Proverbs · chapter 21 · verse 10
Proverbs 21:10 in Kannada
ದುಷ್ಟರ ಮನಸ್ಸು ಕೇಡನ್ನು ಅಪೇಕ್ಷಿಸುತ್ತದೆ; ಅವನ ದೃಷ್ಟಿಯಲ್ಲಿ ತನ್ನ ನೆರೆಯವನು ಯಾವ ದಯೆ ಯನ್ನು ಕಂಡುಕೊಳ್ಳುವದಿಲ್ಲ.
Dushtara manassu kedannu apekshisuttade; avana drushtiyalli tanna nereyavanu yaava daye yannu kandukolluvadilla.
Proverbs 21:10 in English
- King James Version (KJV)
- The soul of the wicked desireth evil: his neighbour findeth no favour in his eyes.
- World English Bible (WEB)
- The soul of the wicked desires evil; his neighbor finds no mercy in his eyes.
- American Standard Version (ASV)
- The soul of the wicked desireth evil: His neighbor findeth no favor in his eyes.
- Bible in Basic English (BBE)
- The desire of the evil-doer is fixed on evil: he has no kind feeling for his neighbour.
- Darby Translation (DBY)
- The soul of the wicked desireth evil: his neighbour findeth no favour in his eyes.
- Webster's Bible (WBS)
- The soul of the wicked desireth evil: his neighbor findeth no favor in his eyes.
- Young's Literal Translation (YLT)
- The soul of the wicked hath desired evil, Not gracious in his eyes is his neighbour.
Read in context
- 8ಮನುಷ್ಯನ ಮಾರ್ಗವು ಡೊಂಕು ಮತ್ತು ಅಪರಿಚಿತ; ಪವಿತ್ರನಿ ಗಾದರೋ ಅವನ ಕ್ರಿಯೆಯು ಸರಳ.
- 9ವಿಶಾಲವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದಕ್ಕಿಂತ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದು ಲೇಸು.
- 10ದುಷ್ಟರ ಮನಸ್ಸು ಕೇಡನ್ನು ಅಪೇಕ್ಷಿಸುತ್ತದೆ; ಅವನ ದೃಷ್ಟಿಯಲ್ಲಿ ತನ್ನ ನೆರೆಯವನು ಯಾವ ದಯೆ ಯನ್ನು ಕಂಡುಕೊಳ್ಳುವದಿಲ್ಲ.
- 11ಪರಿಹಾಸ್ಯಕರನ್ನು ಶಿಕ್ಷಿಸಿ ದರೆ ಬುದ್ಧಿಹೀನರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ ಅವನು ತಿಳುವಳಿಕೆಯನ್ನು ಹೊಂದು ತ್ತಾನೆ.
- 12ನೀತಿವಂತನು ದುಷ್ಟನ ಮನೆಯನ್ನು ಬುದ್ಧಿ ಯಿಂದ ಲಕ್ಷಿಸುತ್ತಾನೆ; ಅವರ ದುಷ್ಟತನಕ್ಕಾಗಿ ದೇವರು ಅವರನ್ನು ಕೆಡವುತ್ತಾನೆ.
Cross references
- 1 John 2:16 1 ಯೋಹಾನನು 2:16ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- Proverbs 3:29 ಜ್ಞಾನೋಕ್ತಿಗಳು 3:29ನಿನ್ನ ನೆರೆಯವನು ಭದ್ರತೆಯಿಂದ ನಿನ್ನ ಪಕ್ಕದಲ್ಲಿ ಜೀವಿ ಸುತ್ತಿರುವಾಗ ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸ ಬೇಡ.
- Micah 3:2–3 ಮೀಕ 3:2–3ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ, ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ.
- Psalm 36:4 ಕೀರ್ತನೆಗಳು 36:4ಕುಯುಕ್ತಿಯನ್ನು ತನ್ನ ಹಾಸಿಗೆಯ ಮೇಲೆ ಕಲ್ಪಿಸುತ್ತಾನೆ; ಒಳ್ಳೇದಲ್ಲದ ಮಾರ್ಗದಲ್ಲಿ ನಿಂತು ಕೊಳ್ಳುತ್ತಾನೆ; ಕೆಟ್ಟದ್ದನ್ನು ಅಸಹ್ಯಿಸುವದಿಲ್ಲ.
- Isaiah 32:6–8 ಯೆಶಾಯ 32:6–8ನೀಚನು ನೀಚನಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾ ಸಿಸುವಂತೆಯೂ ಕರ್ತನಿಗೆ ವಿರೋಧವಾಗಿ ಸಂಪೂ ರ್ಣವಾಗಿ ತಪ್ಪಿಹೋಗುವವರಂತೆಯೂ ಹಸಿವೆ ಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು. ಜಿಪುಣನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ ಅವನು ಬಡವ ರನ್ನು ಸುಳ್ಳು ಮಾತುಗಳಿಂದ ಕೆಡಿಸುವದಕ್ಕೆ ಕುಯುಕ್ತಿ (ದೋಷ)ಗಳನ್ನು ಕಲ್ಪಿಸುವನು. ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
- 1 Corinthians 10:6 1 ಕೊರಿಂಥದವರಿಗೆ 10:6ಅವರು ಕೆಟ್ಟವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿ ಗಳು ನಮಗೆ ನಿದರ್ಶನಗಳಾಗಿವೆ.
- Mark 7:21–22 ಮಾರ್ಕನು 7:21–22ಯಾಕಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅಂದರೆ ಕೆಟ್ಟಆಲೋಚನೆಗಳು ವ್ಯಭಿಚಾರಗಳು ಹಾದರಗಳು ಕೊಲೆಗಳು ಕಳ್ಳತನಗಳು ದುರಾಶೆ ಕೆಟ್ಟತನ ಮೋಸ ಕಾಮಾಭಿಲಾಷೆ ಕೆಟ್ಟದೃಷಿ ದೇವದೂಷಣೆ ಗರ್ವ ಬುದ್ಧಿಗೇಡಿತನ
- 1 Samuel 25:8–11 1 ಸಮುವೇಲನು 25:8–11ನಿನ್ನ ಯೌವನಸ್ಥರನ್ನು ಕೇಳು, ಅವರೇ ನಿನಗೆ ಹೇಳುವರು. ಆದದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ; ಒಳ್ಳೇ ದಿವಸದಲ್ಲಿ ನಾವು ಬಂದೆವು. ನಿನ್ನ ಕೈಯಲ್ಲಿ ದೊರಕುವದನ್ನು ನಿನ್ನ ಸೇವಕರಿಗೂ ನಿನ್ನ ಕುಮಾರನಾದ ದಾವೀದನಿಗೂ ದಯಪಾಲಿಸು ಅಂದನು. ದಾವೀದನ ಯುವಕರು ಬಂದು ಈ ಮಾತುಗಳನ್ನೆಲ್ಲಾ ದಾವೀದನ ಹೆಸರಿನಲ್ಲಿ ನಾಬಾಲನಿಗೆ ಹೇಳಿ ಮೌನವಾದರು. ನಾಬಾಲನು ದಾವೀದನ ಸೇವಕರಿಗೆ ಪ್ರತ್ಯುತ್ತರವಾಗಿ--ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಇದ್ದಾರೆ. ನಾನು ನನ್ನ ರೊಟ್ಟಿಯನ್ನೂ ನೀರನ್ನೂ ಉಣ್ಣೆಯನ್ನು ಕತ್ತರಿಸುವವ ರಿಗೋಸ್ಕರ ನಾನು ಸಿದ್ಧಮಾಡಿಸಿದ ಮಾಂಸವನ್ನೂ ತೆಗೆದು ಎಲ್ಲಿಯವರೆಂದು ನಾನರಿಯದ ಮನುಷ್ಯರಿಗೆ ಕೊಡುವೆನೋ ಅಂದನು.
- James 4:1–5 ಯಾಕೋಬನು 4:1–5ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಎಲ್ಲಿಂದ ಬರುತ್ತವೆ? ನಿಮ್ಮ ಇಂದ್ರಿಯ ಗಳಲ್ಲಿ ಹೊರಾಡುವ ಭೋಗಾಶೆಗಳಿಂದಲೇ ಅಲ್ಲವೇ. ನೀವು ಆಶಿಸಿದರೂ ಹೊಂದದೆ ಇದ್ದೀರಿ. ನೀವು ಕೊಲ್ಲುತ್ತೀರಿ, ಹೊಂದಲು ಅಪೇಕ್ಷಿಸುತ್ತೀರಿ, ಆದರೆ ಪಡೆಯಲಾರಿರಿ. ನೀವು ಕಾದಾಡುತ್ತೀರಿ, ಯುದ್ಧ ಮಾಡುತ್ತೀರಿ. ಆದಾಗ್ಯೂ ನೀವು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ. ನೀವು ಬೇಡಿದರೂ ಬೇಡಿದ್ದನ್ನು ನಿಮ್ಮ ಭೋಗಗಳಿಗಾಗಿ ಉಪಯೋಗಿಸ ಬೇಕೆಂದು ತಪ್ಪಾಗಿ ಬೇಡಿಕೊಳ್ಳುವದರಿಂದ ನಿಮಗೆ ದೊರೆಯುವದಿಲ್ಲ. ವ್ಯಭಿಚಾರಿಗಳೇ, ವ್ಯಭಿಚಾರಿಣಿ ಯರೇ, ಇಹಲೋಕ ಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರ ಬೇಕೆಂದಿರುವವನು ದೇವರಿಗೆ ವೈರಿಯಾಗಿದ್ದಾನೆ. ಇದಲ್ಲದೆ--ನಮ್ಮಲ್ಲಿ ವಾಸವಾಗಿರುವ ಆತ್ಮನು ಅಭಿಮಾನತಾಪದಿಂದ ಹಂಬಲಿಸುತ್ತಾನೆಂಬ ಬರಹವು ವ್ಯರ್ಥವಾಗಿ ಹೇಳುತ್ತದೆ ಎಂದು ನೀವು ಭಾವಿಸು ತ್ತೀರೋ?
- James 2:13 ಯಾಕೋಬನು 2:13ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.
- Psalm 112:5 ಕೀರ್ತನೆಗಳು 112:5ಒಳ್ಳೇಮನುಷ್ಯನು ದಯೆ ತೋರಿಸಿ ಸಾಲಕೊಡುತ್ತಾನೆ; ತನ್ನ ಕಾರ್ಯಗಳನ್ನು ನ್ಯಾಯದಿಂದ ನಡಿಸುವನು.
- Proverbs 12:12 ಜ್ಞಾನೋಕ್ತಿಗಳು 12:12ದುಷ್ಟರು ಕೆಟ್ಟವರ ಬಲೆಯನ್ನು ಅಪೇಕ್ಷಿಸುತ್ತಾರೆ; ನೀತಿವಂತರ ಬೇರು ಫಲವನ್ನು ಕೊಡುತ್ತದೆ.