಗೆ ಸೇರಿದವ ರಾದದರಿಂದ ಯಾವನಾದರೂ ನನ್ನ ಹೆಸರಿನಲ್ಲಿ ನಿಮಗೆ ಒಂದು ತಂಬಿಗೆ ನೀರನ್ನು ಕೊಟ್ಟರೆ ಅವನು ತನ್ನ ಪ್ರತಿ ಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Matthew 25:40 ಮತ್ತಾಯನು 25:40ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
- 1 Peter 3:8 1 ಪೇತ್ರನು 3:8ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರ್ರಿ; ಒಬ್ಬರಿಗೊಬ್ಬರು ಕರುಣೆಯುಳ್ಳವರಾಗಿದ್ದು ಸಹೋದರ ರಂತೆ ಪ್ರೀತಿಸಿರಿ; ಕನಿಕರವೂ ದೀನ ಭಾವವೂ ಉಳ್ಳವರಾಗಿರ್ರಿ.
- 2 Samuel 1:26 2 ಸಮುವೇಲನು 1:26ನನ್ನ ಸಹೋದರನಾದ ಯೋನಾತಾನನೇ, ನಾನು ನಿನ ಗೋಸ್ಕರ ಸಂಕಟಪಡುತ್ತೇನೆ; ನೀನು ನನಗೆ ಬಹಳ ಮನೋಹರನಾಗಿದ್ದೀ. ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯವಾಗಿತ್ತು. ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು.ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ; ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.
- 1 Kings 2:7 1 ಅರಸುಗಳು 2:7ಆದರೆ ನೀನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಮಕ್ಕಳಿಗೆ ಕೃಪೆ ಮಾಡು; ಅವರು ನಿನ್ನ ಮೇಜಿನಲ್ಲಿ ಊಟಮಾಡುವವರಾಗಿ ನಿನ್ನ ಸಂಗಡ ಇರಲಿ. ಯಾಕಂದರೆ ನಾನು ನಿನ್ನ ಸಹೋದರನಾದ ಅಬ್ಷಾಲೋಮನ ಮುಂದೆ ಓಡಿಹೋದಾಗ ಅವರು ಹಾಗೆಯೇ ನನ್ನ ಹತ್ತಿರಕ್ಕೆ ಬಂದರು.
- Matthew 10:42 ಮತ್ತಾಯನು 10:42ಯಾವನಾದರೂ ಶಿಷ್ಯನ ಹೆಸರಿನಲ್ಲಿ ಈ ಚಿಕ್ಕವರಾದ ಒಬ್ಬನಿಗೆ ಕೇವಲ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಅವನು ತನ್ನ ಪ್ರತಿಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- Proverbs 27:10 ಜ್ಞಾನೋಕ್ತಿಗಳು 27:10ನಿನ್ನ ಸ್ನೇಹಿತನನ್ನೂ ನಿನ್ನ ತಂದೆಯ ಸ್ನೇಹಿತನನ್ನೂ ತ್ಯಜಿಸಬೇಡ; ಅಲ್ಲದೆ ನಿನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನ ಸಹೋದರನ ಮನೆಗೆ ಹೋಗಬೇಡ; ದೂರವಾಗಿರುವ ಸಹೋದರನಿಗಿಂತ ಹತ್ತಿರವಾಗಿರುವ ನೆರೆಯವನೇ ಲೇಸು.
- John 19:26–27 ಯೋಹಾನನು 19:26–27ತನ್ನ ತಾಯಿಯು ಮತ್ತು ತಾನು ಪ್ರೀತಿಸಿದ ಶಿಷ್ಯನು ಹತ್ತಿರದಲ್ಲಿ ನಿಂತಿರುವದನ್ನು ಯೇಸು ನೋಡಿ ತನ್ನ ತಾಯಿಗೆ--ಸ್ತ್ರೀಯೇ, ಇಗೋ, ನಿನ್ನ ಮಗನು ಅಂದನು. ಆಮೇಲೆ ಆತನು ಆ ಶಿಷ್ಯನಿಗೆ--ಇಗೋ, ನಿನ್ನ ತಾಯಿಯು ಅಂದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲಿ ಸೇರಿಸಿಕೊಂಡನು.
- 1 Samuel 20:14–17 1 ಸಮುವೇಲನು 20:14–17ಕರ್ತನು ನನ್ನ ತಂದೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರಲಿ. ಆದರೆ ನಾನು ಇನ್ನೂ ಬದುಕು ತ್ತಿರುವಾಗ ನಾನು ಸಾಯದ ಹಾಗೆ ನೀನು ಕರ್ತನ ದಯೆಯನ್ನು ನನ್ನ ಮೇಲೆ ತೋರಿಸಬೇಕಾದದ್ದಲ್ಲದೆ ಕರ್ತನು ದಾವೀದನ ಶತ್ರುಗಳಲ್ಲಿ ಒಬ್ಬನೂ ಇಲ್ಲದ ಹಾಗೆ ಭೂಮಿಯಿಂದ ತೆಗೆದುಬಿಟ್ಟಾಗ ಎಂದಿಗೂ ನಿನ್ನ ಕೃಪೆಯನ್ನು ನನ್ನ ಮನೆಯಿಂದ ತೆಗೆದುಹಾಕಬಾರದು ಅಂದನು. ಹೀಗೆಯೇ ಯೋನಾತಾನನು ದಾವೀದನ ಮನೆಯ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ದಾವೀದನ ಶತ್ರುಗಳಿಂದ ಕರ್ತನು ಅವಶ್ಯವಾಗಿ ಕೇಳಲಿ ಅಂದನು. ಯೋನಾತಾನನು ದಾವೀದನನ್ನು ಪ್ರೀತಿ ಮಾಡಿದ್ದರಿಂದ ತಿರಿಗಿ ಅವನಿಂದ ಪ್ರಮಾಣ ತೆಗೆದುಕೊಂಡನು; ಅವನು ತನ್ನ ಪ್ರಾಣವನ್ನು ಪ್ರೀತಿ ಮಾಡಿದ ಹಾಗೆಯೇ ಅವನನ್ನು ಪ್ರೀತಿ ಮಾಡಿದನು.
- 1 Samuel 23:16–18 1 ಸಮುವೇಲನು 23:16–18ಆಗ ಸೌಲನ ಮಗನಾದ ಯೋನಾತಾನನು ಎದ್ದು ಅರಣ್ಯದಲ್ಲಿರುವ ದಾವೀದನ ಬಳಿಗೆ ಹೋಗಿ ದೇವರಲ್ಲಿ ಅವನ ಕೈಯನ್ನು ಬಲಪಡಿಸಿ ಅವನಿಗೆ--ಭಯಪಡಬೇಡ; ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ; ನಾನು ನಿನ್ನ ತರುವಾಯ ಇರುವೆನು. ಹೀಗೆ ಆಗುವದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ ಅಂದನು. ಅವರಿಬ್ಬರೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಅರಣ್ಯದಲ್ಲೇ ಉಳಿದನು; ಆದರೆ ಯೋನಾತಾನನು ತನ್ನ ಮನೆಗೆ ಹೋದನು.
- 1 Samuel 18:1–4 1 ಸಮುವೇಲನು 18:1–4ದಾವೀದನು ಸೌಲನ ಸಂಗಡ ಮಾತನಾಡಿ ತೀರಿಸಿದಾಗ ಯೋನಾತಾನನ ಪ್ರಾಣವು ದಾವೀದನ ಪ್ರಾಣದ ಸಂಗಡ ಒಂದಾಯಿತು. ಯೋನಾತಾನನು ಅವನನ್ನು ತನ್ನ ಪ್ರಾಣದ ಹಾಗೆಯೇ ಪ್ರೀತಿಮಾಡಿದನು. ಇದಲ್ಲದೆ ಸೌಲನು ಆ ದಿವಸ ಅವನನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡನು; ತಿರಿಗಿ ಅವನ ತಂದೆಯ ಮನೆಗೆ ಹೋಗಗೊಡಿಸಲಿಲ್ಲ. ಯೋನಾತಾನನು ತನ್ನ ಪ್ರಾಣದ ಹಾಗೆ ದಾವೀದ ನನ್ನು ಪ್ರೀತಿಮಾಡಿದ್ದರಿಂದ ಒಬ್ಬರಿಗೊಬ್ಬರು ಒಡಂಬಡಿ ಕೆಯನ್ನು ಮಾಡಿಕೊಂಡರು. ಆಗ ಯೋನಾತಾನನು ತೊಟ್ಟುಕೊಂಡಿದ್ದ ನಿಲುವಂಗಿಯನ್ನು ತೆಗೆದು ಅದನ್ನೂ ತನ್ನ ವಸ್ತ್ರಗಳನ್ನೂ ಕತ್ತಿಯನ್ನೂ ಬಿಲ್ಲನ್ನೂ ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು.