Psalms · chapter 105 · verse 7
Psalm 105:7 in Kannada
ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ.
Aatane namma devaraada kartanaagiddaane; aatana nyaayagalu samasta bhoomiyalli ave.
Psalm 105:7 in English
- King James Version (KJV)
- He [is] the LORD our God: his judgments [are] in all the earth.
- World English Bible (WEB)
- He is the LORD, our God. His judgments are in all the earth.
- American Standard Version (ASV)
- He is Jehovah our God: His judgments are in all the earth.
- Bible in Basic English (BBE)
- He is the Lord our God: he is judge of all the earth.
- Darby Translation (DBY)
- He, Jehovah, is our God; his judgments are in all the earth.
- Webster's Bible (WBS)
- He [is] the LORD our God: his judgments [are] in all the earth.
- Young's Literal Translation (YLT)
- He [is] Jehovah our God, In all the earth [are] His judgments.
Read in context
- 5ಆತನು ಮಾಡಿದ ಆಶ್ಚರ್ಯ ಕಾರ್ಯಗಳನ್ನೂ ಆತನ ಅದ್ಭುತಗಳನ್ನೂ ಆತನ ಬಾಯಿಯ ನ್ಯಾಯಗಳನ್ನೂ ಜ್ಞಾಪಕಮಾಡಿ ಕೊಳ್ಳಿರಿ;
- 6ಆತನ ಸೇವಕನಾದ ಅಬ್ರಹಾಮನ ಸಂತತಿಯೇ, ಆತನು ಆದುಕೊಂಡ ಯಾಕೋಬನ ಮಕ್ಕಳೇ,
- 7ಆತನೇ ನಮ್ಮ ದೇವರಾದ ಕರ್ತನಾಗಿದ್ದಾನೆ; ಆತನ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಅವೆ.
- 8ತನ್ನ ಒಡಂಬಡಿಕೆಯನ್ನೂ ಸಾವಿರ ತಲಾಂತರಗ ಳಿಗೆ ಆಜ್ಞಾಪಿಸಿದ ತನ್ನ ಮಾತನ್ನೂ
- 9ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಇಸಾಕನಿಗೆ ಇಟ್ಟ ಆಣೆಯನ್ನೂ ಆತನು ಯುಗಯುಗಕ್ಕೂ ಜ್ಞಾಪಕ ಮಾಡಿಕೊಂಡಿದ್ದಾನೆ.
Cross references
- Isaiah 26:9 ಯೆಶಾಯ 26:9ರಾತ್ರಿಯಲ್ಲಿ ನಿನ್ನನ್ನು ಮನಃಪೂರ್ವಕವಾಗಿ ಬಯಸಿದ್ದೇನೆ, ಹೌದು, ನನ್ನಲ್ಲಿ ರುವ ನನ್ನ ಆತ್ಮದೊಂದಿಗೆ ನಿನ್ನನ್ನು ಮುಂಜಾನೆಯಲ್ಲಿ ಹುಡುಕುತ್ತಿದ್ದೇನೆ; ಭೂಮಿಗೆ ನಿನ್ನ ನ್ಯಾಯತೀರ್ವಿಕೆ ಗಳು ನಡೆಯುವಾಗಲೇ ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುತ್ತಾರೆ.
- Deuteronomy 26:17–18 ಧರ್ಮೋಪದೇಶಕಾಂಡ 26:17–18ನೀನು ಈಹೊತ್ತು ಕರ್ತನು--ನಿನಗೆ ದೇವರಾಗಬೇಕೆಂದೂ ಆತನ ಮಾರ್ಗಗಳಲ್ಲಿ ನಡೆದು ಆತನ ನಿಯಮ ಆಜ್ಞೆ ನ್ಯಾಯಗಳನ್ನು ಕಾಪಾಡಿ ಆತನ ಸ್ವರ ಕೇಳುತ್ತೇನೆಂದೂ ದೃಢವಾಗಿ ಹೇಳಿದಿ. ಕರ್ತನು ಈಹೊತ್ತು ನಿನಗೆ ತಾನು ವಾಗ್ದಾನಮಾಡಿದಂತೆ ನೀನು ಆತನಿಗೆ ಅಸಮಾನ್ಯ ಜನವಾಗಬೇಕೆಂದೂ ಆತನ ಎಲ್ಲಾ ಆಜ್ಞೆಗಳನ್ನು ಕಾಪಾಡಬೇಕೆಂದೂಆತನು ಮಾಡಿದ ಎಲ್ಲಾ ಜನಾಂಗಗಳ ಮೇಲೆ ಸ್ತುತಿಯಲ್ಲಿಯೂ ಹೆಸರಿನಲ್ಲಿಯೂ ಘನತೆಯಲ್ಲಿಯೂ ನೀನು ಉನ್ನತ ವಾಗಬೇಕೆಂದೂ ನೀನು ನಿನ್ನ ದೇವರಾದ ಕರ್ತನಿಗೆ ಆತನು ಹೇಳಿದಂತೆ ಪರಿಶುದ್ಧ ಜನವಾಗಬೇಕೆಂದೂ ದೃಢವಾಗಿ ಹೇಳಿದ್ದಾನೆ.
- Exodus 20:2 ವಿಮೋಚನಕಾಂಡ 20:2ನಿನ್ನನ್ನು ಐಗುಪ್ತದೇಶದಿಂದಲೂ ದಾಸತ್ವದ ಮನೆಯೊಳ ಗಿಂದಲೂ ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ.
- Revelation 15:4 ಪ್ರಕಟನೆ 15:4ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.
- Psalm 95:7 ಕೀರ್ತನೆಗಳು 95:7ಆತನು ನಮ್ಮ ದೇವರು; ನಾವು ಆತನು ಮೇಯಿಸುವ ಜನರೂ ಆತನ ಕೈ ಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಸ್ವರವನ್ನು ಕೇಳಿದರೆ
- Genesis 17:7 ಆದಿಕಾಂಡ 17:7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.
- Deuteronomy 29:10–15 ಧರ್ಮೋಪದೇಶಕಾಂಡ 29:10–15ನೀವೆಲ್ಲರು ಈಹೊತ್ತು ನಿಮ್ಮ ದೇವರಾದ ಕರ್ತನ ಮುಂದೆ ನಿಂತಿದ್ದೀರಿ; ನಿನ್ನ ದೇವರಾದ ಕರ್ತನು ಈಹೊತ್ತು ನಿನ್ನ ಸಂಗಡ ಮಾಡುವ ಒಡಂಬಡಿಕೆಯ ಲ್ಲಿಯೂ ಆಣೆಯಲ್ಲಿಯೂ ಸೇರುವದಕ್ಕೆ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ಹಿರಿಯರೂ ಅಧಿಕಾರಿಗಳೂ ಇಸ್ರಾಯೇಲಿನ ಮನುಷ್ಯರೆಲ್ಲರೂ ನಿಮ್ಮ ಚಿಕ್ಕವರೂ ಪತ್ನಿಯರೂ ನಿನ್ನ ಪಾಳೆಯದಲ್ಲಿರುವ ಪರವಾಸಿಯರೂ ನಿನಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವ ವರೂ ಇದ್ದೀರಿ. ಆ ಒಡಂಬಡಿಕೆ ಯಾವದಂದರೆ, ಆತನು ನಿನಗೆ ಹೇಳಿದಂತೆಯೂ ನಿನ್ನ ಪಿತೃಗಳಾದ ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದಂತೆಯೂ ಈಹೊತ್ತು ನಿನ್ನನ್ನು ತನಗೆ ಜನಾಂಗವಾಗಿ ಸ್ಥಾಪಿಸಿ ನಿನಗೆ ದೇವರಾಗ ಬೇಕೆಂಬದೇ. ಇದಲ್ಲದೆ ನಿಮ್ಮ ಸಂಗಡ ಮಾತ್ರ ಈ ಒಡಂಬಡಿಕೆ ಯನ್ನೂ ಈ ಆಣೆಯನ್ನೂ ನಾನು ಮಾಡುವದಿಲ್ಲ; ಈಹೊತ್ತು ಇಲ್ಲಿ ನಮ್ಮ ಸಂಗಡ ನಮ್ಮ ದೇವರಾದ ಕರ್ತನ ಮುಂದೆ ನಿಂತವನ ಸಂಗಡವೂ ಈಹೊತ್ತು ಇಲ್ಲಿ ನಮ್ಮ ಸಂಗಡ ಇರದವನ ಸಂಗಡವೂ ಮಾಡು ತ್ತೇನೆ.
- Psalm 48:10–11 ಕೀರ್ತನೆಗಳು 48:10–11ಓ ದೇವರೇ, ನಿನ್ನ ಹೆಸರಿಗೆ ತಕ್ಕಂತಯೇ ನಿನ್ನ ಸ್ತೋತ್ರವು ಭೂಮಿಯ ಅಂತ್ಯಗಳ ವರೆಗೂ ಅದೆ. ನಿನ್ನ ಬಲಗೈ ನೀತಿಯಿಂದ ತುಂಬಿ ಅದೆ. ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.
- Psalm 100:3 ಕೀರ್ತನೆಗಳು 100:3ಕರ್ತನೇ ದೇವರೆಂದು ತಿಳುಕೊಳ್ಳಿರಿ; ನಾವಲ್ಲ, ಆತನೇ ನಮ್ಮನ್ನು ಉಂಟು ಮಾಡಿದ್ದಾನೆ; ನಾವು ಆತನ ಜನರೂ ಆತನ ಹುಲ್ಲುಗಾವಲಿನ ಮಂದೆಯೂ ಆಗಿದ್ದೇವೆ.
- Joshua 24:15–24 ಯೆಹೋಶುವ 24:15–24ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು. ಜನರು ಅವನಿಗೆ ಪ್ರತ್ಯುತ್ತರಕೊಟ್ಟು--ನಾವು ಕರ್ತನನ್ನು ಬಿಟ್ಟು ಅನ್ಯ ದೇವತೆಗಳನ್ನು ಸೇವಿಸುವ ಕಾರ್ಯವು ನಮಗೆ ದೂರವಾಗಿರಲಿ. ನಮ್ಮ ದೇವ ರಾದ ಕರ್ತನು ತಾನೇ ನಮ್ಮನ್ನೂ ನಮ್ಮ ತಂದೆಗಳನ್ನೂ ದಾಸತ್ವದ ಮನೆಯಾದ ಐಗುಪ್ತದೇಶದಿಂದ ಬರಮಾಡಿ ದ್ದಾನೆ. ನಮ್ಮ ಕಣ್ಣುಗಳ ಮುಂದೆ ಆ ದೊಡ್ಡ ಅದ್ಭುತ ಗಳನ್ನು ಮಾಡಿ ನಾವು ನಡೆದ ಎಲ್ಲಾ ಮಾರ್ಗಗಳ ಲ್ಲಿಯೂ ನಾವು ಅವರ ಮಧ್ಯದಲ್ಲಿ ಹಾದು ಬಂದ ಎಲ್ಲಾ ಜನಗಳಲ್ಲಿಯೂ ನಮ್ಮನ್ನು ಕಾಪಾಡಿದಾತನು. ಇದಲ್ಲದೆ ದೇಶದಲ್ಲಿ ವಾಸವಾಗಿದ್ದ ಅಮೋರಿಯರ ಸಕಲ ಜನಗಳನ್ನು ಕರ್ತನು ನಮ್ಮ ಮುಂದೆ ಹೊರಡಿಸಿ ಬಿಟ್ಟನು. ಆದದರಿಂದ ನಾವು ಕರ್ತನನ್ನೇ ಸೇವಿಸುವೆವು; ಆತನು ನಮ್ಮ ದೇವರು ಅಂದರು. ಅದಕ್ಕೆ ಯೆಹೋ ಶುವನು ಜನರಿಗೆ--ನೀವು ಕರ್ತನನ್ನು ಸೇವಿಸಲಾರಿರಿ; ಯಾಕಂದರೆ ಆತನು ಪರಿಶುದ್ಧನಾದ ದೇವರು, ರೋಷ ವುಳ್ಳ ದೇವರು; ಆತನು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸನು. ಕರ್ತನನ್ನು ಬಿಟ್ಟು ಅನ್ಯ ದೇವರುಗಳನ್ನು ಸೇವಿಸಿದರೆ ಒಳ್ಳೇದನ್ನು ಮಾಡದೆ ಆತನು ನಿಮಗೆ ಕೇಡುಮಾಡಿ ನಿಮ್ಮನ್ನು ದಹಿಸಿಬಿಡುವನು ಎಂದು ಹೇಳಿದನು. ಅದಕ್ಕೆ ಜನರು ಯೆಹೋಶುವ ನಿಗೆ--ಇಲ್ಲ; ಆದರೆ ನಾವು ಕರ್ತನನ್ನೇ ಸೇವಿಸುವೆವು ಅಂದರು. ಯೆಹೋಶುವನು ಜನರಿಗೆ--ನೀವು ಕರ್ತನನ್ನು ಸೇವಿಸುವದಕ್ಕೆ ಆತನನ್ನು ಆದು ಕೊಂಡಿರು ವಿರೆಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ ಅಂದನು. ಅದಕ್ಕವರು--ನಾವೇ ಸಾಕ್ಷಿಗಳಾಗಿದ್ದೇವೆ ಅಂದರು. ಅದಕ್ಕವನು--ಈಗ ನಿಮ್ಮ ಮಧ್ಯದಲ್ಲಿರುವ ಅನ್ಯ ದೇವರುಗಳನ್ನು ತೊರೆದು ನಿಮ್ಮ ಹೃದಯವನ್ನು ಇಸ್ರಾಯೇಲಿನ ದೇವರಾದ ಕರ್ತನಿಗೆ ತಿರುಗಿಸಿರಿ ಅಂದನು. ಜನರು ಯೆಹೋಶುವನಿಗೆ--ನಾವು ನಮ್ಮ ದೇವರಾದ ಕರ್ತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾಗುವೆವು ಅಂದರು.