Psalms · chapter 102 · verse 20
Psalm 102:20 in Kannada
ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ.
Cheeyoninalli kartana hesaroo yeroosalemi nalli aatana stotravoo saaralpaduva haage.
Psalm 102:20 in English
- King James Version (KJV)
- To hear the groaning of the prisoner; to loose those that are appointed to death;
- World English Bible (WEB)
- to hear the groans of the prisoner, to free those who are condemned to death,
- American Standard Version (ASV)
- To hear the sighing of the prisoner; To loose those that are appointed to death;
- Bible in Basic English (BBE)
- Hearing the cry of the prisoner, making free those for whom death is ordered;
- Darby Translation (DBY)
- To hear the groaning of the prisoner, to loose those that are appointed to die;
- Webster's Bible (WBS)
- To hear the groaning of the prisoner; to loose those that are appointed to death;
- Young's Literal Translation (YLT)
- To hear the groan of the prisoner, To loose sons of death,
Read in context
- 18ಇದು ಮುಂದಿನ ಸಂತತಿಗೋಸ್ಕರ ಬರೆಯಲ್ಪಡುವದು; ಹುಟ್ಟಲಿಕ್ಕಿರುವ ಜನರು ಕರ್ತನನ್ನು ಸ್ತುತಿಸುವರು.
- 19ಜನಾಂಗಗಳೂ ರಾಜ್ಯಗಳೂ ಕರ್ತ ನನ್ನು ಸೇವಿಸುವದಕ್ಕೆ ಒಟ್ಟಾಗಿ ಕೂಡಿ ಬರುವಾಗ
- 20ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ.
- 21ಕರ್ತನು ಸೆರೆಯವರ ನರಳುವಿಕೆಯನ್ನು ಕೇಳುವ ದಕ್ಕೂ ಮರಣಕ್ಕೆ ನೇಮಕವಾದವರನ್ನು ಬಿಡಿಸು ವದಕ್ಕೂ
- 22ತನ್ನ ಪರಿಶುದ್ಧವಾದ ಉನ್ನತ ಸ್ಥಳದಿಂದ ಕಣ್ಣಿಟ್ಟು ಆಕಾಶದಿಂದ ಭೂಮಿಯನ್ನು ನೋಡಿದ್ದಾನೆ.
Cross references
- Psalm 79:11 ಕೀರ್ತನೆಗಳು 79:11ಸೆರೆಯವನ ನಿಟ್ಟುಸಿರು ನಿನ್ನ ಮುಂದೆ ಬರಲಿ--ನಿನ್ನ ಮಹಾ ಶಕ್ತಿಯಿಂದ ಸಾಯುವದಕ್ಕಿರುವವರನ್ನು ಕಾಪಾಡು.
- Psalm 146:7 ಕೀರ್ತನೆಗಳು 146:7ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ ಹಸಿ ದವರಿಗೆ ಆಹಾರ ಕೊಡುವವನೂ ಆತನೇ.
- Isaiah 61:1–3 ಯೆಶಾಯ 61:1–3ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ ಕರ್ತನ ಅಂಗೀಕಾರದ ವರುಷವನ್ನು ಸಾರಿ ಹೇಳುವದಕ್ಕೂ ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧಿ ಮಾಡುವದಕ್ಕೂ ದುಃಖವುಳ್ಳವರೆಲ್ಲರನ್ನು ಆದರಿಸುವದಕ್ಕೂ ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.
- Exodus 3:7 ವಿಮೋಚನಕಾಂಡ 3:7ಆಗ ಕರ್ತನು--ಐಗುಪ್ತದಲ್ಲಿರುವ ನನ್ನ ಜನರ ವ್ಯಥೆಯನ್ನು ನಿಶ್ಚಯವಾಗಿಯೂ ಕಂಡಿದ್ದೇನೆ, ಬಿಟ್ಟೀ ಕೆಲಸಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು.
- 2 Chronicles 33:11–13 2 ಪೂರ್ವಕಾಲವೃತ್ತಾಂತ 33:11–13ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು. ಅವನು ಬಾಧೆಯಲ್ಲಿರುವಾಗ ತನ್ನ ದೇವ ರಾದ ಕರ್ತನನ್ನು ಬೇಡಿಕೊಂಡದ್ದಲ್ಲದೆ ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥನೆ ಮಾಡಿದನು. ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
- 2 Kings 13:22–23 2 ಅರಸುಗಳು 13:22–23ಯೆಹೋವಾಹಾಜನ ದಿವಸಗಳಲ್ಲೆಲ್ಲಾ ಅರಾ ಮ್ಯರ ಅರಸನಾದ ಹಜಾಯೇಲನು ಇಸ್ರಾಯೇಲನ್ನು ಬಾಧೆಪಡಿಸಿದನು. ಆದರೆ ಕರ್ತನು ಅಬ್ರಹಾಮನ ಇಸಾಕನ ಯಾಕೋಬನ ಸಂಗಡ ಒಡಂಬಡಿಕೆಯನ್ನು ಮಾಡಿದ್ದರಿಂದ ಅವರಿಗೆ ದಯಮಾಡಿ ಅವರ ಮೇಲೆ ಕೃಪೆ ತೋರಿಸಿ ಅವರ ಕಡೆಗೆ ತಿರುಗಿದನು. ಇನ್ನೂ ಅವರನ್ನು ನಾಶ ಮಾಡಲು ಅವರನ್ನು ತನ್ನಿಂದ ತೊರೆದು ಬಿಡಲು ಮನಸ್ಸಾಗಲಿಲ್ಲ, ಅವರನ್ನು ತನ್ನ ಸಮ್ಮುಖದಿಂದ ಹೊರಡಿಸಲೂ ಇಲ್ಲ.
- Ephesians 2:2–3 ಎಫೆಸದವರಿಗೆ 2:2–3ನೀವು ಪೂರ್ವದಲ್ಲಿ ಅಪರಾಧ ಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹ ಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡಿಸುವ ಆತ್ಮನಿಗನುಸಾರವಾಗಿ ನಡೆದುಕೊಂಡಿರಿ; ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು.
- Zechariah 9:9–12 ಜೆಕರ್ಯ 9:9–12ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ. ಇದಲ್ಲದೆ ಎಫ್ರಾಯಾಮಿನೊಳಗಿಂದ ರಥ ಗಳನ್ನೂ ಯೆರೂಸಲೇಮಿನೊಳಗಿಂದ ಕುದುರೆಗಳನ್ನೂ ತೆಗೆದುಬಿಡುವೆನು; ಯುದ್ಧದ ಬಿಲ್ಲು ಸಹ ತೆಗೆದು ಹಾಕಲ್ಪಡುವದು; ಆತನು ಅನ್ಯ ಜನಾಂಗಗಳಿಗೆ ಸಮಾ ಧಾನವನ್ನು ಹೇಳುವನು; ಆತನ ದೊರೆತನವು ಸಮುದ್ರ ದಿಂದ ಸಮುದ್ರಕ್ಕೂ ನದಿಯಿಂದ ಭೂಮಿಯ ಅಂತ್ಯಗಳ ವರೆಗೂ ಇರುವದು. ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ. ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರಿಗಿರಿ, ಎರಡ ರಷ್ಟು ನಿಮಗೆ ಕೊಡುವೆನೆಂದು ಈ ಹೊತ್ತೇ ಪ್ರಕಟಿ ಸುತ್ತೇನೆ.
- Isaiah 14:17 ಯೆಶಾಯ 14:17ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು.
- Exodus 2:23–25 ವಿಮೋಚನಕಾಂಡ 2:23–25ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು. ದೇವರು ಅವರ ನರಳಾಟವನ್ನು ಕೇಳಿ ಅಬ್ರಹಾಮ ಇಸಾಕ ಯಾಕೋಬ ಇವರ ಸಂಗಡ ತಾನು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಂಡನು.ಆಗ ದೇವರು ಇಸ್ರಾಯೇಲ್ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು. ಆಗ ದೇವರು ಇಸ್ರಾಯೇಲ್ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.
- Acts 12:6–11 ಅಪೊಸ್ತಲರ ಕೃತ್ಯಗಳು 12:6–11ಹೆರೋದನು ಪೇತ್ರನನ್ನು ಹೊರಗೆ ತರಬೇಕೆಂದಿದ್ದ ಅದೇ ರಾತ್ರಿಯಲ್ಲಿ ಅವನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟು ಇಬ್ಬರು ಸೈನಿಕರ ಮಧ್ಯದಲ್ಲಿ ನಿದ್ರೆಮಾಡುತ್ತಿದ್ದನು; ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯು ತ್ತಿದ್ದರು. ಆಗ ಇಗೋ, ಕರ್ತನ ದೂತನು ಪೇತ್ರನ ಬಳಿಗೆ ಬಂದಾಗ ಅವನಿದ್ದ ಸೆರೆಮನೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ--ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಂದ ಸರಪಣಿಗಳು ಕಳಚಿಬಿದ್ದವು. ಆ ದೂತನು ಅವನಿಗೆ--ನಡುಕಟ್ಟಿಕೊಂಡು ನಿನ್ನ ಕೆರಗಳನ್ನು ಮೆಟ್ಟಿಕೋ ಎಂದು ಹೇಳಲು ಅವನು ಹಾಗೆಯೇ ಮಾಡಿದನು. ಆ ದೂತನು ಅವನಿಗೆ ನಿನ್ನ ಮೇಲಂಗಿ ಯನ್ನು ಹಾಕಿಕೊಂಡು ನನ್ನ ಹಿಂದೆ ಬಾ ಅಂದನು. ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ ಅವನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ದರ್ಶನವೆಂದು ನೆನಸಿದನು. ಅವನು ಮೊದಲನೆಯ ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು. ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೆ ಆ ದೂತನು ಅವನನ್ನು ಬಿಟ್ಟು ಹೊರಟುಹೋದನು. ಆಗ ಪೇತ್ರನು ಎಚ್ಚರವಾಗಿ-- ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯ ಜನರು ನನಗೆ ಮಾಡಬೇಕೆಂದಿದ್ದ ಎಲ್ಲವುಗಳಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಶ್ಚಯವಾಗಿ ತಿಳಿದುಬಂದಿದೆ ಅಂದುಕೊಂಡನು.
- 2 Kings 13:4 2 ಅರಸುಗಳು 13:4ಆದರೆ ಯೆಹೋವಾಹಾಜನು ಕರ್ತನನ್ನು ಬೇಡಿಕೊಂಡದ್ದರಿಂದ ಕರ್ತನು ಅವನ ಮೊರೆಯನ್ನು ಕೇಳಿದನು. ಯಾಕಂದರೆ ಅರಾಮ್ಯರ ಅರಸನು ಅವರನ್ನು ಬಾಧೆಪಡಿಸಿದ ಇಸ್ರಾಯೇಲಿನ ಬಾಧೆಯನ್ನು ಅವನು ಲಕ್ಷಿಸಿದನು.