Proverbs · chapter 25 · verse 15
Proverbs 25:15 in Kannada
ದೀರ್ಘ ಶಾಂತಿಯಿಂದ ಪ್ರಭುವನ್ನು ಸಮ್ಮತಿಪಡಿಸಬಹುದು. ಮೃದುವಾದ ನಾಲಿಗೆಯು ಎಲುಬನ್ನು ಮುರಿಯುತ್ತದೆ.
Deergha shaantiyinda prabhuvannu sammatipadisabahudu. Mruduvaada naaligeyu elubannu muriyuttade.
Proverbs 25:15 in English
- King James Version (KJV)
- By long forbearing is a prince persuaded, and a soft tongue breaketh the bone.
- World English Bible (WEB)
- By patience a ruler is persuaded. A soft tongue breaks the bone.
- American Standard Version (ASV)
- By long forbearing is a ruler persuaded, And a soft tongue breaketh the bone.
- Bible in Basic English (BBE)
- A judge is moved by one who for a long time undergoes wrongs without protest, and by a soft tongue even bone is broken.
- Darby Translation (DBY)
- By long forbearing is a ruler persuaded, and a soft tongue breaketh the bone.
- Webster's Bible (WBS)
- By long forbearing is a prince persuaded, and a soft tongue breaketh the bone.
- Young's Literal Translation (YLT)
- By long-suffering is a ruler persuaded, And a soft tongue breaketh a bone.
Read in context
- 13ಸುಗ್ಗಿಯ ಕಾಲದಲ್ಲಿ ಹಿಮಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ಥನಾದ ಸೇವಕನಿ ದ್ದಾನೆ. ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ.
- 14ಸುಳ್ಳಾದ ದಾನದ ವಿಷ ಯವಾಗಿ ಹೊಗಳಿಕೊಳ್ಳುವವನು ಮಳೆ ಇಲ್ಲದ ಮೋಡ ಗಳ ಮತ್ತು ಗಾಳಿಯ ಹಾಗೆ ಇದ್ದಾನೆ.
- 15ದೀರ್ಘ ಶಾಂತಿಯಿಂದ ಪ್ರಭುವನ್ನು ಸಮ್ಮತಿಪಡಿಸಬಹುದು. ಮೃದುವಾದ ನಾಲಿಗೆಯು ಎಲುಬನ್ನು ಮುರಿಯುತ್ತದೆ.
- 16ಜೇನನ್ನು ಕಂಡುಕೊಂಡಿದ್ದೀಯಾ? ಅದನ್ನು ನಿನಗೆ ತೃಪ್ತಿಯಾಗುವಷ್ಟು ತಿನ್ನು; ಹೊಟ್ಟೆತುಂಬ ತಿಂದರೆ ಕಾರ ಬೇಕಾದೀತು.
- 17ನೆರೆಯವನು ಬೇಸರಗೊಂಡು ಹಗೆ ಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.
Cross references
- Proverbs 15:1 ಜ್ಞಾನೋಕ್ತಿಗಳು 15:1ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ; ತೀಕ್ಷ್ಣವಾದ ಮಾತು ಗಳು ಕೋಪವನ್ನು ಎಬ್ಬಿಸುತ್ತವೆ.
- Ecclesiastes 10:4 ಪ್ರಸಂಗಿ 10:4ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ.
- Proverbs 16:14 ಜ್ಞಾನೋಕ್ತಿಗಳು 16:14ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು.
- Genesis 32:4–21 ಆದಿಕಾಂಡ 32:4–21ಕಳುಹಿಸುವಾಗ ಅವರಿಗೆ--ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳ ಬೇಕು--ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ--ಲಾಬಾನನ ಸಂಗಡ ನಾನು ಈಗಿನ ವರಗೆ ಪ್ರವಾಸಿಯಾಗಿದ್ದೆನು; ನನಗೆ ಎತ್ತು ಕತ್ತೆ ಕುರಿಗಳು ದಾಸದಾಸಿಯರು ಇದ್ದಾರೆ; ನಾವು ನಿನ್ನ ದೃಷ್ಟಿಯಲ್ಲಿ ಕೃಪೆಹೊಂದುವ ಹಾಗೆ ನನ್ನ ಯಜಮಾನ ನಿಗೆ ತಿಳಿಸುವದಕ್ಕೆ ಕಳುಹಿಸಿದ್ದೇನೆ ಎಂದು ಹೇಳಿರಿ ಅಂದನು. ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು. ಆಗ ಯಾಕೋಬನು ಬಹಳವಾಗಿ ಭಯಪಟ್ಟು ಕುಂದಿ ಹೋಗಿ ತನ್ನ ಸಂಗಡ ಇದ್ದ ಜನರನ್ನೂ ಕುರಿಗಳನ್ನೂ ದನಗಳನ್ನೂ ಒಂಟೆಗಳನ್ನೂ ಎರಡು ಗುಂಪುಗಳಾಗಿ ವಿಭಾಗಿಸಿದನು. ಏಸಾವನು ಒಂದು ಗುಂಪಿನ ಮೇಲೆ ಬಿದ್ದು ಅದನ್ನು ಹೊಡೆದರೆ ಉಳಿದ ಗುಂಪು ತಪ್ಪಿಸಿಕೊಂಡು ಹೋದೀತೆಂದು ಅಂದು ಕೊಂಡನು. ಇದಲ್ಲದೆ ಯಾಕೋಬನು ಹೇಳಿದ್ದೇ ನಂದರೆ--ನನ್ನ ತಂದೆಯಾದ ಅಬ್ರಹಾಮನ ದೇವರೇ, ನನ್ನ ತಂದೆಯಾದ ಇಸಾಕನ ದೇವರೇ, ನಿನ್ನ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು, ಆಗ ನಿನಗೆ ಒಳ್ಳೇದನ್ನು ಮಾಡುವೆನು ಎಂದು ನನಗೆ ಹೇಳಿದ ಕರ್ತನೇ, ನೀನು ನಿನ್ನ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಯಾಕಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಗುಂಪುಗಳುಳ್ಳವನಾದೆನು. ಈಗ ನನ್ನ ಸಹೋದರನಾದ ಏಸಾವನ ಕೈಯಿಂದ ನನ್ನನ್ನು ತಪ್ಪಿಸು. ಅವನು ಬಂದು ನನ್ನನ್ನು ಮಕ್ಕಳ ಸಂಗಡ ತಾಯಿಯನ್ನು ಕೊಲ್ಲುವನೇನೋ ಎಂದು ನಾನು ಅವನಿಗೆ ಭಯಪಡುತ್ತೇನೆ. ನಾನು --ನಿನಗೆ ಖಂಡಿತ ವಾಗಿ ಒಳ್ಳೆಯದನ್ನು ಮಾಡುವೆನು, ನಿನ್ನ ಸಂತತಿಯನ್ನು ಎಣಿಸುವದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು ಎಂದು ಹೇಳಿದಿಯಲ್ಲಾ ಎಂದು ಬೇಡಿಕೊಂಡನು. ಯಾಕೋಬನು ಅದೇ ರಾತ್ರಿಯಲ್ಲಿ ಅಲ್ಲಿ ಇಳುಕೊಂಡನು; ತಾನು ತಕ್ಕೊಂಡು ಬಂದವುಗಳಲ್ಲಿ ತನ್ನ ಸಹೋದರನಾದ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. ಅವು ಯಾವವಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು; ಹಾಲು ಕೊಡುವ ಮೂವತ್ತು ಒಂಟೆಗಳು ಅವುಗಳ ಮರಿಗಳು, ನಾಲ್ವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಕತ್ತೆ ಮರಿಗಳು; ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನು ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ ಅವರಿಗೆ--ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳಬಿಡಿರಿ ಅಂದನು. ಅವನು ಮೊದಲನೆಯವನಿಗೆ--ನನ್ನ ಸಹೋದರನಾದ ಏಸಾವನು ನಿನ್ನೆದುರಿಗೆ ಬಂದು-- ನೀನು ಯಾರವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವವುಗಳು ಯಾರವು ಎಂದು ಕೇಳಿದರೆ ನೀನು ಅವನಿಗೆ--ಅವು ನಿನ್ನ ದಾಸನಾದ ಯಾಕೋಬನವುಗಳೇ; ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲ್ಪಟ್ಟ ಕಾಣಿಕೆ; ಇಗೋ, ಅವನೂ ನಮ್ಮ ಹಿಂದೆ ಇದ್ದಾನೆ ಎಂದು ಅವನಿಗೆ ಹೇಳಬೇಕೆಂದು ಆಜ್ಞಾಪಿಸಿದನು. ಎರಡನೆಯ ವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು. ಇದಲ್ಲದೆ--ನಿನ್ನ ದಾಸನಾದ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು ಎಂದು ಆಜ್ಞಾಪಿಸಿದನು. ಯಾಕಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ನೋಡುವೆನು; ಅವನು ನನ್ನನ್ನು ಅಂಗೀಕರಿಸುವನೇನೋ ಎಂದು ಅಂದು ಕೊಂಡನು. ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಗುಂಪಿನಲ್ಲಿ ಇಳುಕೊಂಡನು.
- 1 Samuel 25:24–44 1 ಸಮುವೇಲನು 25:24–44ದಯಮಾಡಿ ನಿನ್ನ ದಾಸಿಯನ್ನು ಮಾತಾಡಗೊಡಿಸಿ ನಿನ್ನ ದಾಸಿಯ ಮಾತುಗಳನ್ನು ಕೇಳು. ನನ್ನ ಒಡೆಯನು, ದಯಮಾಡಿ ಬೆಲಿಯಾಳನ ಈ ಮನುಷ್ಯ ನಾದ ನಾಬಾಲನ ಮೇಲೆ ಗಮನ ಇಡದೆ ಇರಲಿ. ಯಾಕಂದರೆ ಅವನ ಹೆಸರು ಹೇಗೋ ಹಾಗೆಯೇ ಅವನು ನಾಬಾಲನೆಂಬ ಹೆಸರುಳ್ಳವನು, ಮೂರ್ಖ ತನವು ಅವನ ಸಂಗಡ ಇರುವದು. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಯೌವನಸ್ಥರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ. ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವದಕ್ಕೂ ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವದಕ್ಕೂ ಹೋಗುವದನ್ನು ದೇವರು ಆಟಂಕ ಮಾಡಿದ್ದರಿಂದ ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಿನ್ನ ಶತ್ರುಗಳೂ ನನ್ನ ಒಡೆಯನಿಗೆ ಕೇಡನ್ನು ಹುಡುಕು ವವರೂ ನಾಬಾಲನ ಹಾಗೆಯೇ ಆಗಲಿ. ಈಗ ನಿನ್ನ ದಾಸಿಯು ನನ್ನ ಒಡೆಯನಿಗೆ ತಕ್ಕೊಂಡು ಬಂದ ಈ ಆಶೀರ್ವಾದವು ನನ್ನ ಒಡೆಯನನ್ನು ಹಿಂಬಾಲಿಸುವ ಯೌವನಸ್ಥರಿಗೆ ಕೊಡಲ್ಪಡಲಿ. ನೀನು ದಯಮಾಡಿ ನಿನ್ನ ದಾಸಿಯದ್ರೋಹವನ್ನು ಮನ್ನಿಸಬೇಕು; ನನ್ನ ಒಡೆಯನು ಕರ್ತನ ಯುದ್ಧಗಳನ್ನು ನಡೆಸುತ್ತಾನೆ; ನಿನ್ನ ದಿನಗಳಲ್ಲಿ ನಿನ್ನ ಬಳಿಯಲ್ಲಿ ಕೆಟ್ಟತನವು ಕಂಡುಹಿಡಿ ಯಲ್ಪಟ್ಟದ್ದಿಲ್ಲ; ಆದದರಿಂದ ಕರ್ತನು ನನ್ನ ಒಡೆಯನಿಗೆ ಸ್ಥಿರವಾದ ಮನೆಯನ್ನು ಖಂಡಿತವಾಗಿ ಮಾಡುವನು. ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡು ಕುವದಕ್ಕೆ ಒಬ್ಬನು ಎದ್ದಿದ್ದಾನೆ; ಆದರೂ ನನ್ನ ಒಡೆ ಯನ ಪ್ರಾಣವು ದೇವರಾದ ಕರ್ತನ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಲ್ಪಟ್ಟಿರುವದು; ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ಆತನು ಎಸೆದು ಬಿಡುವನು. ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಕರ್ತನು ಹೇಳಿದ ಒಳ್ಳೇದನ್ನೆಲ್ಲಾ ನಿನಗೆ ಮಾಡಿ ನಿನ್ನನ್ನು ಇಸ್ರಾಯೇಲ್ಯರ ಮೇಲೆ ನಾಯಕನಾಗಿ ನೇಮಿಸಿದಾಗ ಏನಾಗುವ ದಂದರೆ, ನೀನು ಸುಮ್ಮನೆ ರಕ್ತ ಚೆಲ್ಲಿದ್ದೂ ನನ್ನ ಒಡೆಯನು ತನಗೆ ತಾನೇ ಮುಯ್ಯಿ ತೀರಿಸಿಕೊಂಡದ್ದೂ ನಿನಗೆ ವ್ಯಥೆಯಾಗಿರುವದಿಲ್ಲ; ನನ್ನ ಒಡೆಯನ ಹೃದಯಕ್ಕೆ ಅಪರಾಧವಾಗಿರುವದಿಲ್ಲ. ಆದರೆ ನನ್ನ ಒಡೆಯನಿಗೆ ಕರ್ತನು ಚೆನ್ನಾಗಿ ನಡೆಸಿದಾಗ ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು ಅಂದಳು. ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ. ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ. ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು. ಅವಳು ತನಗೆ ತಂದ ದ್ದನ್ನು ದಾವೀದನು ಅವಳ ಕೈಯಿಂದ ತಕ್ಕೊಂಡು ಅವಳಿಗೆ--ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ಇಗೋ, ನಾನು ನಿನ್ನ ಮಾತನ್ನು ಕೇಳಿ ನಿನ್ನ ವಿಜ್ಞಾಪನೆಯನ್ನು ಅಂಗೀಕರಿಸಿದೆನು ಅಂದನು. ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ. ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು. ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ ಏನಾಯಿತಂದರೆ, ಕರ್ತನು ನಾಬಾಲನನ್ನು ಹೊಡೆದದ್ದರಿಂದ ಅವನು ಸತ್ತನು. ನಾಬಾಲನು ಸತ್ತನೆಂದು ದಾವೀದನು ಕೇಳಿದಾಗ ನನ್ನ ನಿಂದೆಯ ವ್ಯಾಜ್ಯವನ್ನು ನಾಬಾಲನಿಂದ ವಿಚಾರಿಸಿ ತನ್ನ ಸೇವಕ ನನ್ನು ಕೇಡುಮಾಡಗೊಡದ ಹಾಗೆ ಆಟಂಕಿಸಿದ ಕರ್ತನು ಸ್ತುತಿ ಹೊಂದಲಿ; ಯಾಕಂದರೆ ಕರ್ತನು ನಾಬಾಲನ ಕೆಟ್ಟತನವನ್ನು ಅವನ ತಲೆಯ ಮೇಲೆ ಬರಮಾಡಿದನು ಅಂದನು. ದಾವೀದನು ಅಬೀಗೈಲ ಳನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ಅವಳ ಸಂಗಡ ಮಾತನಾಡ ಕಳುಹಿಸಿದನು. ದಾವೀದನ ಸೇವಕರು ಕರ್ಮೆಲಿನಲ್ಲಿರುವ ಅಬೀಗೈಲಳ ಬಳಿಗೆ ಬಂದಾಗ ಅವಳಿಗೆ--ದಾವೀದನು ನಿನ್ನನ್ನು ತನಗೆ ಹೆಂಡತಿಯಾಗಿ ತಕ್ಕೊಳ್ಳುವದಕ್ಕಾಗಿ ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದನೆಂದು ಹೇಳಿದರು. ಆಗ ಅವಳು ಎದ್ದು ಬೋರಲು ಬಿದ್ದು--ಇಗೋ, ನಿನ್ನ ದಾಸಿ ನನ್ನ ಒಡೆ ಯನ ಸೇವಕರ ಪಾದಗಳನ್ನು ತೊಳೆಯುವ ಒಬ್ಬ ಸೇವಕಳಾಗಬೇಕು ಅಂದಳು. ಅಬೀಗೈಲಳು ಬೇಗನೆ ಎದ್ದು ಕತ್ತೆಯ ಮೇಲೆ ಹತ್ತಿಕೊಂಡು ತನ್ನ ಸಂಗಡ ಇರುವ ಐದು ಮಂದಿ ದಾಸಿಯರನ್ನು ಕರಕೊಂಡು ದಾವೀದನ ಸೇವಕರ ಹಿಂದೆ ಹೋಗಿ ಅವನಿಗೆ ಹೆಂಡತಿ ಯಾದಳು. ಇದಲ್ಲದೆ ದಾವೀದನು ಇಜ್ರೇಲು ಊರಿನವಳಾದ ಅಹೀನೋವಮಳನ್ನು ತಕ್ಕೊಂಡನು.ಅವರಿಬ್ಬರೂ ಅವನಿಗೆ ಹೆಂಡತಿಯರಾದರು.ಆದರೆ ಸೌಲನು ದಾವೀದನ ಹೆಂಡತಿಯಾದ ವಿಾಕಲಳೆಂಬ ತನ್ನ ಕುಮಾರ್ತೆಯನ್ನು ಗಲ್ಲೀಮ್ ಪಟ್ಟಣದ ಲಯಿಷನ ಮಗನಾದ ಪಲ್ಟೀಗೆ ಕೊಟ್ಟನು. ಆದರೆ ಸೌಲನು ದಾವೀದನ ಹೆಂಡತಿಯಾದ ವಿಾಕಲಳೆಂಬ ತನ್ನ ಕುಮಾರ್ತೆಯನ್ನು ಗಲ್ಲೀಮ್ ಪಟ್ಟಣದ ಲಯಿಷನ ಮಗನಾದ ಪಲ್ಟೀಗೆ ಕೊಟ್ಟನು.
- 1 Samuel 25:14 1 ಸಮುವೇಲನು 25:14ಆಗ ಕೆಲಸದವರಲ್ಲಿ ಯೌವನಸ್ಥನೊಬ್ಬನು ನಾಬಾಲನ ಹೆಂಡತಿಯಾದ ಅಬೀಗೈಲಳಿಗೆ--ಇಗೋ, ನಮ್ಮ ಯಜಮಾನನನ್ನು ವಂದಿಸಲು ದಾವೀದನು ಅರಣ್ಯದಿಂದ ದೂತರನ್ನು ಕಳುಹಿಸಿದನು; ಆದರೆ ಅವನು ಅವರನ್ನು ನಿಂದಿಸಿದನು.