Proverbs · chapter 28 · verse 10
Proverbs 28:10 in Kannada
ದುರ್ಮಾರ್ಗದಲ್ಲಿ ನೀತಿವಂತರನ್ನು ದಾರಿತಪ್ಪಿಸು ವವನು ತಾನೇ ತನ್ನ ಸ್ವಂತ ಕುಣಿಯೊಳಕ್ಕೆ ಬೀಳುವನು; ಯಥಾರ್ಥವಂತರಿಗಾದರೋ ಒಳ್ಳೆಯವುಗಳು ಸೊತ್ತಾ ಗುವವು.
Durmaargadalli neetivantarannu daaritappisu vavanu taane tanna svanta kuniyolakke beeluvanu; yathaarthavantarigaadaro olleyavugalu sottaa guvavu.
Proverbs 28:10 in English
- King James Version (KJV)
- Whoso causeth the righteous to go astray in an evil way, he shall fall himself into his own pit: but the upright shall have good [things] in possession.
- World English Bible (WEB)
- Whoever causes the upright to go astray in an evil way, he will fall into his own trap; but the blameless will inherit good.
- American Standard Version (ASV)
- Whoso causeth the upright to go astray in an evil way, He shall fall himself into his own pit; But the perfect shall inherit good.
- Bible in Basic English (BBE)
- Anyone causing the upright to go wandering in an evil way, will himself go down into the hole he has made; but the upright will have good things for their heritage.
- Darby Translation (DBY)
- Whoso causeth the upright to go astray in an evil way, shall himself fall into his own pit; but the perfect shall inherit good.
- Webster's Bible (WBS)
- Whoever causeth the righteous to go astray in an evil way, he shall fall himself into his own pit: but the upright shall have good [things] in possession.
- Young's Literal Translation (YLT)
- Whoso is causing the upright to err in an evil way, Into his own pit he doth fall, And the perfect do inherit good.
Read in context
- 8ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು ಬಡವರ ಮೇಲೆ ದಯೆತೋರಿಸುವವನಿಗೆ ಅದನ್ನು ಕೂಡಿಸುವನು.
- 9ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
- 10ದುರ್ಮಾರ್ಗದಲ್ಲಿ ನೀತಿವಂತರನ್ನು ದಾರಿತಪ್ಪಿಸು ವವನು ತಾನೇ ತನ್ನ ಸ್ವಂತ ಕುಣಿಯೊಳಕ್ಕೆ ಬೀಳುವನು; ಯಥಾರ್ಥವಂತರಿಗಾದರೋ ಒಳ್ಳೆಯವುಗಳು ಸೊತ್ತಾ ಗುವವು.
- 11ತನ್ನ ಸ್ವಂತ ಅಭಿಪ್ರಾಯದಲ್ಲಿ ಐಶ್ವರ್ಯ ವಂತನು ಜ್ಞಾನಿಯಾಗಿದ್ದಾನೆ; ವಿವೇಕಿಯಾದ ಬಡವನು ಅವನನ್ನು ಪರೀಕ್ಷಿಸುತ್ತಾನೆ.
- 12ನೀತಿವಂತರು ಉಲ್ಲಾಸಿಸಿ ದರೆ ದೊಡ್ಡ ಘನತೆ ಇರುವದು; ದುಷ್ಟರಿಗೆ ಏಳಿಗೆ ಯಾದರೆ ಮನುಷ್ಯನು ಅಡಗಿಕೊಳ್ಳುತ್ತಾನೆ.
Cross references
- Proverbs 26:27 ಜ್ಞಾನೋಕ್ತಿಗಳು 26:27ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು.ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.
- Psalm 37:25–26 ಕೀರ್ತನೆಗಳು 37:25–26ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ; ಆದರೆ ನೀತಿವಂತನು ಕೈಬಿಡಲ್ಪಟ್ಟದ್ದನ್ನೂ ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆಬೇಡುವದನ್ನೂ ನಾನು ನೋಡಲಿಲ್ಲ. ಅವನು ಯಾವಾಗಲೂ ದಯಾಳುವಾಗಿ ಸಾಲ ಕೊಡುತ್ತಾನೆ; ಅವನ ಸಂತತಿಯು ಆಶೀರ್ವಾದ ಹೊಂದುವದು.
- Psalm 7:15–16 ಕೀರ್ತನೆಗಳು 7:15–16ಅವನು ಕುಣಿಯನ್ನು ಅಗೆದಿದ್ದಾನೆ. ಆದರೆ ತಾನು ಅಗೆದ ಕುಣಿಯೊಳಗೆ ತಾನೇ ಬಿದ್ದಿದ್ದಾನೆ. ಅವನ ಕೇಡು ಅವನ ಸ್ವಂತ ತಲೆಯ ಮೇಲೆ ತಿರುಗುವದು; ಅವನ ನೆತ್ತಿಯ ಮೇಲೆ ಅವನ ಬಲಾತ್ಕಾರವು ಇಳಿಯುವದು;ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು.
- Proverbs 10:3 ಜ್ಞಾನೋಕ್ತಿಗಳು 10:3ನೀತಿವಂತನ ಪ್ರಾಣವನ್ನು ಕರ್ತನು ಹಸಿವೆಗೊಳಿಸನು; ದುಷ್ಟರ ಆಸ್ತಿಯನ್ನು ಆತನು ತಳ್ಳಿಹಾಕುತ್ತಾನೆ.
- Psalm 37:11 ಕೀರ್ತನೆಗಳು 37:11ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬಹಳ ಸಮಾಧಾನದಲ್ಲಿ ಆನಂದ ಪಡುವರು.
- Proverbs 15:6 ಜ್ಞಾನೋಕ್ತಿಗಳು 15:6ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು; ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು.
- Matthew 6:33 ಮತ್ತಾಯನು 6:33ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
- Galatians 3:1–4 ಗಲಾತ್ಯದವರಿಗೆ 3:1–4ಓ ಬುದ್ಧಿಯಿಲ್ಲದ ಗಲಾತ್ಯದವರೇ, ಸತ್ಯಕ್ಕೆ ವಿಧೇಯರಾಗದಂತೆ ನಿಮ್ಮನ್ನು ಯಾರು ಮರುಳುಗೊಳಿಸಿದರು? ಯೇಸು ಕ್ರಿಸ್ತನು ಶಿಲುಬೆಗೆ ಹಾಕಿಸಿಕೊಂಡವನಾಗಿ ನಿಮ್ಮ ಕಣ್ಣೆದುರಿನಲ್ಲಿ ಸ್ಪಷ್ಟವಾಗಿ ವರ್ಣಿಸಲ್ಪಟ್ಟನಲ್ಲವೇ? ಒಂದು ಸಂಗತಿಯನ್ನು ಮಾತ್ರ ನಿಮ್ಮಿಂದ ತಿಳುಕೊಳ್ಳಬೇಕೆಂದಿದ್ದೇನೆ. ನೀವು ಆತ್ಮನನ್ನು ಹೊಂದಿದ್ದು ನ್ಯಾಯಪ್ರಮಾಣದ ಕ್ರಿಯೆಗಳಿಂದಲೋ? ಇಲ್ಲವೆ ಕೇಳಿ ನಂಬಿದ್ದ ರಿಂದಲೋ? ನೀವು ಇಷ್ಟು ಬುದ್ಧಿಯಿಲ್ಲ ದವರಾಗಿದ್ದೀರಾ? ಆತ್ಮನಿಗನುಸಾರವಾಗಿ ಪ್ರಾರಂಭಿಸಿ ಈಗ ಶಾರೀರಿಕ ರೀತಿಯಲ್ಲಿ ಪರಿಪೂರ್ಣರಾಗಬೇಕೆಂದಿ ದ್ದೀರಾ? ಹಾಗಾದರೆ ನೀವು ಅಷ್ಟು ಬಾಧೆಗಳನ್ನು ಅನುಭವಿಸಿದ್ದು ವ್ಯರ್ಥವಾಯಿತೋ? ವ್ಯರ್ಥವಾಯಿ ತೇನೋ?
- Romans 16:17–18 ರೋಮಾಪುರದವರಿಗೆ 16:17–18ಸಹೋದರರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟು ಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿಹೋಗಿರಿ ಎಂದು ನಾನು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ. ಅಂಥವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿ ಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪ ಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.
- 2 Corinthians 11:3–4 2 ಕೊರಿಂಥದವರಿಗೆ 11:3–4ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಹೇಗೆ ಮೋಸ ಹೋದಳೋ ಹಾಗೆಯೇ ನಿಮ್ಮ ಮನಸ್ಸುಗಳು ಕ್ರಿಸ್ತನ ವಿಷಯದಲ್ಲಿರಬೇಕಾದ ಸರಳತೆಯನ್ನು ಬಿಟ್ಟು ಕೆಟ್ಟು ಹೋದೀತೆಂದು ನನಗೆ ಭಯವುಂಟು. ಯಾಕಂದರೆ ನಾವು ಸಾರದಿದ್ದ ಬೇರೊಬ್ಬ ಯೇಸುವನ್ನು ನಿಮ್ಮ ಬಳಿಗೆ ಬರುವವನು ಪ್ರಕಟಿಸುವಾಗಲೂ ನೀವು ಹೊಂದದೆ ಇದ್ದ ಬೇರೊಂದು ಆತ್ಮವನ್ನು ಹೊಂದುವಾಗಲೂ ಅಂಗೀಕರಿಸದಿದ್ದ ಬೇರೊಂದು ಸುವಾರ್ತೆಯನ್ನು ಸ್ವೀಕರಿಸುವಾಗಲೂ ನೀವು ಚೆನ್ನಾಗಿ ಸಹಿಸಿಕೊಳ್ಳು ತ್ತಿದ್ದೀರಿ.
- Galatians 1:8–9 ಗಲಾತ್ಯದವರಿಗೆ 1:8–9ಆದರೂ ನಾವು ನಿಮಗೆ ಸಾರಿದ ಸುವಾರ್ತೆಯಲ್ಲದೆ ಬೇರೆ ಸುವಾರ್ತೆಯನ್ನು ನಾವೇ ಆಗಲಿ ಪರಲೋಕದಿಂದ ಬಂದ ದೂತನೇ ಆಗಲಿ ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ. ನೀವು ಸ್ವೀಕರಿಸಿದ ಸುವಾರ್ತೆಯನ್ನಲ್ಲದೆ ಯಾವನಾದರೂ ಬೇರೆ ಸುವಾರ್ತೆಯನ್ನು ನಿಮಗೆ ಸಾರಿದರೆ ಅವನು ಶಾಪಗ್ರಸ್ತನಾಗಲಿ ಎಂದು ನಾವು ಮೊದಲು ಹೇಳಿ ದಂತೆಯೇ ಈಗಲೂ ನಾನು ತಿರಿಗಿ ಹೇಳುತ್ತೇನೆ.
- 2 Corinthians 11:13–15 2 ಕೊರಿಂಥದವರಿಗೆ 11:13–15ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ. ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ಮಾರ್ಪಡಿಸಿಕೊಳ್ಳುವದು ದೊಡ್ಡ ದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.