Proverbs · chapter 28 · verse 12
Proverbs 28:12 in Kannada
ನೀತಿವಂತರು ಉಲ್ಲಾಸಿಸಿ ದರೆ ದೊಡ್ಡ ಘನತೆ ಇರುವದು; ದುಷ್ಟರಿಗೆ ಏಳಿಗೆ ಯಾದರೆ ಮನುಷ್ಯನು ಅಡಗಿಕೊಳ್ಳುತ್ತಾನೆ.
Neetivantaru ullaasisi dare dodda ghanate iruvadu; dushtarige elige yaadare manushyanu adagikolluttaane.
Proverbs 28:12 in English
- King James Version (KJV)
- When righteous [men] do rejoice, [there is] great glory: but when the wicked rise, a man is hidden.
- World English Bible (WEB)
- When the righteous triumph, there is great glory; but when the wicked rise, men hide themselves.
- American Standard Version (ASV)
- When the righteous triumph, there is great glory; But when the wicked rise, men hide themselves.
- Bible in Basic English (BBE)
- When the upright do well, there is great glory; but when evil-doers are lifted up, men do not let themselves be seen.
- Darby Translation (DBY)
- When the righteous triumph, there is great glory; but when the wicked rise, men conceal themselves.
- Webster's Bible (WBS)
- When righteous [men] rejoice, [there is] great glory: but when the wicked rise, a man is hidden.
- Young's Literal Translation (YLT)
- In the exulting of the righteous the glory [is] abundant, And in the rising of the wicked man is apprehensive.
Read in context
- 10ದುರ್ಮಾರ್ಗದಲ್ಲಿ ನೀತಿವಂತರನ್ನು ದಾರಿತಪ್ಪಿಸು ವವನು ತಾನೇ ತನ್ನ ಸ್ವಂತ ಕುಣಿಯೊಳಕ್ಕೆ ಬೀಳುವನು; ಯಥಾರ್ಥವಂತರಿಗಾದರೋ ಒಳ್ಳೆಯವುಗಳು ಸೊತ್ತಾ ಗುವವು.
- 11ತನ್ನ ಸ್ವಂತ ಅಭಿಪ್ರಾಯದಲ್ಲಿ ಐಶ್ವರ್ಯ ವಂತನು ಜ್ಞಾನಿಯಾಗಿದ್ದಾನೆ; ವಿವೇಕಿಯಾದ ಬಡವನು ಅವನನ್ನು ಪರೀಕ್ಷಿಸುತ್ತಾನೆ.
- 12ನೀತಿವಂತರು ಉಲ್ಲಾಸಿಸಿ ದರೆ ದೊಡ್ಡ ಘನತೆ ಇರುವದು; ದುಷ್ಟರಿಗೆ ಏಳಿಗೆ ಯಾದರೆ ಮನುಷ್ಯನು ಅಡಗಿಕೊಳ್ಳುತ್ತಾನೆ.
- 13ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು.
- 14ಯಾವಾಗಲೂ ಭಯದಿಂದ ಇರು ವವನು ಧನ್ಯನು; ತನ್ನ ಹೃದಯವನ್ನು ಕಠಿಣಪಡಿಸಿ ಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.
Cross references
- Proverbs 29:2 ಜ್ಞಾನೋಕ್ತಿಗಳು 29:2ನೀತಿವಂತರು ಅಧಿಕಾರದಲ್ಲಿ ದ್ದಾಗ ಜನರು ಹರ್ಷಿಸುತ್ತಾರೆ; ದುಷ್ಟನು ಆಳಿದರೆ ಜನರು ಶೋಕಿಸುತ್ತಾರೆ.
- Proverbs 11:10 ಜ್ಞಾನೋಕ್ತಿಗಳು 11:10ನೀತಿವಂತರು ಚೆನ್ನಾಗಿದ್ದರೆ ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ ಆರ್ಭಟವಿರು ತ್ತದೆ.
- Proverbs 28:28 ಜ್ಞಾನೋಕ್ತಿಗಳು 28:28ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ. ಅವರು ನಾಶ ವಾದರೆ ನೀತಿವಂತರು ವೃದ್ಧಿಯಾಗುತ್ತಾರೆ.
- Esther 8:15–17 ಎಸ್ತೇರಳು 8:15–17ಮೊರ್ದೆಕೈ ನೀಲ ಶುಭ್ರವಾದ ರಾಜವಸ್ತ್ರವನ್ನು ಧರಿಸಿಕೊಂಡು ಬಂಗಾರದ ದೊಡ್ಡ ಕಿರೀಟವನ್ನು ಇಟ್ಟು ಕೊಂಡು ರಕ್ತವರ್ಣವುಳ್ಳ ನಯವಾದ ವಸ್ತ್ರ ಧರಿಸಿ ಕೊಂಡು ಅರಸನ ಸಮ್ಮುಖದಿಂದ ಹೊರಟು ಹೋದನು. ಆಗ ಶೂಷನ್ ಪಟ್ಟಣವು ಸಂಭ್ರಮವೂ ಸಂತೋಷವೂ ಉಳ್ಳದ್ದಾಗಿತ್ತು. ಯೆಹೂದ್ಯರಿಗೆ ಬೆಳಕೂ ಸಂತೋಷವೂ ಆನಂದವೂ ಘನವೂ ಉಂಟಾ ಗಿದ್ದವು.ಪ್ರತಿ ಪ್ರಾಂತ್ಯದಲ್ಲಿಯೂ ಪ್ರತಿ ಪಟ್ಟಣ ದಲ್ಲಿಯೂ ಅರಸನ ಮಾತೂ ಅವನ ಆಜ್ಞೆಯೂ ಎಲ್ಲಿಗೆ ಬಂತೋ ಅಲ್ಲಿ ಯೆಹೂದ್ಯರಿಗೆ ಸಂತೋಷವೂ ಆನಂದವೂ ಹಬ್ಬವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಆ ದೇಶದ ಅನೇಕ ಜನರು ಯೆಹೂದ್ಯ ರಾದರು. ಯಾಕಂದರೆ ಯೆಹೂದ್ಯರ ಭಯವು ಅವರ ಮೇಲೆ ಇತ್ತು. ಪ್ರತಿ ಪ್ರಾಂತ್ಯದಲ್ಲಿಯೂ ಪ್ರತಿ ಪಟ್ಟಣ ದಲ್ಲಿಯೂ ಅರಸನ ಮಾತೂ ಅವನ ಆಜ್ಞೆಯೂ ಎಲ್ಲಿಗೆ ಬಂತೋ ಅಲ್ಲಿ ಯೆಹೂದ್ಯರಿಗೆ ಸಂತೋಷವೂ ಆನಂದವೂ ಹಬ್ಬವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಆ ದೇಶದ ಅನೇಕ ಜನರು ಯೆಹೂದ್ಯ ರಾದರು. ಯಾಕಂದರೆ ಯೆಹೂದ್ಯರ ಭಯವು ಅವರ ಮೇಲೆ ಇತ್ತು.
- Job 29:11–20 ಯೋಬನು 29:11–20ಕೇಳುವ ಕಿವಿ ನನ್ನನ್ನು ಧನ್ಯನೆಂದು ಹರಸಿತು; ನೋಡುವ ಕಣ್ಣು ನನಗೆ ಸಾಕ್ಷಿ ಕೊಡುತ್ತಿತ್ತು. ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು. ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು. ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು. ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು. ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು. ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು. ನನ್ನ ಗೂಡಿನಲ್ಲಿ ನಾನು ಸಾಯುವೆನು, ಮರಳಿ ನಂತೆ ನನ್ನ ದಿವಸಗಳನ್ನು ಹೆಚ್ಚಿಸುವೆನು ಅಂದೆನು. ನನ್ನ ಬೇರು ನೀರಿನ ಬಳಿಯಲ್ಲಿ ಹಬ್ಬಿತ್ತು--ನನ್ನ ಕೊಂಬೆಯ ಮೇಲೆ ಮಂಜು ಉಳುಕೊಳ್ಳುತ್ತಾ ಇತ್ತು. ನನ್ನ ಘನವು ನನ್ನಲ್ಲಿ ಹೊಸದಾಗಿತ್ತು; ನನ್ನ ಬಿಲ್ಲು ನನ್ನ ಕೈಯಲ್ಲಿ ಹೊಸದಾಗಿತ್ತು.
- Hebrews 11:37–38 ಇಬ್ರಿಯರಿಗೆ 11:37–38ಕೆಲವರನ್ನು ಕಲ್ಲೆಸೆ ದರು; ಕೆಲವರನ್ನು ಗರಗಸದಿಂದ ಕೊಯ್ದುಕೊಂದರು. ಕೆಲವರನ್ನು ಪರಿಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು; ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮ ಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. ಇಂಥವರಿಗೆ ಈ ಲೋಕವು ಯೋಗ್ಯವಾದದ್ದಲ್ಲ; ಅವರು ಭೂಮಿಯ ಕಾಡು ಬೆಟ್ಟ ಗವಿ ಕುಣಿಗಳಲ್ಲಿ ಅಲೆಯುವವರಾಗಿದ್ದರು.
- Jeremiah 5:1 ಯೆರೆಮೀಯ 5:1ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನ್ಯಾಯವನ್ನು ಮಾಡುವವನೂ ಸತ್ಯವನ್ನು ಹುಡುಕುವವನೂ ನಿಮಗೆ ಒಬ್ಬನಾದರೂ ಸಿಕ್ಕುವನೋ? ಅವಳ ವಿಶಾಲ ಸ್ಥಳಗಳಲ್ಲಿ ನೋಡಿ ತಿಳಿದು ಹುಡುಕಿರಿ. ಸಿಕ್ಕಿದರೆ ಅವಳಿಗೆ ಮನ್ನಿಸುವೆನು.
- 1 Kings 19:3 1 ಅರಸುಗಳು 19:3ಅವನು ಅದನ್ನು ಕೇಳಿ ಎದ್ದು ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ ಅಲ್ಲಿ ತನ್ನ ಸೇವಕನನ್ನು ಬಿಟ್ಟನು.
- Luke 19:37–38 ಲೂಕನು 19:37–38ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ-- ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.
- 1 Chronicles 16:7–36 1 ಪೂರ್ವಕಾಲವೃತ್ತಾಂತ 16:7–36ಆಗ ಅದೇ ದಿವಸದಲ್ಲಿ ಕರ್ತನನ್ನು ಕೊಂಡಾಡುವದಕ್ಕೆ ದಾವೀದನು ಮೊದಲು ಆಸಾಫನಿಗೂ ಅವನ ಸಹೋದರರಿಗೂ ಈ ಸಂಗೀತವನ್ನು ಕೊಟ್ಟನು;-- ಕರ್ತನನ್ನು ಕೊಂಡಾ ಡಿರಿ, ಆತನ ಹೆಸರನ್ನು ಕರೆಯಿರಿ; ಜನಗಳಲ್ಲಿ ಆತನ ಕ್ರಿಯೆಗಳನ್ನು ತಿಳಿಯುವಂತೆ ಮಾಡಿರಿ. ಆತನಿಗೆ ಹಾಡಿರಿ, ಆತನನ್ನು ಕೀರ್ತಿಸಿರಿ; ಆತನ ಅದ್ಭುತಗಳ ನ್ನೆಲ್ಲಾ ಧ್ಯಾನಿಸಿರಿ. ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ. ಕರ್ತನನ್ನು ಹುಡುಕುವವರ ಹೃದ ಯವು ಸಂತೋಷಿಸಲಿ. ಕರ್ತನನ್ನೂ ಆತನ ಬಲ ವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾ ಗಲೂ ಹುಡುಕಿರಿ. ಆತನು ಮಾಡಿದ ಅದ್ಭುತ ಗಳನ್ನೂ ಮಹತ್ಕಾರ್ಯಗಳನ್ನು ಆತನ ನ್ಯಾಯನಿರ್ಣ ಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ. ಆತನ ಸೇವ ಕನಾದ ಇಸ್ರಾಯೇಲಿನ ಸಂತಾನವೇ, ಆತನು ಆದು ಕೊಂಡ ಯಾಕೋಬನ ಮಕ್ಕಳೇ, ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ. ಆತನ ಒಡಂಬಡಿಕೆ ಯನ್ನು ಸಾವಿರ ತಲಾಂತರಗಳಿಗೆ ಆತನು ಆಜ್ಞಾಪಿ ಸಿದ ಮಾತನ್ನು ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸಾಕನಿಗೆ ಇಟ್ಟ ಆಣೆಯನ್ನು ಇದನ್ನು ನಿತ್ಯವೂ ಜ್ಞಾಪಕಮಾಡಿಕೊಳ್ಳಿರಿ. ಅದನ್ನು ಯಾಕೋಬನಿಗೆ ನೇಮಕವಾಗಿಯೂ ಇಸ್ರಾಯೇಲಿಗೆ ನಿತ್ಯ ಒಡಂಬಡಿಕೆಯಾಗಿಯೂ ಸ್ಥಾಪಿಸಿ ಹೇಳಿದ್ದೇನಂದರೆ--ನಿನಗೆ ಕಾನಾನ್ ದೇಶವನ್ನು ನಿಮ್ಮ ಬಾಧ್ಯ ತೆಯ ಪಾಲಾಗಿ ಕೊಡುವೆನು. ಆಗ ನೀವು ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾಗಿಯೂ ಅದರಲ್ಲಿ ಇದ್ದಿರಿ. ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಮತ್ತೊಂದಕ್ಕೂ ಹೋಗುತ್ತಿದ್ದರು. ಆತನು ಯಾರಿಂದಲೂ ಅವರಿಗೆ ಅನ್ಯಾಯ ಮಾಡ ಗೊಡಿಸಲಿಲ್ಲ; ಹೌದು, ಅವರಿಗೋಸ್ಕರ ಅರಸುಗಳನ್ನು ಗದರಿಸಿದನು. ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ; ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ. ಸಮಸ್ತ ಭೂಮಿಯೇ, ಕರ್ತನಿಗೆ ಹಾಡಿರಿ; ಆತನ ರಕ್ಷಣೆಯನ್ನು ದಿನ ದಿನಕ್ಕೆ ಸಾರಿ ಹೇಳಿರಿ. ಜನಾಂಗಗಳಲ್ಲಿ ಆತನ ಘನವನ್ನೂ ಎಲ್ಲಾ ಜನಗಳಲ್ಲಿ ಆತನ ಅದ್ಭುತಗಳನ್ನೂ ಪ್ರಕಟಿಸಿರಿ. ಯಾಕಂದರೆ ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸಲ್ಪಡತಕ್ಕವನೂ; ಆತನು ಎಲ್ಲಾ ದೇವರುಗಳ ಮೇಲೆ ಭಯಂಕರನೂ. ಯಾಕಂದರೆ ಜನಗಳ ದೇವರುಗಳೆಲ್ಲಾ ಬೊಂಬೆಗಳಾಗಿವೆ. ಆದರೆ ಕರ್ತನು ಆಕಾಶಗಳನ್ನು ಉಂಟುಮಾಡಿದನು. ಮಹಿ ಮೆಯೂ ಪ್ರಭೆಯೂ ಆತನ ಮುಂದೆ ಅವೆ. ಬಲವೂ ಆನಂದವೂ ಆತನ ಸ್ಥಳದಲ್ಲಿ ಅವೆ. ಜನಸಂತತಿಗಳೇ, ಕರ್ತನಿಗೆ ಬಲ ಪ್ರಭಾವವನ್ನೂ ತನ್ನಿರಿ, ಕರ್ತನಿಗೆ ಆತನ ಹೆಸರಿನ ಘನವನ್ನೂ ತನ್ನಿರಿ; ಅರ್ಪಣೆಯನ್ನು ತೆಗೆದುಕೊಂಡು ಆತನ ಮುಂದೆ ಬನ್ನಿರಿ. ಪರಿಶುದ್ಧತ್ವ ವೆಂಬ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ. ಸಮಸ್ತ ಭೂಮಿಯೇ, ಆತನ ಮುಂದೆ ನಡುಗು. ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆಕಾಶ ಗಳು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ. ಕರ್ತನು ಆಳುತ್ತಾನೆಂದು ಜನಾಂಗಗಳಲ್ಲಿ ಹೇಳಲಿ. ಸಮುದ್ರವೂ ಅದರ ಪರಿಪೂರ್ಣತ್ವವೂ ಘೋಷಿಸಲಿ; ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹ ಪಡಲಿ. ಆಗ ಕರ್ತನ ಮುಂದೆಯೇ ಅಡವಿಯ ಮರಗಳೆಲ್ಲಾ ಉತ್ಸಾಹ ಧ್ವನಿಮಾಡಲಿ; ಆತನು ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ. ಕರ್ತನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು;ಆತನ ಕೃಪೆಯು ಯುಗಯುಗಕ್ಕೂ ಅವೆ. ನಮ್ಮ ರಕ್ಷಣೆಯ ದೇವರೇ, ನಾವು ನಿನ್ನ ಪರಿಶುದ್ಧ ಹೆಸ ರನ್ನು ಕೊಂಡಾಡಿ ನಿನ್ನ ಸ್ತೋತ್ರದಲ್ಲಿ ಹೆಚ್ಚಳ ಪಡುವ ಹಾಗೆ ನಮ್ಮನ್ನು ರಕ್ಷಿಸು; ಜನಾಂಗಗಳೊಳಗಿಂದ ನಮ್ಮನ್ನು ತೆಗೆದು ಕೂಡಿಸು. ಇಸ್ರಾಯೇಲಿನ ಕರ್ತ ನಾದ ದೇವರು ಯುಗಯುಗಾಂತರಗಳಲ್ಲಿ ಸ್ತುತಿ ಸಲ್ಪಡಲಿ ಎಂದು ಹೇಳಿರಿ. ಸಮಸ್ತ ಜನರು ಆಮೆನ್ ಎಂದು ಹೇಳಿ ಕರ್ತನನ್ನು ಸ್ತುತಿಸಿದರು.
- 1 Kings 18:13 1 ಅರಸುಗಳು 18:13ಈಜೆಬೆಲಳು ಕರ್ತನ ಪ್ರವಾದಿಗಳನ್ನು ಕೊಂದುಹಾಕಿದಾಗ ನಾನು ಕರ್ತನ ಪ್ರವಾದಿಗಳಲ್ಲಿ ನೂರು ಮಂದಿಯನ್ನು ಐವತ್ತು ಐವತ್ತು ಮಂದಿಯಾಗಿ ಗವಿಯಲ್ಲಿ ಬಚ್ಚಿಟ್ಟು ಅವ ರಿಗೆ ಆಹಾರವನ್ನೂ ನೀರನ್ನೂ ಕೊಟ್ಟು ಸಂರಕ್ಷಿಸಿದ್ದು ನನ್ನ ಯಜಮಾನನಾದ ನಿನಗೆ ಹೇಳಲ್ಪಟ್ಟದ್ದಿಲ್ಲವೋ?
- 1 Samuel 24:11 1 ಸಮುವೇಲನು 24:11ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.