Psalms · chapter 105 · verse 6
Psalm 105:6 in Kannada
ಆತನ ಸೇವಕನಾದ ಅಬ್ರಹಾಮನ ಸಂತತಿಯೇ, ಆತನು ಆದುಕೊಂಡ ಯಾಕೋಬನ ಮಕ್ಕಳೇ,
Aatana sevakanaada abrahaamana santatiye, aatanu aadukonda yaakobana makkale,
Psalm 105:6 in English
- King James Version (KJV)
- O ye seed of Abraham his servant, ye children of Jacob his chosen.
- World English Bible (WEB)
- you offspring of Abraham, his servant, you children of Jacob, his chosen ones.
- American Standard Version (ASV)
- O ye seed of Abraham his servant, Ye children of Jacob, his chosen ones.
- Bible in Basic English (BBE)
- O you seed of Abraham, his servant, you children of Jacob, his loved ones.
- Darby Translation (DBY)
- Ye seed of Abraham his servant, ye sons of Jacob, his chosen ones.
- Webster's Bible (WBS)
- O ye seed of Abraham his servant, ye children of Jacob his chosen.
- Young's Literal Translation (YLT)
- O seed of Abraham, His servant, O sons of Jacob, His chosen ones.
Read in context
- 4ಕರ್ತನನ್ನೂ ಆತನ ಬಲವನ್ನೂ ಹುಡುಕಿರಿ. ಆತನ ಮುಖ ವನ್ನು ಯಾವಾಗಲೂ ಹುಡುಕಿರಿ.
- 5ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;
- 6ಆತನ ಸೇವಕನಾದ ಅಬ್ರಹಾಮನ ಸಂತತಿಯೇ, ಆತನು ಆದುಕೊಂಡ ಯಾಕೋಬನ ಮಕ್ಕಳೇ,
- 7ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ.
- 8ತನ್ನ ಒಡಂಬಡಿಕೆಯನ್ನೂ ಸಾವಿರ ತಲಾಂತರಗ ಳಿಗೆ ಆಜ್ಞಾಪಿಸಿದ ತನ್ನ ಮಾತನ್ನೂ
Cross references
- Isaiah 44:1–2 ಯೆಶಾಯ 44:1–2ಈಗಲಾದರೋ ನನ್ನ ಸೇವಕನಾದ ಓ ಯಾಕೋಬೇ, ನಾನು ಆರಿಸಿಕೊಂಡ ಇಸ್ರಾಯೇಲೇ, ಕೇಳು. ನಿನ್ನನ್ನು ನಿರ್ಮಾಣ ಮಾಡಿ ಗರ್ಭದಿಂದಲೂ ರೂಪಿಸುತ್ತಾ ಬಂದು ನಿನಗೆ ಸಹಾಯ ಮಾಡುವವನಾದ ಕರ್ತನು ಹೀಗೆನ್ನುತ್ತಾನೆ--ನನ್ನ ಸೇವಕನಾದ ಯಾಕೋಬೇ, ನಾನು ಆದುಕೊಂಡ ಯೆಶುರೂನೇ, ಭಯಪಡಬೇಡ.
- John 15:16 ಯೋಹಾನನು 15:16ನೀವು ನನ್ನನ್ನು ಆರಿಸಿಕೊಂಡಿಲ್ಲ; ಆದರೆ ನಾನು ನಿಮ್ಮನ್ನು ಆರಿಸಿ ಕೊಂಡು, ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ನೆಲೆಗೊಂಡಿರುವಂತೆಯೂ ನಿಮ್ಮನ್ನು ನೇಮಿಸಿದ್ದೇನೆ. ಆದಕಾರಣ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಆತನು ಅದನ್ನು ನಿಮಗೆ ಕೊಡುವನು.
- 1 Peter 2:9 1 ಪೇತ್ರನು 2:9ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.
- Isaiah 41:8 ಯೆಶಾಯ 41:8ಆದರೆ ನನ್ನ ಸೇವಕನಾದ ಇಸ್ರಾಯೇಲೇ, ನಾನು ಆದುಕೊಂಡ ಯಾಕೋಬೇ, ನನ್ನ ಸ್ನೇಹಿತನಾದ ಅಬ್ರಹಾಮನ ಸಂತತಿಯೇ;
- Isaiah 41:14 ಯೆಶಾಯ 41:14ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
- Psalm 135:4 ಕೀರ್ತನೆಗಳು 135:4ಕರ್ತನು ಯಾಕೋಬನನ್ನು ತನಗೋ ಸ್ಕರವೂ ಇಸ್ರಾಯೇಲನ್ನು ತನ್ನ ಅಸಾಮಾನ್ಯವಾದ ಸಂಪತ್ತಾಗಿಯೂ ಆದುಕೊಂಡಿದ್ದಾನೆ.
- Psalm 106:5 ಕೀರ್ತನೆಗಳು 106:5ಕರ್ತನೇ, ನೀನು ಆದುಕೊಂಡವರ ಸುಖವನ್ನು ನಾನು ನೋಡಿ ನಿನ್ನ ಜನಾಂಗದ ಸಂತೋಷ ದೊಂದಿಗೆ ಸಂತೋಷಿಸಿ ನಿನ್ನ ಬಾಧ್ಯತೆಯ ಸಂಗಡ ಹೊಗಳಿಕೊಳ್ಳುವೆನು.
- Exodus 3:6 ವಿಮೋಚನಕಾಂಡ 3:6ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.
- Deuteronomy 7:6–8 ಧರ್ಮೋಪದೇಶಕಾಂಡ 7:6–8ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿ ದ್ದಾನೆ. ನೀವು ಎಲ್ಲಾ ಜನಗಳಿಗಿಂತ ಹೆಚ್ಚಾಗಿರುವ ಕಾರಣ ಕರ್ತನು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಗಳಿಗಿಂತ ಬಹಳ ಸ್ವಲ್ಪ. ಕರ್ತನು ನಿಮ್ಮನ್ನು ಪ್ರೀತಿಸಿದ್ದರಿಂದಲೂ ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ಕಾಪಾಡುವದರಿಂದಲೂ ಕರ್ತನು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿನ್ನನ್ನು ದಾಸತ್ವದ ಮನೆಯಿಂದಲೂ ಐಗುಪ್ತದ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದನು.
- Psalm 105:42 ಕೀರ್ತನೆಗಳು 105:42ಆತನು ತನ್ನ ಪರಿಶುದ್ಧ ವಾಗ್ದಾನವನ್ನೂ ಸೇವಕನಾದ ಅಬ್ರಹಾಮನನ್ನೂ ಜ್ಞಾಪಕ ಮಾಡಿಕೊಂಡನು.
- Romans 9:4–29 ರೋಮಾಪುರದವರಿಗೆ 9:4–29ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು. ಪಿತೃಗಳು ಇವರಿಗೆ ಸಂಬಂಧಪಟ್ಟವರೇ; ಶರೀರ ಸಂಬಂಧವಾಗಿ ಕ್ರಿಸ್ತನು ಇವರಿಂದಲೇ ಬಂದನು; ಆತನು ಎಲ್ಲಾದರ ಮೇಲೆ ಇರುವಾತನಾಗಿದ್ದು ನಿರಂತರಕ್ಕೂ ಸ್ತುತಿ ಹೊಂದತಕ್ಕ ದೇವರಾಗಿದ್ದಾನೆ. ಆಮೆನ್. ದೇವರ ಮಾತು ನಿರರ್ಥಕವಾಯಿತೆಂತಲ್ಲ; ಯಾಕಂದರೆ ಇಸ್ರಾಯೇಲ್ಯರಿಗೆ ಸಂಬಂಧಪಟ್ಟವ ರೆಲ್ಲರೂ ಇಸ್ರಾಯೇಲ್ಯರಲ್ಲ; ಇಲ್ಲವೆ ಅವರು ಅಬ್ರಹಾಮನ ಸಂತತಿಯವರಾದ ಕಾರಣ ಅವರೆ ಲ್ಲರೂ ಮಕ್ಕಳಲ್ಲ; ಆದರೆ--ಇಸಾಕನಲ್ಲಿಯೇ ನಿನ್ನ ಸಂತ ತಿಯು ಕರೆಯಲ್ಪಡುವದು ಎಂಬದೇ. ಅಂದರೆ--ಶರೀರ ಸಂಬಂಧವಾದ ಮಕ್ಕಳು ದೇವರ ಮಕ್ಕಳಲ್ಲ; ಆದರೆ ವಾಗ್ದಾನದ ಮಕ್ಕಳೇ ಆತನ ಸಂತತಿಯೆಂದು ಎಣಿಸಲ್ಪಟ್ಟಿದ್ದಾರೆ. ಈ ವಾಗ್ದಾನದ ಮಾತೇನಂ ದರೆ--ಮುಂದಿನ ವರುಷದ ಇದೇ ಕಾಲದಲ್ಲಿ ನಾನು ಬರುವೆನು. ಆಗ ಸಾರಳಿಗೆ ಮಗನು ಇರುವನು ಎಂಬದೇ. ಇದು ಮಾತ್ರವಲ್ಲದೆ ರೆಬೆಕ್ಕಳು ಸಹ ಒಬ್ಬನಿಂದ ಅಂದರೆ ನಮ್ಮ ಪಿತೃವಾದ ಇಸಾಕನಿಂದ ಗರ್ಭಿಣಿಯಾದಾಗ (ಮಕ್ಕಳಿನ್ನೂ ಹುಟ್ಟದಿರುವಾಗ ಮತ್ತು ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದಿರು ವಾಗ ಆಯ್ಕೆಯ ಪ್ರಕಾರ ದೇವರ ಸಂಕಲ್ಪವು ಸ್ಥಿರಗೊಳ್ಳು ವಂತೆ ಕ್ರಿಯೆಗಳಿಂದಲ್ಲ, ಆದರೆ ಕರೆದಾತನಿಂದಲೇ) ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು ಎಂದು ಆಕೆಗೆ ಹೇಳಲ್ಪಟ್ಟಿದೆ. ಇದಕ್ಕನುಸಾರ-- ನಾನು ಯಾಕೋಬನನ್ನು ಪ್ರೀತಿಸಿದೆನು ಮತು ಏಸಾವನನ್ನು ಹಗೆಮಾಡಿದೆನು ಎಂದು ಬರೆಯಲ್ಪಟ್ಟಿದೆ. ಹಾಗಾದರೆ ನಾವು ಏನು ಹೇಳೋಣ? ದೇವರಲ್ಲಿ ಅನೀತಿ ಉಂಟೋ? ಹಾಗೆ ಎಂದಿಗೂ ಇಲ್ಲ. ಆತನು ಮೋಶೆಗೆ--ಯಾವನ ಮೇಲೆ ನನಗೆ ಕರುಣೆ ಇದೆಯೋ ಅವನನ್ನು ಕರುಣಿಸುವೆನು ಮತ್ತು ಯಾವನ ಮೇಲೆ ನನಗೆ ದಯೆ ಇದೆಯೋ ಅವನಿಗೆ ದಯೆ ತೋರಿಸುವೆನು ಎಂದು ಹೇಳುತ್ತಾನೆ. ಹೀಗಿರುವಾಗ ಅದು ಇಚ್ಛಿಸುವವನಿಂದಾಗಲೀ ಪ್ರಯಾಸಪಡುವವನಿಂದಾಗಲೀ ಆಗದೆ ಕರುಣೆ ತೋರಿ ಸುವ ದೇವರಿಂದಲೇ ಆಗುವದು. ಬರಹವು ಫರೋ ಹನಿಗೆ--ನನ್ನ ಬಲವನ್ನು ನಿನ್ನಲ್ಲಿ ತೋರಿಸುವ ಹಾಗೆಯೂ ನನ್ನ ನಾಮವು ಭೂಮಿಯ ಎಲ್ಲಾ ಕಡೆಯಲ್ಲಿ ಪ್ರಸಿದ್ಧಿ ಹೊಂದಬೇಕೆಂಬ ಉದ್ದೇಶದಿಂದಲೂ ನಾನು ನಿನ್ನನ್ನು ಉನ್ನತ ಸ್ಥಿತಿಗೆ ತಂದಿದ್ದೇನೆ ಎಂದು ಹೇಳುತ್ತದೆ. ಆದದರಿಂದ ಆತನು ಯಾವನನ್ನು ಕರುಣಿಸಬೇಕೆಂದಿ ರುವನೋ ಅವನನ್ನು ಕರುಣಿಸುವನು; ಯಾವನನ್ನು ಕಠಿಣಪಡಿಸಬೇಕೆಂದಿರುವನೋ ಅವನನ್ನು ಕಠಿಣ ಪಡಿಸುವನು. ಆಗ ನೀನು ನನಗೆ--ಹಾಗಾದರೆ ಆತನು ಇನ್ನು ತಪ್ಪು ಕಂಡುಹಿಡಿಯುವದು ಹೇಗೆ? ಆತನ ಚಿತ್ತವನ್ನು ಎದುರಿಸುವದು ಯಾರಿಂದಾದೀತು ಎಂದು ಕೇಳುವಿ. ಆದರೆ ಓ ಮನುಷ್ಯನೇ, ದೇವರಿಗೆ ಎದುರು ಮಾತನಾಡುವದಕ್ಕೆ ನೀನು ಯಾರು? ರೂಪಿಸಲ್ಪಟ್ಟದ್ದು ರೂಪಿಸಿದವನಿಗೆ--ನನ್ನನ್ನು ಹೀಗೇಕೆ ಮಾಡಿದೆ ಎಂದು ಕೇಳುವದುಂಟೇ? ಒಂದು ಪಾತ್ರೆಯನ್ನು ಗೌರ ವಕ್ಕೂ ಇನ್ನೊಂದನ್ನು ಅಗೌರವಕ್ಕೂ ಒಂದೇ ಮುದ್ದೆ ಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ? ಹೀಗಿರಲು ದೇವರು ತನ್ನ ಕೋಪವನ್ನು ತೋರಿಸುವದಕ್ಕೂ ತನ್ನ ಬಲವನ್ನು ಪ್ರಸಿದ್ಧಿಪಡಿಸುವದಕ್ಕೂ ಮನಸ್ಸುಳ್ಳವನಾಗಿ ನಾಶನಕ್ಕೆ ಯೋಗ್ಯವಾಗಿರುವ ಕೋಪದ ಪಾತ್ರೆಗಳಿಗಾಗಿ ಬಹು ದೀರ್ಘಶಾಂತಿಯಿಂದ ತಾಳಿಕೊಂಡು ಮುಂಚಿತ ವಾಗಿಯೇ ತಾನು ಮಹಿಮೆಗೋಸ್ಕರ ಸಿದ್ಧಮಾಡಿದ ಕರುಣೆಯ ಪಾತ್ರೆಗಳಿಗೆ ತನ್ನ ಮಹಿಮಾತಿಶಯವನ್ನು ತಿಳಿಯಪಡಿಸುವವನಾಗಿ ಯೆಹೂದ್ಯರೊಳಗಿಂದ ನಮ್ಮನ್ನು ಮಾತ್ರವಲ್ಲದೆ ಅನ್ಯಜನಾಂಗಗಳವರೊ ಳಗಿಂದಲೂ ಆತನು ಕರೆದಿದ್ದರೆ ಏನು? ಇದಲ್ಲದೆ ಆತನು--ನನ್ನ ಜನರಲ್ಲದವರನ್ನು ನನ್ನ ಜನರೆಂದೂ ನನಗೆ ಪ್ರಿಯಳಲ್ಲದವಳನ್ನು ಪ್ರಿಯಳೆಂದೂ ಕರೆಯು ವೆನು ಎಂದು ಹೋಶೇಯನ ಮೂಲಕ ಹೇಳುತ್ತಾನೆ. ಯಾವ ಸ್ಥಳದಲ್ಲಿ ಅವರಿಗೆ--ನೀವು ನನ್ನ ಜನರಲ್ಲ ಎಂದು ಎಲ್ಲಿ ಹೇಳಲ್ಪಟ್ಟಿದೆಯೋ ಅಲ್ಲಿಯೇ ಅವರು ಜೀವಿಸುವ ದೇವರ ಮಕ್ಕಳೆಂದು ಕರೆಯಲ್ಪಡುವರು ಎಂಬದು. ಯೆಶಾಯನು ಸಹ ಇಸ್ರಾಯೇಲ್ಯರ ವಿಷಯವಾಗಿ--ಇಸ್ರಾಯೇಲ್ಯರ ಮಕ್ಕಳ ಸಂಖ್ಯೆಯು ಸಮುದ್ರದ ಮರಳಿನೋಪಾದಿಯಲ್ಲಿದ್ದರೂ ಒಂದು ಅಂಶ ಮಾತ್ರ ರಕ್ಷಣೆ ಹೊಂದುವದು ಎಂದು ಕೂಗಿ ಹೇಳುತ್ತಾನೆ. ಆತನು ನೀತಿಯಲ್ಲಿ ಕಾರ್ಯವನ್ನು ಕ್ಲುಪ್ತಮಾಡಿ ಪೂರ್ತಿಗೊಳಿಸುತ್ತಾನೆ; ಕಾರಣವೇ ನಂದರೆ, ಕರ್ತನು ಭೂಮಿಯ ಮೇಲೆ ಒಂದು ಕ್ಲುಪ್ತ ವಾದ ಕಾರ್ಯವನ್ನು ಮಾಡುವನು. ಯೆಶಾಯನು ಮುಂದಾಗಿ--ಸೈನ್ಯಗಳ ಕರ್ತನು ನಮಗಾಗಿ ಸಂತಾನ ವನ್ನು ಉಳಿಸದೆ ಹೋಗಿದ್ದರೆ ನಾವು ಸೊದೋಮಿನ ಹಾಗೆ ಇರುತ್ತಿದ್ದೆವು; ಗೊಮೋರದ ಸ್ಥಿತಿಯು ನಮ್ಮದಾ ಗುತ್ತಿತ್ತು ಎಂದು ಹೇಳಿದನು.