Proverbs · chapter 5 · verse 9
Proverbs 5:9 in Kannada
ನೀನು ನಿನ್ನ ಗೌರವವನ್ನು ಬೇರೆಯವರಿಗೂ ನಿನ್ನ ವರುಷ ಗಳನ್ನು ಕ್ರೂರರಿಗೂ ಕೊಡಬೇಡ.
Neenu ninna gauravavannu bereyavarigoo ninna varusha galannu kroorarigoo kodabeda.
Proverbs 5:9 in English
- King James Version (KJV)
- Lest thou give thine honour unto others, and thy years unto the cruel:
- World English Bible (WEB)
- lest you give your honor to others, and your years to the cruel one;
- American Standard Version (ASV)
- Lest thou give thine honor unto others, And thy years unto the cruel;
- Bible in Basic English (BBE)
- For fear that you may give your honour to others, and your wealth to strange men:
- Darby Translation (DBY)
- lest thou give thine honour unto others, and thy years unto the cruel;
- Webster's Bible (WBS)
- Lest thou give thy honor to others, and thy years to the cruel:
- Young's Literal Translation (YLT)
- Lest thou give to others thy honour, And thy years to the fierce,
Read in context
- 7ಆದದರಿಂದ ಓ ಮಕ್ಕಳಿರಾ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಬಾಯಿಯ ಮಾತುಗಳಿಂದ ಹೊರಟುಹೋಗಬೇಡಿರಿ.
- 8ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು. ಅವಳ ಮನೆಯ ಬಾಗಲ ಹತ್ತಿರಕ್ಕೆ ಬಾರದೆ ಇರು.
- 9ನೀನು ನಿನ್ನ ಗೌರವವನ್ನು ಬೇರೆಯವರಿಗೂ ನಿನ್ನ ವರುಷ ಗಳನ್ನು ಕ್ರೂರರಿಗೂ ಕೊಡಬೇಡ.
- 10ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆಯೂ ನಿನ್ನ ಪ್ರಯಾಸಗಳು ಪರನ ಮನೆಯಲ್ಲಿ ಇರದಂತೆಯೂ ಮಾಡು.
- 11ನಿನ್ನ ಮಾಂಸವೂ ದೇಹವೂ ಕ್ಷೀಣಿಸಿದಾಗ ನೀನು ಕೊನೆಯಲ್ಲಿ ಶೋಕಿಸುತ್ತಾ--
Cross references
- Nehemiah 13:26 ನೆಹೆಮೀಯ 13:26ಇಸ್ರಾಯೇಲಿನ ಅರಸನಾದ ಸೊಲೊಮೋನನು ಇವುಗಳಿಂದ ಪಾಪ ಮಾಡಿದ ನಲ್ಲವೇ? ಆದರೆ ಅನೇಕ ಜನಾಂಗಗಳಲ್ಲಿ ಅವನ ಹಾಗೆ ಮತ್ತೊಬ್ಬ ಅರಸನು ಇದ್ದದ್ದಿಲ್ಲ; ಅವನು ತನ್ನ ದೇವರಿಗೆ ಪ್ರಿಯನಾಗಿದ್ದ ಕಾರಣ ದೇವರು ಅವನನ್ನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನನ್ನಾಗಿ ಮಾಡಿ ದನು; ಆದರೂ ಅನ್ಯಸ್ತ್ರೀಯರು ಅವನನ್ನು ಸಹ ಪಾಪ ಮಾಡುವ ಹಾಗೆ ಮಾಡಿದರು.
- Hosea 4:13–14 ಹೋಶೇಯ 4:13–14ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸು ತ್ತಾರೆ; ಗುಡ್ಡಗಳ ಮೇಲೆ ಧೂಪವನ್ನು ಸುಡುತ್ತಾರೆ. ಅಲ್ಲೋನ್, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ಚೆನ್ನಾಗಿರುವದರಿಂದ ಹಾಗೆ ಮಾಡುತ್ತಾರೆ; ಆದದರಿಂದ ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವರು; ನಿಮ್ಮ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವರು. ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವಾಗಲೂ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವಾಗಲೂ ನಾನು ಶಿಕ್ಷಿಸುವದಿಲ್ಲ. ಯಾಕಂದರೆ ಸೂಳೆಯರ ಸಂಗಡ ತಮ್ಮನ್ನು ಬೇರ್ಪಡಿಸಿಕೊಂಡಿ ದ್ದಾರೆ; ಸೂಳೆಯರ ಸಂಗಡ ಬಲಿಅರ್ಪಿಸುತ್ತಾರೆ; ಆದದರಿಂದ ವಿವೇಕವಿಲ್ಲದ ಜನರು ಬಿದ್ದು ಹೋಗು ವರು.
- Genesis 38:23–26 ಆದಿಕಾಂಡ 38:23–26ಆಗ ಯೆಹೂದನು--ನಾವು ನಾಚಿಕೆಗೆ ಒಳಗಾಗದ ಹಾಗೆ ಅವಳು ಅದನ್ನು ತಕ್ಕೊಂಡು ಹೋಗಲಿ; ಇಗೋ, ಈ ಮೇಕೆಯ ಮರಿಯನ್ನು ನಾನು ಕಳುಹಿಸಿ ದೆನು, ಆದರೆ ಆಕೆಯು ನಿನಗೆ ಸಿಕ್ಕಲಿಲ್ಲ ಅಂದನು. ಹೆಚ್ಚುಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ--ನಿನ್ನ ಸೊಸೆಯಾದ ತಾಮಾರಳು ಜಾರತ್ವ ಮಾಡಿದ್ದಾಳೆ; ಜಾರತ್ವದಿಂದ ಗರ್ಭಿಣಿಯಾಗಿ ದ್ದಾಳೆ ಎಂದು ತಿಳಿಸಿದರು. ಆಗ ಯೆಹೂದನು--ಅವಳನ್ನು ಹೊರಗೆ ತನ್ನಿರಿ, ಅವಳು ಸುಡಲ್ಪಡಲಿ ಅಂದನು. ಆಕೆಯನ್ನು ಹೊರಗೆ ತಂದಾಗ ಆಕೆಯು ತನ್ನ ಮಾವನಿಗೆ--ಇವು ಯಾವ ಮನುಷ್ಯನವೋ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದದರಿಂದ ಈ ಮುದ್ರೆಯೂ ಕಡಗಗಳೂ ಕೋಲೂ ಯಾರವೆಂದು ತಿಳಿದುಕೋ ಎಂದು ಕೇಳಿಕೊಂಡಳು. ಆಗ ಯೆಹೂದನು ಅವುಗಳನ್ನು ಗುರುತಿಸಿ--ಆಕೆಯು ನನಗಿಂತ ನೀತಿವಂತಳು, ಯಾಕಂದರೆ ನಾನು ನನ್ನ ಮಗನಾದ ಶೇಲಹನಿಗೆ ಅವಳನ್ನು ಕೊಡಲಿಲ್ಲ ಅಂದನು. ಅವನು ಮತ್ತೆ ಆಕೆಯನ್ನು ಅರಿಯಲಿಲ್ಲ.
- Judges 16:19–21 ನ್ಯಾಯಸ್ಥಾಪಕರು 16:19–21ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆಹೋಗುವಂತೆ ಮಾಡಿ ಒಬ್ಬನನ್ನು ಕರೆದು ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ ಅವನನ್ನು ಬಾಧಿ ಸುವದಕ್ಕೆ ಪ್ರಾರಂಭಿಸಿದಳು. ಆಗ ಅವನ ಶಕ್ತಿ ಅವ ನನ್ನು ಬಿಟ್ಟುಹೋಯಿತು. ಅವಳು--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಕರ್ತನು ತನ್ನನ್ನು ಬಿಟ್ಟು ತೊಲಗಿದ್ದನ್ನು ಅರಿಯದೆ ಬೇರೆ ಸಮಯಗಳಂತೆಯೇನಾನು ಹೊರಟು ಕೊಸರಿಕೊಂಡು ಹೋಗುವೆನು ಅಂದುಕೊಂಡನು. ಆದರೆ ಫಿಲಿಷ್ಟಿ ಯರು ಅವನನ್ನು ಹಿಡಿದು ಅವನ ಕಣ್ಣುಗಳನ್ನು ಕಿತ್ತು ಗಾಜಕ್ಕೆ ಒಯ್ದು ಎರಡು ಹಿತ್ತಾಳೆಯ ಸಂಕೋಲೆಗಳನ್ನು ಹಾಕಿದರು, ಅವನು ಸೆರೆಮನೆಯಲ್ಲಿ ಬೀಸುತ್ತಿದ್ದನು.