Proverbs · chapter 30 · verse 20
Proverbs 30:20 in Kannada
ಜಾರಸ್ತ್ರೀಯ ನಡತೆಯು ಹಾಗೆಯೇ ಇದೆ; ಅವಳು ತಿಂದು ತನ್ನ ಬಾಯನ್ನು ಒರಸಿಕೊಂಡು--ನಾನು ಯಾವ ಕೆಟ್ಟದ್ದನ್ನೂ ಮಾಡಲಿಲ್ಲ ಎಂದು ಹೇಳುತ್ತಾಳೆ.
Jaarastreeya nadateyu haageye ide; avalu tindu tanna baayannu orasikondu--naanu yaava kettaddannoo maadalilla endu heluttaale.
Proverbs 30:20 in English
- King James Version (KJV)
- Such [is] the way of an adulterous woman; she eateth, and wipeth her mouth, and saith, I have done no wickedness.
- World English Bible (WEB)
- “So is the way of an adulterous woman: She eats and wipes her mouth, and says, ‘I have done nothing wrong.’
- American Standard Version (ASV)
- So is the way of an adulterous woman; She eateth, and wipeth her mouth, And saith, I have done no wickedness.
- Bible in Basic English (BBE)
- This is the way of a false wife; she takes food, and, cleaning her mouth, says, I have done no wrong.
- Darby Translation (DBY)
- Such is the way of an adulterous woman: she eateth, and wipeth her mouth, and saith, I have done no wickedness.
- Webster's Bible (WBS)
- Such [is] the way of an adulterous woman; she eateth, and wipeth her mouth, and saith, I have done no wickedness.
- Young's Literal Translation (YLT)
- So — the way of an adulterous woman, She hath eaten and hath wiped her mouth, And hath said, 'I have not done iniquity.'
Read in context
- 18ನನಗೆ ಆಶ್ಚರ್ಯವಾದ ಮೂರು ಸಂಗತಿಗ ಳಿವೆ. ಹೌದು, ನಾನು ಅರಿಯದಿರುವ ನಾಲ್ಕು ಸಂಗ ತಿಗಳಿವೆ--
- 19ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ; ಸಮುದ್ರದಲ್ಲಿ ಹಡಗಿನ ಮಾರ್ಗ, ಕನ್ಯೆಯೊಂದಿಗೆ ಮನುಷ್ಯನ ಮಾರ್ಗ.
- 20ಜಾರಸ್ತ್ರೀಯ ನಡತೆಯು ಹಾಗೆಯೇ ಇದೆ; ಅವಳು ತಿಂದು ತನ್ನ ಬಾಯನ್ನು ಒರಸಿಕೊಂಡು--ನಾನು ಯಾವ ಕೆಟ್ಟದ್ದನ್ನೂ ಮಾಡಲಿಲ್ಲ ಎಂದು ಹೇಳುತ್ತಾಳೆ.
- 21ಭೂಮಿಯು ಮೂರರಿಂದ ಕಳವಳಗೊಳ್ಳುತ್ತದೆ; ನಾಲ್ವರನ್ನು ಅದು ತಾಳಲಾರದು
- 22ಆಳುವ ದಾಸನು, ಹೊಟ್ಟೆತುಂಬಿದ ನೀಚನು,
Cross references
- Proverbs 7:13–23 ಜ್ಞಾನೋಕ್ತಿಗಳು 7:13–23ಹೀಗೆ ಅವಳು ಅವ ನನ್ನು--ಹಿಡುಕೊಂಡು ಮುದ್ದಿಟ್ಟು ನಾಚಿಕೆಯಿಲ್ಲದೆ --ನನ್ನಲ್ಲಿ ಸಮಾಧಾನ ಅರ್ಪಣೆಗಳು ಇವೆ; ಈ ದಿವಸ ನನ್ನ ಪ್ರಮಾಣಗಳನ್ನು ನಾನು ಸಲ್ಲಿಸಿದ್ದೇನೆ. ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ತ್ರೀವ್ರವಾಗಿ ಹುಡು ಕುವದಕ್ಕೆ ಬಂದು ನಿನ್ನನ್ನು ಕಂಡುಕೊಂಡಿದ್ದೇನೆ. ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ. ರಕ್ತಬೋಳ ಅಗರು ಲವಂಗ ಚೆಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆ ಗೊಳಿಸಿದ್ದೇನೆ. ಬಾ, ಬೆಳಗಿನ ವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಳ್ಳುವ ಕಾಮ ವಿಲಾಸಗಳಿಂದ ನಮ್ಮನ್ನು ನಾವು ಆದರಿಸಿಕೊಳ್ಳೋಣ. ಯಜಮಾ ನನು ಮನೆಯಲ್ಲಿ ಇಲ್ಲ; ಅವನು ದೀರ್ಘದ ಪ್ರಯಾಣ ಕೈಕೊಂಡಿದ್ದಾನೆ. ಅವನು ತನ್ನೊಂದಿಗೆ ಹಣದ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ; ನೇಮಕ ವಾದ ದಿನದಲ್ಲಿಯೇ ಅವನು ಈ ಮನೆಗೆ ಬರುವವನಾ ಗಿದ್ದಾನೆ ಎಂದು ಬಹಳವಾದ ತನ್ನ ಸವಿಮಾತಿನಿಂದ ಅವಳು ಅವನನ್ನು ಒಪ್ಪಿಸಿ ತನ್ನ ತುಟಿಗಳ ಮುಖಸ್ತುತಿ ಯಿಂದ ಅವನನ್ನು ಬಲಾತ್ಕರಿಸಿದಳು. ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವ ವರೆಗೆ ತನ್ನ ಪ್ರಾಣಕ್ಕಾಗಿ ಬಲೆಯನ್ನು ಒಡ್ಡಿದ್ದಾನೆಂದು ತಿಳಿಯದೆ ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
- Proverbs 5:6 ಜ್ಞಾನೋಕ್ತಿಗಳು 5:6ಅವುಗಳನ್ನು ನೀನು ತಿಳಿದುಕೊಳ್ಳಲಾರದಂತೆ ಜೀವದ ಮಾರ್ಗವನ್ನು ನೀನು ವಿವೇಚಿಸಲಾರದಷ್ಟು ಅವಳ ಮಾರ್ಗಗಳು ಚಂಚಲವಾಗಿವೆ.
- Numbers 5:11–30 ಅರಣ್ಯಕಾಂಡ 5:11–30ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಯಾವನ ಹೆಂಡತಿಯಾದರೂ ದಾರಿತಪ್ಪಿ ಅವನಿಗೆ ವಿರೋಧವಾದ ಕೃತ್ಯವನ್ನು ಮಾಡಿ ದರೆ ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬದು ಗುಪ್ತವಾಗಿ ದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ ಅವಳು ಹಿಡಿಯಲ್ಪಡದಿದ್ದರೆ, ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ, ಆ ಮನು ಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತಂದು ಅವಳಿಗೋಸ್ಕರ ಕಾಣಿಕೆಯಾಗಿ ಏಫದ ಹತ್ತನೇ ಪಾಲನ್ನು ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕ ಬಾರದು; ಅದು ರೋಷದ ಕಾಣಿಕೆಯೂ ಅಪರಾಧ ವನ್ನು ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ. ಯಾಜಕನು ಅವಳನ್ನು ಸವಿಾಪಕ್ಕೆ ಕರೆದು ಕರ್ತನ ಸಮ್ಮುಖದಲ್ಲಿ ನಿಲ್ಲಿಸಬೇಕು. ಆಗ ಯಾಜಕನು ಪವಿತ್ರ ವಾದ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದು ಕೊಳ್ಳಬೇಕು; ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತಕ್ಕೊಂಡು ಆ ನೀರಿನೊಳಗೆ ಹಾಕಬೇಕು. ಯಾಜಕನು ಆ ಸ್ತ್ರೀಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಿ ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು ಅವಳ ಕೈಗಳಲ್ಲಿ ರೋಷದ ಕಾಣಿಕೆಯಾಗಿರುವ ಜ್ಞಾಪಕದ ಕಾಣಿಕೆಯನ್ನು ಇಡಬೇಕು. ಆದರೆ ಯಾಜಕನ ಕೈಯಲ್ಲಿ ಶಪಿಸುವಂತ ಕಹಿಯಾದ ನೀರು ಇರಬೇಕು. ಆಗ ಯಾಜಕನು ಅವಳನ್ನು ಪ್ರಮಾಣಮಾಡಿಸಿ ಹೇಳಬೇಕಾದದ್ದು: ಒಬ್ಬ ಮನುಷ್ಯನು ನಿನ್ನ ಸಂಗಡ ಮಲಗದೆ ನೀನು ಅಪವಿತ್ರಳಾಗಿ ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡದೆ ಇದ್ದರೆ ಶಪಿಸುವ ಈ ಕಹಿಯಾದ ನೀರಿಗೆ ನಿರಪರಾಧಿಯಾಗು. ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ ಯಾಜಕನು ಶಾಪದ ಪ್ರಮಾಣ ದಿಂದ ಆ ಸ್ತ್ರೀಗೆ ಹೇಳಬೇಕಾದದ್ದೇನಂದರೆ--ಕರ್ತನು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವದರಿಂದ ಕರ್ತನು ನಿನ್ನನ್ನು ನಿನ್ನ ಜನರೊಳಗೆ ಶಾಪವನ್ನಾಗಿಯೂ ದೂಷಣೆಯನ್ನಾಗಿಯೂ ಇಡಲಿ. ಶಪಿಸುವಂಥ ಈ ನೀರು ಹೊಟ್ಟೆಯನ್ನು ಉಬ್ಬಿಸುವದಕ್ಕೂ ತೊಡೆಯನ್ನು ಕ್ಷೀಣಿಸುವದಕ್ಕೂ ನಿನ್ನ ಕರುಳುಗಳ ಒಳಗೆ ಹೋಗು ವದು; ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣದಿಂದ ಪ್ರಮಾಣ ಮಾಡಿಸಬೇಕು. ಅದಕ್ಕೆ ಆ ಸ್ತ್ರೀಯು--ಹಾಗೆಯೇ ಆಗಲಿ ಅನ್ನಬೇಕು. ಯಾಜ ಕನು ಈ ಶಾಪವನ್ನು ಪುಸ್ತಕದಲ್ಲಿ ಬರೆದು, ಕಹಿಯಾದ ನೀರಿನಿಂದ ಅಳಿಸಿ, ಆ ಸ್ತ್ರೀಗೆ ಶಪಿಸುವಂತ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವದು. ಯಾಜಕನು ಆ ಸ್ತ್ರೀಯ ಕೈಯಿಂದ ರೋಷದ ಕಾಣಿಕೆಯನ್ನು ತಕ್ಕೊಂಡು ಆ ಕಾಣಿಕೆಯನ್ನು ಕರ್ತನ ಸಮ್ಮುಖದಲ್ಲಿ ಅಲ್ಲಾಡಿಸಿ ಬಲಿ ಪೀಠದ ಸವಿಾಪಕ್ಕೆ ತರಬೇಕು. ಆಗ ಯಾಜಕನು ಕಾಣಿಕೆಯಿಂದ ಜ್ಞಾಪಕಭಾಗವಾಗಿ ಒಂದು ಹಿಡಿ ತಕ್ಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಸ್ತ್ರೀಗೆ ಆ ನೀರನ್ನು ಕುಡಿಸಬೇಕು. ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು. ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ ಅವಳು ನಿರಪರಾಧಿ ಯಾಗಿದ್ದು ಸಂತಾನವನ್ನು ಪಡೆಯುವಳು. ರೋಷಕ್ಕೆ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ಅಥವಾ ಪುರುಷನ ಮೇಲೆ ರೋಷದ ಆತ್ಮ ಬಂದು ಅವನು ತನ್ನ ಹೆಂಡತಿಯ ಮೇಲೆ ರೋಷಗೊಂಡಿದ್ದರೆ ಅವನು ತನ್ನ ಹೆಂಡತಿಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಲಿ; ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆ ಪ್ರಕಾರ ಮಾಡುವನು.ಆಗ ಗಂಡನು ನಿರಪರಾಧಿ ಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ.