Psalms · chapter 107 · verse 23
Psalm 107:23 in Kannada
ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗಿ ಬಹಳ ನೀರುಗಳಲ್ಲಿ ವ್ಯಾಪಾರಮಾಡುವವರು
Hadagugalalli samudrakke ilidu hogi bahala neerugalalli vyaapaaramaaduvavaru
Psalm 107:23 in English
- King James Version (KJV)
- They that go down to the sea in ships, that do business in great waters;
- World English Bible (WEB)
- Those who go down to the sea in ships, who do business in great waters,
- American Standard Version (ASV)
- They that go down to the sea in ships, That do business in great waters;
- Bible in Basic English (BBE)
- Those who go down to the sea in ships, who do business in the great waters;
- Darby Translation (DBY)
- They that go down to the sea in ships, that do business in great waters,
- Webster's Bible (WBS)
- They that go down to the sea in ships, that do business on great waters;
- Young's Literal Translation (YLT)
- Those going down [to] the sea in ships, Doing business in many waters,
Read in context
- 21ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
- 22ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
- 23ಹಡಗುಗಳಲ್ಲಿ ಸಮುದ್ರಕ್ಕೆ ಇಳಿದು ಹೋಗಿ ಬಹಳ ನೀರುಗಳಲ್ಲಿ ವ್ಯಾಪಾರಮಾಡುವವರು
- 24ಕರ್ತನ ಕೆಲಸಗಳನ್ನೂ ಅಗಾಧಗಳಲ್ಲಿ ಆತನ ಅದ್ಭುತಗಳನ್ನೂ ನೋಡುತ್ತಾರೆ.
- 25ಆತನು ಆಜ್ಞಾಪಿಸಿ ಬಿರುಗಾಳಿಯನ್ನು ಏಳಮಾಡುತ್ತಾನೆ; ಅದು ಅದರ ತೆರೆಗಳನ್ನು ಎಬ್ಬಿಸುತ್ತದೆ.
Cross references
- Revelation 18:17 ಪ್ರಕಟನೆ 18:17ಅಷ್ಟು ದೊಡ್ಡ ಐಶ್ವರ್ಯವು ಒಂದೇ ಗಳಿಗೆಯಲ್ಲಿ ಇಲ್ಲದೆ ಹೋಯಿತಲ್ಲಾ ಅನ್ನುವರು. ಇದಲ್ಲದೆ ಹಡಗುಗಳ ಯಜಮಾನರೂ ಹಡಗುಗಳಲ್ಲಿ ಜೊತೆಯಾಗಿರುವವರೂ ನಾವಿಕರೂ ಸಮುದ್ರದ ಮೇಲೆ ವ್ಯಾಪಾರ ಮಾಡುವವರೆಲ್ಲರೂ ದೂರದಲ್ಲಿ ನಿಂತು
- Psalm 48:7 ಕೀರ್ತನೆಗಳು 48:7ಮೂಡಣ ಗಾಳಿಯಿಂದ ತಾರ್ಷಿಷ್ ಹಡಗುಗಳನ್ನು ನೀನು ಒಡೆಯುತ್ತೀ.
- Ezekiel 27:26 ಯೆಹೆಜ್ಕೇಲನು 27:26ಹುಟ್ಟುಹಾಕುವವರು ನಿನ್ನನ್ನು (ಮಹಾತರಂಗ ಗಳಿಗೆ) ಸಿಕ್ಕಿಸಿದ್ದಾರೆ. ಮೂಡಣ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.
- Acts 27:9–28 ಅಪೊಸ್ತಲರ ಕೃತ್ಯಗಳು 27:9–28ಹೀಗೆ ಬಹುಕಾಲ ಕಳೆದ ಮೇಲೆ ಉಪವಾಸದ ಸಮಯವು ಆಗಲೇ ದಾಟಿಹೋದದರಿಂದ ಸಮುದ್ರ ಪ್ರಯಾಣವು ಅಪಾಯಕರವಾದಾಗ ಪೌಲನು ಅವ ರನ್ನು ಎಚ್ಚರಿಸುತ್ತಾ-- ಅಯ್ಯಗಳಿರಾ, ಈ ಸಮುದ್ರ ಪ್ರಯಾಣವು ಸರಕಿಗೂ ಹಡಗಿಗೂ ಮಾತ್ರವಲ್ಲದೆ ನಮ್ಮ ಪ್ರಾಣಗಳಿಗೆ ಕೇಡನ್ನೂ ದೊಡ್ಡ ನಷ್ಟವನ್ನೂ ಉಂಟುಮಾಡುವಂತದ್ದಾಗಿದೆ ಎಂದು ನನಗೆ ತೋರು ತ್ತದೆ. ಆದರೂ ಪೌಲನು ಹೇಳಿದವುಗಳಿಗಿಂತ ಹೆಚ್ಚಾಗಿ ಹಡಗಿನ ನಾಯಕನೂ ಯಜಮಾನನೂ ಆಗಿದ್ದವನನ್ನು ಶತಾಧಿಪತಿಯು ನಂಬಿದನು. ಆ ರೇವು ಚಳಿಗಾಲವನ್ನು ಕಳೆಯುವದಕ್ಕೆ ಅನುಕೂಲ ವಲ್ಲದ್ದರಿಂದ ಅಲ್ಲಿಂದಲೂ ಹೊರಟು ಫೊಯಿನಿಕೆಗೆ ಸೇರಿ ಅಲ್ಲಿ ಚಳಿಗಾಲವನ್ನು ಕಳೆಯುವದು ಸಾಧ್ಯವಾಗ ಬಹುದು ಎಂದು ಅನೇಕರು ಸಲಹೆಕೊಟ್ಟರು; ಇದು ಕ್ರೇತದ ಒಂದು ರೇವು ಆಗಿದ್ದು ಈಶಾನ್ಯ ದಿಕ್ಕಿಗೂ ಅಗ್ನೇಯ ದಿಕ್ಕಿಗೂ ಅಭಿಮುಖವಾಗಿ ಇದಾದ ಮೇಲೆ ದಕ್ಷಿಣದ ಗಾಳಿಯು ಮೆಲ್ಲಗೆ ಬೀಸಿದಾಗ ಅವರು ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಅಲ್ಲಿಂದ ಹೊರಟು ಕ್ರೇತಕ್ಕೆ ಸವಿಾಪವಾಗಿ ಪ್ರಯಾಣಮಾಡಿದರು. ಆದರೆ ಸ್ವಲ್ಪ ಹೊತ್ತಿನ ಮೇಲೆ ಊರಕಲೋನು ಎಂಬ ಬಿರುಗಾಳಿಯು ಎದುರಾಗಿ ಬೀಸಿತು. ಆಗ ಹಡಗು ಅದಕ್ಕೆ ಸಿಕ್ಕಿಕೊಂಡು ಗಾಳಿಗೆ ತಾಳಲಾರದೆ ಇದ್ದದರಿಂದ ಅದು ನೂಕಿಕೊಂಡು ಹೋಗುವಂತೆ ನಾವು ಬಿಟ್ಟುಕೊಟ್ಟೆವು ನಾವು ಕ್ಲೌಡವೆಂಬ ಒಂದು ದ್ವೀಪದ ಮರೆಯಲ್ಲಿ ಹೋಗುತ್ತಿ ದ್ದದರಿಂದ ದೋಣಿಯನ್ನು ಭದ್ರಮಾಡಿಕೊಳ್ಳುವದು ನಮಗೆ ಬಹಳ ಪ್ರಯಾಸವಾಗಿತ್ತು. ಅದನ್ನು ಮೇಲಕ್ಕೆ ಎತ್ತಿ ಸಾಧನಗಳಿಂದ ಹಡಗಿನ ಕೆಳಭಾಗವನ್ನು ಬಿಗಿಯಾಗಿ ಕಟ್ಟಿದರು. ಆಮೇಲೆ ಕಳ್ಳುಸುಬಿಗೆ ನಾವು ಸಿಕ್ಕಿಕೊಂಡೇವೆಂದು ಭಯಪಟ್ಟು ಹಾಯಿಯನ್ನು ಸಡಿಲು ಮಾಡಿ ನೂಕಿಸಿಕೊಂಡು ಹೋದೆವು. ಬಿರುಗಾಳಿಯು ನಮ್ಮನ್ನು ಬಹಳವಾಗಿ ಹೊಯಿದಾಡಿಸಿದ್ದರಿಂದ ಮರುದಿನ ಅವರು ಹಡಗನ್ನು ಹಗುರವಾಗಿ ಮಾಡಿ ದರು; ಮೂರನೆಯ ದಿನ ನಮ್ಮ ಕೈಗಳಿಂದಲೇ ಹಡಗಿನ ಸಾಮಾನುಗಳನ್ನು ಎತ್ತಿ ಹೊರಗೆ ಹಾಕಿದೆವು. ಅನೇಕ ದಿವಸಗಳವರೆಗೆ ಸೂರ್ಯನಾಗಲಿ ನಕ್ಷತ್ರ ಗಳಾಗಲಿ ಕಾಣಿಸದೆ ದೊಡ್ಡ ಬಿರುಗಾಳಿಯು ನಮ್ಮ ಮೇಲೆ ಹೊಡೆದದ್ದರಿಂದ ನಾವು ಪಾರಾದೇವೆಂಬ ಎಲ್ಲಾ ನಿರೀಕ್ಷೆಯು ತಪ್ಪಿಹೋಯಿತು. ಆದರೆ ಅವರು ಬಹುಕಾಲ ಆಹಾರವಿಲ್ಲದೆ ಇದ್ದಮೇಲೆ ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು--ಅಯ್ಯಗಳಿರಾ, ನೀವು ನನ್ನ ಮಾತು ಕೇಳಿ ಕ್ರೇತದಿಂದ ಹೊರಡದೆ ಇದ್ದಿದ್ದರೆ ನಾವು ಈ ಕಷ್ಟನಷ್ಟಕ್ಕೆ ಗುರಿಯಾಗುತ್ತಿರಲಿಲ್ಲ. ಆದಾಗ್ಯೂ ನೀವು ಧೈರ್ಯದಿಂದ ಇರಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಮಾಡುತ್ತೇನೆ; ಹಡಗಿಗೆ ಹೊರತು ನಿಮ್ಮಲ್ಲಿ ಯಾವ ಮನುಷ್ಯನಿಗೂ ಪ್ರಾಣ ನಷ್ಟವಾಗುವದಿಲ್ಲ. ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೊ ಆ ದೇವರ ದೂತನು ಈ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು-- ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲತಕ್ಕದ್ದು; ಇಗೋ, ನಿನ್ನೊಂದಿಗೆ ಪ್ರಯಾಣಮಾಡುವವರೆಲ್ಲರನ್ನು ನಿನಗೆ ದೇವರು ಕೊಟ್ಟಿದ್ದಾನೆ ಎಂದು ಹೇಳಿದನು. ಆದಕಾರಣ ಅಯ್ಯಗಳಿರಾ, ನೀವು ಧೈರ್ಯವಾಗಿರ್ರಿ; ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವದೆಂದು ನಾನು ದೇವರನ್ನು ನಂಬುತ್ತೇನೆ. ಹೇಗಿದ್ದರೂ ನಾವು ಒಂದು ದ್ವೀಪಕ್ಕೆ ಸೇರಲೇಬೇಕಾಗಿದೆ ಅಂದನು. ಆದರೆ ಹದಿನಾಲ್ಕನೆಯ ರಾತ್ರಿ ಬಂದಾಗ ಆದ್ರಿ ಯಲ್ಲಿ ಅತ್ತ ಇತ್ತ ಬಡಿಸಿಕೊಂಡ ನಂತರ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶಕ್ಕೆ ಬಂದೆವೆಂದು ನೆನಸಿದರು; ಆಗ ಅವರು ಅಳತೆಯ ಗುಂಡನ್ನು ಇಳಿಸಿ ಇಪ್ಪತ್ತು ಮಾರುದ್ದ ಎಂದು ತಿಳಿದು ಕೊಂಡರು. ಇನ್ನೂ ಸ್ವಲ್ಪ ದೂರ ಹೋಗಿ ತಿರಿಗಿ ಅಳತೆಯ ಗುಂಡನ್ನು ಇಳಿಸಿ ಹದಿನೈದು ಮಾರುದ್ದವೆಂದು ತಿಳಿದರು.
- Isaiah 42:10 ಯೆಶಾಯ 42:10ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ.