Proverbs · chapter 4 · verse 24
Proverbs 4:24 in Kannada
ವಕ್ರಬಾಯಿ ಯನ್ನು ನಿನ್ನಿಂದ ತೆಗೆದುಬಿಡು; ಕೆಟ್ಟ ತುಟಿಗಳನ್ನು ನಿನ್ನಿಂದ ದೂರ ಇಡು.
Vakrabaayi yannu ninninda tegedubidu; ketta tutigalannu ninninda doora idu.
Proverbs 4:24 in English
- King James Version (KJV)
- Put away from thee a froward mouth, and perverse lips put far from thee.
- World English Bible (WEB)
- Put away from yourself a perverse mouth. Put corrupt lips far from you.
- American Standard Version (ASV)
- Put away from thee a wayward mouth, And perverse lips put far from thee.
- Bible in Basic English (BBE)
- Put away from you an evil tongue, and let false lips be far from you.
- Darby Translation (DBY)
- Put away from thee perverseness of mouth, and corrupt lips put far from thee.
- Webster's Bible (WBS)
- Put away from thee a froward mouth, and perverse lips put far from thee.
- Young's Literal Translation (YLT)
- Turn aside from thee a froward mouth, And perverse lips put far from thee,
Read in context
- 22ಅವುಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ ಅವರ ದೇಹ ಕ್ಕೆಲ್ಲಾ ಆರೋಗ್ಯವೂ ಆಗಿವೆ.
- 23ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು.
- 24ವಕ್ರಬಾಯಿ ಯನ್ನು ನಿನ್ನಿಂದ ತೆಗೆದುಬಿಡು; ಕೆಟ್ಟ ತುಟಿಗಳನ್ನು ನಿನ್ನಿಂದ ದೂರ ಇಡು.
- 25ನಿನ್ನ ಕಣ್ಣುಗಳು ಮುಂದೆಯೇ ನೋಡಲಿ. ನಿನ್ನ ಕಣ್ಣು ರೆಪ್ಪೆಗಳು ನೆಟ್ಟಗೆ ನಿನ್ನ ಮುಂದೆಯೇ ನೋಡಲಿ.
- 26ನೀನು ನಡೆಯುವ ದಾರಿ ಯನ್ನು ವಿಮರ್ಶಿಸಿ ನೋಡು; ನಿನ್ನ ಎಲ್ಲಾ ಮಾರ್ಗ ಗಳು ಸ್ಥಿರವಾಗಿರಲಿ.ನಿನ್ನ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು.
Cross references
- James 1:26 ಯಾಕೋಬನು 1:26ನಿಮ್ಮಲ್ಲಿ ಭಕ್ತನೆಂದೆ ಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸ ಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜನ ವಾಗಿದೆ.ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆ ಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ.
- Proverbs 8:8 ಜ್ಞಾನೋಕ್ತಿಗಳು 8:8ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.
- Proverbs 8:13 ಜ್ಞಾನೋಕ್ತಿಗಳು 8:13ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ.
- Ephesians 4:25–31 ಎಫೆಸದವರಿಗೆ 4:25–31ಆದ ಕಾರಣ ಸುಳ್ಳಾಡುವದನ್ನು ಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ. ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶ ಕೊಡಲೇಬೇಡಿರಿ. ಕಳವು ಮಾಡುವವನು ಇನ್ನು ಮೇಲೆ ಕಳವು ಮಾಡದೆ ಕೈಯಿಂದ ಯಾವದಾದರೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕೊರತೆಯಲ್ಲಿರುವವರಿಗೆ ಕೊಡು ವದಕ್ಕೆ ಅವನಿಂದಾ ಗುವದು. ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ. ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ; ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ. ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿ ದಂತೆಯೇ ನೀವು ಒಬ್ಬರಿಗೊಬ್ಬರು ಉಪಕಾರಿಗಳಾ ಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವ ರಾಗಿಯೂ ಇರ್ರಿ.
- Proverbs 6:12 ಜ್ಞಾನೋಕ್ತಿಗಳು 6:12ದುಷ್ಟನೂ ಕೆಡುಕನೂ ವಕ್ರಬಾಯಿಂದ ನಡೆದು ಕೊಳ್ಳುವನು.
- James 1:21 ಯಾಕೋಬನು 1:21ಆದಕಾರಣ ಎಲ್ಲಾ ಮಲಿನತೆಯನ್ನೂ ಎಲ್ಲಾ ದುಷ್ಟತನವನ್ನೂ ತೆಗೆದುಹಾಕಿ ಒಳಗೆ ಬೇರೂರಿರುವ ವಾಕ್ಯಕ್ಕೆ ನಮ್ರತೆ ಯಿಂದ ಎಡೆಕೊಡಿರಿ; ಅದು ನಿಮ್ಮ ಆತ್ಮಗಳನ್ನು ರಕ್ಷಿಸು ವದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.
- 1 Peter 2:1 1 ಪೇತ್ರನು 2:1ಆದಕಾರಣ ಎಲ್ಲಾ ಕೆಟ್ಟತನವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೇ ಕಿಚ್ಚನ್ನೂ ಎಲ್ಲಾ ಕೆಟ್ಟ ಮಾತುಗಳನ್ನೂ ವಿಸರ್ಜಿಸಿರಿ.
- Colossians 3:8 ಕೊಲೊಸ್ಸೆಯವರಿಗೆ 3:8ಈಗಲಾದರೋ ಕ್ರೋಧ ಕೋಪ ಮತ್ಸರ ದೇವದೂಷಣೆ ನಿಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.
- Proverbs 17:20 ಜ್ಞಾನೋಕ್ತಿಗಳು 17:20ಮೂರ್ಖ ಹೃದಯವುಳ್ಳವನು ಒಳ್ಳೇದನ್ನು ಪಡೆ ಯನು; ಕೆಟ್ಟನಾಲಿಗೆಯುಳ್ಳವನು ಹಾನಿಗೆ ಬೀಳುವನು.
- 1 Timothy 6:5 1 ತಿಮೊಥೆಯನಿಗೆ 6:5ಇದ್ದಲ್ಲದೆ ಬುದ್ದಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ವ್ಯರ್ಥ ವಾದ ವಿವಾದಗಳು ಉಂಟಾಗುತ್ತವೆ. ಇಂಥವರಿಂದ ದೂರವಾಗಿರ್ರಿ.
- Job 11:14 ಯೋಬನು 11:14ನಿನ್ನ ಕೈಯಲ್ಲಿರುವ ಅಪರಾಧವನ್ನು ದೂರಮಾಡಿ ದುಷ್ಟತನವನ್ನು ನಿನ್ನ ಗುಡಾರಗಳಲ್ಲಿ ವಾಸಮಾಡಗೊಡಿಸದಿದ್ದರೆ
- Ezekiel 18:31 ಯೆಹೆಜ್ಕೇಲನು 18:31ನೀವು ಮಾಡುವ ದುಷ್ಟತ್ವಗಳನ್ನೆಲ್ಲಾ ನಿಮ್ಮಿಂದ ಬಿಟ್ಟುಬಿಡಿರಿ; ಹೊಸ ಹೃದಯವನ್ನೂ ಹೊಸ ಆತ್ಮವನ್ನೂ ನೀವು ಪಡಕೊಳ್ಳಿರಿ; ಯಾಕಂದರೆ ಓ ಇಸ್ರಾಯೇಲಿನ ಮನೆತನದವರೇ, ನೀವು ಸಾಯುವದೇಕೆ?ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ.