Proverbs · chapter 21 · verse 7
Proverbs 21:7 in Kannada
ದುಷ್ಟರ ಸೂರೆಯು ಅವರನ್ನು ನಾಶಪಡಿಸುವದು; ನ್ಯಾಯವಾದದ್ದನ್ನು ಮಾಡುವದನ್ನು ಅವರು ನಿರಾಕರಿಸುತ್ತಾರೆ.
Dushtara sooreyu avarannu naashapadisuvadu; nyaayavaadaddannu maaduvadannu avaru niraakarisuttaare.
Proverbs 21:7 in English
- King James Version (KJV)
- The robbery of the wicked shall destroy them; because they refuse to do judgment.
- World English Bible (WEB)
- The violence of the wicked will drive them away, because they refuse to do what is right.
- American Standard Version (ASV)
- The violence of the wicked shall sweep them away, Because they refuse to do justice.
- Bible in Basic English (BBE)
- By their violent acts the evil-doers will be pulled away, because they have no desire to do what is right.
- Darby Translation (DBY)
- The devastation of the wicked sweepeth them away, because they refuse to do what is right.
- Webster's Bible (WBS)
- The robbery of the wicked shall destroy them; because they refuse to do judgment.
- Young's Literal Translation (YLT)
- The spoil of the wicked catcheth them, Because they have refused to do judgment.
Read in context
- 5ಶ್ರದ್ಧೆಯುಳ್ಳ ಯೋಚನೆಗಳು ಸಮ್ಮದ್ಧಿಗೆ ಒಲಿಯುತ್ತವೆ; ಆತುರಪಡುವ ಪ್ರತಿಯೊಬ್ಬನ ಯೋಚನೆಗಳು ಕೊರ ತೆಗೆ ಉಳಿಯುತ್ತವೆ.
- 6ಸುಳ್ಳಿನ ನಾಲಿಗೆಯಿಂದ ಸಂಪಾ ದಿಸುವ ಸಂಪತ್ತು ಮೃತ್ಯುವನ್ನು ಹುಡುಕುವವರಿಂದ ಬಡಿಯಲ್ಪಟ್ಟ ವ್ಯರ್ಥತ್ವವಾಗಿದೆ.
- 7ದುಷ್ಟರ ಸೂರೆಯು ಅವರನ್ನು ನಾಶಪಡಿಸುವದು; ನ್ಯಾಯವಾದದ್ದನ್ನು ಮಾಡುವದನ್ನು ಅವರು ನಿರಾಕರಿಸುತ್ತಾರೆ.
- 8ಮನುಷ್ಯನ ಮಾರ್ಗವು ಡೊಂಕು ಮತ್ತು ಅಪರಿಚಿತ; ಪವಿತ್ರನಿ ಗಾದರೋ ಅವನ ಕ್ರಿಯೆಯು ಸರಳ.
- 9ವಿಶಾಲವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದಕ್ಕಿಂತ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದು ಲೇಸು.
Cross references
- Proverbs 21:21 ಜ್ಞಾನೋಕ್ತಿಗಳು 21:21ನೀತಿಯನ್ನೂ ಕರುಣೆಯನ್ನೂ ಹಿಂಬಾಲಿಸುವವನು; ಜೀವವನ್ನೂ ನೀತಿಯನ್ನೂ ಕೀರ್ತಿಯನ್ನೂ ಕಂಡು ಕೊಳ್ಳುತ್ತಾನೆ.
- Micah 3:9–12 ಮೀಕ 3:9–12ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ, ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ. ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು. ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Zechariah 5:3–4 ಜೆಕರ್ಯ 5:3–4ಆಗ ಅವನು ನನಗೆ ಹೇಳಿದ್ದೇನಂದರೆ--ದೇಶದ ಮೇಲೆಲ್ಲಾ ಹೊರಡುವ ಶಾಪವು ಇದೇ; ಕಳ್ಳತನ ಮಾಡುವವರೆಲ್ಲರು ಈ ದಿಕ್ಕಿನ ಪ್ರಕಾರ ತೆಗೆದುಹಾಕಲ್ಪಡುವರು; ಆಣೆ ಇಡುವವರೆಲ್ಲರು ಆ ಕಡೆ ಅದರ ಪ್ರಕಾರ ತೆಗೆದುಹಾಕಲ್ಪಡುವರು. ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.
- Proverbs 22:22–23 ಜ್ಞಾನೋಕ್ತಿಗಳು 22:22–23ಅವನು ಬಡವನೆಂದು ಬಡವನನ್ನು ಸೂರೆಮಾಡ ಬೇಡ; ಮಾತ್ರವಲ್ಲದೆ ದ್ವಾರದಲ್ಲಿ ದರಿದ್ರರನ್ನು ಹಿಂಸಿಸ ಬೇಡ. ಕರ್ತನು ಅವರ ವ್ಯಾಜ್ಯವನ್ನು ನಡಿಸಿ ಸೂರೆ ಮಾಡಿದವರ ಪ್ರಾಣವನ್ನು ಸೂರೆಮಾಡುವನು.
- Ephesians 5:6 ಎಫೆಸದವರಿಗೆ 5:6ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.
- Psalm 7:16 ಕೀರ್ತನೆಗಳು 7:16ಅವನ ಕೇಡು ಅವನ ಸ್ವಂತ ತಲೆಯ ಮೇಲೆ ತಿರುಗುವದು; ಅವನ ನೆತ್ತಿಯ ಮೇಲೆ ಅವನ ಬಲಾತ್ಕಾರವು ಇಳಿಯುವದು;ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.
- Isaiah 1:23–24 ಯೆಶಾಯ 1:23–24ನಿನ್ನ ಪ್ರಭುಗಳು ಎದುರು ಬೀಳುವವರೂ ಕಳ್ಳರ ಜೊತೆಗಾರರೂ ಆಗಿ ದ್ದಾರೆ; ಪ್ರತಿಯೊಬ್ಬನು ಲಂಚ ಪ್ರಿಯನೂ ಬಹು ಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ; ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವದಿಲ್ಲ. ಆದದರಿಂದ ಸೈನ್ಯಗಳ ಕರ್ತನೂ ಇಸ್ರಾಯೇಲಿನ ಪರಾಕ್ರಮಿಯೂ ಆದ ಕರ್ತನು ಹೇಳುವದೇನಂದರೆ ಹಾ, ನನ್ನ ವಿರೋಧಿಗಳಿಂದ ನಾನು ಶಾಂತನಾಗಿರು ವೆನು, ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು.
- Ezekiel 18:18 ಯೆಹೆಜ್ಕೇಲನು 18:18ಆತನ ತಂದೆಯ ವಿಷಯವಾದರೋ ಅವನು ಬಹಳ ಬಲಾತ್ಕಾರ ಮಾಡಿ ದ್ದರಿಂದಲೂ ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ ತನ್ನ ಜನರ ಮಧ್ಯದಲ್ಲಿ ಕೆಟ್ಟದನ್ನು ಮಾಡಿದ್ದರಿಂದಲೂ ಇಗೋ, ಅವನು ಅಕ್ರಮದಲಿ ಸಾಯುವನು.
- Ezekiel 22:13–14 ಯೆಹೆಜ್ಕೇಲನು 22:13–14ಆದದರಿಂದ ಇಗೋ, ನೀನು ಮಾಡಿದ ಈ ದುರ್ಲಾಭದಿಂದಲೂ ನಿನ್ನಲ್ಲಿರುವ ನಿನ್ನ ರಕ್ತಾಪ ರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ. ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವದೋ? ನಿನ್ನ ಕೈಗಳು ಬಲವಾಗಿರುವವೋ? ಕರ್ತನಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುತ್ತೇನೆ.
- Proverbs 10:6 ಜ್ಞಾನೋಕ್ತಿಗಳು 10:6ನೀತಿವಂತರ ತಲೆಯ ಮೇಲೆ ಆಶೀರ್ವಾದಗಳು ಇವೆ; ಆದರೆ ದುಷ್ಟನ ಬಾಯಿಯನ್ನು ಬಲಾತ್ಕಾರವು ಮುಚ್ಚುತ್ತದೆ.
- Psalm 9:16 ಕೀರ್ತನೆಗಳು 9:16ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ. ಹಿಗ್ಗಾಯೋನ್. ಸೆಲಾ.
- Jeremiah 7:15 ಯೆರೆಮೀಯ 7:15ನಿಮ್ಮ ಸಹೋದರರೆಲ್ಲರನ್ನೂ ಎಫ್ರಾಯಾಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.