Psalms · chapter 105 · verse 14
Psalm 105:14 in Kannada
ಮನುಷ್ಯರು ಅವರಿಗೆ ಕೇಡು ಮಾಡದಂತೆ ಆತನು ತಡೆದನು; ಹೌದು, ಅವರಿಗೋ ಸ್ಕರ ಆತನು ಅರಸುಗಳನ್ನು ಗದರಿಸಿದನು.
Manushyaru avarige kedu maadadante aatanu tadedanu; haudu, avarigo skara aatanu arasugalannu gadarisidanu.
Psalm 105:14 in English
- King James Version (KJV)
- He suffered no man to do them wrong: yea, he reproved kings for their sakes;
- World English Bible (WEB)
- He allowed no one to do them wrong. Yes, he reproved kings for their sakes,
- American Standard Version (ASV)
- He suffered no man to do them wrong; Yea, he reproved kings for their sakes,
- Bible in Basic English (BBE)
- He would not let anyone do them wrong; he even kept back kings because of them,
- Darby Translation (DBY)
- He suffered no man to oppress them, and reproved kings for their sakes,
- Webster's Bible (WBS)
- He suffered no man to do them wrong: yes, he reproved kings for their sakes;
- Young's Literal Translation (YLT)
- He hath not suffered any to oppress them And He reproveth for their sakes kings.
Read in context
- 12ಆಗ ಅವರು ಲೆಕ್ಕಕ್ಕೆ ಸ್ವಲ್ಪವಾಗಿಯೂ ಹೌದು, ಬಹಳ ಸ್ವಲ್ಪ ಮಂದಿಯಾಗಿಯೂ ಪರದೇಶಸ್ಥರಾ ಗಿಯೂ ಅದರಲ್ಲಿ ಇದ್ದರು.
- 13ಅವರು ಜನಾಂಗದಿಂದ ಜನಾಂಗಕ್ಕೂ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋದರು.
- 14ಮನುಷ್ಯರು ಅವರಿಗೆ ಕೇಡು ಮಾಡದಂತೆ ಆತನು ತಡೆದನು; ಹೌದು, ಅವರಿಗೋ ಸ್ಕರ ಆತನು ಅರಸುಗಳನ್ನು ಗದರಿಸಿದನು.
- 15ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ, ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ ಎಂದು ಹೇಳಿದನು.
- 16ದೇಶದ ಮೇಲೆ ಬರವನ್ನು ಬರಮಾಡಿ ಆಹಾರ ವೆಂಬ ಊರುಕೋಲನ್ನು ಮುರಿದನು.
Cross references
- Genesis 35:5 ಆದಿಕಾಂಡ 35:5ತರುವಾಯ ಅವರು ಪ್ರಯಾಣ ವಾಗಿ ಹೊರಟರು. ಆಗ ದೇವರ ಭಯವು ಸುತ್ತಲಿರುವ ಪಟ್ಟಣಗಳವರ ಮೇಲೆ ಇದ್ದದರಿಂದ ಅವರು ಯಾಕೋ ಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ.
- Exodus 7:16–17 ವಿಮೋಚನಕಾಂಡ 7:16–17ಅವನಿಗೆ ನೀನು--ಇಬ್ರಿಯರ ದೇವರಾದ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ ಅರಣ್ಯದಲ್ಲಿ ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು ಎಂದು ಹೇಳಿದ್ದಾನೆ. ಆದರೆ ಇಗೋ, ಇಂದಿನ ವರೆಗೂ ನೀನು ಕೇಳಲಿಲ್ಲ. ಕರ್ತನು ಹೀಗೆ ಹೇಳುತ್ತಾನೆ--ನಾನೇ ಕರ್ತನೆಂದು ಇದರಿಂದ ತಿಳುಕೊಳ್ಳುವಿ. ಇಗೋ, ನನ್ನ ಸೇವಕನ ಕೈಯಲ್ಲಿರುವ ಕೋಲಿನಿಂದ ನದಿಯ ನೀರನ್ನು ಹೊಡೆ ಯುವೆನು, ಆಗ ಅದು ರಕ್ತವಾಗುವದು.
- Genesis 26:14–33 ಆದಿಕಾಂಡ 26:14–33ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡೂ ಬಹಳ ಮಂದಿ ಸೇವಕರೂ ಇದ್ದರು. ಆದದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೇಕಿಚ್ಚುಪಟ್ಟರು. ಅವನ ತಂದೆಯಾದ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗಿದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣಿನಿಂದ ಮುಚ್ಚಿದರು. ಆಗ ಅಬೀಮೆಲೆಕನು ಇಸಾಕನಿಗೆ--ನೀನು ನಮಗಿಂತ ಬಲಿಷ್ಟನಾದಿ ಆದುದ ರಿಂದ ನಮ್ಮ ಬಳಿಯಿಂದ ಹೋಗು, ಅಂದನು. ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ ಅಲ್ಲಿ ವಾಸಮಾಡಿದನು. ಇದಲ್ಲದೆ ಇಸಾಕನು ತನ್ನ ತಂದೆಯಾದ ಅಬ್ರಹಾ ಮನ ದಿನಗಳಲ್ಲಿ ಅಗಿದಂಥ ಬಾವಿಗಳನ್ನು ತಿರಿಗಿ ಅಗಿದನು. ಯಾಕಂದರೆ ಅಬ್ರಹಾಮನು ಸತ್ತ ಮೇಲೆ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರು ಕೊಟ್ಟನು. ಇಸಾಕನ ಸೇವಕರು ತಗ್ಗಿನಲ್ಲಿ ಅಗಿದಾಗ ಅಲ್ಲಿ ಅವರಿಗೆ ಒಂದು ಉಕ್ಕುವ ಒರತೆಯ ಬಾವಿಯು ಸಿಕ್ಕಿತು. ಗೆರಾರಿನ ಮಂದೆಯನ್ನು ಮೇಯಿಸುವವರು --ಈ ನೀರು ನಮ್ಮದು ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ ಏಸೆಕ್ ಎಂದು ಹೆಸರಿಟ್ಟನು. ತರುವಾಯ ಅವರು ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿಯೂ ಅವರು ಜಗಳವಾಡಿದಾಗ ಅವನು ಅದಕ್ಕೆ ಸಿಟ್ನಾ ಎಂದು ಹೆಸರಿಟ್ಟನು. ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ; ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್ ಎಂದು ಹೆಸರಿಟ್ಟನು. ಅಲ್ಲಿಂದ ಅವನು ಬೇರ್ಷೆಬಕ್ಕೆ ಏರಿಹೋದನು. ಅದೇ ರಾತ್ರಿಯಲ್ಲಿ ಕರ್ತನು ಅವನಿಗೆ ಕಾಣಿಸಿ ಕೊಂಡು--ನಿನ್ನ ತಂದೆಯಾದ ಅಬ್ರಹಾಮನ ದೇವರು ನಾನೇ; ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು ಅಂದನು. ಆಗ ಅವನು ಬಲಿಪೀಠವನ್ನು ಕಟ್ಟಿ ಕರ್ತನ ಹೆಸರನ್ನು ಹೇಳಿಕೊಂಡು ಅಲ್ಲಿ ತನ್ನ ಗುಡಾರ ವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗಿದರು. ತರುವಾಯ ಅಬೀಮೆಲೆಕನೂ ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ ಅವನ ಮುಖ್ಯ ಸೈನ್ಯಾಧಿಪತಿ ಯಾದ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು. ಇಸಾಕನು ಅವರಿಗೆ--ನನ್ನ ಬಳಿಗೆ ನೀವು ಯಾಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿ ಬಿಟ್ಟಿರಲ್ಲಾ ಅಂದನು. ಅದಕ್ಕೆ ಅವರು--ನಿಶ್ಚಯವಾಗಿ ಕರ್ತನು ನಿನ್ನ ಸಂಗಡ ಇದ್ದಾನೆಂದು ತಿಳಿದು ನಮಗೂ ನಿನಗೂ ಮಧ್ಯದಲ್ಲಿ ಒಂದು ಪ್ರಮಾಣ ವಿರುವ ಹಾಗೆ ನಿನ್ನ ಸಂಗಡ ಒಡಂಬಡಿಕೆ ಮಾಡಿ ಕೊಳ್ಳೋಣವೆಂದು ನಾವು ಅಂದುಕೊಂಡೆವು; ಅದೇನಂದರೆ--ನಾವು ನಿನ್ನನ್ನು ಮುಟ್ಟದೆ ನಿನಗೆ ಒಳ್ಳೇದನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು; ನೀನು ಈಗ ಕರ್ತನಿಂದ ಆಶೀರ್ವದಿ ಸಲ್ಪಟ್ಟವನಾಗಿದ್ದೀ ಅಂದರು. ಆಗ ಅವನು ಅವರಿಗೆ ಔತಣವನ್ನು ಮಾಡಿಸಿದನು. ಅವರು ತಿಂದು ಕುಡಿದರು; ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣಮಾಡಿಕೊಂಡರು. ಆಗ ಇಸಾಕನು ಅವರನ್ನು ಕಳುಹಿಸಿಕೊಟ್ಟನು. ಅವರು ಸಮಾಧಾನದೊಡನೆ ಅವನ ಬಳಿಯಿಂದ ಹೊರಟುಹೋದರು. ಅದೇ ದಿನದಲ್ಲಿ ಆದದ್ದೇನಂದರೆ, ಇಸಾಕನ ಸೇವಕರು ಬಂದು ತಾವು ಅಗಿದ ಬಾವಿಯಲ್ಲಿ ನೀರು ಸಿಕ್ಕಿತೆಂದು ಅವನಿಗೆ ಹೇಳಿದರು. ಅದಕ್ಕೆ ಅವನು ಷಿಬಾ ಎಂದು ಹೆಸರಿಟ್ಟನು. ಆದದರಿಂದ ಇಂದಿನ ವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
- Genesis 31:24–29 ಆದಿಕಾಂಡ 31:24–29ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮ್ಯನಾದ ಲಾಬಾನನ ಬಳಿಗೆ ಬಂದು ಅವನಿಗೆ--ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ ಕೆಟ್ಟದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು ಅಂದನು. ತರುವಾಯ ಲಾಬಾ ನನು ಯಾಕೋಬನನ್ನು ಸಂಧಿಸಿದಾಗ ಯಾಕೋಬನು ಬೆಟ್ಟದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹೋದರರ ಸಂಗಡ ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಯಾಕೋಬನಿಗೆ--ನೀನು ಏನು ಮಾಡಿದಿ? ನನಗೆ ತಿಳಿಸದೆ ನೀನು ಕಳ್ಳನ ಹಾಗೆ ಓಡಿಬಂದಿಯಲ್ಲಾ. ನನ್ನ ಕುಮಾರ್ತೆಯರನ್ನು ಕತ್ತಿಯಿಂದ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಬಂದಿಯಲ್ಲಾ. ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಬಂದಿ? ನೀನು ನನಗೆ ಯಾಕೆ ತಿಳಿಸಲಿಲ್ಲ? ತಿಳಿಸಿದ್ದರೆ ಸಂತೋಷದಿಂದ ಹಾಡು ತಾಳ ವೀಣೆಗಳ ಸಂಗಡ ನಿನ್ನನ್ನು ಕಳುಹಿಸುತ್ತಿದ್ದೆನು. ಆದರೆ ನೀನು ನನ್ನ ಕುಮಾರರಿಗೂ ಕುಮಾರ್ತೆಯರಿಗೂ ಮುದ್ದು ಕೊಡ ಗೊಡಿಸಲಿಲ್ಲ. ನೀನು ಮಾಡಿದ್ದು ಹುಚ್ಚು ಕೆಲಸವೇ ಸರಿ. ನಿನಗೆ ಕೇಡುಮಾಡುವದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ--ನೀನು ಯಾಕೋಬನಿಗೆ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಹೇಳದ ಹಾಗೆ ಎಚ್ಚರಿಕೆಯಾಗಿರು ಎಂದು ಹೇಳಿದನು.
- Genesis 12:14–17 ಆದಿಕಾಂಡ 12:14–17ಇದಾದ ಮೇಲೆ ಅಬ್ರಾಮನು ಐಗುಪ್ತಕ್ಕೆ ಬಂದಾಗ ಐಗುಪ್ತ್ಯರು ಆ ಸ್ತ್ರೀಯು ಬಹಳ ಸೌಂದರ್ಯ ವುಳ್ಳವಳೆಂದು ನೋಡಿದರು. ಫರೋಹನ ಪ್ರಧಾ ನರು ಸಹ ಆಕೆಯನ್ನು ನೋಡಿ ಫರೋಹನ ಮುಂದೆ ಆಕೆಯನ್ನು ಹೊಗಳಲಾಗಿ ಆ ಸ್ತ್ರೀಯು ಫರೋಹನ ಮನೆಗೆ ಒಯ್ಯಲ್ಪಟ್ಟಳು. ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೇದನ್ನು ಮಾಡಿದನು. ಅವನಿಗೆ ಕುರಿಗಳೂ ಎತ್ತುಗಳೂ ಕತ್ತೆಗಳೂ ದಾಸರೂ ದಾಸಿ ಯರೂ ಹೆಣ್ಣುಕತ್ತೆಗಳೂ ಒಂಟೆಗಳೂ ದೊರೆತವು. ಆದರೆ ಕರ್ತನು ಫರೋಹನನ್ನೂ ಅವನ ಮನೆ ಯನ್ನೂ ಅಬ್ರಾಮನ ಹೆಂಡತಿಯಾದ ಸಾರಯಳಿಗಾಗಿ ಮಹಾಬಾಧೆಗಳಿಂದ ಬಾಧಿಸಿದನು.
- Genesis 20:1–7 ಆದಿಕಾಂಡ 20:1–7ಅಬ್ರಹಾಮನು ಅಲ್ಲಿಂದ ದಕ್ಷಿಣ ದೇಶದ ಕಾದೇಶಿಗೆ ಪ್ರಯಾಣಮಾಡಿ, ಶೂರಿಗೆ ಮಧ್ಯದಲ್ಲಿ ವಾಸಿಸಿ ಗೆರಾರಿನಲ್ಲಿ ಪ್ರವಾಸಿಯಾಗಿದ್ದನು. ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ವಿಷಯವಾಗಿ--ಅವಳು ನನ್ನ ತಂಗಿ ಎಂದು ಹೇಳಿ ದನು. ಆದದರಿಂದ ಗೆರಾರಿನ ಅರಸನಾದ ಅಬೀಮೆಲೆ ಕನು ಸಾರಳನ್ನು ಕರೆಯಿಸಿ ತೆಗೆದುಕೊಂಡನು. ಆಗ ದೇವರು ರಾತ್ರಿ ಕನಸಿನಲ್ಲಿ ಅಬೀಮೆಲೆಕನ ಬಳಿಗೆ ಬಂದು--ಇಗೋ, ನೀನು ತಕ್ಕೊಂಡ ಆ ಸ್ತ್ರೀಗೋಸ್ಕರ ನೀನು ಸತ್ತವನೇ; ಆಕೆಯು ಒಬ್ಬ ಮನುಷ್ಯನ ಹೆಂಡತಿ ಎಂದು ಅವನಿಗೆ ಹೇಳಿದನು. ಆದರೆ ಅಬೀಮೆಲೆಕನು ಆಕೆಯ ಸವಿಾಪಕ್ಕೆ ಬಂದಿರಲಿಲ್ಲ. ಆದದರಿಂದ ಅವನು--ಕರ್ತನೇ, ನೀತಿಯುಳ್ಳ ಜನಾಂಗವನ್ನು ಸಹ ಕೊಲ್ಲುವಿಯೋ? ಅವನು ನನಗೆ--ಅವಳು ನನ್ನ ತಂಗಿ ಎಂದು ಹೇಳಲಿಲ್ಲವೋ? ಈಕೆಯೂ--ಅವನು ನನ್ನ ಅಣ್ಣನು ಎಂದು ಹೇಳಿದ್ದಾಳೆ; ಆದದರಿಂದ ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಕೈಯಿಂದಲೂ ಇದನ್ನು ಮಾಡಿದ್ದೇನೆ ಅಂದನು. ದೇವರು ಕನಸಿನಲ್ಲಿ ಅವನಿಗೆ--ಹೌದು, ನೀನು ಯಥಾರ್ಥವಾದ ಹೃದಯ ದಿಂದ ಇದನ್ನು ಮಾಡಿದ್ದೀ ಎಂದು ನನಗೂ ತಿಳಿದದೆ. ಆದದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದ ಹಾಗೆ ನಾನು ನಿನ್ನನ್ನು ತಡೆದು ಆಕೆಯನ್ನು ಮುಟ್ಟುವದಕ್ಕೆ ಬಿಡಲಿಲ್ಲ. ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸು; ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವ ಹಾಗೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ ಅಂದನು.