Proverbs · chapter 2 · verse 5
Proverbs 2:5 in Kannada
ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ.
Neenu kartana bhayavannu tilidukolluvi. Devara jnyaanavannu kandukolluvi.
Proverbs 2:5 in English
- King James Version (KJV)
- Then shalt thou understand the fear of the LORD, and find the knowledge of God.
- World English Bible (WEB)
- then you will understand the fear of the LORD, and find the knowledge of God.
- American Standard Version (ASV)
- Then shalt thou understand the fear of Jehovah, And find the knowledge of God.
- Bible in Basic English (BBE)
- Then the fear of the Lord will be clear to you, and knowledge of God will be yours.
- Darby Translation (DBY)
- then shalt thou understand the fear of Jehovah, and find the knowledge of God.
- Webster's Bible (WBS)
- Then shalt thou understand the fear of the LORD, and find the knowledge of God.
- Young's Literal Translation (YLT)
- Then understandest thou fear of Jehovah, And knowledge of God thou findest.
Read in context
- 3ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ
- 4ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ,
- 5ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ.
- 6ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
- 7ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ.
Cross references
- Proverbs 1:7 ಜ್ಞಾನೋಕ್ತಿಗಳು 1:7ಕರ್ತನ ಭಯವೇ ಜ್ಞಾನದ ಮೂಲ; ಮೂರ್ಖರು ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುತ್ತಾರೆ.
- Jeremiah 24:7 ಯೆರೆಮೀಯ 24:7ನಾನೇ ಕರ್ತನೆಂದು ನನ್ನನ್ನು ತಿಳುಕೊಳ್ಳುವದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿ ರುವರು; ನಾನು ಅವರ ದೇವರಾಗಿರುವೆನು; ತಮ್ಮ ಪೂರ್ಣ ಹೃದಯದಿಂದ ನನ್ನ ಬಳಿಗೆ ಹಿಂತಿರುಗಿಕೊಳ್ಳು ವರು.
- 2 Chronicles 1:10–12 2 ಪೂರ್ವಕಾಲವೃತ್ತಾಂತ 1:10–12ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು. ಆಗ ದೇವರು ಸೊಲೊಮೋನನಿಗೆ--ಇದು ನಿನ್ನ ಹೃದಯ ದಲ್ಲಿ ಇದ್ದದರಿಂದಲೂ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ನಿನ್ನ ಶತ್ರುಗಳ ಪ್ರಾಣವನ್ನೂ ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನವನ್ನೂ ತಿಳುವಳಿಕೆ ಯನ್ನೂ ನೀನು ಕೇಳಿದ್ದರಿಂದ ಅವು ನಿನಗೆ ಕೊಡ ಲ್ಪಟ್ಟವು. ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ಕೊಡುವೆನು ಅಂದನು.
- Luke 11:9–13 ಲೂಕನು 11:9–13ನಾನು ನಿಮಗೆ ಹೇಳುವದೇನಂ ದರೆ--ಬೇಡಿಕೊಳ್ಳಿರಿ, ನಿಮಗೆ ಕೊಡಲ್ಪಡುವದು; ಹುಡುಕಿರಿ, ನೀವು ಕಂಡುಕೊಳ್ಳುವಿರಿ; ತಟ್ಟಿರಿ, ನಿಮಗೆ ತೆರೆಯಲ್ಪಡುವದು. ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು; ಹುಡುಕುವವನು ಕಂಡುಕೊಳ್ಳುವನು; ತಟ್ಟುವವನಿಗೆ ತೆರೆಯಲ್ಪಡುವದು. ನಿಮ್ಮಲ್ಲಿ ತಂದೆ ಯಾಗಿರುವ ಯಾವನಾದರೂ ತನ್ನ ಮಗನು ರೊಟ್ಟಿ ಕೇಳಿದರೆ ಅವನಿಗೆ ಕಲ್ಲನ್ನು ಕೊಡುವನೇ? ಇಲ್ಲವೆ ವಿಾನನ್ನು ಕೇಳಿದರೆ ವಿಾನಿಗೆ ಬದಲಾಗಿ ಅವನಿಗೆ ಹಾವನ್ನು ಕೊಡುವನೇ? ಇಲ್ಲವೆ ಅವನು ಮೊಟ್ಟೆ ಯನ್ನು ಕೇಳಿದರೆ ಅವನಿಗೆ ಚೇಳನ್ನು ಕೊಡುವನೇ? ಹಾಗಾದರೆ ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೇದಾನಗಳನ್ನು ಕೊಡುವದು ಹೇಗೆಂಬದನ್ನು ತಿಳಿ ದವರಾಗಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತನ್ನನ್ನು ಬೇಡಿಕೊಳ್ಳುವವರಿಗೆ ಪವಿ ತ್ರಾತ್ಮನನ್ನು ದಯಪಾಲಿಸುವನಲ್ಲವೇ?
- Jeremiah 32:40–41 ಯೆರೆಮೀಯ 32:40–41ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ. ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
- Luke 10:22 ಲೂಕನು 10:22ಎಲ್ಲವುಗಳು ನನ್ನ ತಂದೆಯಿಂದ ನನಗೆ ಒಪ್ಪಿಸಲ್ಪಟ್ಟಿವೆ; ತಂದೆಯ ಹೊರತು ಯಾರೂ ಮಗನನ್ನು ಅರಿಯರು. ಮಗನೂ ತಾನು ಯಾರಿಗೆ ತಂದೆಯನ್ನು ಪ್ರಕಟಮಾಡುವನೋ ಅವನೂ ಅಲ್ಲದೆ ಆತನನ್ನು (ತಂದೆಯನ್ನು) ಯಾರೂ ಅರಿತವರಲ್ಲ.
- 1 John 5:20 1 ಯೋಹಾನನು 5:20ದೇವರ ಮಗನು ಬಂದು ನಾವು ಸತ್ಯವಾಗಿರುವಾತ ನನ್ನು ಅರಿತುಕೊಳ್ಳುವ ಹಾಗೆ ನಮಗೆ ತಿಳುವಳಿಕೆಯನ್ನು ಕೊಟ್ಟಿದ್ದಾನೆಂಬದು ನಮಗೆ ಗೊತ್ತದೆ. ನಾವು ಆ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಈತನೇ ಸತ್ಯ ದೇವರೂ ನಿತ್ಯಜೀವವೂ ಆಗಿದ್ದಾನೆ.ಚಿಕ್ಕ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ. ಆಮೆನ್.
- Matthew 11:27 ಮತ್ತಾಯನು 11:27ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಇಲ್ಲವೆ ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದ
- Jeremiah 9:24 ಯೆರೆಮೀಯ 9:24ಆದರೆ ಹೆಚ್ಚಳ ಪಡುವವನು ಇದರಲ್ಲಿ ಹೆಚ್ಚಳಪಡಲಿ; ಯಾವದರಲ್ಲಿ ಅಂದರೆ ಕರ್ತನಾದ ನಾನು ಭೂಮಿಯಲ್ಲಿ ಕೃಪೆಯನ್ನೂ ನ್ಯಾಯವನ್ನೂ ನೀತಿಯನ್ನೂ ನಡಿಸುವವನಾಗಿದ್ದೇ ನೆಂದು ನನ್ನನ್ನು ಗ್ರಹಿಸಿ ತಿಳುಕೊಳ್ಳುವದರಲ್ಲಿಯೇ; ಇವುಗಳಲ್ಲಿ ನಾನು ಸಂತೋಷ ಪಡುತ್ತೇನೆಂದು ಕರ್ತನು ಅನ್ನುತ್ತಾನೆ.
- Proverbs 9:10 ಜ್ಞಾನೋಕ್ತಿಗಳು 9:10ಪರಿಶುದ್ಧರ ತಿಳುವಳಿಕೆಯೇ ವಿವೇಕವು.
- Hosea 6:3 ಹೋಶೇಯ 6:3ನಾವು ಕರ್ತನನ್ನು ತಿಳಿದುಕೊಳ್ಳಲು ಆತನನ್ನು ಹಿಂಬಾ ಲಿಸಿದರೆ ನಾವು ತಿಳಿದುಕೊಳ್ಳುವೆವು; ಅರುಣೋದ ಯದ ಹಾಗೆ ಆತನ ಹೊರಡೋಣವು ಸಿದ್ಧವಾಗಿದೆ; ಆತನು ಮಳೆಯಂತೆಯೂ ಮುಂಗಾರಿನಂತೆಯೂ ಭೂಮಿಗೆ ತಂಪುಮಾಡುವ ಹಿಂಗಾರಿನಂತೆಯೂ ನಮ್ಮ ಬಳಿಗೆ ಬರುವನು.
- Matthew 7:7–8 ಮತ್ತಾಯನು 7:7–8ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು. ಯಾಕಂದರೆ ಬೇಡಿ ಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು; ಮತ್ತು ಹುಡುಕುವವನಿಗೆ ಸಿಕ್ಕುವದು; ಇದಲ್ಲದೆ ತಟ್ಟುವವನಿಗೆ ತೆರೆಯಲ್ಪಡುವದು.