Psalms · chapter 106 · verse 9
Psalm 106:9 in Kannada
ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು.
Aatanu kempu samudravannu gadarisalu adu onagi hoyitu. Heege jalaagaadhadalli, aranya dallidda haageye aatanu avarannu nadisidanu.
Psalm 106:9 in English
- King James Version (KJV)
- He rebuked the Red sea also, and it was dried up: so he led them through the depths, as through the wilderness.
- World English Bible (WEB)
- He rebuked the Red Sea also, and it was dried up; so he led them through the depths, as through a desert.
- American Standard Version (ASV)
- He rebuked the Red Sea also, and it was dried up: So he led them through the depths, as through a wilderness.
- Bible in Basic English (BBE)
- By his word the Red Sea was made dry: and he took them through the deep waters as through the waste land.
- Darby Translation (DBY)
- And he rebuked the Red Sea, and it dried up; and he led them through the deeps as through a wilderness.
- Webster's Bible (WBS)
- He rebuked the Red sea also, and it was dried up: so he led them through the depths, as through the wilderness.
- Young's Literal Translation (YLT)
- And rebuketh the sea of Suph, and it is dried up, And causeth them to go Through depths as a wilderness.
Read in context
- 7ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.
- 8ಆದಾಗ್ಯೂ ಆತನು ತನ್ನ ಮಹಾಶಕ್ತಿಯನ್ನು ಅವರಿಗೆ ತಿಳಿಯ ಮಾಡುವ ಹಾಗೆ ತನ್ನ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದನು.
- 9ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು.
- 10ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿ, ಶತ್ರು ವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದನು.
- 11ನೀರುಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು; ಅವರಲ್ಲಿ ಒಬ್ಬನಾದರೂ ಉಳಿಯಲಿಲ್ಲ.
Cross references
- Psalm 18:15 ಕೀರ್ತನೆಗಳು 18:15ಓ ಕರ್ತನೇ, ನಿನ್ನ ಗದರಿಕೆಯಿಂದಲೂ ನಿನ್ನ ಮೂಗಿನ ಶ್ವಾಸದ ಗಾಳಿಯಿಂದಲೂ ನೀರಿನ ಕಾಲುವೆಗಳ ನೆಲೆಯು ಕಾಣಬಂದು ಭೂಮಿಯ ಅಸ್ತಿವಾರಗಳು ಬೈಲಾದವು.
- Psalm 78:13 ಕೀರ್ತನೆಗಳು 78:13ಆತನು ಸಮುದ್ರವನ್ನು ವಿಭಾಗಿಸಿ ಅವರನ್ನು ದಾಟಿಸಿದನು; ನೀರನ್ನು ಕುಪ್ಪೆಯಾಗಿ ನಿಲ್ಲಿಸಿ ದನು.
- Isaiah 63:11–14 ಯೆಶಾಯ 63:11–14ಆಗ ಆತನು ಪೂರ್ವಕಾಲದ ದಿನ ಗಳನ್ನು ಮೋಶೆಯನ್ನೂ ತನ್ನ ಜನರನ್ನೂ ಜ್ಞಾಪಕ ಮಾಡಿಕೊಂಡು--ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಏರ ಮಾಡಿದವನು ಎಲ್ಲಿ? ಅವನ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ? ಮೋಶೆಯ ಬಲಗೈಯ ಮುಖಾಂ ತರ, ತನ್ನ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡಿಸಿದವನೂ ತನಗೆ ನಿತ್ಯವಾದ ಹೆಸರನ್ನುಂಟು ಮಾಡುವ ಹಾಗೆ ಅವರ ಮುಂದೆ ನೀರುಗಳನ್ನು ಭೇದಿಸಿದವನು ಎಲ್ಲಿ? ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡಿಸಿ ದವನು ಎಲ್ಲಿ ಅಂದನು. ಪಶುವು ತಗ್ಗಿಗೆ ಇಳಿ ಯುವ ಪ್ರಕಾರ, ಕರ್ತನ ಆತ್ಮನು ಅವರಿಗೆ ವಿಶ್ರಾಂತಿ ಕೊಟ್ಟನು; ಈ ಪ್ರಕಾರ ನೀನು ನಿನಗೆ ಮಹಿಮೆ ಯುಳ್ಳ ಹೆಸರನ್ನು ಉಂಟು ಮಾಡುವ ಹಾಗೆ, ನಿನ್ನ ಜನರನ್ನು ನಡಿಸಿದಿ.
- Isaiah 51:10 ಯೆಶಾಯ 51:10ಸಮುದ್ರವನ್ನೂ ದೊಡ್ಡ ಅಗಾಧದ ನೀರನ್ನು ಬತ್ತಿಸಿ, ವಿಮುಕ್ತರಾದವರು ಹಾದು ಹೋಗುವದಕ್ಕೆ ಸಮು ದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದಂಥವನು ನೀನಲ್ಲವೋ?
- Nahum 1:4 ನಹೂಮ 1:4ಆತನು ಸಮುದ್ರವನ್ನು ಗದರಿಸಿ ಅದನ್ನು ಒಣಗುವಂತೆ ಮಾಡುತ್ತಾನೆ; ನದಿಗಳನ್ನೆಲ್ಲಾ ಬತ್ತಿಹೋಗುವಂತೆ ಮಾಡುತ್ತಾನೆ; ಬಾಷಾನೂ ಕರ್ಮೆಲೂ ಬಾಡಿಹೋಗುತ್ತವೆ, ಲೆಬನೋನಿನ ಹೂವು ಬಾಡಿಹೋಗುತ್ತದೆ.
- Exodus 14:27–29 ವಿಮೋಚನಕಾಂಡ 14:27–29ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು. ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು. ಆದರೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯದಲ್ಲಿ ಒಣ ಗಿದ ನೆಲದಮೇಲೆ ನಡೆದುಹೋದರು. ನೀರು ಅವರಿಗೆ ಎಡಬಲಗಳಲ್ಲಿ ಗೋಡೆಯಾಗಿತ್ತು.
- Psalm 66:6 ಕೀರ್ತನೆಗಳು 66:6ಆತನು ಸಮುದ್ರವನ್ನು ಒಣ ಗಿದ ಭೂಮಿಗೆ ತಿರುಗಿಸಿದನು; ಅವರು ಕಾಲು ನಡಿಗೆ ಯಾಗಿ ಪ್ರವಾಹವನ್ನು ದಾಟಿದರು; ಅಲ್ಲಿ ನಾವು ಆತನಲ್ಲಿ ಸಂತೋಷಿಸಿದೆವು.
- Nehemiah 9:11 ನೆಹೆಮೀಯ 9:11ನೀನು ಅವರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ ಅವರು ಸಮುದ್ರದ ಮಧ್ಯದಲ್ಲಿ ಒಣ ಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನ ಹಾಗೆ ಮಹಾ ಜಲರಾಶಿಗಳಲ್ಲಿ ದೊಬ್ಬಿ ಬಿಟ್ಟಿ.
- Psalm 136:13–16 ಕೀರ್ತನೆಗಳು 136:13–16ಕೆಂಪು ಸಮುದ್ರವನ್ನು ವಿಭಾಗಿಸಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಇಸ್ರಾಯೇಲನ್ನು ಅದರ ನಡುವೆ ನಡಿಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ತನ್ನ ಜನರನ್ನು ಅರಣ್ಯದಲ್ಲಿ ನಡೆಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Exodus 14:21–22 ವಿಮೋಚನಕಾಂಡ 14:21–22ಆಗ ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಲಾಗಿ ಕರ್ತನು ರಾತ್ರಿಯೆಲ್ಲಾ ಬಲವಾದ ಮೂಡಣ ಗಾಳಿಯಿಂದ ಸಮುದ್ರವು ಹಿಂದಕ್ಕೆ ಹೋಗುವಂತೆ ಮಾಡಿ ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು; ಆಗ ನೀರುಗಳು ವಿಭಾಗವಾದವು. ಹೀಗೆ ಇಸ್ರಾಯೇಲ್ ಮಕ್ಕಳು ಸಮುದ್ರದ ಮಧ್ಯ ದಲ್ಲಿ ಒಣ ನೆಲದಲ್ಲೇ ಹೊರಟು ಹೋದರು. ನೀರು ಅವರಿಗೆ ಎಡಬಲದಲ್ಲಿ ಗೋಡೆಯಾಗಿತ್ತು.
- Psalm 77:19–20 ಕೀರ್ತನೆಗಳು 77:19–20ನಿನ್ನ ಮಾರ್ಗವು ಸಮುದ್ರದಲ್ಲಿ ಅದೆ; ನಿನ್ನ ಹಾದಿಯು ಬಹಳ ನೀರುಗಳಲ್ಲಿ ಅವೆ; ನಿನ್ನ ಹೆಜ್ಜೆಗಳು ತಿಳಿಯ ಲ್ಪಡಲಿಲ್ಲ.ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ. ಮೋಶೆ ಆರೋನರ ಕೈಯಿಂದ ನಿನ್ನ ಜನರನ್ನು ಮಂದೆಯ ಹಾಗೆ ನಡಿಸಿದಿ.
- Psalm 78:52–53 ಕೀರ್ತನೆಗಳು 78:52–53ಕುರಿಗಳ ಹಾಗೆ ತನ್ನ ಜನರನ್ನು ಹೊರತಂದು, ಮಂದೆಯ ಹಾಗೆ ಅರಣ್ಯದಲ್ಲಿ ಅವರನ್ನು ನಡಿಸಿದನು. ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.