Proverbs · chapter 22 · verse 7
Proverbs 22:7 in Kannada
ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ. ಸಾಲಗಾರನು ಸಾಲಕೊಟ್ಟ ವನಿಗೆ ಸೇವಕನು.
Aishvaryavantanu badavana mele aaluttaane. Saalagaaranu saalakotta vanige sevakanu.
Proverbs 22:7 in English
- King James Version (KJV)
- The rich ruleth over the poor, and the borrower [is] servant to the lender.
- World English Bible (WEB)
- The rich rule over the poor. The borrower is servant to the lender.
- American Standard Version (ASV)
- The rich ruleth over the poor; And the borrower is servant to the lender.
- Bible in Basic English (BBE)
- The man of wealth has rule over the poor, and he who gets into debt is a servant to his creditor.
- Darby Translation (DBY)
- The rich ruleth over the poor; and the borrower is servant to the lender.
- Webster's Bible (WBS)
- The rich ruleth over the poor, and the borrower [is] servant to the lender.
- Young's Literal Translation (YLT)
- The rich over the poor ruleth, And a servant [is] the borrower to the lender.
Read in context
- 5ಮೂಢರ ದಾರಿಯಲ್ಲಿ ಮುಳ್ಳು ಗಳೂ ಉರುಲುಗಳೂ ಇವೆ; ತನ್ನ ಪ್ರಾಣವನ್ನು ಕಾಪಾ ಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು.
- 6ನಡೆಯಬೇಕಾದ ಮಾರ್ಗದಲ್ಲಿರುವಂತೆ ಹುಡುಗನಿಗೆ ಶಿಕ್ಷಣಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದ ರಿಂದ ಹೊರಟು ಹೋಗುವದಿಲ್ಲ.
- 7ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ. ಸಾಲಗಾರನು ಸಾಲಕೊಟ್ಟ ವನಿಗೆ ಸೇವಕನು.
- 8ಕೆಟ್ಟತನವನ್ನು ಬಿತ್ತುವವನು ವ್ಯರ್ಥ ವನ್ನು ಕೊಯ್ಯುವನು; ಅವನ ಕೋಪದ ದಂಡವು ಬಿದ್ದುಹೋಗುವದು.
- 9ದಯಾದೃಷ್ಟಿಯುಳ್ಳವನು ಆಶೀ ರ್ವಾದವನ್ನು ಹೊಂದುವನು; ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.
Cross references
- 2 Kings 4:1 2 ಅರಸುಗಳು 4:1ಪ್ರವಾದಿಗಳ ಮಕ್ಕಳ ಹೆಂಡತಿಯರಲ್ಲಿ ಒಬ್ಬಳು ಎಲೀಷನಿಗೆ ಕೂಗಿ--ನಿನ್ನ ದಾಸ ನಾದ ನನ್ನ ಗಂಡನು ಸತ್ತನು; ನಿನ್ನ ದಾಸನು ಕರ್ತನಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ; ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸ ರಾಗಿ ತೆಗೆದುಕೊಳ್ಳಲು ಬಂದಿದ್ದಾನೆ ಅಂದಳು.
- Matthew 18:25 ಮತ್ತಾಯನು 18:25ಆದರೆ ಕೊಡುವದಕ್ಕೆ ಅವನಿಗೆ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅವನ ಯಜಮಾನನು ಅಪ್ಪಣೆ ಕೊಟ್ಟನು.
- Proverbs 22:16 ಜ್ಞಾನೋಕ್ತಿಗಳು 22:16ತನ್ನ ಐಶ್ವರ್ಯವನ್ನು ವೃದ್ಧಿಗೊಳಿಸುವದಕ್ಕಾಗಿ ಬಡವರನ್ನು ಹಿಂಸಿಸುವವನೂ ಐಶ್ವರ್ಯವಂತರಿಗೆ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು.
- Proverbs 14:31 ಜ್ಞಾನೋಕ್ತಿಗಳು 14:31ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ.
- Proverbs 18:23 ಜ್ಞಾನೋಕ್ತಿಗಳು 18:23ಬಡವನು ವಿಜ್ಞಾಪನೆಗಳನ್ನು ಮಾಡುತ್ತಾನೆ; ಧನಿಕರು ಕಠಿಣವಾಗಿ ಉತ್ತರಕೊಡು ತ್ತಾರೆ.ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
- James 2:6 ಯಾಕೋಬನು 2:6ನೀವಾದರೋ ಬಡವರನ್ನು ಅವಮಾನಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದು ಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?
- Proverbs 22:22 ಜ್ಞಾನೋಕ್ತಿಗಳು 22:22ಅವನು ಬಡವನೆಂದು ಬಡವನನ್ನು ಸೂರೆಮಾಡ ಬೇಡ; ಮಾತ್ರವಲ್ಲದೆ ದ್ವಾರದಲ್ಲಿ ದರಿದ್ರರನ್ನು ಹಿಂಸಿಸ ಬೇಡ.
- James 5:1 ಯಾಕೋಬನು 5:1ಧನಿಕರೇ, ನಿಮಗೆ ಬರುವ ದುರ್ದಶೆ ಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ
- Nehemiah 5:4–5 ನೆಹೆಮೀಯ 5:4–5ಇನ್ನು ಕೆಲವರು--ಅರಸನಿಗೆ ಕಪ್ಪವನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ ನಮ್ಮ ದ್ರಾಕ್ಷೇ ತೋಟಗಳ ಮೇಲೆಯೂ ಸಾಲವನ್ನು ತೆಗೆದು ಕೊಂಡಿದ್ದೇವೆ. ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.
- Amos 5:11–12 ಆಮೋಸ 5:11–12ಆದಕಾರಣ ನೀವು ಬಡವನನ್ನು ತುಳಿದವರಾಗಿ ಗೋಧಿಯ ಹೊರೆಗಳನ್ನು ಅವನಿಂದ ಕಸಿದುಕೊಂಡು ಕೆತ್ತಿದ ಕಲ್ಲಿನ ಮನೆಗಳನ್ನು ಕಟ್ಟಿದ್ದೀರಲ್ಲಾ; ನೀವು ಅವುಗಳಲ್ಲಿ ವಾಸಮಾಡದೆ ಇರುವಿರಿ; ರಮ್ಯವಾದ ದ್ರಾಕ್ಷೆಯತೋಟ ಗಳನ್ನು ನೆಟ್ಟಿರಲ್ಲಾ; ಅವುಗಳ ದ್ರಾಕ್ಷಾರಸವನ್ನು ಕುಡಿ ಯಲಾರಿರಿ. ನಿಮ್ಮ ಅನೇಕ ಅಪರಾಧಗಳನ್ನೂ ನಿಮ್ಮ ಘೋರವಾದ ಪಾಪಗಳನ್ನೂ ನಾನು ಬಲ್ಲೆನು; ಅವರು ನೀತಿವಂತರನ್ನು ಬಾಧೆಪಡಿಸಿ ಲಂಚವನ್ನು ತೆಗೆದು ಕೊಂಡರು; ಬಾಗಲ ಬಳಿಯಲ್ಲಿರುವ ಬಡವರ ನ್ಯಾಯ ವನ್ನು ತೀರಿಸದೆ ಅವರು ಕಳುಹಿಸಿಬಿಟ್ಟರು.
- Amos 4:1 ಆಮೋಸ 4:1ಸಮಾರ್ಯದ ಬೆಟ್ಟದಲ್ಲಿರುವ ಬಾಷಾನಿನ ಹಸುಗಳೇ, ಬಡವರನ್ನು ಬಲಾತ್ಕಾರ ಮಾಡಿ, ದರಿದ್ರರನ್ನು ಜಜ್ಜಿ ತಮ್ಮ ಯಜಮಾನರಿಗೆ --ಪಾನವನ್ನು ತರಿಸಿರಿ, ಕುಡಿಯೋಣ ಎಂದು ಹೇಳು ವವರೇ, ಈ ವಾಕ್ಯವನ್ನು ಕೇಳಿರಿ.
- Isaiah 24:2 ಯೆಶಾಯ 24:2ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೂ ದಾಸನಿಗೆ ಹೇಗೋ ಹಾಗೆಯೇ ಅವನ ಯಜಮಾನನಿಗೆ, ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ತರುವ ವನಿಗೆ; ಬಡ್ಡಿಕೊಡುವವನಿಗೆ ಹೇಗೋ ಹಾಗೆಯೇ ತಕ್ಕೊಳ್ಳುವವನಿಗೆ ಆಗುವದು.