Proverbs · chapter 24 · verse 14
Proverbs 24:14 in Kannada
ಹೀಗೆ ನಿನ್ನ ಪ್ರಾಣಕ್ಕೆ ಜ್ಞಾನದ ತಿಳುವಳಿಕೆಯು ಇರುವದು; ಅದು ಸಿಕ್ಕಿದಾಗ ಬಹುಮಾನವಿರುವದು; ನಿನ್ನ ನಿರೀಕ್ಷೆಯು ನಿರರ್ಥಕವಾಗುವದಿಲ್ಲ.
Heege ninna praanakke jnyaanada tiluvalikeyu iruvadu; adu sikkidaaga bahumaanaviruvadu; ninna nireeksheyu nirarthakavaaguvadilla.
Proverbs 24:14 in English
- King James Version (KJV)
- So [shall] the knowledge of wisdom [be] unto thy soul: when thou hast found [it], then there shall be a reward, and thy expectation shall not be cut off.
- World English Bible (WEB)
- so you shall know wisdom to be to your soul. If you have found it, then there will be a reward: Your hope will not be cut off.
- American Standard Version (ASV)
- So shalt thou know wisdom to be unto thy soul; If thou hast found it, then shall there be a reward, And thy hope shall not be cut off.
- Bible in Basic English (BBE)
- So let your desire be for wisdom: if you have it, there will be a future, and your hope will not be cut off.
- Darby Translation (DBY)
- so consider wisdom for thy soul; if thou hast found it, there shall be a result, and thine expectation shall not be cut off.
- Webster's Bible (WBS)
- So [shall] the knowledge of wisdom [be] to thy soul: when thou hast found [it] , then there shall be a reward, and thy expectation shall not be cut off.
- Young's Literal Translation (YLT)
- So [is] the knowledge of wisdom to thy soul, If thou hast found that there is a posterity And thy hope is not cut off.
Read in context
- 12ನೀನು--ಇಗೋ, ಅದು ನನಗೆ ಗೊತ್ತಿಲ್ಲ ಎಂದು ಹೇಳಿದರೆ ಹೃದಯವನ್ನು ಪರಿಶೋಧಿಸುವಾತನು ಅದನ್ನು ಯೋಚಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ಅದನ್ನು ತಿಳಿಯುವದಿಲ್ಲವೋ? ಪ್ರತಿ ಯೊಬ್ಬನಿಗೆ ತನ್ನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?
- 13ನನ್ನ ಮಗನೇ, ಜೇನು ಚೆನ್ನಾಗಿರುವದರಿಂದಲೂ ನಿನ್ನ ಬಾಯಿಗೆ ಜೇನು ತುಪ್ಪವು ಸಿಹಿಯಾಗಿರುವದರಿಂದಲೂ ಅದನ್ನು ತಿನ್ನು;
- 14ಹೀಗೆ ನಿನ್ನ ಪ್ರಾಣಕ್ಕೆ ಜ್ಞಾನದ ತಿಳುವಳಿಕೆಯು ಇರುವದು; ಅದು ಸಿಕ್ಕಿದಾಗ ಬಹುಮಾನವಿರುವದು; ನಿನ್ನ ನಿರೀಕ್ಷೆಯು ನಿರರ್ಥಕವಾಗುವದಿಲ್ಲ.
- 15ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚುಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ;
- 16ನೀತಿ ವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡಿಗೆ ಬೀಳುವನು.
Cross references
- James 1:25 ಯಾಕೋಬನು 1:25ಆದರೆ ಬಿಡುಗಡೆ ಯನ್ನುಂಟುಮಾಡುವ ಪರಿಪೂರ್ಣವಾದ ನಿಯಮ ವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು (ವಾಕ್ಯವನ್ನು) ಕೇಳಿ ಮರೆತುಹೋಗುವವ ನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ಕ್ರಿಯೆಯಿಂದ ಧನ್ಯನಾಗುವನು.
- Proverbs 2:10 ಜ್ಞಾನೋಕ್ತಿಗಳು 2:10ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿ ಸಿದಾಗ ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಅಂದವಾಗಿರು ವದು.
- Jeremiah 15:16 ಯೆರೆಮೀಯ 15:16ನಿನ್ನ ವಾಕ್ಯಗಳು ಸಿಕ್ಕಿದವು, ಅವುಗಳನ್ನು ತಿಂದೆನು. ನಿನ್ನ ವಾಕ್ಯವು ನನ್ನ ಹೃದಯಕ್ಕೆ ಉಲ್ಲಾಸವೂ ಸಂತೋಷವೂ ಆಗಿತ್ತು; ಓ ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದೇನೆ.
- Proverbs 23:18 ಜ್ಞಾನೋಕ್ತಿಗಳು 23:18ಖಂಡಿತವಾಗಿಯೂ ಅಂತ್ಯವು ಬರು ತ್ತದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
- Psalm 119:103 ಕೀರ್ತನೆಗಳು 119:103ನಿನ್ನ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿ ಯಾಗಿವೆ, ಅವು ನನ್ನ ಬಾಯಿಗೆ ಜೇನಿಗಿಂತ ಸಿಹಿ ಯಾಗಿವೆ.
- Proverbs 22:18 ಜ್ಞಾನೋಕ್ತಿಗಳು 22:18ಅವುಗಳನ್ನು ನಿನ್ನೊಳಗೆ ಕಾಪಾಡಿದರೆ ಅದು ರಮ್ಯವಾಗಿದೆ; ಅವು ನಿನ್ನ ತುಟಿ ಗಳಲ್ಲಿ ಹೊಂದಿಕೊಂಡಿರುವವು.
- Proverbs 2:1–5 ಜ್ಞಾನೋಕ್ತಿಗಳು 2:1–5ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ.
- Proverbs 3:13–18 ಜ್ಞಾನೋಕ್ತಿಗಳು 3:13–18ಜ್ಞಾನವನ್ನು ಕಂಡು ಕೊಳ್ಳುವವನೂ ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು. ಅದರ ವ್ಯಾಪಾರವೂ ಬೆಳ್ಳಿಯ ವ್ಯಾಪಾರಕ್ಕಿಂತಲೂ ಅದರ ಲಾಭವು ಸೋಸಿದ ಬಂಗಾರಕ್ಕಿಂತಲೂ ಉತ್ತಮವಾಗಿದೆ. ಅದು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯವುಳ್ಳದ್ದಾಗಿದ್ದು ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವದಿಲ್ಲ. ಆಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ. ಅವಳ ಮಾರ್ಗ ಗಳು ಸಂತೋಷಕರವೂ ಎಲ್ಲಾ ದಾರಿಗಳು ಸಮಾ ಧಾನಕರವೂ ಆಗಿವೆ. ತನ್ನನ್ನು ಹಿಡಿದುಕೊಳ್ಳುವ ವರಿಗೆ ಆಕೆಯು ಜೀವದ ವೃಕ್ಷವಾಗಿದ್ದಾಳೆ; ಆಕೆಯನ್ನು ಭದ್ರವಾಗಿ ಇಟ್ಟುಕೊಳ್ಳುವ ಪ್ರತಿಯೊಬ್ಬನೂ ಧನ್ಯನು.
- Psalm 119:111 ಕೀರ್ತನೆಗಳು 119:111ನಿನ್ನ ಸಾಕ್ಷಿಗಳನ್ನು ನಿತ್ಯಸ್ವಾಸ್ತ್ಯವಾಗಿ ತೆಗೆದುಕೊಂಡಿದ್ದೇನೆ; ಅವು ನನ್ನ ಹೃದಯಕ್ಕೆ ಆನಂದವಾಗಿವೆ.
- Psalm 19:10–11 ಕೀರ್ತನೆಗಳು 19:10–11ಅವು ಬಂಗಾರಕ್ಕಿಂತಲೂ ಬಹಳ ಅಪರಂಜಿ ಗಿಂತಲೂ ಅಪೇಕ್ಷಿಸತಕ್ಕವುಗಳು; ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾದವು ಗಳು. ನಿನ್ನ ಸೇವಕನು ಅವುಗಳಿಂದ ಎಚ್ಚರಿಸಲ್ಪಡು ತ್ತಾನೆ; ಅವುಗಳನ್ನು ಕೈಕೊಳ್ಳುವದರಲ್ಲಿ ದೊಡ್ಡ ಪ್ರತಿ ಫಲ ಉಂಟು.
- Matthew 19:21 ಮತ್ತಾಯನು 19:21ಯೇಸು ಅವನಿಗೆ--ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನಗೆ ಇದ್ದದ್ದನ್ನು ಮಾರಿ ಬಡವರಿಗೆ ಕೊಡು; ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವದು; ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು.